ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ 2019ರ ಫೆಬ್ರವರಿ 13ರಂದು ಸಿಆರ್.ಇ.ಡಿ.ಎ.ಐ. ಯೂತ್ ಕಾನ್ -19 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಆರ್.ಇ.ಡಿ.ಎ.ಐ.) ಆಯೋಜಿಸಿದೆ.
ಪ್ರಧಾನಮಂತ್ರಿಯವರು ಸಿಆರ್.ಇ.ಡಿ.ಎ.ಐ. ಆಯೋಜಿಸಿರುವ ವಸ್ತುಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ.
ಯೂತ್ ಕಾನ್, ಭಾರತದಲ್ಲಿ ರಿಯಲ್ ಎಸ್ಟೇಟ್ ಕೈಗಾರಿಕೆಯ ಭವಿಷ್ಯವನ್ನು ಒಗ್ಗೂಡಿಸುವ ಸಲುವಾಗಿ ಸಿಆರ್.ಇ.ಡಿ.ಎ.ಐ. ನಡೆಸುವ ವಾರ್ಷಿಕ ಯುವ ಸಮಾವೇಶವಾಗಿದೆ.
1999ರಲ್ಲಿ ಸ್ಥಾಪನೆಯಾದ ಸಿ.ಆರ್..ಡಿ.ಎ.ಐ. ಭಾರತದ 200 ನಗರಗಳ ರಿಯಲ್ ಎಸ್ಟೇಟ್ ಡೆವಲಪರ್ ಗಳು ಪ್ರತಿನಿಧಿಸುವ ಸರ್ವೇನ್ನತ ಸಂಸ್ಥೆಯಾಗಿದೆ.