ಚಳಿಗಾಲದ ಅಧಿವೇಶನದ ಮೊದಲ ದಿನದಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಎಲ್ಲಾ ಸಂಸದರಿಗೆ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮನವಿ ಮಾಡಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಸ್ತುತ ಸಂಸತ್ತಿನ ಅಧಿವೇಶನ ಬಹಳ ಮುಖ್ಯವಾದದ್ದು, ಏಕೆಂದರೆ ಇದು ರಾಜ್ಯಸಭೆಯ 250 ನೇ ಅಧಿವೇಶನ ಮತ್ತು ಭಾರತೀಯ ಸಂವಿಧಾನದ 70 ನೇ ವರ್ಷವಾಗಿದೆ ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರಧಾನ ಮಂತ್ರಿಯವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಾರತವನ್ನು ಪ್ರಗತಿಯ ಹಾದಿಯಲ್ಲಿರಿಸುವಲ್ಲಿ ರಾಜ್ಯಸಭೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಶ್ಲಾಘಿಸಿದರು.
“ಸ್ನೇಹಿತರೇ, ಇದು 2019 ರ ಸಂಸತ್ತಿನ ಕೊನೆಯ ಅಧಿವೇಶನವಾಗಿದೆ ಮತ್ತು ಇದು ರಾಜ್ಯಸಭೆಯ 250 ನೇ ಅಧಿವೇಶನವಾಗಿದೆ, ರಾಜ್ಯಸಭೆಯು ಭಾರತದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ”
ನವೆಂಬರ್ 26 ರಂದು ಭಾರತ ತನ್ನ 70 ನೇ ಸಂವಿಧಾನ ದಿನವನ್ನು ಆಚರಿಸಲಿದೆ. ನವೆಂಬರ್ 26, 1949ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿ ಈ ವರ್ಷಕ್ಕೆ 70 ವರ್ಷಗಳು ಪೂರ್ಣಗೊಂಡಿವೆ.
ಭಾರತದ ಏಕತೆ, ಸಮಗ್ರತೆ ಮತ್ತು ವೈವಿಧ್ಯತೆಯನ್ನು ಎತ್ತಿಹಿಡಿದಿರುವ ಮಹಾನ್ ಸಿದ್ಧಾಂತವೆಂದರೆ ಸಂವಿಧಾನ ಎಂದು ಪ್ರಧಾನಮಂತ್ರಿಯವರು ಹೇಳಿದರು
“ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ 70 ವರ್ಷಗಳ ಸಂದರ್ಭದಲ್ಲಿ ನಾವು 70 ನೇ ಸಂವಿಧಾನ ದಿನವನ್ನು ಆಚರಿಸುತ್ತೇವೆ ಈ ಸಂವಿಧಾನವು ದೇಶದ ಏಕತೆ, ದೇಶದ ಸಮಗ್ರತೆ, ಭಾರತದ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ. ಇದು ತನ್ನಲ್ಲಿಯೇ ಭಾರತದ ಸೌಂದರ್ಯವನ್ನು ಒಳಗೊಂಡಿದೆ. ಇದು ದೇಶದ ಪ್ರೇರಕ ಶಕ್ತಿಯಾಗಿದೆ. ಸಂಸತ್ತಿನ ಈ ಅಧಿವೇಶನವು ನಮ್ಮ ಸಂವಿಧಾನದ 70 ವರ್ಷಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ”
ಹಿಂದಿನ ಅಧಿವೇಶನದಂತೆ ವಿವಿಧ ಚರ್ಚೆಗಳಲ್ಲಿ ಸಕ್ರಿಯವಾಗಿ ಮತ್ತು ಸಕಾರಾತ್ಮಕವಾಗಿ ಭಾಗವಹಿಸಬೇಕೆಂದು ಪ್ರಧಾನ ಮಂತ್ರಿಯವರು ಎಲ್ಲಾ ಸಂಸದರಿಗೆ ಮನವಿ ಮಾಡಿದರು, ದೇಶವು ತಮ್ಮ ಚರ್ಚೆಗಳಿಂದ ಉತ್ತಮವಾದದನ್ನು ಪಡೆಯಲು ಸಹಾಯ ಮಾಡುವ ಸಲುವಾಗಿ, ಇದನ್ನು ದೇಶದ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
“ಕಳೆದ ಕೆಲವು ದಿನಗಳಿಂದ ಬಹುತೇಕ ಎಲ್ಲ ಪಕ್ಷಗಳ ವಿವಿಧ ನಾಯಕರನ್ನು ಭೇಟಿ ಮಾಡಲು ನಮಗೆ ಅವಕಾಶವಿತ್ತು. ಈ ಅಧಿವೇಶನವು, ಹಿಂದಿನಂತೆ ಹೊಸ ಸರ್ಕಾರ ರಚನೆಯಾದ ಕೂಡಲೇ ನಡೆದಂತೆ, ಎಲ್ಲಾ ಸಂಸದರ ಸಕ್ರಿಯ ಮತ್ತು ಸಕಾರಾತ್ಮಕ ಭಾಗವಹಿಸುವಿಕೆಯನ್ನು ಸಹ ಒಳಗೊಂಡಿರಬೇಕು. ಹಿಂದಿನ ಅಧಿವೇಶನವು ಅಭೂತಪೂರ್ವ ಸಾಧನೆಗಳನ್ನು ಕಂಡಿತು. ಈ ಸಾಧನೆಗಳು ಕೇವಲ ಸರ್ಕಾರ ಅಥವಾ ಆಡಳಿತ ಪಕ್ಷದ ಸದಸ್ಯರಿಗೆ ಸೇರಿದ್ದಲ್ಲ ಆದರೆ ಇಡೀ ಸಂಸತ್ತಿನ ಸಾಧನೆ ಎಂದು ನಾನು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕಾಗಿದೆ ; ಎಲ್ಲಾ ಸದಸ್ಯರು ಈ ಸಾಧನೆಗಳ ಸಮಪಾಲಿನ ಸಾಧಕರು”
ಎಲ್ಲಾ ಸಂಸದರು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಅಧಿವೇಶನವು ದೇಶದ ಪ್ರಗತಿಗೆ ಹೊಸ ಚೈತನ್ಯದ ಕೆಲಸ ಮಾಡುತ್ತದೆ ಎಂದು ಭಾವಿಸುತ್ತೇನೆ.
ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆಯನ್ನು ಬಯಸುತ್ತೇವೆ ಮತ್ತು ವಿಷಯದ ಪರವಾಗಿ ಅಥವಾ ವಿರುದ್ಧವಾಗಿ ನಾವು ಉತ್ತಮ ಚರ್ಚೆಗಳನ್ನು ನಡೆಸುವುದು ಮತ್ತು ಅದರಿಂದ ಹೊರಬರುವ ಅತ್ಯುತ್ತಮ ಪರಿಹಾರಗಳನ್ನು ದೇಶದ ಒಳಿತಿಗಾಗಿ ಬಳಸುವುದು ಅವಶ್ಯಕ.
ಎಲ್ಲಾ ಸದಸ್ಯರಿಗೆ ನಾನು ಶುಭ ಹಾರೈಸುತ್ತೇನೆ. ”