The Rajya Sabha gives an opportunity to those away from electoral politics to contribute to the nation and its development: PM
Whenever it has been about national good, the Rajya Sabha has risen to the occasion and made a strong contribution: PM
Our Constitution inspires us to work for a Welfare State. It also motivates us to work for the welfare of states: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯ 250ನೇ ಅಧಿವೇಶನದ ಅಂಗವಾಗಿ ಸಂಸತ್ತಿನ ಮೇಲ್ಮನೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದರು.

ಐತಿಹಾಸಿಕ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ರಾಜ್ಯಸಭೆ ದೇಶದ ಇತಿಹಾಸಕ್ಕೆ ಗಣನೀಯ ಕೊಡುಗೆ ನೀಡಿದೆ ಜೊತೆಗೆ ಇತಿಹಾಸ ನಿರ್ಮಾಣವಾಗಿದ್ದನ್ನೂ ಈ ಸದನ ನೋಡಿದೆ ಎಂದರು. ಭಾರತೀಯ ಸಂವಿಧಾನ ನಿರ್ಮಾತೃಗಳು ರೂಪಿಸಿದ ದ್ವಿಶಾಸಕಾಂಗ ಚೌಕಟ್ಟು ನಮ್ಮ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸಿದೆ ಎಂದರು.

ರಾಜ್ಯಸಭೆಯು ಭಾರತದ ವೈವಿಧ್ಯತೆಯ ಪ್ರತಿನಿಧಿಯಾಗಿದ್ದು, ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯಸಭೆ ಎಂದೂ ವಿಸರ್ಜನೆ ಆಗುವುದೇ ಇಲ್ಲ ಮತ್ತು ಅದರ ನಿರಂತರತೆ ಸದನವನ್ನು ಶಾಶ್ವತವಾಗಿಸಿದೆ ಎಂದರು. ರಾಜ್ಯಸಭೆ ಚುನಾವಣಾ ರಾಜಕೀಯದಿಂದ ದೂರ ಇರುವವರಿಗೂ ದೇಶಕ್ಕೆ ಅದರ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಹಕಾರ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ರಾಜ್ಯಸಭೆಯ ಪಾತ್ರವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ರಾಜ್ಯಸಭೆ ರಾಷ್ಟ್ರದ ಹಿತಕ್ಕೆ ಸಂಬಂಧಿಸಿದ ಎಲ್ಲ ಸಂದರ್ಭದಲ್ಲೂ ಪುಟಿದೆದ್ದಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಜಿಎಸ್ಟಿ, ತ್ರಿವಳಿ ತಲಾಖ್ ಮತ್ತು ವಿಧಿ 370ರ ರದ್ಧತಿಯಂಥ ಮಹತ್ವದ ಶಾಸನಗಳ ಅನುಮೋದನೆ ರಾಜ್ಯಸಭೆಯ ಪಾತ್ರವನ್ನು ಅವರು ಪ್ರಸ್ತಾಪಿಸಿದರು.

ರಾಜ್ಯಸಭೆಯ ಮಹತ್ವದ ಕುರಿತಂತೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಪ್ರಗತಿಗೆ ರಾಜ್ಯಸಭೆ ಚೈತನ್ಯದಾಯಕ ಬೆಂಬಲದ ಸದನವಾಗಬೇಕು ಎಂದರು. ಸಂಸತ್ತಿನ ಮೇಲ್ಮನೆಯ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು.

ಸಂಸತ್ತಿನ ಮಾನದಂಡಗಳಿಗೆ ಅನುಸಾರವಾಗಿ ಮತ್ತು ಸದನದ ಕಾರ್ಯಚಟುವಟಿಕೆಗೆ ಅಡ್ಡಿಯಾಗದಂತೆ ತಮ್ಮ ಅಭಿಪ್ರಾಯಗಳನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ಕೆಲವು ಸಂಸತ್ ಸದಸ್ಯರು ಪ್ರದರ್ಶಿಸಿದ ತತ್ವಗಳನ್ನು ಪ್ರಧಾನಿ ಶ್ಲಾಘಿಸಿದರು. ಈ ರೂಢಿಗಳಿಂದ ಹೆಚ್ಚಿನದನ್ನು ಕಲಿಯಬಹುದು ಎಂದೂ ಹೇಳಿದರು.

ರಾಜ್ಯಸಭೆ ನಮ್ಮ ಪ್ರಜಾಪ್ರಭುತ್ವದ ಸಮರ್ಥ ಕಾರ್ಯನಿರ್ವಹಣೆಗೆ ಮಹತ್ವದ್ದು ಎಂಬುದನ್ನು ಮನವರಿಕೆ ಮಾಡಿಸಿದ ಪ್ರಧಾನಮಂತ್ರಿಯವರು, ಮೇಲ್ಮನೆ ಒದಗಿಸಿರುವ ಅಧಿಕಾರ ಮತ್ತು ಸಮತೋಲನತೆಯನ್ನು ಅಡ್ಡಿಪಡಿಸಲು ಮತ್ತು ತಡೆಯಲು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India produced record rice, wheat, maize in 2024-25, estimates Centre

Media Coverage

India produced record rice, wheat, maize in 2024-25, estimates Centre
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2025
March 10, 2025

Appreciation for PM Modi’s Efforts in Strengthening Global Ties