ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು 71ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿವೆ:

1. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನನ್ನ ಸಹ ದೇಶವಾಸಿಗಳಿಗೆ ಶುಭಾಶಯಗಳು.

2. ಸ್ವಾತಂತ್ರ್ಯಕ್ಕಾಗಿ ಮತ್ತು ದೇಶದ ಘನತೆಗಾಗಿ ಕೊಡುಗೆ ನೀಡಿದ, ಬಲಿದಾನಗೈದ ಮತ್ತು ತಮ್ಮ ಜೀವವನ್ನೇ ತ್ಯಾಗ ಮಾಡಿದ ಎಲ್ಲ ಮಹಾನ್ ಆತ್ಮಗಳಿಗೆ, ಸೋದರಿಯರಿಗೆ ಮತ್ತು ಮಾತೆಯರಿಗೆ ದೇಶದ 125 ಕೋಟಿ ಜನರ ಪರವಾಗಿ ನಾನು ಕೆಂಪುಕೋಟೆಯ ಈ ವೇದಿಕೆಯಿಂದ ನಮಿಸುತ್ತೇನೆ,

3. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲ ಶ್ರೇಷ್ಠ ಮಹಿಳೆಯರು ಮತ್ತು ಪುರುಷರನ್ನು ನಾವು ಸ್ಮರಿಸುತ್ತೇವೆ.

4. ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಸಾವಿನಿಂದ ಬಾಧಿತರಾದವರೊಂದಿಗೆ ಭಾರತದ ಜನತೆ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದಾರೆ.

5. ಇದು ವಿಶೇಷವಾದ ವರ್ಷ – ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ, ಚಂಪಾರಣ್ ಸತ್ಯಾಗ್ರಹದ 100ನೇ ಹಾಗೂ ಸಾರ್ವಜನಿಕ ಗಣೇಶೋತ್ಸವದ 125ನೇ ವರ್ಷಾಚರಣೆಯ ವರ್ಷವಿದು.

6. ‘ಭಾರತ್ ಚೋಡೋ” (ಭಾರತ ಬಿಡಿ) ಎಂಬುದು ಕ್ವಿಟ್ ಇಂಡಿಯಾ ಚಳವಳಿಯಾಗಿತ್ತು, ಆದರೆ ಇಂದು ‘ಭಾರತ್ ಜೋಡೋ” (ಭಾರತ ಒಗ್ಗೂಡಿಸಿ) ಎಂದಾಗಬೇಕು.

7. ‘ನವ ಭಾರತದ” ನಿರ್ಮಾಣಕ್ಕಾಗಿ ನಾವು ದೇಶವನ್ನು ದೃಢ ನಿರ್ಧಾರದೊಂದಿಗೆ ಮುನ್ನಡೆಸಬೇಕು.

8. 1942ರಿಂದ 1947ರವರೆಗೆ ದೇಶವು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿತು, ಮುಂದಿನ 5 ವರ್ಷಗಳಲ್ಲಿ ನಾವು ಅದೇ ಸಂಘಟಿತ ಶಕ್ತಿ, ಬದ್ಧತೆ ಮತ್ತು ಕಠಿಣ ಶ್ರಮದಿಂದ ದೇಶವನ್ನು ಮುನ್ನಡೆಸಬೇಕಾಗಿದೆ.

9. ನಮ್ಮ ದೇಶದಲ್ಲಿ ಯಾರೂ ದೊಡ್ಡವರಲ್ಲ, ಸಣ್ಣವರೂ ಅಲ್ಲ… ಪ್ರತಿಯೊಬ್ಬರೂ ಸಮಾನರು. ನಾವೆಲ್ಲರೂ ಒಗ್ಗೂಡಿ ದೇಶದಲ್ಲಿ ಧನಾತ್ಮಕ ಬದಲಾವಣೆ ತರಬಹುದಾಗಿದೆ.

10. ನಾವೆಲ್ಲರೂ ನವ ಭಾರತದ ನಿರ್ಮಾಣಕ್ಕಾಗಿ 125 ಕೋಟಿ ಜನರ ಸಂಘಟಿತ ಶಕ್ತಿಯೊಂದಿಗೆ ದೊಡ್ಡವರು, ಚಿಕ್ಕವರು ಎಂಬ ತಾರತಮ್ಯವಿಲ್ಲದೆ ಸಾಗಬೇಕು.

11. 2018ರ ಜನವರಿ 1 ಸಾಮಾನ್ಯ ದಿನವಲ್ಲ – ಈ ಶತಮಾನದಲ್ಲಿ ಹುಟ್ಟಿದ ಎಲ್ಲರೂ 18ನೆ ವರ್ಷಕ್ಕೆ ಕಾಲಿಡುತ್ತಾರೆ. ಅವರೆಲ್ಲರೂ ನಮ್ಮ ದೇಶದ ಭಾಗ್ಯವಿಧಾತರು.

12. ನಾವು ‘ನಡೆಯುತ್ತದೆ’ ಎಂಬ ಮನೋಭಾವವನ್ನು ಬಿಡಬೇಕು. ‘ಬದಲಾವಣೆ ಸಾಧ್ಯ’ ಎಂಬ ಮನೋಸ್ಥಿತಿ ಬೆಳೆಸಿಕೊಳ್ಳಬೇಕು- ಈ ಸ್ವಭಾವ ದೇಶಕ್ಕೆ ಸಹಕಾರಿ.

13. ದೇಶ ಬದಲಾಗಿದೆ, ಬದಲಾಗುತ್ತಿದೆ ಮತ್ತು ಬದಲಾಗುತ್ತದೆ. ನಾವು ಬದ್ಧತೆ ಮತ್ತು ನಂಬಿಕೆಯೊಂದಿಗೆ ಮುಂದೆ ಸಾಗಬೇಕು.

14. ದೇಶದ ಭದ್ರತೆ ನಮ್ಮ ಆದ್ಯತೆಯಾಗಿದೆ. ಆಂತರಿಕ ಭದ್ರತೆ ನಮ್ಮ ಆದ್ಯತೆಯಾಗಿದೆ. ಅದು ನಮ್ಮ ಗಡಿ ಇರಲಿ ಅಥವಾ ಸಾಗರವಿರಲಿ, ಸೈಬರ್ ಜಗತ್ತೇ ಇರಲಿ ಅಥವಾ ಬಾಹ್ಯಾಕಾಶವಿರಲಿ ಎಲ್ಲ ಬಗೆಯ ಭದ್ರತೆಗಾಗಿ ಭಾರತ ಎಲ್ಲ ಅಂಥ ವೈರತ್ವದ ಶಕ್ತಿಗಳನ್ನು ಮಣಿಸುವ ಸಾಮರ್ಥ್ಯಹೊಂದಿದ್ದೇವೆ.

15. ನಮ್ಮ ಸಮವಸ್ತ್ರಧಾರಿ ಪಡೆಗಳು ಎಡಪಂಥೀಯ ಉಗ್ರವಾದ, ಭಯೋತ್ಪಾದನೆ, ಒಳನುಸುಳುವಿಕೆ ಮತ್ತು ಶಾಂತಿ ಕದಡುವ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ತ್ಯಾಗದ ಪರಾಕಾಷ್ಠೆಯನ್ನು ಸಾಧಿಸಿವೆ. ವಿಶ್ವವು ಭಾರತದ ಶಕ್ತಿಯನ್ನು ಗುರುತಿಸಬೇಕು ಮತ್ತು ಇದು ನಿರ್ದಿಷ್ಟ ಲಕ್ಷ್ಯ ದಾಳಿಯಲ್ಲಿ ಸಾಬೀತಾಗಿದೆ.

16. ಒಂದು ಶ್ರೇಣಿ, ಒಂದು ಪಿಂಚಣಿ ನಮ್ಮ ಭದ್ರತಾ ಪಡೆಗಳ ಅಂತಃಶಕ್ತಿಯನ್ನು ಹೆಚ್ಚಿಸಿದೆ.

17. ಈ ದೇಶವನ್ನು ಮತ್ತು ಬಡವರನ್ನು ದೋಚಿದವರು ಇಂದು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ.

18. ಹಲವು ವರ್ಷಗಳಿಂದ ಬೇನಾಮಿ ಆಸ್ತಿ ಹೊಂದಿದ್ದವರ ವಿರುದ್ಧ ಯಾವುದೇ ಕಾಯಿದೆ ಇರಲಿಲ್ಲ. ಆದರೆ ಬೇನಾಮಿ ಕಾಯಿದೆ ಇತ್ತೀಚೆಗೆ ಅಂಗೀಕಾರವಾದ ಬಳಿಕ, ಅತ್ಯಂತ ಕಡಿಮೆ ಅವಧಿಯಲ್ಲಿ ಸರ್ಕಾರವು 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ, ಶ್ರೀಸಾಮಾನ್ಯರಲ್ಲಿ ಈ ದೇಶ ಪ್ರಾಮಾಣಿಕರಿಗೆ ಎಂಬ ಭಾವನೆ ಮೂಡಿದೆ.

19. ನಾವು ಇಂದು “ಪ್ರಾಮಾಣಿಕತೆಯ ಉತ್ಸವ” ಆಚರಿಸುತ್ತಿದ್ದೇವೆ.

20. ಜಿಎಸ್ಟಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಪ್ರದರ್ಶಿಸಿದೆ. ಇಡೀ ದೇಶ ಜಿಎಸ್ಟಿ ಜಾರಿಗೆ ಬೆಂಬಲ ನೀಡಿದೆ ಮತ್ತು ತಂತ್ರಜ್ಞಾನದ ಪಾತ್ರವೂ ನೆರವಾಗಿದೆ.

20.ಇಂದು ಬಡವರು ಕೂಡ ದೇಶದ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ ಮತ್ತು ದೇಶವು ಪ್ರಗತಿಯ ಪಥದತ್ತ ಸಾಗುತ್ತಿದೆ.

22. ಉತ್ತಮ ಆಡಳಿತವು ವೇಗ ಮತ್ತು ಸರಳೀಕೃತ ಪ್ರಕ್ರಿಯೆಯಾಗಿದೆ.

23. ವಿಶ್ವದಲ್ಲಿ ಭಾರತದ ಔನ್ನತ್ಯ ಹೆಚ್ಚುತ್ತಿದೆ. ಭಯೋತ್ಪಾದನೆಯ ಪಿಡುಗಿನ ವಿರುದ್ಧದ ಹೋರಾಟದಲ್ಲಿ ವಿಶ್ವವೂ ನಮ್ಮೊಡನಿದೆ. ಎಲ್ಲ ರಾಷ್ಟ್ರಗಳೂ ನಮಗೆ ನೆರವಾಗುತ್ತಿವೆ ಎಂದು ನಾನು ಭವಿಸುತ್ತೇನೆ.

24. ನಾವು ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ.

25. ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ.

26. ಗುಂಡಿನಿಂದಾಗಲೀ, ಅಥವಾ ನಿಂದನೆಯಿಂದಾಗಲೀ ಕಾಶ್ಮೀರದ ಸಮಸ್ಯೆ ಪರಿಹಾರವಾಗುವುದಿಲ್ಲ, ಬದಲಾಗಿ ಇದು ಸ್ನೇಹದಿಂದ ಸಾಧ್ಯವಾಗುತ್ತದೆ.
27. ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ. ನಾವು ತಂತ್ರಜ್ಞಾನದ ಮೂಲಕ ಪಾರದರ್ಶಕತೆಯನ್ನು ತರಲು ಯತ್ನಿಸುತ್ತಿದ್ದೇವೆ.

28. ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ.

29. ಸಂಸ್ಥಾಪನೆಯಲ್ಲಿ ಜನರು ಚಾಲನ ಶಕ್ತಿಯಾಗಿದ್ದಾರೆ, ತಂತ್ರದಿಂದ ಲೋಕವಿಲ್ಲ, ಆದರೆ ಲೋಕದಿಂದ ತಂತ್ರ ನಡೆಯುತ್ತದೆ.

30. ನವ ಭಾರತ ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿದೆ.

31. ಬದಲಾಗುತ್ತಿರುವ ಬೇಡಿಕೆ ಮತ್ತು ತಂತ್ರಜ್ಞಾನಗಳಿಗೆ ಅನುಗುಣವಾಗಿ ಉದ್ಯೋಗದ ಸ್ವರೂಪವೂ ಬದಲಾಗುತ್ತಿದೆ

32. ನಾವು ನಮ್ಮ ಯುವಜನರನ್ನು ಉದ್ಯೋಗ ಕೇಳುವವರ ಬದಲಾಗಿ ಉದ್ಯೋಗಧಾತರಾಗಿ ಪೋಷಿಸುತ್ತಿದ್ದೇವೆ.

33. ನಾನು ತ್ರಿವಳಿ ತಲಾಖ್ ನಿಂದ ನೊಂದ ಮಹಿಳೆಯರ ಪ್ರಸ್ತಾಪ ಮಾಡಲು ಇಚ್ಛಿಸುತ್ತೇನೆ – ನಾನು ಅವರ ಧೈರ್ಯವನ್ನು ಗೌರವಿಸುತ್ತೇನೆ. ಈ ಹೋರಾಟದಲ್ಲಿ ನಾವು ಅವರೊಂದಿಗಿದ್ದೇವೆ.

34. ಭಾರತವು ಶಾಂತಿ, ಏಕತೆ ಮತ್ತು ಸದ್ಭಾವನೆಗೆ ಹೆಸರಾಗಿದೆ. ಜಾತಿಯತೆ ಮತ್ತು ಕೋಮುವಾದ ನಮಗೆ ನೆರವಾಗುವುದಿಲ್ಲ.

35. ಆಸ್ತ –ಶ್ರದ್ಧೆ ಹೆಸರಿನಲ್ಲಿ ಯಾವುದೇ ಹಿಂಸಾಚಾರವನ್ನು ಭಾರತ ಒಪ್ಪಲು ಸಾಧ್ಯವೇ ಇಲ್ಲ.

36. ದೇಶವು ಶಾಂತಿ, ಏಕತೆ ಮತ್ತು ಸೌಹಾರ್ದತೆಯಿಂದ ನಡೆಯುತ್ತಿದೆ. ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿ.

37. ನಾವು ದೇಶವನ್ನು ಹೊಸ ಮಾರ್ಗದಲ್ಲಿ (ಅಭಿವೃದ್ಧಿ) ತೆಗೆದುಕೊಂಡು ಹೋಗುತ್ತಿದ್ದೇವೆ ಮತ್ತು ನಾವು ಅದೇ ವೇಗದಲ್ಲಿ ಸಾಗುತ್ತಿದ್ದೇವೆ.

38. ನಾವು ಪೂರ್ವ ಭಾರತ – ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯ ರಾಜ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಈ ಭಾಗಗಳು ಇನ್ನೂ ಹೆಚ್ಚು ಬೆಳೆಯಬೇಕಿದೆ.

39. ನಮ್ಮ ರೈತರು ದಾಖಲೆಯ ಆಹಾರಧಾನ್ಯ ಬೆಳೆಯಲು ಶ್ರಮಪಟ್ಟಿದ್ದಾರೆ.

40. 5.75 ಕೋಟಿ ರೈತರು ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಯಡಿ ಬಂದಿದ್ದಾರೆ.

41. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 30 ಯೋಜನೆಗಳನ್ನು ಪೂರ್ಣಗೊಳಿಸಲಾಗಿದ್ದು, 50 ಪ್ರಮುಖ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ.

42. ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆ ಅಡಿಯಲ್ಲಿ ನಾವು ರೈತರಿಗೆ ಬೀಜಗಳನ್ನು ಪಡೆದುಕೊಳ್ಳಲು ಮತ್ತು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಗೆ ಪ್ರವೇಶಿಸಲು ನೆರವು (ಹ್ಯಾಂಡ್ ಹೋಲ್ಡಿಂಗ್) ಒದಗಿಸುತ್ತಿದ್ದೇವೆ.

43. 14ಸಾವಿರಕ್ಕೂ ಹೆಚ್ಚು ವಿದ್ಯುತ್ ರಹಿತ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದೇವೆ.

44. 29 ಕೋಟಿ ಜನ್ ಧನ್ ಖಾತೆಗಳನ್ನು ತೆರೆದಿದ್ದೇವೆ.

45. 8 ಕೋಟಿಗೂ ಹೆಚ್ಚು ಯುವಜನರು ಯಾವುದೇ ಖಾತ್ರಿ ಒದಗಿಸದೆ ಸಾಲ ಪಡೆದಿದ್ದಾರೆ.

46. ಭಾರತದ ಭವ್ಯ ಭವಿಷ್ಯಕ್ಕಾಗಿ ಮತ್ತು ಜನರ ಕ್ಷೇಮಕ್ಕಾಗಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ.

47. ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ ಮತ್ತು ಮುಂದೆ ಸಾಗುತ್ತದೆ ಮತ್ತು ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ.

48. ಭ್ರಷ್ಟಾಚಾರ ಮುಕ್ತ ಭಾರತದ ನಮ್ಮ ಬದ್ಧತೆ ಫಲ ನೀಡುತ್ತಿದೆ.

49. 1.25 ಲಕ್ಷ ಕೋಟಿ ಕಪ್ಪುಹಣವನ್ನು ಹೊರತೆಗೆದಿದ್ದೇವೆ.

50. 1.75 ಲಕ್ಷ ನಕಲಿ ಕಂಪನಿಗಳಿಗೆ ಬೀಗ ಹಾಕಿಸಿದ್ದೇವೆ.

51. ಜಿಎಸ್ಟಿ ನಂತರದ ಉಳಿತಾಯ ಮತ್ತು ಸಾಗಣೆ ಕ್ಷೇತ್ರದಲ್ಲಿನ ಸಾಮರ್ಥ್ಯ ಹೆಚ್ಚಳವಾಗಿದೆ. ಸಾಮರ್ಥ್ಯವು ಶೇ.30ರಷ್ಟು ಹೆಚ್ಚಳವಾಗಿದೆ.

52. ನೋಟು ಅಮಾನ್ಯದ ತರುವಾಯ ಹೆಚ್ಚಿನ ಹಣ ಬ್ಯಾಂಕ್ ಗಳಿಗೆ ಬಂದಿದೆ. ಇದು ಆರ್ಥಿಕತೆಗೆ ಇಂಬು ನೀಡಿದೆ.

53. ನಮ್ಮ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿದೆ. ಇಂದು ಐಟಿ ಯುಗ ಮತ್ತು ನಾವು ಡಿಜಿಟಲ್ ವಹಿವಾಟಿನ ಪಥದಲ್ಲಿ ಮುಂದೆ ಸಾಗೋಣ.

54. ನಾವು ಮುಂದೆ ಸಾಗೋಣ, ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸೋಣ ಮತ್ತು ಬೀಮ್ ಆಪ್ ಅಳವಡಿಸಿಕೊಳ್ಳೋಣ.

55. ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಿಂದ ಸ್ಪರ್ಧಾತ್ಮಕ ಸಹಕಾರ ಒಕ್ಕೂಟ ವ್ಯವಸ್ಥೆಯತ್ತ ಸಾಗಿದ್ದೇವೆ.

56. ಹಿಂದಿನ ಗ್ರಂಥಗಳಲ್ಲಿ ಹೇಳಿರುವಂತೆ ಸಕಾಲದಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ, ಅಪೇಕ್ಷಿತ ಫಲ ಸಿಗುವುದಿಲ್ಲ. ,

57. ಈಗ ಟೀಂ ಇಂಡಿಯಾಕ್ಕೆ ನ್ಯೂ ಇಂಡಿಯಾಗಾಗಿ ಸಂಕಲ್ಪ ಮಾಡಲು ಸಕಾಲವಾಗಿದೆ.

58. ನಾವು ಒಗ್ಗೂಡಿ ಭಾರತ ಕಟ್ಟಬೇಕು, ಅಲ್ಲಿ ಬಡವರಿಗೆ ಕಾಂಕ್ರೀಟ್ ಮನೆಗಳಿರಬೇಕು, ಅದರಲ್ಲಿ ವಿದ್ಯುತ್ ನೀರಿನ ಸಂಪರ್ಕ ಇರಬೇಕು.

59. ನಾವು ಎಂಥ ಭಾರತ ಕಟ್ಟಬೇಕೆಂದರೆ, ಅಲ್ಲಿ ರೈತರು ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯಿಂದ ನಿದ್ರಿಸಬೇಕು. ಅವರು ಇಂದು ದುಡಿಯುತ್ತಿರುವುದಕ್ಕಿಂತ ದುಪ್ಪಟ್ಟು ಆದಾಯ ಪಡೆಯಬೇಕು.

60. ನಾವು ಎಂಥ ಭಾರತ ನಿರ್ಮಾಣಕ್ಕೆ ಸಂಕಲ್ಪಿಸಬೇಕೆಂದರೆ, ಅಲ್ಲಿ ನಮ್ಮ ಯುವಕರಿಗೆ ಮತ್ತು ಮಹಿಳೆಯರಿಗೆ ಅವರ ಕನಸುಗಳನ್ನು ನನಸಾಗಿರಲು ವಿಪುಲ ಅವಕಾಶಗಳು ಇರಬೇಕು.

61. ಭಯೋತ್ಪಾದನೆ, ಕೋಮುವಾದ ಮತ್ತು ಜಾತಿಯತೆ ರಹಿತ ಭಾರತದ ನಿರ್ಮಾಣ ನಮ್ಮ ಸಂಕಲ್ಪ.

62. ನಾವು ಒಗ್ಗೂಡಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತರಹಿತ ಭಾರತ ಕಟ್ಟಬೇಕು.

63. ನಾವು ಎಂಥ ಭಾರತ ನಿರ್ಮಿಸಬೇಕೆಂದರೆ, ಅದು ಸ್ವಚ್ಛ, ಆರೋಗ್ಯಪೂರ್ಣ ಮತ್ತು ಸ್ವರಾಜ್ (ಸ್ವಯಂ ಆಡಳಿತ)ನ ಕನಸನ್ನು ಸಾಕಾರಗೊಳಿಸುವಂತಿರಬೇಕು.

64. ನಾವು ದಿವ್ಯ ಮತ್ತು ಭವ್ಯ ಭಾರತ ನಿರ್ಮಿಸುವ ಆಶಯ ಹೊಂದಿದ್ದೇವೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.