Quoteಮಹಿಳೆಯರ ಘನತೆ ಮತ್ತು ಸುಲಭ ಜೀವನಕ್ಕಾಗಿ ಎಲ್ಲವನ್ನೂ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಲು ಬೃಹತ್ ರಾಖಿ ಸಮರ್ಪಿಸಿದ ಆ ಪ್ರದೇಶದ ಮಹಿಳೆಯರು
Quoteಫಲಾನುಭವಿಗಳೊಂದಿಗೆ ಸಂವಾದ
Quote“ಸರ್ಕಾರವು ಪ್ರಾಮಾಣಿಕ ಸಂಕಲ್ಪದೊಂದಿಗೆ ಫಲಾನುಭವಿಗಳನ್ನು ತಲುಪಿದಾಗ ಅರ್ಥಪೂರ್ಣ ಫಲಿತಾಂಶಗಳ ಸಕಾರ’’
Quoteಸರ್ಕಾರದ 8 ವರ್ಷಗಳು “ಸೇವಾ ಸುಶಾಸನ್ ಔರ್ ಗರೀಬ್ ಕಲ್ಯಾಣ’ (ಉತ್ತಮ ಆಡಳಿತ, ಬಡವರ ಕಲ್ಯಾಣ)ಕ್ಕೆ ಮೀಸಲು
Quote“ನಮ್ಮ ಕನಸು ಶುದ್ಧವಾದುದು, ನಾವು ಶೇಕಡ ನೂರಕಕ್ಕೆ ನೂರರಷ್ಟು ವ್ಯಾಪ್ತಿ ತಲುಪುವತ್ತ ಸಾಗಬೇಕು. ಸರ್ಕಾರಿ ಯಂತ್ರ ಇದಕ್ಕೆ ಒಗ್ಗಿಕೊಳ್ಳಬೇಕು ಮತ್ತು ಪ್ರಜೆಗಳಲ್ಲಿ ನಂಬಿಕೆ ಮೂಡಿಸಬೇಕು’’
Quoteಯೋಜನೆಗಳು ಶೇಕಡ ನೂರಕ್ಕೆ 100ರಷ್ಟು ಜನರನ್ನು ತಲುಪಿರುವುದಾಗಿ ಈ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಭರೂಚ್‌ನಲ್ಲಿ ನಡೆದ ‘ಉತ್ಕರ್ಷ್ ಸಮಾವೇಶ’ ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಸಹಾಯ ಮಾಡುವ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳು ಶೇಕಡ ನೂರಕ್ಕೆ  100ರಷ್ಟು ಜನರನ್ನು ತಲುಪಿರುವುದಾಗಿ ಈ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ದೇಶದಲ್ಲಿ ಮಹಿಳೆಯರ ಘನತೆ ಮತ್ತು ಸುಲಭ ಜೀವನಕ್ಕಾಗಿ ಪ್ರಧಾನಮಂತ್ರಿ ಅವರು ಮಾಡಿದ ಎಲ್ಲ ಕಾರ್ಯಗಳಿಗೆ ಧನ್ಯವಾದಗಳು ಅರ್ಪಿಸಿದ ಆ ಪ್ರದೇಶದ ಮಹಿಳೆಯರು ಪ್ರಧಾನ ಮಂತ್ರಿಯವರಿಗೆ ಬೃಹತ್ ರಾಖಿಯನ್ನು ಸಮರ್ಪಿಸಿದರು ಮತ್ತು ಅವರಿಗೆ ಆರೋಗ್ಯ ಮತ್ತು ದೀರ್ಘಾಯುಷ್ಯ ಹಾರೈಸಿದರು. ಪ್ರಧಾನಮಂತ್ರಿ ನಾನಾ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. 

ದೃಷ್ಟಿವಿಕಲ ಚೇತನ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ, ಆ ಫಲಾನುಭವಿಯ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಿಸಿದರು. ತಂದೆಯ ಸಮಸ್ಯೆ ಬಗ್ಗೆ ಪುತ್ರಿ ಭಾವುಕಳಾದಳು. ಭಾವೋದ್ರಿಕ್ತ ಪ್ರಧಾನಿ, ಆಕೆಗೆ ಅವರ ಸೂಕ್ಷ್ಮತೆಯೇ ನಿಮ್ಮ ಶಕ್ತಿ ಎಂದು ಹೇಳಿದರು. ಅವರು ಮತ್ತು ಅವರ ಕುಟುಂಬ ಹೇಗೆ ಈದ್ ಹಬ್ಬವನ್ನು  ಆಚರಿಸಿತು ಎಂಬುದನ್ನೂ ಸಹ ಪ್ರಧಾನಿ ವಿಚಾರಿಸಿದರು. ಫಲಾನುಭವಿಗಳಿಗೆ ಲಸಿಕೆ ಹಾಕಿಸಿದ್ದಕ್ಕೆ ಮತ್ತು ತಮ್ಮ ಹೆಣ್ಣುಮಕ್ಕಳ ಆಕಾಂಕ್ಷೆಗಳನ್ನು ಪೋಷಿಸಿದ ಕಾರಣಕ್ಕೆ ಪ್ರಧಾನಿ  ಅವರನ್ನು ಅಭಿನಂದಿಸಿದರು. ಪ್ರಧಾನಮಂತ್ರಿ ಅವರು ಮಹಿಳಾ ಫಲಾನುಭವಿಯೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಜೀವನದ ಬಗ್ಗೆ ಆಲಿಸಿದರು ಮತ್ತು ಗೌರವಯುತ ಜೀವನ ನಡೆಸುವ ಅವರ ಸಂಕಲ್ಪವನ್ನು ಶ್ಲಾಘಿಸಿದರು. ಯುವ ವಿಧವೆಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಜೀವನವನ್ನು ನೀಡುವ ಪಯಣದ ಬಗ್ಗೆ ಪ್ರಧಾನಿ ಅವರಿಗೆ ವಿವರಿಸಿದರು. ಆಕೆ ಸಣ್ಣ ಉಳಿತಾಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದ ಪ್ರಧಾನಮಂತ್ರಿ, ಆಕೆಯ ನಿರ್ದಿಷ್ಠ ಪಯಣದಲ್ಲಿ ಆಕೆಯನ್ನು ಬೆಂಬಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

|

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಸರ್ಕಾರವು ಪ್ರಾಮಾಣಿಕವಾಗಿ ಸಂಕಲ್ಪದೊಂದಿಗೆ ಫಲಾನುಭವಿಯನ್ನು ತಲುಪಿದಾಗ ಫಲಪ್ರದ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದಕ್ಕೆ ಇಂದಿನ ಉತ್ಕರ್ಷ ಸಮಾವೇಶ ಸಾಕ್ಷಿಯಾಗಿದೆ ಎಂದು ಹೇಳಿದರು. ಸಾಮಾಜಿಕ ಭದ್ರತೆಗೆ ಸಂಬಂಧಿಸಿದ 4 ಯೋಜನೆಗಳು ಶೇಕಡ ನೂರಕ್ಕೆ 100ರಷ್ಟು ಜನರನ್ನು ತಲುಪಿರುವುದಕ್ಕಾಗಿ ಅವರು ಭರೂಚ್ ಜಿಲ್ಲಾಡಳಿತ ಮತ್ತು ಗುಜರಾತ್ ಸರ್ಕಾರವನ್ನು ಶ್ಲಾಘಿಸಿದರು. ಫಲಾನುಭವಿಗಳಲ್ಲಿ ತೃಪ್ತಿ ಮತ್ತು ವಿಶ್ವಾಸವನ್ನು ಪ್ರಧಾನಿ ಉಲ್ಲೇಖಿಸಿದರು. ಬುಡಕಟ್ಟು, ಎಸ್‌ಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಅನೇಕ ಪ್ರಜೆಗಳು ಮಾಹಿತಿಯ ಕೊರತೆಯಿಂದ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು. ಸಬ್ ಕಾ ಸಾಥ್,  ಸಬ್ ಕಾ ವಿಶ್ವಾಸ್ ಮತ್ತು ಪ್ರಾಮಾಣಿಕ ಉದ್ದೇಶಗಳು ಒಂದುಗೂಡಿದಾಗ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ ಎಂದು ಅವರು ಉಲ್ಲೇಖಿಸಿದರು. 

ಸರ್ಕಾರದ ಮುಂಬರುವ 8 ನೇ ವಾರ್ಷಿಕೋತ್ಸವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಸರ್ಕಾರದ 8 ವರ್ಷಗಳನ್ನು 'ಸೇವಾ ಸುಶಾಸನ್  ಔರ್ ಗರೀಬ್ ಕಲ್ಯಾಣ್'ಗೆ (ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ) ಮೀಸಲಿಡಲಾಗಿದೆ ಎಂದು ಹೇಳಿದರು. ತಮ್ಮ ಆಡಳಿತದ ಯಶಸ್ಸಿಗೆ, ಮನ್ನಣೆಗೆ ತಾವು ಅಭಾವ, ಅಭಿವೃದ್ಧಿ ಮತ್ತು ಬಡತನದ ಬಗ್ಗೆ ಕಲಿಯುವ ಜನರಲ್ಲಿ ಒಬ್ಬರಾಗಿ  ಗಳಿಸಿದ ಅನುಭವವೇ ಕಾರಣವಾಯಿತು ಎಂದರು. ಸಾಮಾನ್ಯ ಜನರ ಬಡತನ ಮತ್ತು ಅಗತ್ಯಗಳ ವೈಯಕ್ತಿಕ ಅನುಭವದ ಆಧಾರದ ಮೇಲೆ ತಾವು ಕಾರ್ಯನಿರ್ವಹಿಸುವುದಾಗಿ ಹೇಳಿದ ಅವರು, ಪ್ರತಿಯೊಬ್ಬ ಅರ್ಹರು ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು. 

ಗುಜರಾತಿನ ಮಣ್ಣು. ತನ್ನ ಪ್ರಶಸ್ತಿಗಳ ಮೇಲೆ ವಿರಮಿಸದೆ ಇರುವುದನ್ನು ಕಲಿಸಿದೆ ಮತ್ತು ನಾಗರಿಕರ ಕಲ್ಯಾಣದ ವ್ಯಾಪ್ತಿ ಮತ್ತು ತೀವ್ರತೆಯನ್ನು ಸುಧಾರಿಸುವ ಗುರಿಯನ್ನು ತಾವು ಸದಾ ಹೊಂದಿರುವುದಾಗಿ ಪ್ರಧಾನಿ ಹೇಳಿದರು. “ನನ್ನ ಕನಸು ಎಲ್ಲರನ್ನೂ ತಲುಪುವುದು. ನಾವು ಶೇಕಡ ನೂರಕ್ಕೆ 100ರಷ್ಟು ವ್ಯಾಪ್ತಿಯ ಕಡೆಗೆ ಸಾಗಬೇಕು. ಸರ್ಕಾರಿ ಯಂತ್ರಗಳು ಇದಕ್ಕೆ ಒಗ್ಗಿಕೊಳ್ಳಬೇಕು ಮತ್ತು ನಾಗರಿಕರಲ್ಲಿ ನಂಬಿಕೆಯನ್ನು ಮೂಡಿಸಬೇಕು’’ ಎಂದರು

|

2014ರಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯು ಶೌಚಾಲಯ, ಲಸಿಕೆ, ವಿದ್ಯುತ್ ಸಂಪರ್ಕ ಮತ್ತು ಬ್ಯಾಂಕ್ ಖಾತೆಗಳಂತಹ ಸೌಲಭ್ಯಗಳಿಂದ ವಂಚಿತವಾಗಿತ್ತು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕೆಲವು ವರ್ಷಗಳಿಂದೀಚೆಗೆ ಪ್ರತಿಯೊಬ್ಬರ ಪ್ರಯತ್ನದಿಂದ, ನಾವು ಅನೇಕ ಯೋಜನೆಗಳನ್ನು ಶೇಕಡ ನೂರಕ್ಕೆ 100ರಷ್ಟು ಫಲಾನುಭವಿಗಳನ್ನು ತಲುಪಲು ಸಾಧ್ಯವಾಯಿತು. 8 ವರ್ಷಗಳ ನಂತರ ನಾವು ಹೊಸ ಸಂಕಲ್ಪ ಮತ್ತು ದೃಢತೆಯೊಂದಿಗೆ ನಮ್ಮನ್ನು ಮರು ಸಮರ್ಪಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು. 

|

ಶೇಕಡ ನೂರಕ್ಕೆ ನೂರರಷ್ಟು ಫಲಾನುಭವಿಗಳನ್ನು ತಲುಪುವುದು ಎಂದರೆ ಪ್ರತಿ ಧರ್ಮ ಮತ್ತು ಪ್ರತಿ ವಿಭಾಗಕ್ಕೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಜೊತೆಗೆ ಸಮಾನವಾಗಿ ತಲುಪಿಸುವುದು ಎಂದರ್ಥ. ಬಡವರ ಕಲ್ಯಾಣಕ್ಕಾಗಿ ರೂಪಿಸಿರುವ ಪ್ರತಿಯೊಂದು ಯೋಜನೆಯಿಂದ ಯಾರೂ ವಂಚಿತರಾಗಬಾರದು. ಇದು ತುಷ್ಟೀಕರಣ ಅಥವಾ ಓಲೈಕೆ ರಾಜಕಾರಣಕ್ಕೂ  ಅಮತ್ಯ ಹಾಡುತ್ತದೆ. ಎಲ್ಲರನ್ನೂ ತಲುಪುವುದು ಎಂದರೆ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಎಂದು. 

ಆ ಭಾಗದ ವಿಧವಾ ಸಹೋದರಿಯರು ತಮಗೆ ಅರ್ಪಿಸಿದ ರಾಖಿಯ ರೂಪದಲ್ಲಿ ಶಕ್ತಿ ನೀಡಿದ ಮಹಿಳೆಯರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. ಅವರ ಹಾರೈಕೆಗಳು ನನಗೆ ರಕ್ಷಾ ಕವಚದಂತಿದ್ದು, ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದರು. 

ಪ್ರತಿಯೊಬ್ಬರ ಪ್ರಯತ್ನ ಮತ್ತು ನಂಬಿಕೆಯಿಂದಾಗಿ ತಾವು ಕೆಂಪು ಕೋಟೆಯ ಆವರಣದಿಂದ ಶೇಕಡ ನೂರಕ್ಕೆ ನೂರರಷ್ಟು ಜನರನ್ನು ತಲುಪುವ ಗುರಿಯನ್ನು ಘೋಷಿಸಲು ಸಾಧ್ಯವಾಯಿತು ಎಂದು ಪ್ರಧಾನಿ ಹೇಳಿದರು. ಇದೊಂದು ಸಾಮಾಜಿಕ ಭದ್ರತೆಯ ಬೃಹತ್ ಕಾರ್ಯಕ್ರಮವಾಗಿದೆ ಎಂದರು. ಅವರು ಈ ಅಭಿಯಾನವನ್ನು ಬಡವರ ಘನತೆ (‘ಗರೀಬ್ ಕೋ ಗರಿಮಾ’) ಎಂದು ಭಾಷಣ ಸಮಾಪ್ತಿಗೊಳಿಸಿದರು. 

ಗುಜರಾತಿ ಭಾಷೆಯಲ್ಲಿ ಮಾತನಾಡಿದ ಪ್ರಧಾನಿ, ಭರೂಚ್ ನ ವಾಣಿಜ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದರು. ಅವರು ಭರೂಚ್ ನೊಂದಿಗೆ ತಾವು ಹೊಂದಿರುವ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡರು. ಕೈಗಾರಿಕಾ ಅಭಿವೃದ್ಧಿ ಮತ್ತು ಸ್ಥಳೀಯ ಯುವಕರ ಆಕಾಂಕ್ಷೆಗಳ ಸಾಕಾರವಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿಯ 'ಮುಖ್ಯ ವಾಹಿನಿಯಲ್ಲಿ' ಭರೂಚ್ ಸ್ಥಾನವನ್ನು ಪ್ರಸ್ತಾಪಿಸಿದರು. ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತು ಸಂಪರ್ಕದಂತಹ ಹೊಸ ಕ್ಷೇತ್ರಗಳಲ್ಲಿನ ಸಾಮರ್ಥ್ಯಗಳ ಬಗ್ಗೆಯೂ ಅವರು ಮಾತನಾಡಿದರು. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India's services sector 'epochal opportunity' for investors: Report

Media Coverage

India's services sector 'epochal opportunity' for investors: Report
NM on the go

Nm on the go

Always be the first to hear from the PM. Get the App Now!
...
List of Outcomes : Prime Minister’s visit to Namibia
July 09, 2025

MOUs / Agreements :

MoU on setting up of Entrepreneurship Development Center in Namibia

MoU on Cooperation in the field of Health and Medicine

Announcements :

Namibia submitted letter of acceptance for joining CDRI (Coalition for Disaster Resilient Infrastructure)

Namibia submitted letter of acceptance for joining of Global Biofuels Alliance

Namibia becomes the first country globally to sign licensing agreement to adopt UPI technology