ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನ ಕೆವಾಡಿಯಾದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮುಸ್ಸೂರಿಯ ಎಲ್ಬಿಎಸ್ಎನ್ಎನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ನಾಗರಿಕ ಸೇವೆಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಇದು 2019 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಸಮಗ್ರ ಫೌಂಡೇಶನ್ ಕೋರ್ಸ್ AARAMBH ನ ಒಂದು ಭಾಗವಾಗಿದೆ.
ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಪ್ರಸ್ತುತಪಡಿಸಿದ ಪ್ರಾತ್ಯಕ್ಷಿಕೆಗಳಿಗೆ ಸಾಕ್ಷಿಯಾದ ನಂತರ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ "ದೇಶದ ನಾಗರಿಕರಿಗೆ ಸೇವೆ ಸಲ್ಲಿಸುವುದು ನಾಗರಿಕ ಸೇವಕನ ಅತ್ಯುನ್ನತ ಕರ್ತವ್ಯವಾಗಿದೆ" ಎಂಬ ತತ್ವವನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ರಾಷ್ಟ್ರದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವಂತೆ ಶ್ರೀ ಮೋದಿ ಯುವ ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯ ವ್ಯಾಪ್ತಿ ಅಥವಾ ಅವರು ಕೆಲಸ ಮಾಡುತ್ತಿರುವ ಪ್ರದೇಶದ ಹೊರತಾಗಿಯೂ ನಾಗರಿಕ ಸೇವೆಯ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಜನಸಾಮಾನ್ಯರ ಹಿತದೃಷ್ಟಿಯಿಂದ ಇರಬೇಕು ಎಂದು ಅವರು ಒತ್ತಿ ಹೇಳಿದರು.
ದೇಶದ “ಉಕ್ಕಿನ ಚೌಕಟ್ಟಿನ”ಗಮನವು ಕೇವಲ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವುದಕ್ಕೆ ಮಾತ್ರ ಸೀಮಿತವಾಗದೇ ರಾಷ್ಟ್ರದ ಪ್ರಗತಿಗೆ ಕೆಲಸ ಮಾಡುವುದಾಗಿರಬೇಕು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಇದು ಹೆಚ್ಚು ಮುಖ್ಯವಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ತರಬೇತಿಯ ಮಹತ್ವ ಮತ್ತು ಹೊಸ ಗುರಿಗಳನ್ನು ಸಾಧಿಸಲು, ದೇಶದಲ್ಲಿ ಹೊಸ ವಿಧಾನಗಳು ಮತ್ತು ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಶ್ರೀ ನರೇಂದ್ರ ಮೋದಿಯವರು ತಿಳಿಸಿದರು.
ಹಿಂದಿಗಿಂತ ಭಿನ್ನವಾಗಿ, ದೇಶದಲ್ಲಿ ಈಗ ಮಾನವ ಸಂಪನ್ಮೂಲ ತರಬೇತಿಯಲ್ಲಿ ಆಧುನಿಕ ವಿಧಾನಗಳನ್ನು ಒತ್ತಿ ಹೇಳಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಕಳೆದ 2-3 ವರ್ಷಗಳಲ್ಲಿ ನಾಗರಿಕ ಸೇವೆ ಅಧಿಕಾರಿಗಳ ತರಬೇತಿ ಮಾದರಿಯಲ್ಲಿನ ಬದಲಾವಣೆಯ ಬಗ್ಗೆ ಅವರು ಗಮನಸೆಳೆದರು. ಸಮಗ್ರ ಫೌಂಡೇಶನ್ ಕೋರ್ಸ್ 'ಆರಂಭ್' ಕೇವಲ ಒಂದು ಆರಂಭವಲ್ಲ, ನೂತನ ಸಂಪ್ರದಾಯದ ಸಂಕೇತವಾಗಿದೆ ಎಂದು ಅವರು ತಿಳಿಸಿದರು.
ನಾಗರಿಕ ಸೇವೆಗಳ ಇತ್ತೀಚಿನ ಸುಧಾರಣೆಗಳಲ್ಲಿ ಮಿಷನ್ ಕರ್ಮಯೋಗಿಯ ಬಗ್ಗೆ ಶ್ರೀ ಮೋದಿಯವರು ಪ್ರಸ್ತಾಪಿಸಿದರು. ಇದು ನಾಗರಿಕ ಸೇವೆಯ ಅಧಿಕಾರಿಗಳಲ್ಲಿ ಹೆಚ್ಚು ಸೃಜನಶೀಲ ಮತ್ತು ಆತ್ಮವಿಶ್ವಾಸ ತುಂಬುವ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಟಾಪ್–ಡೌನ್ ವಿಧಾನದಿಂದ ಸರ್ಕಾರ ನಡೆಯುವುದಿಲ್ಲ ಎಂದು ಪ್ರಧಾನಿ ಹೇಳಿದರು. ಸಾರ್ವಜನಿಕರಿಗಾಗಿ ನೀತಿಗಳನ್ನು ರೂಪಿಸುವಾಗ ಅವರನ್ನು ಒಳಗೊಳ್ಳುವುದು ಬಹಳ ಮುಖ್ಯವಾಗಿದೆ. ಜನರು ಸರ್ಕಾರದ ಹಿಂದಿರುವ ನಿಜವಾದ ಪ್ರೇರಕ ಶಕ್ತಿ ಎಂದು ಅವರು ಹೇಳಿದರು.
ಪ್ರಸ್ತುತ ವಿಧಾನದಲ್ಲಿ ದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಅಧಿಕಾರಿ ವರ್ಗವೂ ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತವನ್ನು ಖಚಿತಪಡಿಸಬೇಕು ಎಂದರು. ನಾಗರಿಕರ ಜೀವನದಲ್ಲಿ ಹಸ್ತಕ್ಷೇಪ ಕಡಿಮೆಯಾಗುವಂತೆ ಮತ್ತು ಜನಸಾಮಾನ್ಯರು ಸಬಲರಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕರೆ ಕೊಟ್ಟರು.
ಆತ್ಮನಿರ್ಭರವಾಗುವ ದೇಶದ ಪ್ರಯತ್ನಗಳಲ್ಲಿ ನಾಗರಿಕ ಸೇವೆಯ ಅಧಿಕಾರಿಗಳು ಸ್ಥಳೀಯತೆಗೆ ಆದ್ಯತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಪ್ರಧಾನಿಯವರು ಒತ್ತಾಯಿಸಿದರು.
अफसरों को सरदार साहब की सलाह थी कि देश के नागरिकों की सेवा अब आपका सर्वोच्च कर्तव्य है।
— PMO India (@PMOIndia) October 31, 2020
मेरा भी यही आग्रह है कि सिविल सर्वेंट जो भी निर्णय ले, वो राष्ट्रीय संदर्भ में हों, देश की एकता अखंडता को मजबूत करने वाले हों: PM
आपका क्षेत्र भले ही छोटा हो, आप जिस विभाग को संभाले उसका दायरा भले ही कम हो,
— PMO India (@PMOIndia) October 31, 2020
लेकिन फैसलों में हमेशा लोगों का हित होना चाहिए, एक national perspective होना चाहिए: PM
स्टील फ्रेम का काम सिर्फ आधार देना, सिर्फ चली आ रही व्यवस्थाओं को संभालना ही नहीं होता।
— PMO India (@PMOIndia) October 31, 2020
स्टील फ्रेम का काम देश को ये ऐहसास दिलाना भी होता है कि बड़े से बड़ा संकट हो या फिर बड़े से बड़ा बदलाव,
आप एक ताकत बनकर देश को आगे बढ़ाने में सहयोग करेंगे, facilitate करेंगे: PM
देश में नए परिवर्तन के लिए, नए लक्ष्यों की प्राप्ति के लिए, नए मार्ग और नए तौर-तरीके अपनाने के लिए
— PMO India (@PMOIndia) October 31, 2020
बहुत बड़ी भूमिका ट्रेनिंग की होती है, Skill-Set के Development की होती है: PM
पहले के समय Training में आधुनिक अप्रोच कैसे आए, इस बारे में बहुत सोचा नहीं गया।
— PMO India (@PMOIndia) October 31, 2020
लेकिन अब देश में Human Resource की आधुनिक Training पर जोर दिया जा रहा है।
आपने खुद भी देखा है कि कैसे बीते 2-3 वर्षों में ही सिविल सर्वेन्ट्स की ट्रेनिंग का स्वरूप बहुत बदल गया है: PM
ये ‘आरंभ’ सिर्फ आरंभ नहीं है, एक प्रतीक भी है और एक नई परंपरा भी।
— PMO India (@PMOIndia) October 31, 2020
ऐसे ही सरकार ने कुछ दिन पहले एक और अभियान शुरू किया है- मिशन कर्मयोगी।
मिशन कर्मयोगी, capacity building की दिशा में अपनी तरह का एक नया प्रयोग है: PM
सरकार शीर्ष से नहीं चलती है। नीतियाँ जिस जनता के लिए हैं, उनका समावेश बहुत जरूरी है।
— PMO India (@PMOIndia) October 31, 2020
जनता केवल सरकार की नीतियों की, प्रोग्राम्स की receiver नहीं है, जनता जनार्दन ही असली ड्राइविंग फोर्स है।
इसलिए हमें government से governance की तरफ बढ़ने की जरूरत है: PM
आज देश जिस mode में काम कर रहा है, उसमें आप सभी bureaucrats की भूमिका Minimum Government, Maximum Governance की ही है।
— PMO India (@PMOIndia) October 31, 2020
आपको ये सुनिश्चित करना है कि नागरिकों के जीवन में आपका दखल कैसे कम हो, सामान्य मानवी का सशक्तिकरण कैसे हो: PM