ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನ ಮಂತ್ರಿ ಶ್ರೀ ಟೋನಿ ಅಬ್ಬೋಟ್ ಅವರನ್ನು ಭೇಟಿಯಾದರು.
ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವ ಹಾನಿ ಮತ್ತು ಆಸ್ತಿ ಹಾನಿ ಆಗಿರುವುದಕ್ಕೆ ಪ್ರಧಾನ ಮಂತ್ರಿ ಅವರು ತಮ್ಮ ಸಂತಾಪವನ್ನು ಸೂಚಿಸಿದರು.
ಶ್ರೀ ಟೋನಿ ಅಬ್ಬೋಟ್ ಅವರು ಗುರು ನಾನಕ್ ದೇವ್ ಜೀ ಅವರ 550 ನೇ ಜನ್ಮ ವರ್ಷವಾದ ಪ್ರಕಾಶ ಪರ್ವ ಸಂದರ್ಭದಲ್ಲಿ ಸುವರ್ಣ ಮಂದಿರ ಸಹಿತ ಭಾರತ ಭೇಟಿಗೆ ಆಗಮಿಸಿರುವುದಕ್ಕೆ ನೀಡಿರುವುದಕ್ಕೆ ಪ್ರಧಾನ ಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು.
2014 ರ ನವೆಂಬರ್ ತಿಂಗಳಲ್ಲಿ ಬ್ರಿಸ್ಬೇನ್ ನಲ್ಲಿ ಏರ್ಪಟ್ಟ ಜಿ-20 ಶೃಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದನ್ನು ಪ್ರೀತಿಯಿಂದ ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಅವರು ಕ್ಯಾನ್ ಬೆರಾ, ಸಿಡ್ನಿ ಮತ್ತು ಮೆಲ್ಬೋರ್ನ್ ಗಳಲ್ಲಿ ಏರ್ಪಟ್ಟ ಫಲಪ್ರದ ದ್ವಿಪಕ್ಷೀಯ ಮಾತುಕತೆಗಳನ್ನು ಹಾಗು ಆಸ್ಟ್ರೇಲಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನುದೇಶಿಸಿ ಭಾಷಣ ಮಾಡಿದ್ದನ್ನೂ ನೆನೆಪಿಸಿಕೊಂಡರು.
ಭಾರತ-ಆಸ್ಟ್ರೇಲಿಯಾ ಬಾಂಧವ್ಯ ವರ್ಧನೆಯಲ್ಲಿ ಶ್ರೀ ಟೋನಿ ಅಬ್ಬೋಟ್ ಅವರು ವಹಿಸಿದ ಪಾತ್ರವನ್ನೂ ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.
Had an excellent interaction with my friend, @HonTonyAbbott. Great to see his passion and energy on issues he believes in. He is a strong votary for deepening India-Australia cooperation. pic.twitter.com/raCh9cplGE
— Narendra Modi (@narendramodi) November 20, 2019