ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶ, ಬಿಹಾರ, ಒಡಿಶಾ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳ ಕಲೆಕ್ಟರುಗಳೊಂದಿಗೆ ಸಂವಾದ ನಡೆಸಿದರು. ಅವರು ಪ್ರತಿ ರಾಜ್ಯದಲ್ಲೂ ಓಡಿಎಫ್ (ಬಯಲು ಶೌಚ ಮುಕ್ತ) ಗುರಿಯತ್ತ ಆಗಿರುವ ಪ್ರಗತಿಯ ಪರಿಶೀಲನೆ ನಡೆಸಿದರು.
ಸ್ವಚ್ಛ ಭಾರತ ಮತ್ತು ನೈರ್ಮಲ್ಯ ಗುರಿಗಳತ್ತ ತಾವು ಈವರೆಗೆ ಮಾಡಲಾಗಿರುವ ಕಾರ್ಯಾನುಭವ ಮತ್ತು ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ರಾಜ್ಯಗಳಿಗೆ ಅವರು ಉತ್ತೇಜನ ನೀಡಿದರು. ಮಹಾತ್ಮಾಗಾಂಧಿ ಅವರ 150ನೇ ಜಯಂತಿಗೆ ಈ ಗುರಿಯನ್ನು ಪೂರ್ಣಗೊಳಿಸುವುದಕ್ಕಿಂತ ದೊಡ್ಡದಾದ ಸ್ಫೂರ್ತಿ ಮತ್ತೊಂದಿಲ್ಲ ಎಂದು ಅವರು ಪ್ರತಿಪಾದಿಸಿದರು. ಪ್ರಗತಿಯ ನಿಗಾಕ್ಕೆ ಜಿಲ್ಲಾಮಟ್ಟದಲ್ಲಿ ತಂಡಗಳನ್ನು ರಚಿಸುವಂತೆ ಅವರು ತಿಳಿಸಿದರು.
ಈ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸುವ ಪ್ರಯತ್ನ ಆಗಬೇಕು ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ದೊಡ್ಡ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.