ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಸಿಕ್ಕಿಂ ಮತ್ತು ಲಡಾಖ್ ನ ಎರಡು ಐಟಿಬಿಪಿ ಪ್ರವಾಸಿ ತಂಡದ 53 ವಿದ್ಯಾರ್ಥಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು. ಪ್ರಧಾನಮಂತ್ರಿಯವರೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಿದ ಅವರು, ಪ್ರಗತಿ ಮತ್ತು ಭ್ರಷ್ಟಾಚಾರ ಮುಕ್ತ ಭಾರತ ಕುರಿತಂತೆ ತಮ್ಮ ನಿಲುವು ಹಂಚಿಕೊಂಡರು. ಪ್ರಧಾನಮಂತ್ರಿಯವರು ಈ ದೃಷ್ಟಿಕೋನದ ಸಾಕಾರಕ್ಕೆ ಶ್ರಮಿಸುವಂತೆ ಪ್ರಚೋದಿಸಿದರು. ಹೆಚ್ಚು ಫಲಪ್ರದತೆಗಾಗಿ ಸದೃಢವಾಗಿರುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಯೋಗದ ಮಹತ್ವದ ಬಗ್ಗೆಯೂ ಚರ್ಚಿಸಲಾಯಿತು.
ಕಲಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಎಲ್ಲಾ ಸಮಯದಲ್ಲೂ ಕಲಿಯಲು ವಿದ್ಯಾರ್ಥಿಯಾಗಿರುವ ನೈಸರ್ಗಿಕ ಪ್ರವೃತ್ತಿಯು ಬೆಳೆಸಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಡಿಜಿಟಲ್ ಇಂಡಿಯಾ ಬಗ್ಗೆ ಹೆಚ್ಚಿನ ಆಸಕ್ತಿ ಪ್ರದರ್ಶಿಸಿದರು. ನಗದು ರಹಿತ ವಹಿವಾಟು ಕೂಡ ಈ ಚರ್ಚೆಯ ಸಂದರ್ಭದಲ್ಲಿ ಬಂದವು. ಪ್ರಧಾನಮಂತ್ರಿಯವರು ನೇರ ಸವಲತ್ತು ವರ್ಗಾವಣೆ ಹೇಗೆ ಶ್ರೀಸಾಮಾನ್ಯನಿಗೆ ಉಪಯುಕ್ತವಾಗಿದೆ ಎಂಬುದನ್ನು ವಿವರಿಸಿದರು.
ಅನಗತ್ಯ ಒತ್ತಡ ಮತ್ತು ಒತ್ತಡವಿಲ್ಲದೆಯೇ ಬದುಕು ನಡೆಸಬೇಕೆಂದು ಪ್ರತಿಪಾದಿಸಿ ಪ್ರಧಾನಮಂತ್ರಿಯವರು ಬರೆದಿರುವ “ಎಕ್ಸಾಂ ವಾರಿಯರ್ಸ್’’ ಪುಸ್ತಕದ ಪ್ರಸ್ತಾಪವನ್ನೂ ವಿದ್ಯಾರ್ಥಿಗಳು ಮಾಡಿದರು.