ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಸ್ಕಾನ್ ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಏರ್ಪಟ್ಟ ಗೀತ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಅವರು ಇಸ್ಕಾನ್ ಭಕ್ತರು ರೂಪಿಸಿದ ವಿಶಿಷ್ಟ ಭಗವದ್ಗೀತೆಯನ್ನು ಅನಾವರಣ ಮಾಡಿದರು. ಇದು 2.8 ಮೀಟರಿಗೂ ಅಧಿಕ ಅಳತೆಯದಾಗಿದ್ದು, 800 ಕಿಲೋ ಗ್ರಾಂ ಭಾರವಿದೆ.
ಈ ಸಂದರ್ಭ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಈ ಭವ್ಯವಾದ ಭಗವದ್ಗೀತೆಯನ್ನು ಅನಾವರಣ ಮಾಡುವುದು ನಿಜವಾಗಿಯೂ ವಿಶೇಷ ಸಂದರ್ಭ ಎಂದರು. ಈ ವಿಶಿಷ್ಟ ಪುಸ್ತಕವು ವಿಶ್ವಕ್ಕೆ ಭಾರತದ ಜ್ಞಾನದ ಸಂಕೇತವಾಗಲಿದೆ ಎಂದರು.
ಲೋಕಮಾನ್ಯ ತಿಲಕರು “ಗೀತ ರಹಸ್ಯ” ವನ್ನು ಜೈಲಿನಲ್ಲಿದ್ದು ಬರೆದುದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಅದರಲ್ಲಿ ಕೃಷ್ಣ ದೇವರ ಸಂದೇಶವಾದ ನಿಷ್ಕಾಮ ಕರ್ಮವನ್ನು ಸರಳ ರೀತಿಯಲ್ಲಿ ವಿವರಿಸಲಾಗಿರುವುದನ್ನೂ ಉಲ್ಲೇಖಿಸಿದರು. ಮಹಾತ್ಮಾ ಗಾಂಧಿ ಅವರೂ ಭಗವದ್ಗೀತಾವನ್ನು ಗಾಂಧಿ ಅವರ ರೀತಿಯಲ್ಲಿ ಅರ್ಥೈಸಿಕೊಂಡು ಬರೆದಿರುವುದನ್ನು ಅವರು ಉಲ್ಲೇಖಿಸಿದರು. ಈ ಪುಸ್ತಕದ ಪ್ರತಿಯನ್ನು ತಾವು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೀಡಿರುವುದಾಗಿಯೂ ತಿಳಿಸಿದರು.
ಶ್ರೀ ಭಕ್ತಿವೇದಾಂತ ಪ್ರಭುಪಾದಜೀ ಅವರು ಈ ಪುರಾಣದ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲ್ಯಾಘಿಸಿದರು.
ಜೀವನದಲ್ಲಿ ನಾವು ದ್ವಂದ್ವವನ್ನು ಎದುರಿಸುವಾಗ ಭಗವದ್ಗೀತೆಯು ಸದಾ ನಮಗೆ ಮಾರ್ಗದರ್ಶಕವಾಗಿರಬಲ್ಲದು ಎಂದು ಹೇಳಿದ ಪ್ರಧಾನಮಂತ್ರಿ ಅವರು ಗೀತೆಯ ಬಹಳ ಪ್ರಸಿದ್ದ ಶ್ಲೋಕವಾದ ಮನುಕುಲದ ಶತ್ರುಗಳ ಜೊತೆ ಹೋರಾಡುವಾಗ ದೈವಿಕ ಶಕ್ತಿ ಸದಾ ಕಾಲ ನಮ್ಮೊಂದಿಗಿರುತ್ತದೆ ಎಂಬುದನ್ನೂ ಸ್ಮರಿಸಿಕೊಂಡರು. ಗೀತೆಯು ಜನರ ಸೇವೆಗೆ ಮತ್ತು ರಾಷ್ಟ್ರದ ಸೇವೆಗೆ ಪ್ರೇರೇಪಿಸುತ್ತದೆ ಎಂದೂ ಹೇಳಿದರು.
ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಗಳು ಮನುಕುಲ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ . ಈ ಹಿನ್ನೆಲೆಯಲ್ಲಿ ಅವರು ಯೋಗ ಮತ್ತು ಆಯುರ್ವೇದವನ್ನು ಉದಾಹರಿಸಿದರು.
श्रीमद् भागवद् गीता भारत का दुनिया को सबसे प्रेरक उपहार है।
— PMO India (@PMOIndia) February 26, 2019
गीता पूरे विश्व की धरोहर है।
गीता हजारों साल से प्रासंगिक है।
विश्व के नेताओं से लेकर सामान्य मानवी तक सभी को गीता ने लोकहित में कर्म करने का मार्ग दिखाया है: PM
गीता धर्मग्रंथ तो है पर ये जीवन ग्रंथ भी है।
— PMO India (@PMOIndia) February 26, 2019
हम किसी भी देश के हों, किसी भी पंथ के मानने वाले हों पर हर दिन समस्याएं घेरती हैं।
हम जब भी वीर अर्जुन की तरह अनिर्णय के दोराहे पर खड़े होते हैं तो गीता हमें सेवा और समर्पण के रास्ते इन समस्याओं के हल दिखाती है: PM
अगर आप विद्यार्थी हैं और अनिर्णय की स्थिति में हैं, आप किसी देश के राष्ट्राध्यक्ष हैं या फिर मोक्ष की कामना रखने वाले योगी आपको अपने हर प्रश्न का उत्तर श्रीमद्भागवत गीता में मिल जाएगा।
— PMO India (@PMOIndia) February 26, 2019
गीता मानव जीवन की सबसे बड़ी मैन्युअल बुक है। जीवन की हर समस्या का हल गीता में मिल जाता है: PM
मानवता के दुश्मनों से धरती को बचाने के लिए प्रभु की शक्ति हमारे साथ हमेशा रहती है।
— PMO India (@PMOIndia) February 26, 2019
यही संदेश हम पूरी प्रामाणिकता के साथ दुष्ट आत्माओं, असुरों को देने का प्रयास कर रहे हैं: PM