QuotePM attends closing ceremony of the Birth Centenary Celebration of the 19th Kushok Bakula Rinpoche in Leh
QuotePM unveils plaque to mark the commencement of work on the Zojila Tunnel

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯದ ದಿನವಿಡೀ ಭೇಟಿಯ ಮೊದಲ ಚರಣದಲ್ಲಿಂದು ಲೆಹ್ ಗೆ ಆಗಮಿಸಿದರು.

ಲೆಹ್ ನಲ್ಲಿ ಅವರು 19ನೇ ಕುಶುಕ್ ಬಕುಲ ರಿಂಪೋಚೆ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು. ಇದೇ ಕಾರ್ಯಕ್ರಮದಲ್ಲಿ ಅವರು, ಜೋಜಿಲಾ ಸುರಂಗದ ಕಾಮಗಾರಿ ಆರಂಭದ ಅಂಗವಾಗಿ ಫಲಕ ಅನಾವರಣ ಮಾಡಿದರು.

|

14 ಕಿ.ಮೀ. ಉದ್ದದ ಜೋಜಿಲಾ ಸುರಂಗವು ಭಾರತದ ಅತಿ ಉದ್ದನೆಯ ರಸ್ತೆ ಸುರಂಗವಾಗಿದೆ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸುರಂಗವಾಗಲಿದೆ. ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ, ಶ್ರೀನಗರ – ಲೆಹ್ ವಿಭಾಗದ ರಾ.ಹೆ -1ಎ,ಯಲ್ಲಿ ಬಾಲ್ತಾಲ್ ಮತ್ತು ಮಿನಾಮಾರ್ಗ್ ನಡುವಿನ ಈ ಸುರಂಗವನ್ನು 6800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿ, ಕಾರ್ಯಾಚರಣೆಗೊಳಿಸಿ ಮತ್ತು ನಿರ್ವಹಣೆ ಮಾಡಲು ಈ ವರ್ಷದ ಆರಂಭದಲ್ಲಿ ಅನುಮೋದನೆ ನೀಡಿತ್ತು. ಈ ಸುರಂಗದ ನಿರ್ಮಾಣವಾದ ತರುವಾಯ ಶ್ರೀನಗರ, ಕಾರ್ಗಿಲ್ ಮತ್ತು ಲೆಹ್ ನಡುವೆ ಸರ್ವಋತು ಸಂಪರ್ಕ ಒದಗಿಸಲಿದೆ. ಇದು ಜೋಜಿಲಾವನ್ನು ದಾಟಲು ಪ್ರಸಕ್ತ ತಗುಲುವ ಮೂರೂವರೆ ಗಂಟೆಗಳ ಪ್ರಯಾಣದ ಅವಧಿಯನ್ನು ಕೇವಲ 15 ನಿಮಿಷಕ್ಕೆ ಇಳಿಸಲಿದೆ. ಇದು ವಲಯಗಳ ಸರ್ವಾಂಗೀಣ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ, ಸಾಂಸ್ಕೃತಿಕ ಏಕತೆಗೆ ಇಂಬು ನೀಡುತ್ತದೆ. ಇದು ಅಪಾರ ವ್ಯೂಹಾತ್ಮಕ ಮಹತ್ವವನ್ನೂ ಹೊಂದಿದೆ.

|

ಈ ಸಂದರ್ಭದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, 19ನೇ ಕುಶುಕ್ ಬಕುಲ ರಿಂಪೋಚೆ ಅವರ ಕೊಡುಗೆಯನ್ನು ಸ್ಮರಿಸಿದರು. ಇತರರಿಗೆ ಸೇವೆ ಮಾಡಲು ಅವರ ಬದುಕು ಮುಡಿಪಾಗಿತ್ತು ಎಂದರು.

19ನೇ ಕುಶುಕ್ ಬಕುಲ ರಿಂಪೋಚೆ ಅವರು, ತಮ್ಮನ್ನು ಅತ್ಯುತ್ತಮ ರಾಜತಾಂತ್ರಿಕರಾಗಿ ಗುರುತಿಸಿಕೊಂಡಿದ್ದರು ಎಂದೂ ಅವರು ಹೇಳಿದರು. ಮಂಗೋಲಿಯಾಕ್ಕೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಆ ದೇಶದಲ್ಲಿ ಹೊಂದಿರುವ ಖ್ಯಾತಿಯನ್ನು ಖುದ್ದು ಕಂಡಿದ್ದಾಗಿ ಹೇಳಿದರು.

|
 

ಜಮ್ಮು ಮತ್ತು ಕಾಶ್ಮೀರದ ಮೂರು ವಲಯಗಳಿಗೆ ಇಂದು ಭೇಟಿ ನೀಡುತ್ತಿರುವ ಬಗ್ಗೆ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದರು.

|
|

ಜಮ್ಮು ಮತ್ತು ಕಾಶ್ಮೀರ ರಾಜ್ಯ 25 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಪಡೆಯಲಿದೆ ಎಂದೂ ಅವರು ತಿಳಿಸಿದರು. ಈ ಯೋಜನೆಗಳು ರಾಜ್ಯದ ಜನತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿವೆ ಎಂದೂ ತಿಳಿಸಿದರು.

  • Harish Awasthi March 12, 2024

    अबकी बार तीसरी बार मोदी सरकार
  • Babla sengupta December 30, 2023

    Babla sengupta
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'They will not be spared': PM Modi vows action against those behind Pahalgam terror attack

Media Coverage

'They will not be spared': PM Modi vows action against those behind Pahalgam terror attack
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಎಪ್ರಿಲ್ 2025
April 23, 2025

Empowering Bharat: PM Modi's Policies Drive Inclusion and Prosperity