ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತಂತೆ ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್ ಅವರೊಂದಿಗೆ ನಿನ್ನೆ ಮತ್ತು ಇಂದು ಸಂವಾದ ನಡೆಸಿದರು.
ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮತ್ತು ನಿಕಟವಾಗಿ ಗಮನಿಸುತ್ತಿದೆ ಮತ್ತು ಅಸ್ಸಾಂ ರಾಜ್ಯದ ಕೆಲವೆಡೆ ತಲೆದೋರಿರುವ ಪ್ರವಾಹ ಪರಿಸ್ಥಿತಿಯಿಂದ ಹೊರಬರಲು ಎಲ್ಲ ಅಗತ್ಯ ನೆರವನ್ನೂ ಒದಗಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
“ ಅಸ್ಸಾಂ ಪ್ರವಾಹಕ್ಕೆ ತುತ್ತಾದ ದಿನದಿಂದಲೂ ಕೇಂದ್ರ ಸರ್ಕಾರ ಪರಿಸ್ಥಿತಿಯ ಬಗ್ಗೆ ನಿಟಕವಾಗಿ ಮತ್ತು ನಿರಂತರವಾಗಿ ನಿಗಾ ಇಟ್ಟಿದೆ.
ಅಸ್ಸಾಂನ ಕೆಲವೆಡೆ ತಲೆದೋರಿರುವ ಪ್ರವಾಹ ಪರಿಸ್ಥಿತಿಯಿಂದ ಹೊರಬರಲು ಎಲ್ಲ ಅಗತ್ಯ ನೆರವನ್ನೂ ರಾಜ್ಯಕ್ಕೆ ಒದಗಿಸಲಾಗುತ್ತದೆ.” ಎಂದು ಪ್ರಧಾನಿ ತಿಳಿಸಿದ್ದಾರೆ.
Ever since Assam has witnessed flooding, the Central Government has been closely & constantly monitoring the situation: PM @narendramodi
— PMO India (@PMOIndia) August 14, 2017
All possible support is being provided to Assam for overcoming the flood situation prevailing in parts of the state: PM @narendramodi
— PMO India (@PMOIndia) August 14, 2017