QuotePM Modi calls for collective effort to completely eliminate the ‘treatable disease’ of leprosy from India
QuoteMahatma Gandhi had an enduring concern for people afflicted with leprosy: PM
QuoteEffort to eliminate leprosy from this country under the National Leprosy Eradication Programme is a tribute to Mahatma Gandhi’s vision: PM

ಗುಣಪಡಿಸಬಹುದಾದ ಕಾಯಿಲೆ ಕುಷ್ಟರೋಗವನ್ನು ಭಾರತದಿಂದ ಸಂಪೂರ್ಣ ನಿರ್ಮೂಲನೆ ಮಾಡಲು ಸಂಘಟಿತ ಪ್ರಯತ್ನ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕರೆ ನೀಡಿದ್ದಾರೆ.

ಕುಷ್ಟರೋಗ ವಿರೋಧಿ ದಿನದ ಸಂದರ್ಭದಲ್ಲಿ ನೀಡಿರುವ ಸಂದೇಶದಲ್ಲಿ ಪ್ರಧಾನಮಂತ್ರಿಯವರು, ಕುಷ್ಟ ರೋಗದಿಂದ ಗುಣಮುಖರಾಗಿರುವ ಜನರನ್ನು ಸಾಮಾಜಿಕ-ಆರ್ಥಿಕವಾಗಿ ಮೇಲೆತ್ತಲು ಮತ್ತು ಅವರ ಕೊಡುಗೆಯನ್ನು ದೇಶ ನಿರ್ಮಾಣಕ್ಕೆ ಬಳಸಲು ನಾವೆಲ್ಲ ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರು ಕನಸು ಕಂಡಿದ್ದಂತೆ ನಮ್ಮ ದೇಶದ ಈ ನಾಗರಿಕರು ಗೌರವಯುತ ಬಾಳ್ವೆ ನಡೆಸಲು ನಾವು ಶಕ್ತಿ ಮೀರಿ ಶ್ರಮಿಸಬೇಕು ಎಂದು ಹೇಳಿದ್ದಾರೆ.

ಕುಷ್ಟುರೋಗ ಪೀಡಿತರಾದ ಜನರ ಬಗ್ಗೆ ಮಹಾತ್ಮಾ ಗಾಂಧಿ ಅವರು ನಿರಂತರ ಕಾಳಜಿ ಹೊಂದಿದ್ದರು ಎಂಬುದನ್ನು ಪ್ರಧಾನಿ ಸ್ಮರಿಸಿದ್ದಾರೆ. ಅವರ ದೃಷ್ಟಿಕೋನ ಕೇವಲ ಅವರಿಗೆ ಚಿಕಿತ್ಸೆ ನೀಡುವುದಷ್ಟೇ ಆಗಿರಲಿಲ್ಲ, ಜೊತೆಗೆ ನಮ್ಮ ಸಮಾಜದ ಮುಖ್ಯವಾಹಿನಿಗೆ ಸೇರಿಸುವುದೂ ಆಗಿತ್ತು ಎಂದೂ ತಿಳಿಸಿದ್ದಾರೆ.

ಈ ದೇಶದಿಂದ ಕುಷ್ಟರೋಗವನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿ ಪ್ರಯತ್ನ ಸಾಗಿದ್ದು, ಇದು ಮಹಾತ್ಮಾ ಗಾಂಧಿ ಅವರ ದೂರದೃಷ್ಟಿಗೆ ಸಲ್ಲಿಸುವ ಗೌರವವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು 1955ರಲ್ಲಿಯೇ ಆರಂಭಿಸಲಾಗಿದೆ ಎಂಬುದನ್ನು ಅವರು ಸ್ಮರಿಸಿದ್ದಾರೆ. ಕುಷ್ಟರೋಗದ ನಿರ್ಮೂಲನೆ ಗುರಿಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಂತೆ ಮಾಡುವುದಾಗಿ ಉಲ್ಲೇಖಿಸಿದ್ದಾರೆ. 2005ರಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಯಲ್ಲಿ ಒಬ್ಬರಿಗಿಂತ ಕಡಿಮೆ ಮಟ್ಟವನ್ನು ಸಾಧಿಸಲಾಗಿದೆ. ಆದಾಗ್ಯೂ, ಪ್ರಕರಣದ ಪತ್ತೆ ನಂತರ ಅಲ್ಪ ಇಳಿಕೆಯಾಗಿದೆ. ರೋಗನಿರ್ಣಯದ ಸಮಯದಲ್ಲಿ ಗೋಚರದ ವಿರೂಪ ಹೆಚ್ಚಾಗಿದೆ. ಒಂದು ದೇಶವಾಗಿ , ಕೊನೆಯ ಘಟ್ಟ ಮುಟ್ಟಲು ನಾವು ಯಾವುದೇ ಅವಕಾಶ ಬಿಡಬಾರದು, ಜೊತೆಗೆ ಈ ರೋಗದೊಂದಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕವನ್ನು ನಿರ್ಮೂಲನೆ ಮಾಡಲು ಒಗ್ಗೂಡಿ ದುಡಿಯಬೇಕು ಎಂದು ಹೇಳಿದ್ದಾರೆ.

ಸಮುದಾಯದಲ್ಲಿ ಅದರಲ್ಲೂ ಕಷ್ಟಪಟ್ಟು ತಲುಪಬೇಕಾದ ಪ್ರದೇಶಗಳಲ್ಲಿ ಕೂಡ ಕುಷ್ಟರೋಗದ ಪ್ರಕರಣಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಲು ಮೂರು ಹಂತದ ಕಾರ್ಯತಂತ್ರವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2016ರಲ್ಲಿ ಜಾರಿಗೊಳಿಸಲಾಗಿದೆ ಎಂಬುದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದ್ದಾರೆ. 2016ರಲ್ಲಿ ಕುಷ್ಟರೋಗ ಪತ್ತೆ ವಿಶೇಷ ಅಭಿಯಾನವನ್ನು ನಡೆಸಲಾಯಿತು. ಇದರ ಫಲವಾಗಿ 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟವು ಮತ್ತು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಈ ರೋಗಿಗಳೊಂದಿಗೆ ಆಪ್ತ ಸಂಪರ್ಕವನ್ನು ಹೊಂದಿದ್ದ ವ್ಯಕ್ತಿಗಳಲ್ಲೂ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಔಷಧ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi Distributes Over 51,000 Appointment Letters At 15th Rozgar Mela

Media Coverage

PM Modi Distributes Over 51,000 Appointment Letters At 15th Rozgar Mela
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಎಪ್ರಿಲ್ 2025
April 27, 2025

From Culture to Crops: PM Modi’s Vision for a Sustainable India

Bharat Rising: PM Modi’s Vision for a Global Manufacturing Powerhouse