” ಮಾಲ್ದೀವ್ಸ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯ ಪಠ್ಯ ಹೀಗಿದೆ:
“ಅಧ್ಯಕ್ಷರಾಗಿ ಆಯ್ಕೆಯಾದ ಘನತೆವೆತ್ತ ಇಬ್ರಾಹಿಮ್ ಮೊಹಮ್ಮೆದ್ ಸೊಲಿಹ್ ಅವರ ಐತಿಹಾಸಿಕ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ನಮ್ಮ ಆತ್ಮೀಯ ಮತ್ತು ಸ್ನೇಹಿತ, ನೆರೆಯ ರಾಷ್ಟ್ರವಾದ , ಗಣರಾಜ್ಯ ಮಾಲ್ದೀವ್ಸ್ ನ ರಾಜಧಾನಿ ಮಾಲೆಗೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಇದು ಪ್ರಜಾಪ್ರಭುತ್ವಕ್ಕಾಗಿ, ಆಡಳಿತದ ಕಾನೂನುಗಳಿಗಾಗಿ ಮತ್ತು ಭವಿಷ್ಯದ ಪ್ರಗತಿಗಾಗಿ ಮಾಲ್ದೀವ್ಸ್ ಗಣರಾಜ್ಯದ ಜನತೆಯ ಸಾಮಾಹಿಕ ಆಕಾಂಕ್ಷೆಗಳ ಪ್ರತೀಕವಾಗಿದೆ.
ನಮ್ಮ ಜನರ ನಡುವೆ ಬಲಿಷ್ಠ ಬಾಂಧವ್ಯವಿದೆ ಹಾಗೂ ಐತಿಹಾಸಿಕ ಹಿನ್ನಲೆ ಹೊಂದಿರುವ ಬಲಿಷ್ಠವಾದ ಪಾಲುದಾರಿಕೆಗಳು ಭಾರತ ಮತ್ತು ಮಾಲ್ದೀವ್ಸ್ ನಡುವೆಯಿದೆ. ಶಾಂತಿ ಹಾಗೂ ಸಮೃದ್ಧಿಗಳಿಗಾಗಿ ನಮ್ಮಲ್ಲಿ ಸಮಾನ ಆಶೋತ್ತರಗಳಿವೆ. ನನ್ನ ಸರಕಾರದ ಸಂಕಲ್ಪ ಧ್ಯೇಯವಾದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ (ಎಲ್ಲರೊಂದಿಗೆ , ಎಲ್ಲರ ವಿಕಾಸ) ಚಿಂತನೆ ನೆರೆರಾಷ್ಟ್ರಕ್ಕೂ ವಿಸ್ತರಿಸಿದೆ. ಪ್ರಜಾಪ್ರಭುತ್ವವಾದಿ, ಅಭಿವೃದ್ಧಿಶೀಲ ಮತ್ತು ಶಾಂತಿಯುತ ಮಾಲ್ದೀವ್ಸ್ ಗಣರಾಜ್ಯವನ್ನು ಕಾಣುವುದೇ ಭಾರತದ ಪ್ರಬಲ ಆಕಾಂಕ್ಷೆಯಾಗಿದೆ.”
“ವಿಶೇಷವಾಗಿ ಮೂಲಸೌಕರ್ಯಗಳು , ಆರೋಗ್ಯ ಆರೈಕೆ, ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ, ಮಾಲ್ದೀವ್ಸ್ ನ ಅಭಿವೃದ್ಧಿ ಕಾರ್ಯಯೋಜನೆಗಳು ಸಾಕಾರಗೊಳ್ಳುವ ನಿಟ್ಟಿನಲ್ಲಿ ನನ್ನ ಸರಕಾರವು ಅತ್ಯಂತ ನಿಕಟವಾಗಿ, ಜೊತೆಗೂಡಿ ಕೆಲಸ ಮಾಡಲಿದೆ ಎಂದು ಶ್ರೀ ಸೊಲಿಹ್ ಅವರ ನೂತನ ಮಾಲ್ದೀವ್ಸ್ ಸರಕಾರಕ್ಕೆ ನಾನು ತಿಳಿಸುತ್ತೇನೆ. ನನ್ನ ಭೇಟಿ, ನಮ್ಮ ಎರಡು ರಾಷ್ಟ್ರಗಳ ನಡುವೆ ಆತ್ಮೀಯ ಸಾಮಿಪ್ಯದ ವಿನಿಮಯಗಳ ಮತ್ತು ಸಹಕಾರಗಳ ನವಯುಗಕ್ಕೆ ನಾಂದಿಹಾಡಲಿದೆ ಎಂಬ ವಿಶ್ವಾಸಹೊಂದಿದ್ದೇನೆ.” ಎಂದು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.