ಎಸ್.ಸಿ.ಓ. ಮಂಡಳಿಯ ರಾಜ್ಯ ಮುಖ್ಯಸ್ಥರ 20ನೇ ಶೃಂಗಸಭೆ 2020ರ ನವೆಂಬರ್ 10ರಂದು (ವಿಡಿಯೋ ಕಾನ್ಫರೆನ್ಸಿಂಗ್ ಮಾದರಿಯಲ್ಲಿ) ಜರುಗಿತು. ಈ ಸಭೆಯ ಅಧ್ಯಕ್ಷತೆಯನ್ನು ರಷ್ಯಾ ಒಕ್ಕೂಟದ ಅಧ್ಯಕ್ಷ ಶ್ರೀ ವ್ಲಾದಿಮಿರ್ ಪುಟಿನ್ ವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಎಸ್.ಸಿ.ಓ.ದ ಇತರ ಸದಸ್ಯ ರಾಷ್ಟ್ರಗಳನ್ನು ಅವುಗಳ ಅಧ್ಯಕ್ಷರು ಪ್ರತಿನಿಧಿಸಿದ್ದರೆ, ಭಾರತ ಮತ್ತು ಪಾಕಿಸ್ತಾನವನ್ನು ಪ್ರಧಾನಮಂತ್ರಿಗಳ ಮಟ್ಟದಲ್ಲಿ ಪ್ರತಿನಿಧಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಇತರರು : ಎಸ್.ಸಿ.ಓ. ಸಚಿವಾಲಯದ ಮಹಾ ಪ್ರಧಾನ ಕಾರ್ಯದರ್ಶಿ, ಎಸ್.ಸಿ.ಓ. ಪ್ರಾದೇಶಿಕ ಭಯೋತ್ಪಾದನೆ ನಿಗ್ರಹ ವಿನ್ಯಾಸದ ಕಾರ್ಯನಿರ್ವಾಹಕ ನಿರ್ದೇಶಕರು, ಎಸ್.ಸಿ.ಓ.ದ ನಾಲ್ಕು ವೀಕ್ಷಕ ರಾಷ್ಟ್ರದ ಅಧ್ಯಕ್ಷರುಗಳು (ಆಫ್ಘಾನಿಸ್ತಾನ, ಬೆಲರಸ್, ಇರಾನ್, ಮಂಗೋಲಿಯಾ).
ಇದು ವರ್ಚುವಲ್ ಸ್ವರೂಪದಲ್ಲಿ ನಡೆದ ಪ್ರಥಮ ಎಸ್.ಸಿ.ಓ. ಶೃಂಗಸಭೆಯಾಗಿದ್ದು, 2017ರಲ್ಲಿ ಭಾರತ ಪೂರ್ಣಕಾಲಿಕ ಸದಸ್ಯನಾದ ತರುವಾಯ ಭಾಗವಹಿಸಿದ ಮೂರನೇ ಸಭೆಯಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಎಸ್.ಸಿ.ಓ. ನಾಯಕರುಗಳನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ, ಕೋವಿಡ್ 19 ಸಾಂಕ್ರಾಮಿಕದಿಂದ ಎದುರಾಗಿರುವ ಈ ಸವಾಲು ಮತ್ತು ಸಂಕಷ್ಟದ ನಡುವೆಯೂ ಸಭೆಯನ್ನು ಆಯೋಜಿಸಿದ ಅಧ್ಯಕ್ಷ ಪುಟಿನ್ ಅವರನ್ನು ಅಭಿನಂದಿಸಿದರು.
ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಸಾಂಕ್ರಾಮಿಕ ರೋಗದ ನಂತರದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಬಳಲುತ್ತಿರುವ ಜಗತ್ತಿನ ನಿರೀಕ್ಷೆಗಳನ್ನು ಪೂರೈಸಲು ಸುಧಾರಿತ ಬಹುಪಕ್ಷೀಯತೆ ಕಡ್ಡಾಯಗೊಳಿಸುವುದನ್ನು ಪ್ರತಿಪಾದಿಸಿದರು. 2021 ಜನವರಿ 1 ರಿಂದ ಯುಎನ್.ಎಸ್.ಸಿಯ ಕಾಯಂ ಸದಸ್ಯನಾಗಲಿರುವ ಭಾರತ, ಜಾಗತಿಕ ಆಡಳಿತದಲ್ಲಿ ಅಪೇಕ್ಷಣೀಯ ಬದಲಾವಣೆಗಳನ್ನು ತರಲು ‘ಸುಧಾರಿತ ಬಹುಪಕ್ಷೀಯತೆ’ ವಿಷಯದ ಮೇಲೆ ಗಮನಹರಿಸಲಿದೆ ಎಂದರು.
ಪ್ರಧಾನಮಂತ್ರಿಯವರು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಪ್ರಗತಿ ಹಾಗೂ ಭಯೋತ್ಪಾದನೆ, , ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ, ಮಾದಕ ದ್ರವ್ಯ ಮತ್ತು ಅಕ್ರಮ ಹಣ ರವಾನೆ ವಿರುದ್ಧ ಧ್ವನಿ ಎತ್ತುವ ಭಾರತದ ದೃಢ ವಿಶ್ವಾಸವನ್ನು ಪುನರುಚ್ಚರಿಸಿದರು. ಭಾರತದ ಶೌರ್ಯಶಾಲಿ ಯೋಧರು 50 ವಿಶ್ವಸಂಸ್ಥೆಯ ಶಾಂತಿ ಪಾಲನಾ ಅಭಿಯಾನಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಭಾರತದ ಔಷಧ ಕೈಗಾರಿಕೆಗಳು 150ಕ್ಕೂ ಹೆಚ್ಚು ದೇಶಗಳಿಗೆ ಸಾಂಕ್ರಾಮಿಕದ ವೇಳೆ ಅಗತ್ಯ ಔಷಧಗಳನ್ನು ಪೂರೈಸಿದೆ ಎಂದು ತಿಳಿಸಿದರು.
ಎಸ್.ಸಿ.ಎ. ವಲಯದೊಂದಿಗಿನ ಭಾರತದ ಬಲಿಷ್ಠ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್, ಚಬಹಾರ್ ಬಂದರು ಮತ್ತು ಅಶ್ ಗಬತ್ ಒಪ್ಪಂದದಂತಹ ಉಪಕ್ರಮಗಳೊಂದಿಗೆ ಈ ಪ್ರದೇಶದಲ್ಲಿ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಿದರು. 2021ರಲ್ಲಿ ಎಸ್.ಸಿಒದ 20ನೇ ವಾರ್ಷಿಕೋತ್ಸವವನ್ನು "ಎಸ್.ಸಿಒ ಸಾಂಸ್ಕೃತಿಕ ವರ್ಷ " ಎಂದು ಆಚರಿಸುವುದಕ್ಕೆ ಸಂಪೂರ್ಣ ಬೆಂಬಲವನ್ನು ಅವರು ವ್ಯಕ್ತಪಡಿಸಿದರು ಮತ್ತು ಭಾರತೀಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ, ಹಂಚಿಕೆಯ ಭೌದ್ಧ ಪರಂಪರೆಯ ಪ್ರಥಮ ಎಸ್.ಸಿ. ಒ ವಸ್ತುಪ್ರದರ್ಶನ, ಎಸ್.ಸಿ.ಓ. ಆಹಾರ ಉತ್ಸವವನ್ನು ಭಾರತದಲ್ಲಿ ಮುಂದಿನ ವರ್ಷ ಆಯೋಜಿಸುವ ಉಪಕ್ರಮದ ಬಗ್ಗೆ ಮತ್ತು ಹತ್ತು ಪ್ರಾದೇಶಿಕ ಭಾಷಾ ಸಾಹಿತ್ಯ ಕೃತಿಗಳನ್ನು ರಷ್ಯನ್ ಮತ್ತು ಚೈನೀಸ್ ಭಾಷೆಗೆ ಅನುವಾದಿಸು ಕುರಿತು ಮಾತನಾಡಿದರು.
ಮುಂದಿನ ಎಸ್.ಸಿ.ಓ. ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಮಂಡಳಿಯ ನಿಯಮಿತ ಸಭೆಯನ್ನು 2020ರ ನವೆಂಬರ್ 30ರಂದು ವರ್ಚುವಲ್ ಸ್ವರೂಪದಲ್ಲಿ ಆಯೋಜಿಸುವ ಭಾರತ ಸಿದ್ಧ ಎಂದು ಪ್ರಧಾನಮಂತ್ರಿಯವರು ಹೇಳಿದರು. ಎಸ್.ಸಿ.ಓದೊಂದಿಗೆ ನಾವಿನ್ಯತೆ ಮತ್ತು ನವೋದ್ಯಮ ಕುರಿತಂತೆ ವಿಶೇಷ ಕಾರ್ಯ ಗುಂಪು ರಚಿಸಲು ಮತ್ತು ಸಾಂಪ್ರದಾಯಿಕ ವೈದ್ಯಕೀಯ ಕುರಿತ ಉಪ ಗುಂಪು ರಚಿಸಲು ಭಾರತ ಉದ್ದೇಶಿಸಿದೆ ಎಂದರು. ಕೋವಿಡ್ ಸಾಂಕ್ರಾಮಿಕೋತ್ತರ ಜಗತ್ತಿನಲ್ಲಿ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಕುರಿತ ಭಾರತದ ದೃಷ್ಟಿಕೋನವನ್ನು ವಿವರಿಸಿದ ಅವರು, ಅದು ಜಾಗತಿಕ ಆರ್ಥಿಕತೆ ಮತ್ತು ಎಸ್.ಸಿಒ ಪ್ರದೇಶದ ಆರ್ಥಿಕ ಪ್ರಗತಿಗೆ ಒಂದು ಗುಣಕ ಶಕ್ತಿಯಾಗಿ ಸಾಬೀತುಪಡಿಸಲಿದೆ ಎಂದರು.
ಪ್ರಧಾನಮಂತ್ರಿಯವರು ಮುಂದಿನ ವರ್ಷದ ಎಸ್.ಸಿ.ಓ. ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿರುವ ತಜಕಿಸ್ತಾನ ಗಣರಾಜ್ಯದ ಅಧ್ಯಕ್ಷ ಎಮೋಮಲಿ ರೆಹಮಾನ್ ಅವರಿಗೆ ಅಭಿನಂದನೆ ಸಲ್ಲಿಸಿ, ಭಾರತದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
United Nations ने अपने 75 years पूरे किए हैं।
— PMO India (@PMOIndia) November 10, 2020
लेकिन अनेक सफलताओं के बाद भी संयुक्त राष्ट्र का मूल लक्ष्य अभी अधूरा है।
महामारी की आर्थिक और सामाजिक पीड़ा से जूझ रहे विश्व की अपेक्षा है कि UN की व्यवस्था में आमूलचूल परिवर्तन आए: PM
एक ‘reformed multilateralism" जो आज की वैश्विक वास्तविकताओं को दर्शाए, जो सभी stakeholders की अपेक्षाओं, समकालीन चुनौतियों, और मानव कल्याण जैसे विषयों पर चर्चा करे।
— PMO India (@PMOIndia) November 10, 2020
इस प्रयास में हमें SCO सदस्य राष्ट्रों का पूर्ण समर्थन मिलने की अपेक्षा है: PM
अभूतपूर्व महामारी के इस अत्यंत कठिन समय में भारत के फार्मा उद्योग ने 150 से अधिक देशों को आवश्यक दवाएं भेजी हैं।
— PMO India (@PMOIndia) November 10, 2020
दुनिया के सबसे बड़े वैक्सीन उत्पादक देश के रूप में भारत अपनी वैक्सीन उत्पादन और वितरण क्षमता का उपयोग इस संकट से लड़ने में पूरी मानवता की मदद करने के लिए करेगा: PM
परन्तु, यह दुर्भाग्यपूर्ण है कि SCO agenda में बार-बार अनावश्यक रूप से द्विपक्षीय मुद्दों को लाने के प्रयास हो रहे हैं, जो SCO Charter और Shanghai Spirit का उल्लंघन करते हैं।
— PMO India (@PMOIndia) November 10, 2020
इस तरह के प्रयास SCO को परिभाषित करने वाली सर्वसम्मति और सहयोग की भावना के विपरीत हैं: PM
भारत का शांति, सुरक्षा और समृद्धि पर दृढ़ विश्वास है।
— PMO India (@PMOIndia) November 10, 2020
और हमने हमेशा आतंकवाद, अवैध हथियारों की तस्करी, ड्रग्स और मनी लॉन्डरिंग के विरोध में आवाज उठाई है।
भारत SCO Charter में निर्धारित सिद्धांतों के अनुसार SCO के तहत काम करने की अपनी प्रतिबद्धता में दृढ़ रहा है: PM