ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಮಹಾತ್ಮಾಗಾಂಧಿ ಅವರಿಂದ ಪ್ರೇರಿತರಾಗಿ, ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವರು ಅಸಹಕಾರ ಚಳವಳಿಯಂಥ ಬೇರುಮಟ್ಟದ ಚಳವಳಿಗಳಲ್ಲಿ ಭಾಗಿಯಾಗಿದ್ದರು ಮತ್ತು ಸಂವಿಧಾನ ಸಭೆಯ ಅಧ್ಯಕ್ಷರಾದಿ ಶ್ರೇಷ್ಠ ನಾಯಕತ್ವ ಒದಗಿಸಿದ್ದರು. ಭಾರತದ ಪ್ರಥಮ ರಾಷ್ಟ್ರಪತಿಯಾಗಿ, ರಚನಾತ್ಮಕ ವರ್ಷಗಳಲ್ಲಿ ಅವರ ನಾಯಕತ್ವ ಮತ್ತು ಮಾರ್ಗದರ್ಶನ ಎರಡೂ ದೇಶಕ್ಕೆ ಅಮೂಲ್ಯವಾದದ್ದು.
ಡಾ. ರಾಜೇಂದ್ರ ಪ್ರಸಾದ್ ಅವರ ಅಮೋಘ ಸೇವೆಯಿಂದ ಪೀಳಿಗೆಗಳು ಸ್ಫೂರ್ತಿ ಪಡೆದಿವೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
Remembering Dr. Rajendra Prasad on his Jayanti. pic.twitter.com/4uPv8aGAjf
— Narendra Modi (@narendramodi) December 3, 2017