
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಜ್ವಲ ಡಿಸ್ಕಾಂ ಭರವಸೆ ಯೋಜನೆ (ಉದಯ್)ಯ ಪ್ರಗತಿ ಪರಿಶೀಲನೆ ನಡೆಸಿದರು. ಹಿರಿಯ ಸರ್ಕಾರಿ ಅಧಿಕಾರಿಗಳು ಸಾಲ, ಚೌಕಟ್ಟುಗಳ ಮೇಲ್ವಿಚಾರಣೆ, ಹಣಕಾಸಿನ ಮಾನದಂಡಗಳ ಸುಧಾರಣೆ, ಕಾರ್ಯಾಚರಣೆಯ ಸಾಧನೆಗಳುಮತ್ತು ಗ್ರಾಹಕ ಸಬಲೀಕರಣದ ಅಂಶಗಳ ಬಗ್ಗೆ ವಿವರಿಸಿದರು.
ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ನೀಡಿದ ಕಲ್ಲಿದ್ದಲು ಮತ್ತು ಖನಿಜ ನಿಕ್ಷೇಪ ಹರಾಜು ಕುರಿತ ಪ್ರಾತ್ಯಕ್ಷಿಕೆಯ ವೇಳೆ, ಪ್ರಧಾನಮಂತ್ರಿಯವರು ಹರಾಜಿನ ನಂತರ ಗಣಿಗಳ ತ್ವರಿತ ಕಾರ್ಯಾಚರಣೆ ಮಾರ್ಗಸೂಚಿ ರೂಪಿಸುವಂತೆ ಪ್ರತಿಪಾದಿಸಿದರು. ಭೌಗೋಳಿಕ ಸಮರ್ಥ ಪ್ರದೇಶಗಳ ಸಮೀಕ್ಷೆ ಮತ್ತು ಪರಿಶೋಧನೆಯ ವೇಳೆ ಎಲ್ಲ ಖನಿಜ ಸಂಬಂಧಿತ ಇಲಾಖೆಗಳೊಂದಿಗೆ ಹೆಚ್ಚಿನ ಸಹಯೋಗಕ್ಕೆ ಅವರು ಕರೆ ನೀಡಿದರು.
ಕೇಂದ್ರ ಸಚಿವರಾದ ಶ್ರೀ ಪಿಯೂಶ್ ಗೋಯೆಲ್ ಮತ್ತು ಪಿಎಂಓ, ನೀತಿ ಆಯೋಗ ಮತ್ತು ಇತರ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.