ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಗುರುವಾರ ಪ್ರಮುಖ ಮೂಲಸೌಕರ್ಯ ವಲಯಗಳಾದ ರಸ್ತೆಗಳು, ಪಿಎಮ್ ಜಿ ಎಸ್ ವೈ ,ಗ್ರಾಮೀಣ ವಸತಿ, ರೈಲ್ವೇ, ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಪ್ರಗತಿ ಪರಿಶೀಲನೆ ನಡೆಸಿದರು. ಎರಡು ಘಂಟೆಗಳ ಕಾಲ ನಡೆದ ಸಭೆಯಲ್ಲಿ ಮೂಲ ಸೌಕರ್ಯ ಸಂಬಂಧಿತ ಸಚಿವಾಲಯಗಳು, ನೀತಿ ಆಯೋಗ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಉನ್ನತ ಅಧಿಕಾರಿಗಳು ಪಾಲ್ಗೊಂಡರು.

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಅಮಿತಾಬ್ ಕಾಂತ್ ಕಾರ್ಯ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ರಸ್ತೆ ನಿರ್ಮಾಣ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ಅಂಶದ ಕುರಿತು ಗಮನ ಹರಿಸಲಾಯಿತು. ಆರ್ಥಿಕ ವರುಷ 2013-2014ರ ಸಾಲಿನಲ್ಲಿ ದಿನವೊಂದಕ್ಕೆ ನಿರ್ಮಾಣಗೊಳ್ಳುತ್ತಿದ್ದ ಸರಾಸರಿ ರಸ್ತೆ ಅಳತೆ 11.67 ಕಿಮೀ. ಇದಕ್ಕೆ ಹೋಲಿಸಿದರೆ ಆರ್ಥಿಕ ವರುಷ 2017-2018ರಲ್ಲಿ ರಸ್ತೆ ನಿರ್ಮಾಣ ದರ 26.93 ಕಿಮೀಗೆ ಹೆಚ್ಚಿದೆ.

ಸಾರಿಗೆ ವಲಯದಲ್ಲಿ ನಡೆದ ಡಿಜಿಟಲೀಕರಣದ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಯಿತು. ಇಲ್ಲಿಯವರೆಗೆ ಸುಮಾರು 24 ಲಕ್ಷ ಆರ್ ಎಫ್ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಈಗ ಸುಮಾರು ಶೇಕಡಾ 22 ರಷ್ಟು ಟೋಲ್ ನಿಧಿ ಇಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಿಂದ ಬರುತ್ತಿದೆ. ರಸ್ತೆ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವ ಮತ್ತು ದೂರು ದಾಖಲಿಸುವ ಸೌಲಭ್ಯವುಳ್ಳ “ಸುಖದ್ ಯಾತ್ರಾ’ ಆಪ್ ಒಂದು ಲಕ್ಷ ಡೌನ್ ಲೋಡ್ ಗಳನ್ನು ಹೊಂದಿದೆ.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಇಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಲು ಕರೆ ನೀಡಿದರು.
ಪ್ರಸ್ತುತ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ಗ್ರಾಮೀಣ ರಸ್ತೆಗಳು ಶೇಕಡಾ 88 ರಷ್ಟು ಅರ್ಹ ವಾಸಸ್ಥಳಗಳನ್ನು ಸಂಪರ್ಕಿಸುತ್ತಿವೆ. 2014 -2018ಸಾಲಿನಲ್ಲಿ ಸುಮಾರು 44,000 ಹಳ್ಳಿಗಳನ್ನು ರಸ್ತೆಗಳ ಮೂಲಕ ಸಂಪರ್ಕಿಸಲಾಗಿದೆ. ಅದಕ್ಕೂ ಹಿಂದಿನ ನಾಲ್ಕು ವರುಷಗಳಲ್ಲಿ 35,000 ಹಳ್ಳಿಗಳನ್ನಷ್ಟೇ ಸಂಪರ್ಕಿಸಲಾಗಿತ್ತು. “ಮೇರಿ ಸಡಕ್’ ಆಪ್ ನ್ನು ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸಲಾಗಿದೆ. ಮೇರಿ ಸಡಕ್’ ಆಪ್ ಗೆ 9.76 ಲಕ್ಷ ಡೌನ್ ಲೋಡ್ ಗಳಿವೆ. ರಸ್ತೆಗಳ ಜಿಐಎಸ್ ಮ್ಯಾಂಪಿಂಗ್ ಕಾರ್ಯ ನಡೆಯುತ್ತಿದೆ. ಇಪ್ಪತ್ತು ರಾಜ್ಯಗಳನ್ನು ಜಿಯೋಸ್ಪೇಶಿಯಲ್ ರೂರಲ್ ರೋಡ್ ಇನ್ಫಾರ್ಮೇಶನ್ ಸಿಸ್ಟಮ್ ನಲ್ಲಿ ಅಳವಡಿಸಲಾಗಿದೆ. ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಹಸಿರು ತಂತ್ರಜ್ಞಾನ ಮತ್ತು ಅಸಂಪ್ರದಾಯಿಕ ವಸ್ತುಗಳಾದ ತ್ಯಾಜ್ಯ ಪ್ಲಾಸ್ಟಿಕ್ ಮತ್ತು ಹಾರುಬೂದಿಯನ್ನು ಬಳಸಲಾಗುತ್ತಿದೆ.

ರೈಲ್ವೇ ವಲಯದ ಸಾಮರ್ಥ್ಯ ಮತ್ತು ರೋಲಿಂಗ್ ಸ್ಟಾಕ್ ನಲ್ಲಿ ಗಮನಾರ್ಹ ಸೇರ್ಪಡೆ ಆಗಿದೆ. 2014 ರಿಂದ 2018 ಸಾಲಿನಲ್ಲಿ ‘ನೂತನ ಮಾರ್ಗಗಳು, ಮಾರ್ಗಗಳ ಅಗಲೀಕರಣ ಮತ್ತು ಗೇಜ್ ಪರಿವರ್ತನೆ 9528 ಕಿಮೀಗಳಷ್ಟಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇದು ಶೇ 56 ರಷ್ಟು ಹೆಚ್ಚಳ ಕಂಡಿದೆ.

ವೈಮಾನಿಕ ವಲಯದಲ್ಲಿ 2014 ರಿಂದ 2018 ಸಾಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 62 ಹೆಚ್ಚಳವಾಗಿದೆ. ಅದಕ್ಕೂ ಹಿಂದಿನ ನಾಲ್ಕು ವರುಷಗಳ ಕಾಲ ಶೇಕಡಾ 18ರಷ್ಟು ಮಾತ್ರಾ ಹೆಚ್ಚಳವಾಗಿತ್ತು. ಉಡಾನ್ ಯೋಜನೆಯಡಿ 27 ವಿಮಾನ ನಿಲ್ದಾಣಗಳು ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

2014-2018ನೆಯ ಸಾಲಿನಲ್ಲಿ ಪ್ರಮುಖ ಬಂದರುಗಳಲ್ಲಿ ಸಂಚಾರ ಪ್ರಮಾಣ ಶೇಕಡಾ 17 ಹೆಚ್ಚಳವಾಗಿದೆ.

ಗ್ರಾಮೀಣ ವಸತಿ ವಲಯದಲ್ಲಿ 2014 ರಿಂದ 2018ನೆಯ ಸಾಲಿನಲ್ಲಿ ಸುಮಾರು ಒಂದು ಕೋಟಿ ವಸತಿ ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಗಿದೆ. ಅದಕ್ಕೂ ಹಿಂದಿನ ನಾಲ್ಕು ವರ್ಷಗಳಲ್ಲಿ ಈ ದರ 25 ಲಕ್ಷವಾಗಿತ್ತು. ಇದರಿಂದಾಗಿ ವಸತಿ ವಲಯ ಮತ್ತು ಸಂಬಂಧಿತ ನಿರ್ಮಾಣ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಹೆಚ್ಚಳವಾಗಿದೆ.
ಸ್ವತಂತ್ರ ಅಧ್ಯಯನವೊಂದರ ಪ್ರಕಾರ ಸರಾಸರಿ ನಿರ್ಮಾಣ ಪೂರ್ಣಗೊಂಡ ಅವಧಿ 2015 -2016ನೆಯ ಸಾಲಿನಲ್ಲಿದ್ದ 314 ದಿನಗಳಿಂದ 2017-18ನೆಯ ಸಾಲಿನಲ್ಲಿ 114 ದಿನಗಳಿಗೆ ಇಳಿಕೆಯಾಗಿದೆ. ಅಗ್ಗದ ವಸತಿ ವಿನ್ಯಾಸ ಮತ್ತು ವಿಕೋಪ ಸ್ಥಿತಿಸ್ಥಾಪಕತ್ವಕ್ಕೆ ಒತ್ತು ನೀಡಲಾಗುತ್ತಿದೆ.

ನಗರ ವಸತಿಯಲ್ಲಿ ನವ ನಿರ್ಮಾಣ ತಂತ್ರಜ್ಞಾನಗಳಿಗೆ ಮಹತ್ವ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಆರಂಭವಾದಾಗಿನಿಂದ 54 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ.

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s smartphone exports hit record Rs 2 lakh crore, becomes country’s top export commodity

Media Coverage

India’s smartphone exports hit record Rs 2 lakh crore, becomes country’s top export commodity
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಎಪ್ರಿಲ್ 2025
April 12, 2025

Global Energy Hub: India’s Technological Leap Under PM Modi’s Policies