ಈ ಭೇಟಿಯ ವೇಳೆ ನಾಯಕರು ಅದ್ಭುತ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು. ಭಾರತ ಭೇಟಿಯಲ್ಲಿರುವ ಅಧ್ಯಕ್ಷರು, ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದಾಗಿ ಖುದ್ದು ಆಗಮಿಸಲಾಗದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಅಭಿನಂದನೆಗಳನ್ನು ತಿಳಿಸಿದರು. ತಮ್ಮ ದೇಶಕ್ಕೆ ಬರುವಂತೆ ಬಾಂಗ್ಲಾ ದೇಶದ ಪರವಾಗಿ ಅವರು ಪ್ರಧಾನಮಂತ್ರಿಯವರಿಗೆ ಆಹ್ವಾನವನ್ನು ನೀಡಿದರು, ಅದನ್ನು ಸಂತಸದೊಂದಿಗೆ ಒಪ್ಪಿಕೊಳ್ಳಲಾಯಿತು. ರಾಜತಾಂತ್ರಿಕ ಮಾರ್ಗಗಳ ಮೂಲಕ ದಿನಾಂಕವನ್ನು ನಿಗದಿ ಮಾಡಲು ನಾಯಕರು ಸಮ್ಮತಿಸಿದರು.
ಬಾಂಗ್ಲಾದೇಶದ ವಿಮೋಚನೆಯ ಸಮರದ ವೇಳೆ ಹೊರಹೊಮ್ಮಿದ ದ್ವಿಪಕ್ಷೀಯ ಬಾಂಧವ್ಯ, ಭಾರತಕ್ಕೆ ಉನ್ನತ ಆದ್ಯತೆಯಾಗಿ ಉಳಿದಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಉಲ್ಲೇಖಿಸಿದರು. ಕಳೆದ ಐದು ವರ್ಷಗಳಲ್ಲಿ ಎರಡೂ ದೇಶಗಳು ನೆಲ ಗಡಿ ಗುರುತು ಮಾಡುವಿಕೆ ಸೇರಿದಂತೆ ದೀರ್ಘಕಾಲದಿಂದ ಉಳಿದಿದ್ದ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಶ್ರೇಷ್ಠ ಪ್ರೌಢತೆ ಮತ್ತು ತಾಳ್ಮೆಯನ್ನು ತೋರಿವೆ ಎಂದರು. ಬಂಗ ಬಂಧು ಶೇಖ್ ಮುಜಿಬುರ್ ರಹಮಾನ್ (2020 ರಲ್ಲಿ) ಶತಮಾನೋತ್ಸವ ಮತ್ತು 2021 ರಲ್ಲಿ ಬಾಂಗ್ಲಾದೇಶದ ವಿಮೋಚನೆಯ 50 ನೇ ವಾರ್ಷಿಕೋತ್ಸವದ ಸೂಕ್ತ ಸ್ಮರಣೆಯ ಜಂಟಿ ಪ್ರಯತ್ನದ ಭಾಗವಾಗಿ, ಪ್ರಧಾನಮಂತ್ರಿಯವರು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ಬಾಂಧವ್ಯ ಹೊಸ ಎತ್ತರಕ್ಕೆ ಏರುವ ಮಹತ್ವವನ್ನು ಪ್ರತಿಪಾದಿಸಿದರು.
ಬಾಂಗ್ಲಾದೇಶದ ಅಧ್ಯಕ್ಷರು 2019ರ ಮೇ 30ರಂದು ಹೊಸ ಭಾರತ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಗೌರವಾನ್ವಿತ ಅತಿಥಿ, ಇದಕ್ಕೂ ಮುನ್ನ 2014ರ ಡಿಸೆಂಬರ್ ನಲ್ಲಿ ರಾಜ್ಯ ಭೇಟಿ ಮತ್ತು 2018ರ ಮಾರ್ಚ್ ನಲ್ಲಿ ಸೌರ ಸಹಯೋಗದ ಪ್ರಥಮ ಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು.