ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ ಅವರನ್ನು ಭೇಟಿ ಮಾಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ @florence_parly ಅವರನ್ನು ಬರಮಾಡಿಕೊಳ್ಳಲಾಯಿತು. ದ್ವಿಪಕ್ಷೀಯ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತೆ, ಇಂಡೋ-ಪೆಸಿಫಿಕ್ ವಿಚಾರಗಳು ಮತ್ತು ಮುಂಬರುವ ಇಯು ಕೌನ್ಸಿಲ್ಗೆ ಫ್ರಾನ್ಸ್ನ ಅಧ್ಯಕ್ಷಸ್ಥಾನದ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.
ಫ್ರಾನ್ಸ್‌ನೊಂದಿಗೆ ಭಾರತದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ನಾನು ಈ ವೇಳೆ ಪುನರುಚ್ಚರಿಸಿದೆ," ಎಂದಿದ್ದಾರೆ.
Received French Minister for Armed Forces @florence_parly today and discussed bilateral defence cooperation, regional security, Indo-Pacific and France’s forthcoming Presidency of the EU Council.
— Narendra Modi (@narendramodi) December 17, 2021
I reiterated India's commitment to further deepening our Strategic Partnership. pic.twitter.com/GbmLSKcHkk