ವರ್ಲ್ಡ್ ಬ್ಯಾಂಕ್ ನ ‘ಈಸ್ ಆಫ್ ಗೆಟಿಂಗ್ ಎಲೆಕ್ಟ್ರಿಸಿಟಿ’ ಸೂಚ್ಯಾಂಕದಲ್ಲಿ 2014ರಲ್ಲಿ 99ನೆಯ ಸ್ಥಾನದಲ್ಲಿದ್ದ ಭಾರತ ಈಗ 26ನೆಯ ಸ್ಥಾನಕ್ಕೇರಿದೆ. ಸೌಭಾಗ್ಯ ಯೋಜನೆಯಡಿ ನಡೆದ ವಸತಿ ವಿದ್ಯುದೀಕರಣದ ಪ್ರಗತಿಯನ್ನೂ ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕಟ್ಟಕಡೆಯವರೆಗಿನ ಸಂಪರ್ಕ ಮತ್ತು ವಿತರಣೆ ಕುರಿತು ಚರ್ಚೆ ನಡೆಸಲಾಯಿತು.
ಮುಂಬರುವ ಹಣಕಾಸು ವರುಷದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಇರಿಸಿರುವ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾದ ಅಂಶ ತಿಳಿಯಿತು. ಕಲ್ಲಿದ್ದಲು ವಲಯದಲ್ಲಿ ಕುರಿತು ನಡೆದ ಚರ್ಚೆ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸುವ ಕುರಿತು ಕೇಂದ್ರೀಕೃತವಾಗಿತ್ತು.