ಘನತೆವೆತ್ತ ಅಧ್ಯಕ್ಷ ಎರ್ಡೋಗನ್ ಅವರೇ, ಗೌರವಾನ್ವಿತ ಪ್ರತಿನಿಧಿಗಳೇ,
ಮಾಧ್ಯಮದ ಸದಸ್ಯರೇ,
ಅಧ್ಯಕ್ಷ ಎರ್ಡೋಗನ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ.
ಘನತೆವೆತ್ತರೆ,
2015ರ ನವೆಂಬರ್ ನಲ್ಲಿ ಜಿ-20 ಶೃಂಗಸಭೆಗಾಗಿ ನಾನು ಟರ್ಕಿಗೆ ಭೇಟಿ ನೀಡಿದ್ದನ್ನು ಸದಾ ಸ್ಮರಿಸುತ್ತೇನೆ. ನಿಮ್ಮ ಈ ಭೇಟಿಯು ನಿಮ್ಮ ಸುಂದರ ದೇಶಕ್ಕಾ ಭೇಟಿ ನೀಡಿದ್ದ ವೇಳೆ ನಾನು ಅನುಭವಿಸಿದ ಸುನಾಮ ಮತ್ತು ಆತ್ಮೀಯತೆಯನ್ನು ತಮಗೂ ನೀಡಲು ಒಂದು ಅವಕಾಶ ಕಲ್ಪಿಸಿದೆ.
ಸ್ನೇಹಿತರೆ,,
ಭಾರತ ಮತ್ತು ಟರ್ಕಿಯ ಜನತೆ ಆಳವಾದ ಐತಿಹಾಸಿಕ ನಂಟನ್ನು ಹೊಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಬಾಂಧವ್ಯ ನಮ್ಮ ಸಮಾಜಗಳನ್ನು ನೂರಾರು ವರ್ಷಗಳಿಂದ ಬೆಸೆದಿದೆ.
ರೂಮಿ ಅವರು ಟರ್ಕಿಯಲ್ಲಿ ತಮ್ಮ ನೆಲೆ ಕಂಡುಕೊಂಡರೂ, ಅವರ ಪರಂಪರೆ ಭಾರತದಲ್ಲೂ ಮುಂದುವರಿದಿದೆ.
ಘನತೆವೆತ್ತ ಅಧ್ಯಕ್ಷ ಎರ್ಡೋಗನ್ ಅವರೇ, ಗೌರವಾನ್ವಿತ ಪ್ರತಿನಿಧಿಗಳೇ,
ಮಾಧ್ಯಮದ ಸದಸ್ಯರೇ,
ಅಧ್ಯಕ್ಷ ಎರ್ಡೋಗನ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ.
ಘನತೆವೆತ್ತರೆ,
2015ರ ನವೆಂಬರ್ ನಲ್ಲಿ ಜಿ-20 ಶೃಂಗಸಭೆಗಾಗಿ ನಾನು ಟರ್ಕಿಗೆ ಭೇಟಿ ನೀಡಿದ್ದನ್ನು ಸದಾ ಸ್ಮರಿಸುತ್ತೇನೆ. ನಿಮ್ಮ ಈ ಭೇಟಿಯು ನಿಮ್ಮ ಸುಂದರ ದೇಶಕ್ಕಾ ಭೇಟಿ ನೀಡಿದ್ದ ವೇಳೆ ನಾನು ಅನುಭವಿಸಿದ ಸುನಾಮ ಮತ್ತು ಆತ್ಮೀಯತೆಯನ್ನು ತಮಗೂ ನೀಡಲು ಒಂದು ಅವಕಾಶ ಕಲ್ಪಿಸಿದೆ.
ಸ್ನೇಹಿತರೆ,,
ಭಾರತ ಮತ್ತು ಟರ್ಕಿಯ ಜನತೆ ಆಳವಾದ ಐತಿಹಾಸಿಕ ನಂಟನ್ನು ಹೊಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಬಾಂಧವ್ಯ ನಮ್ಮ ಸಮಾಜಗಳನ್ನು ನೂರಾರು ವರ್ಷಗಳಿಂದ ಬೆಸೆದಿದೆ.
ರೂಮಿ ಅವರು ಟರ್ಕಿಯಲ್ಲಿ ತಮ್ಮ ನೆಲೆ ಕಂಡುಕೊಂಡರೂ, ಅವರ ಪರಂಪರೆ ಭಾರತದಲ್ಲೂ ಮುಂದುವರಿದಿದೆ.
ಸ್ನೇಹಿತರೆ, ನಮ್ಮ ಸಮಗ್ರ ಮಾತುಕತೆಯಲ್ಲಿಂದು, ಅಧ್ಯಕ್ಷ ಎರ್ಡೋಗನ್ ಮತ್ತು ನಾನು ನಮ್ಮ ಬಾಂಧವ್ಯದ ಸಂಪೂರ್ಣ ಶ್ರೇಣಿಯ ಬಗ್ಗೆ ಅದರಲ್ಲೂ ನಮ್ಮ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದೇವೆ. ನಮ್ಮ ವಲಯದ ಅಭಿವೃದ್ಧಿಯ ದೃಷ್ಟಿಕೋನಗಳ ಬಗ್ಗೆಯೂ ನಾವು ಮಾಹಿತಿ ವಿನಿಮಯ ಮಾಡಿಕೊಂಡಿದ್ದೇವೆ.
ಸ್ನೇಹಿತರೆ,
ಭಾರತ ಮತ್ತು ಟರ್ಕಿ ಎರಡೂ ಬೃಹತ್ ರಾಷ್ಟ್ರಗಳಾಗಿವೆ. ಅಧ್ಯಕ್ಷರು ಹಾಗೂ ನಾನು, ನಮ್ಮ ರಾಷ್ಟ್ರಗಳ ನಡುವೆ ವಾಣಿಜ್ಯ ನಂಟನ್ನು ಆಳಗೊಳಿಸುವ ಮತ್ತು ವಿಸ್ತರಿಸಬಹುದಾದ ಹೇರಳ ಅವಕಾಶಗಳ ಕುರಿತ ನಮ್ಮ ಆರ್ಥಿಕತೆಯ ಬಲವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಎರಡೂ ಸರ್ಕಾರಗಳ ಮಟ್ಟದಲ್ಲಿ, ನಾವು ನಮ್ಮ ಭೂರಮೆಯಲ್ಲಿ ವಾಣಿಜ್ಯದ ಅವಕಾಶಗಳನ್ನು ಕಾರ್ಯತಂತ್ರಾತ್ಮಕ ಮತ್ತು ದೀರ್ಘ ಕಾಲೀನ ಮಾದರಿಯಲ್ಲಿ ನೋಡಬೇಕಾದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ದ್ವಿಪಕ್ಷೀಯ ವಾಣಿಜ್ಯದ ವಹಿವಾಟು ಸುಮಾರು 6 ಶತಕೋಟಿ ಡಾಲರ್ ಆಗಿದ್ದು, ಇದು ನಮ್ಮ ಆರ್ಥಿಕತೆಯ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುವುದಿಲ್ಲ. ಎರಡೂ ಕಡೆಯ ವಾಣಿಜ್ಯ ಮತ್ತು ಕೈಗಾರಿಕೆಗಳು ಇನ್ನೂ ಹೆಚ್ಚಿನದನ್ನು ಮಾಡಬಹುದಾಗಿದೆ.
.
ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ಬಂದಿರುವ ಉನ್ನತ ಮಟ್ಟದ ವಾಣಿಜ್ಯ ನಿಯೋಗದೊಂದಿಗೆ ಮತ್ತು ಭಾರತದ ಕೈಗಾರಿಕಾ ನಾಯಕರೊಂದಿಗೆ ನಾವಿಬ್ಬರೂ ಇಂದು ಬೆಳಗ್ಗೆ ಮಾತನಾಡಿದ್ದೇವೆ.
ತ್ವರಿತವಾಗಿ ಬೆಳೆಯುತ್ತಿರುವ ಭಾರತದಲ್ಲಿ ಸುಪ್ತವಾಗಿರುವ ವೈವಿಧ್ಯಮಯ ಮತ್ತು ವಿಶಿಷ್ಠ ಅವಕಾಶಗಳನ್ನು ವೇಗವಾಗಿ ಬಳಸಿಕೊಳ್ಳುವ ಕಾರ್ಯ ಟರ್ಕಿ ವಾಣಿಜ್ಯ ಕ್ಷೇತ್ರ ಮಾಡುತ್ತದೆ ಎಂಬ ವಿಶ್ವಾಸವಿದೆ. ಅಲ್ಲದೆ ಭಾರತದ ಮೂಲಸೌಕರ್ಯ ಅಗತ್ಯಗಳು, ಮತ್ತು ಅವುಗಳಲ್ಲಿ ನಾನು ಕೆಲವನ್ನು ಇಂದು ಬೆಳಗ್ಗೆ ವಾಣಿಜ್ಯ ಶೃಂಗದಲ್ಲಿ ಪಟ್ಟಿ ಮಾಡಿದ್ದೇನೆ ಮತ್ತು ಸ್ಮಾರ್ಟ್ ನಗರ ಅಭಿವೃದ್ಧಿ ಪಡಿಸುವ ನಮ್ಮ ನಿಲುವೂ ಟರ್ಕಿಯ ಸಾಮರ್ಥ್ಯದೊಂದಿಗೆ ಹೊಂದಿಕೆ ಆಗುತ್ತದೆ.
ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳೊಂದಿಗೆ ನಾವು ಟರ್ಕಿ ಕಂಪನಿಗಳ ಬಲವಾದ ಪಾಲುದಾರಿಕೆಯನ್ನು ಅವರದೇ ಸ್ವಂತ ಅಥವಾ ಭಾರತೀಯ ಕಂಪನಿಗಳ ಸಹಯೋಗಕ್ಕೆ ಉತ್ತೇಜನ ನೀಡುತ್ತೇವೆ.
ಇಂದು ಅಂಕಿತ ಹಾಕಲಾದ ಒಪ್ಪಂದಗಳು ಮತ್ತು ನಮ್ಮ ಮಾತುಕತೆಯ ಹೂರಣವು ನಮ್ಮ ಎರಡು ರಾಷ್ಟ್ರಗಳ ನಡುವಿನ ಸಾಂಸ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಸ್ನೇಹಿತರೇ,
ನಮ್ಮ ಸಮಾಜಗಳು ಪ್ರತಿ ನಿತ್ಯ ಹೊಸ ಸವಾಲುಗಳು ಮತ್ತು ಭೀತಿಯನ್ನು ಎದುರಿಸುತ್ತಿರುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಜಾಗತಿಕವಾಗಿ ಅಸ್ತಿತ್ವದಲ್ಲಿರುವ ಮತ್ತು ಹೊರಹೊಮ್ಮುತ್ತಿರುವ ಭದ್ರತಾ ಸವಾಲುಗಳು ಕೆಲವು ಸನ್ನಿವೇಶ ಮತ್ತು ಸಂದರ್ಭದಲ್ಲಿ ನಮ್ಮ ಸಮಾನ ಕಾಳಜಿಯಾಗಿದೆ.
ಅದರಲ್ಲೂ ಭಯೋತ್ಪಾದನೆಯಿಂದ ಹೊರಹೊಮ್ಮುತ್ತಿರುವ ಭೀತಿ ನಮ್ಮ ಹಂಚಿಕೆಯ ಚಿಂತೆಯಾಗಿದೆ. ಈ ವಿಷಯದಲ್ಲಿ ನಾನು ಅಧ್ಯಕ್ಷರೊಂದಿಗೆ ವ್ಯಾಪಕವಾಗಿ ಚರ್ಚಿಸಿದ್ದೇನೆ. ಯಾವುದೇ ಕಾರಣ ಅಥವಾ ಯಾವುದೇ ಗುರಿ ಅಥವಾ ಯಾವುದೇ ತರ್ಕ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಒಪ್ಪಿದ್ದೇವೆ.
ಹೀಗಾಗಿ ವಿಶ್ವದ ರಾಷ್ಟ್ರಗಳು ಭಯೋತ್ಪಾದನೆಯ ಜಾಲಗಳನ್ನು ನಾಶಪಡಿಸಲು ಮತ್ತು ಅವುಗಳಿಗೆ ಹಣ ಸರಬರಾಜು ಆಗುತ್ತಿರುವುದನ್ನು ತಡೆಯಲು ಹಾಗೂ ಗಡಿಯಾಚೆಗಿನ ಭಯೋತ್ಪಾದಕರ ಸಂಚಾರ ಹತ್ತಿಕ್ಕಲು ಒಂದಾಗಿ ಶ್ರಮಿಸಬೇಕು. ಅಲ್ಲದೆ ಹಿಂಸಾಚಾರದ ಸಿದ್ಧಾಂತಗಳನ್ನು ಪಸರಿಸಲು ಭಯೋತ್ಪಾದಕರಿಗೆ ಆಶ್ರಯ ನೀಡಿರುವ, ಹಣ ಒದಗಿಸುತ್ತಿರುವ ಮತ್ತು ಬೆಂಬಲ ನೀಡುತ್ತಿರುವವರು ಕೂಡ ಅದರ ವಿರುದ್ಧ ನಿಲ್ಲಬೇಕಾಗಿದೆ.
ಅಧ್ಯಕ್ಷರು ಮತ್ತು ನಾನು, ಈ ಪಿಡುಗನ್ನು ಸಮರ್ಥವಾಗಿ ಎದುರಿಸಲು ನಮ್ಮ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಡಿಸಲು ಒಪ್ಪಿಗೆ ಸೂಚಿಸಿದ್ದೇವೆ.
ಸ್ನೇಹಿತರೆ,ನಾವು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹೆಚ್ಚಿನ ಪ್ರತಿನಿಧಿಗಳೊಂದಿಗೆ ಹೆಚ್ಚು ಹೊಣೆಗಾರಿಕೆಯಿಂದ ಹೆಚ್ಚು ಸಮರ್ಥವಾಗಿ ಕಾರ್ಯ ನಿರ್ವಹಿಸಲು, ಅದರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಯ ಬಗ್ಗೆಯೂ ಚರ್ಚಿಸಿದ್ದೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗತಿಸಿಹೋದ ಶತಮಾನದಂತೆ ಆಗದೆ 21ನೇ ಶತಮಾನದದಲ್ಲಿ ವಿಶ್ವದ ಪ್ರತಿಬಿಂಬವಾಗಬೇಕಾದ ಅಗತ್ಯವನ್ನು ನಾವು ಗುರುತಿಸಿದ್ದೇವೆ.
ಘನತೆವೆತ್ತರೇ,
ನಾನು ಮತ್ತೊಮ್ಮೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಅತ್ಯಂತ ಫಲಪ್ರದವಾದ ಚರ್ಚೆಗಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಇಂದಿನ ಚರ್ಚೆಯು ಭಾರತ ಮತ್ತು ಟರ್ಕಿ ಪಾಲುದಾರಿಕೆಯನ್ನು ಉನ್ನತ ಎತ್ತರಕ್ಕೆ ಖಂಡಿತ ತೆಗೆದುಕೊಂಡು ಹೋಗಲಿದೆ. ನಾನು ನಿಮಗೆ ಭಾರತದಲ್ಲಿ ಫಲಪ್ರದ ವಾಸ್ತವ್ಯವನ್ನು ಆಶಿಸುತ್ತೇನೆ.
ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು.
PM @narendramodi begins press statement, welcomes President @RT_Erdogan to India, recalls his visit to Turkey for the G-20 Summit in Nov '15 pic.twitter.com/FHI6uuOf4i
— Gopal Baglay (@MEAIndia) May 1, 2017
PM: People of India & Turkey have nurtured deep & historical links; ties of culture & language connect our societies since millennia
— Gopal Baglay (@MEAIndia) May 1, 2017
PM: President and I are clear that strengths of our economies present an enormous opportunity to expand and deepen our commercial linkages
— Gopal Baglay (@MEAIndia) May 1, 2017
PM @narendramodi : We need to approach the entire landscape of business opportunities in a strategic and long-term manner.
— Gopal Baglay (@MEAIndia) May 1, 2017
PM: Encourage strngr partner'p of Turkish cos with our flagship progms & tap into diverse & unique opp'ties inherent in rapidly grow'g India
— Gopal Baglay (@MEAIndia) May 1, 2017
PM: Nations of the world need to wrk as one to disrupt terrorist ntwrks & their financing, & put a stop to cross border move't of terrorists
— Gopal Baglay (@MEAIndia) May 1, 2017
PM @narendramodi : They also need to stand and act against those who create, support, shelter and spread terrorism
— Gopal Baglay (@MEAIndia) May 1, 2017
PM: President & I decided to work together to strengthen cooperation, both bilaterally & multilaterally, to effectively counter this menace.
— Gopal Baglay (@MEAIndia) May 1, 2017
PM @narendramodi : Both of us recognize the need for the UNSC to reflect the world of the 21st century and not of the century gone by.
— Gopal Baglay (@MEAIndia) May 1, 2017