ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ದೇಶದ ಅಮಿರ್ ಗೌರವ್ವಾನಿತ ತಮೀಮ್ ಬಿನ್ ಹಮದ್ ಅಲ್ ಥನಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ನಲ್ಲಿ “ಇಂದು ಕತಾರ್ ನ ಅಮಿರ್ ಗೌರವ್ವಾನಿತ ತಮೀಮ್ ಬಿನ್ ಹಮದ್ ಅವರೊಂದಿಗೆ ಒಳ್ಳೆಯ ಸಮಾಲೋಚನೆ ನಡೆಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ಮತ್ತು ಒಗ್ಗಟ್ಟು ತೋರಿದ್ದಕ್ಕಾಗಿ ಗೌರವಾನ್ವತರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ಕತಾರ್ ನಲ್ಲಿನ ಭಾರತೀಯ ಸಮುದಾಯದ ಆರೈಕೆ ಮಾಡುತ್ತಿರುವುದಕ್ಕಾಗಿ ನಾನು ನಮ್ಮ ಕೃತಜ್ಞತೆಗಳನ್ನು ಸಲ್ಲಿಸಿದೆ.” ಎಂದು ಹೇಳಿದ್ದಾರೆ.
Had a good conversation with His Highness @TamimBinHamad, Amir of Qatar today. I thanked His Highness for the solidarity and offer of support in India's fight against COVID-19. I also conveyed our gratitude for the care being provided to the Indian community in Qatar.
— Narendra Modi (@narendramodi) April 27, 2021