ಗೌರವಾನ್ವಿತ, ಕಿರ್ಗಿಸ್ತಾನ ಗಣರಾಜ್ಯದ ಅಧ್ಯಕ್ಷರು ಹಾಗೂ ನನ್ನ ಆತ್ಮೀಯ ಮಿತ್ರ ಶ್ರೀ ಸೂರನ್ ಬೇ ಜೀನ್ ಬೆಕೊವ್,
ಮಹಿಳೆಯರೇ, ಮಹನಿಯರೇ,
ನನಗೆ ಮತ್ತು ನಮ್ಮ ನಿಯೋಗಕ್ಕೆ ಆತ್ಮೀಯ ಸ್ವಾಗತ ನೀಡಿದ ಅಧ್ಯಕ್ಷ ಜೀನ್ ಬೆಕೊವ್ಅ ವರಿಗೆ ನನ್ನ ಹೃತ್ಫೂರ್ವಕ ಕೃತಜ್ಞತೆಗಳು. ಕಳೆದ 30 ವರ್ಷಗಳಿಂದೀಚೆಗೆ ಕಿರ್ಗಿಸ್ತಾನ ಸಾಧಿಸಿರುವ ಅನಿರೀಕ್ಷಿತ ಸಾಧನೆಗಾಗಿ ನಾನು ಅಭಿನಂದಿಸುತ್ತೇನೆ. ಈ ದೇಶದ ಭವಿಷ್ಯ ಉಜ್ವಲವಾಗಿದೆ. ಕಾರಣ ಅದರ ನೈಸರ್ಗಿಕ ಸೌಂದರ್ಯ, ಬಲಿಷ್ಠ ಪ್ರಜಾಪ್ರಭುತ್ವ ಮತ್ತು ಪ್ರತಿಭಾವಂತ ಜನರು. ಕಿರ್ಗಿಸ್ತಾನದ ಜನರು ಭಾರತದ ಜನರ ಬಗೆಗೆ ತೋರುತ್ತಿರುವ ಪ್ರೀತಿ ಮತ್ತು ಗೆಳೆತನ ಹೃದಯಸ್ಪರ್ಶಿಯಾಗಿದೆ. ನಾನು ಕಳೆದ ಬಾರಿ ಇಲ್ಲಿಗೆ ಭೇಟಿ ನೀಡಿದ್ದಾಗಲೂ ಮತ್ತು ಈಗಲೂ ನನಗೆ ಇದು ತವರು ಎಂಬ ಭಾವನೆ ಮೂಡಿಸುತ್ತಿದೆ.
ಗೌರವಾನ್ವಿತರೇ,
ಶಾಂಘೈ ಸಹಕಾರ ಸಂಸ್ಥೆ(ಎಸ್ ಸಿ ಒ) ಶೃಂಗಸಭೆಯ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಅಧ್ಯಕ್ಷತೆಯಲ್ಲಿ ಎಸ್ ಸಿ ಒ ಪ್ರಾದೇಶಿಕ ಸಹಕಾರ ಸುಧಾರಣೆಗೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕಳೆದ ತಿಂಗಳು ನವದೆಹಲಿಯಲ್ಲಿ ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಕ್ಕಾಗಿ ನಾನು ನಿಮಗೆ ಆಭಾರಿಯಾಗಿರುತ್ತೇನೆ. ಇಂದು ನನಗೆ ಮತ್ತಷ್ಟು ಸಂತಸವಾಗುತ್ತಿದೆ. ಏಕೆಂದರೆ ನಿಮ್ಮೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಪರಿಶೀಲನೆಗೆ ಅವಕಾಶ ಸಿಕ್ಕಿದೆ. ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯ ಎರಡೂ ಪರಸ್ಪರ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿವೆ.
ಗೆಳೆಯರೇ,
ನಾನು ಅಧ್ಯಕ್ಷ ಸೂರನ್ ಬೇ ಜೀನ್ ಬೆಕೊವ್ ಅವರೊಂದಿಗೆ ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದೇನೆ. ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಸಂಬಂಧ ವೃದ್ಧಿಸುವ ಸಾಮರ್ಥ್ಯವಿದೆ ಎಂಬ ಭಾವನೆಯನ್ನು ನಾವಿಬ್ಬರೂ ವ್ಯಕ್ತಪಡಿಸಿದ್ದೇವೆ. ಇಂದು ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಇದು ನಮ್ಮ ಪಾಲುದಾರಿಕೆಯ ಪ್ರತಿಯೊಂದು ವಲಯದಲ್ಲೂ ಅಥವಾ ಕ್ಷೇತ್ರದಲ್ಲೂ ದೀರ್ಘಕಾಲದ ಸಹಕಾರವನ್ನು ಹೊಂದಲು ಸಹಾಯಕವಾಗುತ್ತದೆ.
ಗೆಳೆಯರೇ,
ಎರಡೂ ರಾಷ್ಟ್ರಗಳು ಪುರಾತನ ಮತ್ತು ವೈಭವಯುತ ನಾಗರಿಕತೆಗಳಾಗಿವೆ. ಎರಡೂ ರಾಷ್ಟ್ರಗಳು ನೈಸರ್ಗಿಕವಾಗಿ ಸಂಪರ್ಕ ಹೊಂದಿವೆ. ಭಾರತ ಮತ್ತು ಕೇಂದ್ರ ಏಷ್ಯಾ ನಡುವೆ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿವೆ. ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯದ ನೆಲ ಪುರಾಣಗಳ ಭೂಮಿಯಾಗಿದೆ. ಉದಾಹರಣೆಗೆ ಮಹಾಭಾರತ ಮತ್ತು ರಾಮಚರಿತ ಮಾನಸ ಭಾರತದಲ್ಲಿ ಮತ್ತು ಕಿರ್ಗಿಸ್ತಾನ ಗಣರಾಜ್ಯದಲ್ಲಿ ಹೆಚ್ಚು ಚಿರಪರಿಚಿತವಾಗಿದೆ. ಎರಡೂ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿವೆ. ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಭಿನ್ನವಾಗಿವೆ.
ನಮ್ಮ ಪುರಾತನ ಸಂಬಂಧಗಳನ್ನು ಮತ್ತು ಶಾಂತಿಯನ್ನು ಬಲವರ್ಧನೆಗೊಳಿಸುವ ಸಾಮಾನ್ಯ ಭಾವನೆಯನ್ನು ಹೊಂದಿರುವ ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲು ಪರಸ್ಪರ ಉತ್ತೇಜಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ರಾಜತಾಂತ್ರಿಕ ಸಂಬಂಧಗಳೂ ಸಹ ವಿಸ್ತರಣೆಯಾಗುತ್ತಿವೆ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವಿಷಯಗಳಲ್ಲೇ ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯ ನಿರಂತರವಾಗಿ ಮತ್ತು ನಿಕಟವಾಗಿ ಸಮಾಲೋಚನೆ ನಡೆಸುತ್ತಿವೆ. ಹಲವು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ನಾವು ಒಂದೇ ಬಗೆಯ ಅಭಿಪ್ರಾಯಗಳನ್ನು ಹೊಂದಿದ್ದೇವೆ. ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ನಡುವೆ ಬಲಿಷ್ಠ ಸಹಕಾರವಿದೆ. ನಮ್ಮ ನಡುವಿನ ರಕ್ಷಣಾ ಸಹಕಾರ, ಮಿಲಿಟರಿ ತರಬೇತಿ, ಜಂಟಿ ಸಮರ, ಕ್ಷೇತ್ರ ಸಂಶೋಧನೆ ಮತ್ತು ಮಿಲಿಟರಿ ತಾಂತ್ರಿಕ ವಲಯಗಳಿಗೂ ವಿಸ್ತರಣೆಗೊಂಡಿದೆ.
ಎರಡೂ ದೇಶಗಳು ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯಕಾರಿ ಗುಂಪು ರಚಿಸಲು ನಿರ್ಧರಿಸಿವೆ. ಎರಡೂ ದೇಶಗಳ ನಡುವೆ ಆರ್ಥಿಕ ಸಹಕಾರಕ್ಕೆ ವಿಪುಲ ಸಾಧ್ಯತೆಗಳಿದ್ದು, ಅವುಗಳನ್ನು ನಾವು ಬಳಸಿಕೊಳ್ಳಬೇಕಿದೆ.
ಗೆಳೆಯರೇ,
ಇಂದು ನಾವು ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಎರಡು ಬಾರಿ ತೆರಿಗೆ ವಿಧಿಸುವುದನ್ನು ತಪ್ಪಿಸುವ ಡಿಟಿಎಎ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಲ್ಲದೆ ವ್ಯಾಪಾರ ಮತ್ತು ಆರ್ಥಿಕ ಸಹಕಾರ ವಲಯಗಳಲ್ಲಿ 5 ವರ್ಷಗಳ ನೀಲನಕ್ಷೆ ರೂಪಿಸಲು ಸಹ ನಾವು ಒಪ್ಪಿದ್ದೇವೆ. ಬಿಟುಬಿ ಅಂದರೆ ವ್ಯಾಪಾರದಿಂದ ವ್ಯಾಪಾರ ಉತ್ತೇಜನಕ್ಕೆ ಇಂದು ಅಧ್ಯಕ್ಷ ಸೂರನ್ ಬೇ ಜೀನ್ ಬೆಕೊವ್ ಮತ್ತು ನಾನು ಜಂಟಿಯಾಗಿ ಭಾರತ – ಕಿರ್ಗಿಸ್ತಾನ ವಾಣಿಜ್ಯ ವೇದಿಕೆಯನ್ನುದ್ದೇಶಿಸಿ ಜಂಟಿ ಭಾಷಣ ಮಾಡಿದ್ದೇವೆ. ಈ ವರ್ಷ ಬಿಷ್ಕೇಕ್ ನಲ್ಲಿ ‘ನಮಸ್ಕಾರ ಯುರಾಸಿಯಾ’ ಎಂಬ ಭಾರತೀಯ ವ್ಯಾಪಾರ ಮೇಳವನ್ನು ಆಯೋಜಿಸಲಾಗುವುದು. ನಾನು ಕಿರ್ಗಿಸ್ತಾನ ಗಣರಾಜ್ಯದಲ್ಲಿ ಕಟ್ಟಡ ನಿರ್ಮಾಣ, ರೈಲ್ವೆ, ಜಲವಿದ್ಯುತ್, ಗಣಿಗಾರಿಕೆ ಮತ್ತಿತರ ವಲಯಗಳಲ್ಲಿ ಇರುವ ಅವಕಾಶಗಳ ಕುರಿತು ಅಧ್ಯಯನ ನಡೆಸುವಂತೆ ಭಾರತೀಯ ಕಂಪನಿಗಳಿಗೆ ಕರೆ ನೀಡಿದ್ದೇನೆ.
ಗೆಳೆಯರೇ,
ಕಿರ್ಗಿಸ್ತಾನ ಗಣರಾಜ್ಯದ ಅಭಿವೃದ್ಧಿ ಅಗತ್ಯತೆಗಳನ್ನು ಈಡೇರಿಸಲು ಭಾರತ 200 ಮಿಲಿಯನ್ಡಾ ಲರ್ ಅನ್ನು ರಿಯಾಯಿತಿ ದರದ ಸಾಲದ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಪ್ರಕಟಿಸಲು ಸಂತಸವಾಗುತ್ತಿದೆ. ಈ ನೆರವಿನಿಂದ ಕಿರ್ಗಿಸ್ತಾನ ಗಣರಾಜ್ಯದಲ್ಲಿ ಭಾರತ-ಕಿರ್ಗಿಸ್ತಾನ ಜಂಟಿಯಾಗಿ ಹಲವು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಸಹಾಯಕವಾಗುತ್ತದೆ. ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯದ ನಡುವೆ ಉತ್ತಮ ಸಂಪರ್ಕ ಕಲ್ಪಿಸಲಾಗುವುದು, ಕೇಂದ್ರ ಏಷ್ಯಾದ ಬಹುತೇಕ ಭಾಗದಲ್ಲಿ ವಹಿವಾಟು, ಬಂಡವಾಳ ಹೂಡಿಕೆ, ಜನರ ನಡುವೆ ವಿನಿಮಯ ಹೆಚ್ಚಾಗಿದೆ.
ಗೆಳೆಯರೇ,
ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯ ಈ ವರ್ಷದ ಜನವರಿಯಲ್ಲಿ ಉಜ್ಬೇಕಿಸ್ತಾನದ ಸಮರ್ಖಂ ಡದಲ್ಲಿ ನಡೆದ ವಿದೇಶಾಂಗ ಸಚಿವರ ಮಟ್ಟದ ಮೊದಲ ಭಾರತ ಕೇಂದ್ರ ಏಷ್ಯಾ ಸಂವಾದದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದೆವು. ನಮ್ಮ ಹಂಚಿಕೆಯ ಪ್ರದೇಶದಲ್ಲಿ ನಾವು ಶ್ರೇಯೋಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಬಗ್ಗೆ ನಮ್ಮ ಮುನ್ನೋಟವನ್ನು ಹಂಚಿಕೊಂಡಿದ್ದೇವೆ.
ಗೌರವಾನ್ವಿತರೇ,
ಭಯೋತ್ಪಾದನೆ ಇಂದು ಭಾರತ ಮತ್ತು ಕಿರ್ಗಿಸ್ತಾನದಂತಹ ವೈವಿಧ್ಯಮಯ ಸಮಾಜಗಳು ಮತ್ತು ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಅಪಾಯವಾಗಿದೆ. ಭಯೋತ್ಪಾದನೆ ಮತ್ತು ಮೂಲಭೂತ ವಾದಕ್ಕೆ ಪರಿಹಾರ ಕಂಡುಹಿಡಿಯಲು ನಾವು ಒಗ್ಗಟ್ಟಿನಿಂದಿದ್ದೇವೆ. ಭಯೋತ್ಪಾದನೆಯ ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಬೇಕಿದೆ. ಭಯೋತ್ಪಾದನೆಯನ್ನು ಯಾವುದೇ ವಿಧದಲ್ಲೂ ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗದು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಬೇಕಿದೆ.
ಗೆಳೆಯರೇ,
ಬಿಷ್ಕೇಕ್ ನಲ್ಲಿ ಭಾರತ-ಕಿರ್ಗಿಸ್ತಾನ ಜಂಟಿ ಜವಳಿ ಪ್ರದರ್ಶನ ಉದ್ಘಾಟಿಸಲಾಯಿತು. ಈ ಪ್ರದರ್ಶನವನ್ನು ಅತ್ಯುತ್ಸಾಹದಿಂದ ವೀಕ್ಷಿಸುತ್ತಿದ್ದವರು ಭಾರತ ಮತ್ತು ಕಿರ್ಗಿಸ್ತಾನದ ಜವಳಿ ಸಂಪ್ರದಾಯದಲ್ಲಿ ಸಾಮ್ಯತೆ ಇರುವುದನ್ನು ಕಂಡು ಆಶ್ಚರ್ಯಪಟ್ಟಿರಬಹುದು. ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯ ಹಿಮಚಿರತೆ ಸಂರಕ್ಷಣೆ, ಹಸಿರು ಪ್ರವಾಸೋದ್ಯಮ ಮತ್ತು ಪರ್ವತಾರೋಹಣ ಮತ್ತಿತರ ವಿಷಯಗಳಲ್ಲಿ ಸಹಭಾಗಿತ್ವ ಸಾಧಿಸುತ್ತಿದ್ದೇವೆ. ಜನರ ನಡುವಿನ ಗೆಳೆತನ ಮತ್ತು ಸಾಂಸ್ಕೃತಿಕ ಆಪ್ತತೆ ನಮ್ಮ ಅತಿದೊಡ್ಡ ಆಸ್ತಿಯಾಗಿದೆ. ಇದನ್ನು ನಾವು ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
2021ನೇ ವರ್ಷವನ್ನು ನಾವು ಭಾರತ ಮತ್ತು ಕಿರ್ಗಿಸ್ತಾನ ಗಣರಾಜ್ಯದ ನಡುವಿನ ಗೆಳೆತನ ಮತ್ತು ಸಾಂಸ್ಕೃತಿಕ ಸಂಬಂಧದ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಲು ನನಗೆ ಹರ್ಷವಾಗುತ್ತಿದೆ. ಮತ್ತೊಮ್ಮೆ ನಾನು ಅಧ್ಯಕ್ಷರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು, ನೀವು ಭಾರತಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದೇನೆ. ಭಾರತದಲ್ಲಿ ನಿಮ್ಮನ್ನು ಸ್ವಾಗತಿಸುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗುತ್ತದೆ.
ಧನ್ಯವಾದಗಳು
Strategic partners for a better future.
— PMO India (@PMOIndia) June 14, 2019
Significant outcomes from the talks between PM @narendramodi and President Jeenbekov that will benefit India-Kyrgyzstan relations. pic.twitter.com/rUyvWY4fhs
भारत और Kyrgyz Republic जैसे लोकतान्त्रिक और विविधता भरे समाजों को आज आतंकवाद से सबसे बड़ा खतरा है। हम आतंकवाद और कट्टरवाद के समाधान के लिए एकजुट हैं। आतंकवाद के प्रायोजकों को जवाबदेह ठहराना होगा: PM @narendramodi
— PMO India (@PMOIndia) June 14, 2019
पूरी दुनिया को यह संदेश देने की जरूरत है कि आतंकवाद को किसी भी तरीके से उचित नहीं माना जा सकता: PM @narendramodi
— PMO India (@PMOIndia) June 14, 2019
मुझे घोषणा करते हुए प्रसन्नता है कि वर्ष 2021 को Kyrgyz Republic और भारत के बीच सांस्कृतिक और मैत्री के वर्ष के रूप में मनाने पर हम सहमत हुए हैं: PM @narendramodi
— PMO India (@PMOIndia) June 14, 2019