ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರುಗಳ ಸಮ್ಮೇಳನದ ಸಮಾರೋಪದಲ್ಲಿ ಭಾಷಣ ಮಾಡಿದರು.
ಸಮ್ಮೇಳನದ ವೇಳೆ ನೀಡಿದ ವಿವಿಧ ಮಾಹಿತಿಗಾಗಿ ರಾಜ್ಯಪಾಲರುಗಳಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.
ಭಾರತದಲ್ಲಿ ಕಲ್ಪನೆ, ಸಂಪನ್ಮೂಲ ಮತ್ತು ಸಾಮರ್ಥ್ಯಕ್ಕೆ ಕೊರತೆ ಇಲ್ಲ, ಆದರೆ, ಕೆಲವು ರಾಜ್ಯಗಳು ಮತ್ತು ವಲಯಗಳು ಆಡಳಿತದ ಕೊರತೆಯಿಂದ ಹಿಂದೆ ಬಿದ್ದಿವೆ ಎಂದು ಪ್ರಧಾನಿ ಹೇಳಿದರು. ಬಡವರ ಅನುಕೂಲಕ್ಕಾಗಿ ರೂಪಿಸಿರುವ ಹಲವು ಸರ್ಕಾರಿ ಯೋಜನೆಗಳು ಉತ್ತಮ ಆಡಳಿತ ಇರುವ ಕಡೆಗಳಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿವೆ ಎಂದು ಹೇಳಿದರು. ಇಂದ್ರಧನುಷ್ ಅಭಿಯಾನದ ಉದಾಹರಣೆ ನೀಡಿದ ಪ್ರಧಾನಿ, ಸರ್ಕಾರದ ಉಪಕ್ರಮಗಳಲ್ಲಿ ರಾಜ್ಯಪಾಲರುಗಳು ಹೆಚ್ಚಿನ ಪರಿಣಾಮಕಾರಿತ್ವ ತೋರಬಹುದು ಎಂದರು.
ಭಾರತದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ರಾಜ್ಯಪಾಲರು ಏಕ ಭಾರತ, ಶ್ರೇಷ್ಠ ಭಾರತ ಮತ್ತು ಏಕತೆಗಾಗಿ ಓಟದಂಥ ಉಪಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.