QuotePM Narendra Modi to inaugurate digital exhibition – “Uniting India – Sardar Patel” on October 31
QuoteDigital exhibition showcasing the integration of India and contribution of Sardar Vallabhbhai Patel previewed by PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ, ನವದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಸಂಸ್ಕೃತಿ ಸಚಿವಾಲಯ ಸ್ಥಾಪಿಸಿರುವ “ಭಾರತ ಒಗ್ಗೂಡಿಸಿ – ಸರ್ದಾರ್ ಪಟೇಲ್” ವಸ್ತುಪ್ರದರ್ಶನದ ಪರಾಮರ್ಶೆ ನಡೆಸಿದರು.

ಈ ಡಿಜಿಟಲ್ ವಸ್ತುಪ್ರದರ್ಶನವು ಭಾರತದ ಏಕತೆಯನ್ನು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಪ್ರದರ್ಶಿಸುತ್ತಿದೆ, ಇದನ್ನು ಪ್ರಧಾನಮಂತ್ರಿಯವರ ಸ್ಫೂರ್ತಿಯೊಂದಿಗೆ ಸಿದ್ಧಪಡಿಸಲಾಗಿದೆ.

ಈ ವಸ್ತುಪ್ರದರ್ಶನದಲ್ಲಿ ಸುಮಾರು 30 ಪ್ರದರ್ಶನಗಳು ಮತ್ತು ಮಾಧ್ಯಮ ಅನುಭವಗಳು ಹಾಗೂ 20 ವಿವಿಧ ಪ್ರಕಾರದ ಉಪಕ್ರಮಗಳನ್ನೂ ಒಳಗೊಂಡಿದೆ. ಭಾರತವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಪಾತ್ರವನ್ನು ವಿವರಿಸುವ ಡಿಜಿಟಲ್ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿರುವ ಇದು ಭೇಟಿ ನೀಡುವವರಿಗೆ ಅದನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಕಲ್ಪಿಸುತ್ತದೆ. 3ಡಿ ಫಿಲಂ (ಕನ್ನಡಕ ರಹಿತ) ತಂತ್ರಜ್ಞಾನ, ಪೂರ್ಣಲೇಖೀ ಪ್ರಕ್ಷೇಪಣೆ, ಚಲನ ಪ್ರಕ್ಷೇಪಣೆ, ನೇತ್ರ ಆಧಾರಿತ ಸಾಕ್ಷಾತ್ ಅನುಭವ ಇತ್ಯಾದಿಗಳನ್ನು ಈ ವಸ್ತು ಪ್ರದರ್ಶನದಲ್ಲಿ ಬಳಸಿಕೊಳ್ಳಲಾಗಿದೆ.

ಸೂಕ್ತ ದಸ್ತಾವೇಜೀಕರಣವನ್ನು ಸಂಸ್ಕೃತಿ ಸಚಿವಾಲಯವು ಭಾರತದ ರಾಷ್ಟ್ರೀಯ ಪುರಾತತ್ವ ದಾಖಲೆಯಿಂದ ಒದಗಿಸಿದೆ. ರಾಷ್ಟ್ರೀಯ ವಿನ್ಯಾಸ ಸಂಸ್ಥೆ, ಈ ವಸ್ತುಪ್ರದರ್ಶನದ ವಿನ್ಯಾಸವನ್ನು ರೂಪಿಸಿದೆ.

ಈ ವಸ್ತುಪ್ರದರ್ಶನವನ್ನು ಪ್ರಧಾನಮಂತ್ರಿಯವರು 2016ರ ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯಂದು ಉದ್ಘಾಟಿಸಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India eyes potential to become a hub for submarine cables, global backbone

Media Coverage

India eyes potential to become a hub for submarine cables, global backbone
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2025
March 10, 2025

Appreciation for PM Modi’s Efforts in Strengthening Global Ties