Technology is the bridge to achieve ‘Sabka Saath Sabka Vikas’: PM
Challenge of technology, when converted into opportunity, transformed ‘Dakiya’ into ‘Bank Babu’: PM

ಇಂದು ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು “ಬ್ರಿಡ್ಜಿಟಲ್ ನೇಷನ್” ಪುಸ್ತಕವನ್ನು ಅನಾವರಣಗೊಳಿಸಿದರು ಮತ್ತು ಅದರ ಮೊದಲ ಪ್ರತಿಯನ್ನು ಶ್ರೀ ರತನ್ ಟಾಟಾರವರಿಗೆ ನೀಡಿದರು. ಈ ಪುಸ್ತಕವನ್ನು ಶ್ರೀ ಎನ್ ಚಂದ್ರಶೇಖರನ್ ಮತ್ತು ಶ್ರೀಮತಿ ರೂಪಾ ಪುರುಷೋತ್ತಮ್ ರವರು ಬರೆದಿದ್ದಾರೆ.

ತಂತ್ರಜ್ಞಾನ: ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಸಾಧಿಸಲು ಸೇತುವೆಯಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು ತಂತ್ರಜ್ಞಾನದ ಮಹತ್ವದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ, ಸಕಾರಾತ್ಮಕತೆ ಮತ್ತು ಆಶಾವಾದದಿಂದ ತುಂಬಿರುವ ದೂರದೃಷ್ಟಿಯ ಪುಸ್ತಕವನ್ನು ಹೊರತಂದಿದ್ದಕ್ಕಾಗಿ ಲೇಖಕರನ್ನು ಶ್ಲಾಘಿಸಿದರು. ತಂತ್ರಜ್ಞಾನವು ಲಕ್ಷಾಂತರ ಭಾರತೀಯರ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತಿರುವ ಕಾಲಘಟ್ಟದಲ್ಲಿ ಈ ಪುಸ್ತಕ ಹೊರಬರುತ್ತಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನವು ಒಂದು ಸೇತುವೆ, ವಿಭಜಕವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯನ್ನು ಸಾಧಿಸಲು ತಂತ್ರಜ್ಞಾನವು ಆಕಾಂಕ್ಷೆಗಳು ಮತ್ತು ಸಾಧನೆ, ಬೇಡಿಕೆ ಮತ್ತು ವಿತರಣೆ, ಸರ್ಕಾರ ಮತ್ತು ಆಡಳಿತದ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದು ಅವರು ಹೇಳಿದರು. ವೇಗವಾಗಿ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಯುಳ್ಳ ಭಾರತಕ್ಕೆ ಸಕಾರಾತ್ಮಕತೆ, ಸೃಜನಶೀಲತೆ ಮತ್ತು ರಚನಾತ್ಮಕ ಮನಸ್ಸು ಅತ್ಯಗತ್ಯ ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆ ಮತ್ತು ಮಾನವ ಉದ್ದೇಶಗಳ ನಡುವೆ ಸೇತುವೆಯನ್ನು ನಿರ್ಮಿಸುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.


ತಂತ್ರಜ್ಞಾನದ ಮೂಲಕ ಆಡಳಿತ: ಕಳೆದ ಐದು ವರ್ಷಗಳ ಪ್ರಯಾಣ
ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆಗಾಗಿ ತಂತ್ರಜ್ಞಾನವು ಸರ್ಕಾರದ ಯೋಜನೆಗಳಲ್ಲಿ ಹೇಗೆ ಪ್ರಮುಖ ಅಂಶವಾಗಿದೆ ಎನ್ನುವುದನ್ನು ಪ್ರಧಾನ ಮಂತ್ರಿ ವಿವರಿಸಿದರು. ಲಕ್ಷಾಂತರ ಮಹಿಳೆಯರ ಜೀವನವನ್ನು ಬದಲಿಸಿದ ಉಜ್ವಲಾ ಯೋಜನೆಯಲ್ಲಿ ಡೇಟಾ ಇಂಟೆಲಿಜೆನ್ಸ್, ಡಿಜಿಟಲ್ ಮ್ಯಾಪಿಂಗ್ ಮತ್ತು ನೈಜ ಸಮಯದ ಮೇಲ್ವಿಚಾರಣೆಯ (ರಿಯಲ್ ಟೈಮ್ ಮಾನಿಟರಿಂಗ್) ಬಗ್ಗೆ ಅವರು ಪ್ರಸ್ತಾಪಿಸಿದರು. ಜನ ಧನ್ ಯೋಜನೆ ಮತ್ತು ಆಯುಷ್ಮಾನ್ ಭಾರತ್ ನಂತಹ ಯೋಜನೆಗಳ ಮೂಲಕ ಜನರನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನವು ಹೇಗೆ ಸಹಾಯ ಮಾಡಿದೆ ಎಂಬುದರ ಬಗ್ಗೆಯೂ ಅವರು ಮಾತನಾಡಿದರು.

ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಎಂ) ನಂತಹ ನವೀನ ಆಲೋಚನೆಗಳ ಮೂಲಕ ಸರ್ಕಾರಿ ಇಲಾಖೆಗಳಲ್ಲಿ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಪೂರೈಕೆ ವ್ಯವಸ್ಥೆಗಳು ಮತ್ತು ಬೇಡಿಕೆಯ ನಡುವೆ ಸೇತುವೆಯನ್ನು ನಿರ್ಮಿಸಲು ತಮ್ಮ ಸರ್ಕಾರ ತಂತ್ರಜ್ಞಾನವನ್ನು ಬಳಸಿದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. ದೇಶದಲ್ಲಿ, ವಿಶೇಷವಾಗಿ ಶ್ರೇಣಿ -2 ಮತ್ತು ಶ್ರೇಣಿ – 3 ನಗರಗಳಲ್ಲಿ ಧೃಡವಾದ ಸ್ಟಾರ್ಟ್-ಅಪ್ (ನವೋದಯ) ವ್ಯವಸ್ಥೆಯನ್ನು ರಚಿಸಲು ತಂತ್ರಜ್ಞಾನವನ್ನು ಹೇಗೆ ಬಳಸಲಾಗಿದೆ ಮತ್ತು ಇವು ಸ್ಟಾರ್ಟ್ಅಪ್‌ಗಳ ಸಂಪೂರ್ಣ ಹೊಸ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡಿದೆ ಎಂದು ಅವರು ವಿವರಿಸಿದರು .
ತಂತ್ರಜ್ಞಾನದಿಂದ ಎದುರಾಗುವ ಸವಾಲುಗಳನ್ನು ಸದವಕಾಶಗಳನ್ನಾಗಿ ಪರಿವರ್ತಿಸುವ ಅಗತ್ಯತೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ರಚನೆಯ ಉದಾಹರಣೆಯನ್ನು ಉಲ್ಲೇಖಿಸಿದರು. ಇಡೀ ಅಂಚೆ ಸಂಸ್ಥೆಗೆ ತಂತ್ರಜ್ಞಾನದಿಂದ ಉಂಟಾದ ಅಡಚಣೆಯು ತಂತ್ರಜ್ಞಾನದ ತೀವ್ರ ಬ್ಯಾಂಕಿಂಗ್ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದ್ದು, ಅಂಚೆ ಬ್ಯಾಂಕ್ ಮೂಲಕ ಲಕ್ಷಾಂತರ ಜನರಿಗೆ ಲಾಭದಾಯಕವಾಗಿದ್ದು, ಇದು ‘ಡಾಕಿಯಾವನ್ನು (ಅಂಚೆಪೇದೆ) ಬ್ಯಾಂಕ್ ಬಾಬು’ ವನ್ನಾಗಿ ಪರಿವರ್ತಿಸಿತು ಎಂದರು

ಡಿಪ್ಲೊಮ್ಯಾಟಿಕ್ ಕಾರ್ಪ್, ಸರ್ಕಾರಿ ಪ್ರತಿನಿಧಿಗಳು ಮತ್ತು ಮಾಧ್ಯಮ ವ್ಯಕ್ತಿಗಳು ಭಾಗವಹಿಸುತ್ತಾರೆ.
ಈ ಕಾರ್ಯಕ್ರಮದಲ್ಲಿ ಅಮೇರಿಕ, ಗ್ರೇಟ್ ಬ್ರಿಟನ್ ಮತ್ತು ಚೀನಾ ಗಣರಾಜ್ಯದ ರಾಯಭಾರಿಗಳು ಸೇರಿದಂತೆ ರಾಜತಾಂತ್ರಿಕ ದಳದ ಸದಸ್ಯರು ಭಾಗವಹಿಸಿದ್ದರು. ಭಾರತ ಸರ್ಕಾರದ ಹಲವಾರು ಸಚಿವಾಲಯಗಳ ಕಾರ್ಯದರ್ಶಿಗಳು; ಸಿಐಐ, ಎಫ್ಐಸಿಸಿಐ ಮತ್ತು ನ್ಯಾಸ್ಕಾಂ ಸೇರಿದಂತೆ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳಾದ ರಜತ್ ಶರ್ಮಾ, ನವಿಕಾ ಕುಮಾರ್, ರಾಜ್ ಕಮಲ್ ಝಾ, ಸುಧೀರ್ ಚೌಧರಿ, ಸ್ಮಿತಾ ಪ್ರಕಾಶ್ ಸೇರಿದಂತೆ ಪ್ರಮುಖ ಮಾಧ್ಯಮದ ವ್ಯಕ್ತಿಗಳು ಮತ್ತು ಟಾಟಾ ಸಮೂಹದ ಸದಸ್ಯರು ಸಹ ಉಪಸ್ಥಿತರಿದ್ದರು.

ಪುಸ್ತಕದ ಬಗ್ಗೆ :

ತಂತ್ರಜ್ಞಾನವು ಮತ್ತು ಮಾನವರು ಪರಸ್ಪರ ಪ್ರಯೋಜನಕಾರಿ ಪರಿಸರ ವ್ಯವಸ್ಥೆಯಲ್ಲಿ ಸಹಬಾಳ್ವೆ ನಡೆಸುವ ಭವಿಷ್ಯದ ಪ್ರಬಲ ದೃಷ್ಟಿಯನ್ನು ಪುಸ್ತಕವು ಪ್ರಸ್ತುತಪಡಿಸುತ್ತದೆ. ತಂತ್ರಜ್ಞಾನವನ್ನು ಮಾನವ ಶ್ರಮದ ಬದಲಿಯಾಗಿ ಸ್ವೀಕರಿಸುವ ಬದಲು, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಭಾರತ ಇದನ್ನು ಬಳಸಬಹುದು ಎನ್ನುವ ವಾದವನ್ನು ಮುಂದಿಕ್ಕಿದೆ. ಅತ್ಯಾಧುನಿಕ ಡಿಜಿಟಲ್ ಪರಿಕರಗಳು ಆಕಾಂಕ್ಷೆಗಳು ಮತ್ತು ಸಾಧನೆಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬಹುದು , ಆದ್ದರಿಂದ ‘ಬ್ರಿಡ್ಜಿಟಲ್’ಎನ್ನುವ ಹೆಸರನ್ನು ಕೊಡಲಾಗಿದೆ.

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
PM to participate in Veer Baal Diwas programme on 26 December in New Delhi
December 25, 2024
PM to launch ‘Suposhit Gram Panchayat Abhiyan’

Prime Minister Shri Narendra Modi will participate in Veer Baal Diwas, a nationwide celebration honouring children as the foundation of India’s future, on 26 December 2024 at around 12 Noon at Bharat Mandapam, New Delhi. He will also address the gathering on the occasion.

Prime Minister will launch ‘Suposhit Gram Panchayat Abhiyan’. It aims at improving the nutritional outcomes and well-being by strengthening implementation of nutrition related services and by ensuring active community participation.

Various initiatives will also be run across the nation to engage young minds, promote awareness about the significance of the day, and foster a culture of courage and dedication to the nation. A series of online competitions, including interactive quizzes, will be organized through the MyGov and MyBharat Portals. Interesting activities like storytelling, creative writing, poster-making among others will be undertaken in schools, Child Care Institutions and Anganwadi centres.

Awardees of Pradhan Mantri Rashtriya Bal Puraskar (PMRBP) will also be present during the programme.