ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಅಕ್ಟೋಬರ್ 15-16ರಂದು ಗೋವಾದಲ್ಲಿ ನಡೆಯಲಿರುವ 8ನೇ ಬ್ರಿಕ್ಸ್ ಶೃಂಗ ಮತ್ತು ಮೊದಲ ಬ್ರಿಕ್ಸ್ – ಬಿಮ್ಸ್ ಸ್ಟೆಕ್ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗ ಸಭೆಗೂ ಮುನ್ನ ಪ್ರಧಾನಮಂತ್ರಿಯವರು ಬ್ರಿಕ್ಸ್ ನಾಯಕರು ಮತ್ತು ಬಿಮ್ ಸ್ಟೆಕ್ ಕುಟುಂಬಕ್ಕೆ ಸ್ವಾಗತ ಕೋರಿದ್ದಾರೆ.
ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿಯವರು:
“ಭಾರತವು 8ನೇ ಬ್ರಿಕ್ಸ್ ಶೃಂಗಸಭೆಯನ್ನು 2016ರ ಅಕ್ಟೋಬರ್ 15-16ರಂದು ಹಾಗೂ ನಂತರ ಮೊಟ್ಟ ಮೊದಲ ಬ್ರಿಕ್ಸ್ ಬಿಮ್ ಸ್ಟೆಕ್ ಮುಖಂಡರ ಶೃಂಗಸಭೆ ಆಯೋಜಿಸಲು ಉತ್ಸುಕವಾಗಿದೆ. ನಾನು ಬ್ರಿಕ್ಸ್ ನ ನಾಯಕರು ಮತ್ತು ಬಿಮ್ ಸ್ಟೆಕ್ ಕುಟುಂಬದವರಿಗೆ ಆತ್ಮೀಯ ಸ್ವಾಗತ ನೀಡಲು ಎದಿರು ನೋಡುತ್ತಿದ್ದೇನೆ. ಗೋವಾದಲ್ಲಿ, ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮತ್ತು ದ್ವಿಪಕ್ಷೀಯ ಭೇಟಿಯಲ್ಲಿ ಬ್ರೆಜಿಲ್ ನ ಅಧ್ಯಕ್ಷ ಮೈಖೆಲ್ ಟೆಮೆರ್ ಅವರನ್ನು ಬರಮಾಡಿಕೊಳ್ಳುವುದು ನನಗೆ ಗೌರವದ ಸಂಗತಿಯಾಗಿದೆ.
ಅಧ್ಯಕ್ಷ ಪುಟಿನ್ ಅವರ ಭೇಟಿಯು ನಮಗೆ ರಷ್ಯಾದೊಂದಿಗಿನ ಪಾಲುದಾರಿಕೆ ಮತ್ತು ಅನನ್ಯ ಮೈತ್ರಿಯನ್ನು ಪುನರ್ ದೃಢೀಕರಿಸಲು ಮತ್ತು ಕ್ರೋಡೀಕರಿಸಲು ಒಂದು ಅವಕಾಶ ಒದಗಿಸುತ್ತದೆ. ಅಧ್ಯಕ್ಷ ಟೆಮೆರ್ ಅವರ ಭೇಟಿಯು ಬ್ರೆಜಿಲ್ ನೊಂದಿಗೆ ಮಹತ್ವದ ಕಾರ್ಯತಂತ್ರಾತ್ಮಕ ಪಾಲುದಾರನಾಗಿ ಹೊಸ ಕ್ಷೇತ್ರಗಳ ಸಹಕಾರಕ್ಕೆ ಅವಕಾಶ ಕಲ್ಪಿಸಲಿದೆ.
ಅಲ್ಲದೆ ಚೀಣಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತು ರಷ್ಯಾದ ಸಹ ನಾಯಕರೊಂದಿಗೆ ನಮ್ಮ ಗುರಿ ಸಾಧಿಸುವ ಹಾದಿಯಲ್ಲಿ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸುವ ಕುರಿತು ಉಪಯುಕ್ತ ಮಾತುಕತೆ ನಡೆಸಲು ನಾನು ಎದಿರು ನೋಡುತ್ತಿದ್ದೇನೆ.
ಈ ವರ್ಷ ಬ್ರಿಕ್ಸ್ ಅಧ್ಯಕ್ಷನಾಗಿ, ವಾಣಿಜ್ಯ, ಕ್ರೀಡೆ, ಶಿಕ್ಷಣ, ಚಲನಚಿತ್ರ, ವಿದ್ಯಾರ್ಥಿವೇತನ ಮತ್ತು ಪ್ರವಾಸೋದ್ಯಮದಂಥ ವೈವಿಧ್ಯಮಯ ಕ್ಷೇತ್ರಗಳಲ್ಲಿ ಜನರೊಂದಿಗಿನ ಸಂಪರ್ಕ ಉತ್ತೇಜಿಸಲು ಬಲವಾಗಿ ಪ್ರತಿಪಾದಿಸಲಿದೆ.
ಪ್ರತಿಕ್ರಿಯಾತ್ಮಕ, ಸಂಘಟಿತ ಮತ್ತು ಸಮಗ್ರ ಪರಿಹಾರ ರೂಪಿಸುವ ನಮ್ಮ ಪ್ರಯತ್ನದಲ್ಲಿ ನಮ್ಮ ಜನರು ಪ್ರಮುಖ ಪಾಲುದಾರರಾಗಿದ್ದಾರೆ ಎಂಬ ನಂಬಿಕೆಯ ಆಸರೆ ಇದೆ. ನಾವು ಗೋವಾದಲ್ಲಿ ಹೊಸ ಉಪಕ್ರಮಗಳಾದ ಯಶಸ್ವೀ ಕಾರ್ಯಚಟುವಟಿಕೆಯ ಉಪಕ್ರಮದಂಥ ಬ್ರಿಕ್ಸ್ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಅನಿಶ್ಚಿತತೆ ಮೀಸಲು ಒಪ್ಪಂದವನ್ನು ಆರಂಭಿಸುತ್ತಿದ್ದೇವೆ.
ಬ್ರಿಕ್ಸ್ ಶೃಂಗಸಭೆಯು ಬ್ರಿಕ್ಸ್ ಆಂತರಿಕ ಸಹಕಾರ ಬಲಪಡಿಸುತ್ತದೆ ಮತ್ತು ನಮ್ಮ ಸಮಾನ ಕಾರ್ಯಕ್ರಮಗಳಾದ ಅಭಿವೃದ್ಧಿ, ಶಾಂತಿ, ಸ್ಥಿರತೆ ಮತ್ತು ಸುಧಾರಣೆಯನ್ನು ಮುಂದುವರಿಸುತ್ತದೆ ಎಂಬ ಆಶಾಭಾವನೆ ನನ್ನದಾಗಿದೆ.
ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿದಂತೆ ಬಿಮ್ ಸ್ಟೆಕ್ ನಾಯಕರೊಂದಿಗೆ ಪ್ರಥಮ ಸಭೆಗೆ ಭಾರತವು ಅವಕಾಶ ಮಾಡಿಕೊಡುತ್ತಿರುವುದಕ್ಕೆ ನನಗೆ ಸಂತಸವಾಗಿದೆ.
ಮನುಕುಲದ ಸುಮಾರು ಮೂರನೇ ಎರಡು ಭಾಗವನ್ನು ಒಟ್ಟಾರೆಯಾಗಿ ಪ್ರತಿನಿಧಿಸುತ್ತಿರುವ ನಾವು, ಸಹಕಾರ ಮತ್ತು ಅದರಿಂದ ದೊರಕುವ ಲಾಭವನ್ನು ಪಡೆಯುವ ವಿಶ್ವಾಸ ಹೊಂದಿದ್ದೇವೆ.
ಹೊಸ ಪಾಲುದಾರಿಕೆಯ ಸೇತುವೆ ನಿರ್ಮಿಸಲು ಮತ್ತು ನಮ್ಮಲ್ಲಿ ಬೇರೂರಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಮತ್ತು ಸಾಮಾನ್ಯ ನಿರ್ಧಾರ ಮಾಡಲು ಭಾರತ ಎದಿರು ನೋಡುತ್ತಿದೆ. ” ಎಂದು ಹೇಳಿದ್ದಾರೆ.