ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬುದ್ಧ ಪೂರ್ಣಿಮೆಯ ಅಂಗವಾಗಿ, ಉತ್ತರ ಪ್ರದೇಶದ ಕುಶಿನಗರದಲ್ಲಿರುವ ಮಹಾಪರಿನಿರ್ವಾಣ ಸ್ತೂಪದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಇಂದು ಪ್ರಧಾನಮಂತ್ರಿಯವರು ಭಗವಾನ್ ಬುದ್ಧನ ಜನ್ಮಸ್ಥಳ ನೇಪಾಳದ ಲುಂಬಿನಿಗೆ ಭೇಟಿ ನೀಡಿ ಮಾಯಾದೇವಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ʻಲುಂಬಿನಿ ಮೊನ್ಯಾಸ್ಟಿಕ್ ಝೋನ್ʼನಲ್ಲಿ ʻಬೌದ್ಧ ಸಂಸ್ಕೃತಿ ಮತ್ತು ಪರಂಪರೆಗಾಗಿ ಭಾರತದ ಅಂತರರಾಷ್ಟ್ರೀಯ ಕೇಂದ್ರʼ ನಿರ್ಮಾಣಕ್ಕೆ ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಶಿಲಾನ್ಯಾಸ ನೆರವೇರಿಸಿದರು. ಶ್ರೀ ಮೋದಿ ಅವರು ನೇಪಾಳದ ಪ್ರಧಾನಮಂತ್ರಿಯವರೊಂದಿಗೆ ʻಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್ʼ ಮತ್ತು ಲುಂಬಿನಿಯ ʻಧ್ಯಾನ ಭವನʼದಲ್ಲಿ ನಡೆದ 2566ನೇ ಬುದ್ಧ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು.
ಕುಶಿನಗರದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸರಕಾರವು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಟ್ವೀಟ್ನಲ್ಲಿ ಹೀಗೆ ಹೇಳಿದ್ದಾರೆ:
"ಕುಶಿನಗರದ ಮಹಾಪರಿನಿರ್ವಾಣ ಸ್ತೂಪದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನಮ್ಮ ಸರಕಾರವು ಕುಶಿನಗರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ, ಇದರಿಂದ ಹೆಚ್ಚಿನ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಇಲ್ಲಿಗೆ ಬರಬಹುದು.”
Prayed at the Mahaparinirvana Stupa in Kushinagar. Our Government is making numerous efforts to boost infrastructure in Kushinagar so that more tourists and pilgrims can come here. pic.twitter.com/lWWFq8HCqs
— Narendra Modi (@narendramodi) May 16, 2022