PM’s statement prior to his departure to Davos

ದಾವೋಸ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ಗಮನ ಹೇಳಿಕೆಯ ಪಠ್ಯ ಈ ಕೆಳಕಂಡಂತಿದೆ.

 “ಭಾರತದ ಉತ್ತಮ ಸ್ನೇಹಿತ ಮತ್ತು ಡಬ್ಲ್ಯುಇಎಫ್ಸಂಸ್ಥಾಪಕ ಪ್ರೊಫೆಸರ್ ಕ್ಲಾಸ್ ಶ್ವಾಬ್ ಅವರ ಆಹ್ವಾನದ ಮೇರೆಗೆ ದಾವೋಸ್ ನ ವಿಶ್ವ ಆರ್ಥಿಕ ವೇದಿಕೆಯ ನನ್ನ ಮೊದಲ ಭೇಟಿಯನ್ನು ನಾನು ಎದುರು ನೋಡುತ್ತಿದ್ದೇನೆ.ಹರಿದು ಹಂಚಿಹೋದ ಜಗತ್ತಿನಲ್ಲಿ ಹಂಚಿಕೆಯ ಭವಿಷ್ಯದ ರಚನೆ” ವೇದಿಕೆಯ ಧ್ಯೇಯವಾಕ್ಯವಾಗಿದೆ ಇದು ಚಿಂತನಶೀಲವಷ್ಟೇ ಅಲ್ಲ ಸೂಕ್ತವಾದುದೂ ಆಗಿದೆ.

ಸಮಕಾಲೀನ ಅಂತಾರಾಷ್ಟ್ರೀಯ ವ್ಯವಸ್ಥೆ ಮತ್ತು ಜಾಗತಿಕ ಆಡಳಿತದ ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊರಹೊಮ್ಮುತ್ತಿರುವ ಸವಾಲುಗಳ ಬಗ್ಗೆ ಜಗತ್ತಿನಾದ್ಯಂತದ ನಾಯಕರುಸರ್ಕಾರಗಳುನೀತಿ ನಿರೂಪಕರುಸಂಸ್ಥೆಗಳು ಮತ್ತು ನಾಗರಿಕ ಸಮಾಜಗಳ ಗಂಭೀರ ಗಮನದ ಅಗತ್ಯವಿದೆ.

ಇತ್ತೀಚಿನ ವರ್ಷಗಳಲ್ಲಿ, ಹೊರಜಗತ್ತಿನೊಂದಿಗಿನ ಭಾರತದ ಕಾರ್ಯಕ್ರಮಗಳು, ರಾಜಕೀಯ, ಆರ್ಥಿಕ, ಜನರೊಂದಿಗಿನ ಸಂಪರ್ಕ, ಭದ್ರತೆ ಮತ್ತು ಇತರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೈಜ ಮತ್ತು ಸಮರ್ಥವಾಗಿ ಬಹು ಆಯಾಮವಾಗಿ ಮಾರ್ಪಟ್ಟಿವೆ.

ದಾವೋಸ್ ನಲ್ಲಿ, ನಾನು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಭಾರತದ ಭವಿಷ್ಯದ ಕಾರ್ಯಕ್ರಮಗಳ ಕುರಿತಂತೆ ನನ್ನ ನಿಲುವು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ.

ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಹೊರತಾಗಿ, ನಾನು ಸ್ವಿಸ್ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ಅಲೆನ್ ಬೆರ್ಸೆಟ್ ಮತ್ತು ಸ್ವೀಡನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಟೀಫನ್ ಲೋಫೆನ್ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಭೇಟಿಯನ್ನೂ ಎದಿರು ನೋಡುತ್ತಿದ್ದೇನೆ.

ಈ ದ್ವಿಪಕ್ಷೀಯ ಮಾತುಕತೆಗಳು ಫಲಪ್ರದವಾಗಿರುತ್ತವೆ ಮತ್ತು ಈ ರಾಷ್ಟ್ರಗಳೊಂದಿಗೆ ನಮ್ಮ ಬಾಂಧವ್ಯವನ್ನು ಉತ್ತೇಜಿಸುತ್ತವೆ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸುತ್ತವೆ ಎಂಬ ವಿಶ್ವಾಸ ನನಗಿದೆ ”.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ನವೆಂಬರ್ 2024
November 24, 2024

‘Mann Ki Baat’ – PM Modi Connects with the Nation

Driving Growth: PM Modi's Policies Foster Economic Prosperity