ನಾನು 29 ಅಕ್ಟೋಬರ್ 2019 ರಂದು ಒಂದು ದಿನದ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ರಿಯಾದ್‌ನಲ್ಲಿ ನಡೆಯುವ 3 ನೇ ಭವಿಷ್ಯದ ಹೂಡಿಕೆ ಉಪಕ್ರಮದ ಸಮಗ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾದ ರಾಜರಾದ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿದ್ದೇನೆ.
ರಿಯಾದ್ ಗೆ ನನ್ನ ಭೇಟಿಯ ಸಮಯದಲ್ಲಿ, ನಾನು ಸೌದಿ ಅರೇಬಿಯಾದ ರಾಜರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸುತ್ತೇನೆ. ನಾನು ಸೌದಿ ಅರೇಬಿಯಾದ ರಾಜಕುಮಾರ, ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನೂ ಸಹ ಭೇಟಿ ಮಾಡುತ್ತೇನೆ. ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುತ್ತೇನೆ.
ಭಾರತ ಮತ್ತು ಸೌದಿ ಅರೇಬಿಯಾವು ಸಾಂಪ್ರದಾಯಿಕವಾಗಿ ನಿಕಟ ಮತ್ತು ಸ್ನೇಹ ಸಂಬಂಧವನ್ನು ಹೊಂದಿವೆ. ಸೌದಿ ಅರೇಬಿಯಾವು ಭಾರತದ ಇಂಧನ ಅಗತ್ಯಗಳ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಪೂರೈಕೆದಾರರಲ್ಲಿ ಒಂದಾಗಿದೆ.
ರಾಜಕುಮಾರರು 2019 ರ ಫೆಬ್ರವರಿಯಲ್ಲಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದಲ್ಲಿನ ಆದ್ಯತೆಯ ಕ್ಷೇತ್ರಗಳಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿರುವುದಾಗಿ ತಿಳಿಸಿದ್ದರು.
ರಕ್ಷಣಾ, ಭದ್ರತೆ, ವ್ಯಾಪಾರ, ಸಂಸ್ಕೃತಿ, ಶಿಕ್ಷಣ ಮತ್ತು ಜನರಿಂದ ಜನರ ಸಂಪರ್ಕಗಳ ಸ್ಥಾಪನೆಯ ಸೌದಿ ಅರೇಬಿಯಾದೊಂದಿಗೆ ದ್ವಿಪಕ್ಷೀಯ ಸಹಕಾರದ ಇತರ ಪ್ರಮುಖ ಕ್ಷೇತ್ರಗಳಾಗಿವೆ.
ಈ ಭೇಟಿಯ ಸಮಯದಲ್ಲಿ, ಕಾರ್ಯತಂತ್ರದ ಸಹಭಾಗಿತ್ವ ಮಂಡಳಿಯ ಸ್ಥಾಪನೆಯ ಒಪ್ಪಂದವು ಭಾರತ ಮತ್ತು ಸೌದಿ ಅರೇಬಿಯಾ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಸ ಮಟ್ಟಕ್ಕೆ ಹೆಚ್ಚಿಸುತ್ತದೆ.
ಭವಿಷ್ಯದ ಹೂಡಿಕೆ ಉಪಕ್ರಮದ ವೇದಿಕೆಯಲ್ಲಿ ಭಾಗವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ, ಅಲ್ಲಿ 2024 ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಮುಂದಾಗುತ್ತಿದ್ದಂತೆ ಭಾರತದಲ್ಲಿ ಜಾಗತಿಕ ಹೂಡಿಕೆದಾರರಿಗೆ ಹೆಚ್ಚುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡುತ್ತೇನೆ.