ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮ ಜಯಂತಿಯಂದು ಸವಾಲು ಸ್ವೀಕರಿಸುವಂತೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ಆಹ್ವಾನ ನೀಡಿದ್ದಾರೆ. ಸೌಭಾಗ್ಯ ಯೋಜನೆಯ ಉದ್ಘಾಟನೆಯ ಅಂಗವಾಗಿ ಓಎನ್.ಜಿ.ಸಿ.ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿದ್ಯುತ್ ಬಳಕೆಯ ಮೂಲಕ ಅಡುಗೆ ಮಾಡಲು ಅನುವಾಗಬಲ್ಲ ಸಮರ್ಥವಾದ ವಿದ್ಯುತ್ ಒಲೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸಿದರು.
ಈ ನಾವಿನ್ಯತೆಯು ಒಂದೇ ಬಾರಿಗೆ ಆಮದಾಗುವ ಇಂಧನದ ಮೇಲಿನ ದೇಶದ ಅವಲಂಬನೆಯ ಮೇಲೆ ಗಣನೀಯವಾದ ಪರಿಣಾಮ ಬೀರಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಶ್ವ ವಿದ್ಯುತ್ ಕಾರುಗಳತ್ತ ಕೆಲಸ ಮಾಡುತ್ತಿರುವಾಗ, ಭಾರತದಲ್ಲಿ ವಿದ್ಯುತ್ ಕಾರುಗಳ ಜೊತೆಗೆ ಜನರ ಅಗತ್ಯಗಳನ್ನು ಪೂರೈಸುವಲ್ಲಿ ಬಹುದೂರ ಸಾಗಬಲ್ಲ ವಿದ್ಯುತ್ ಒಲೆಗಳತ್ತಲೂ ಗಮನ ಹರಿಸಬೇಕೆಂದರು. ಈ ಕ್ಷೇತ್ರವನ್ನು ನಾವಿನ್ಯಗೊಳಿಸಲು ನವೋದ್ಯಮ ಮತ್ತು ಯುವಕರನ್ನು ಆಹ್ವಾನಿಸುವಂತೆ ಓಎನ್.ಜಿ.ಸಿ.ಗೆ ಪ್ರಧಾನಿ ತಿಳಿಸಿದರು.