ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ನವದೆಹಲಿಯ ತಲ್ಕಟೋರಾ ಕ್ರೀಡಾಂಗಣದಿಂದ ಪರೀಕ್ಷಾ ಪೆ ಚರ್ಚಾ 2.0 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಸಂವಾದದಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಪ್ರಧಾನಮಂತ್ರಿಗಳ ಹಾಸ್ಯಮಯ ಮತ್ತು ನಗೆಭರಿತ ಅವಲೋಕನವನ್ನು ಆರಾಮವಾಗಿ, ನಗುತ್ತಾ ಮತ್ತು ಪದೇ ಪದೇ ಕರತಾಡನ ಮಾಡುವ ಮೂಲಕ ಆಲಿಸಿದರು.

ಈ ವರ್ಷ, ದೇಶದಾದ್ಯಂತದ ವಿದ್ಯಾರ್ಥಿಗಳು ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂವಾದಕ್ಕೆ ಧ್ವನಿ ಹೊಂದಿಸಿದ, ಅವರು  ಪರೀಕ್ಷಾ ಪೆ ಚಾರ್ಚಾ ಪುರಸಭೆಯನ್ನು ಮಿನಿ ಭಾರತ ಎಂದು ಬಣ್ಣಿಸಿದರು. ಇದು ಭವಿಷ್ಯದ ಭಾರತವನ್ನೂ ಸಂಕೇತಿಸುತ್ತದೆ ಎಂದು ಹೇಳಿದರು. ಪಾಲಕರು ಮತ್ತು ಶಿಕ್ಷಕರೂ ಈ ಕಾರ್ಯಕ್ರಮದ ಭಾಗವಾಗಿರುವುದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು.

ಶಿಕ್ಷಕರೊಬ್ಬರು ಪ್ರಧಾನಮಂತ್ರಿಯವರಿಗೆ, ತಮ್ಮ ಮಕ್ಕಳ ಪರೀಕ್ಷೆಯ ಬಗ್ಗೆ ಒತ್ತಡ ಅನುಭವಿಸುವ ಮತ್ತು ಅವಾಸ್ತವವಾದ ನಿರೀಕ್ಷೆ ಹೊಂದಿರುವ ಪಾಲಕರಿಗೆ ತಾವು ಏನು ಹೇಳಬೇಕು ಎಂದು ಕೇಳಿದರು. ಯುಪಿಎಸ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಯೊಬ್ಬರು ಸಹ ಇದೇ ಮಾದರಿಯ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿಯವರು, ಪರೀಕ್ಷೆಗಳಿಂದ ಸಂಪೂರ್ಣವಾಗಿ ಅಬಾಧಿತವಾಗುವಂತೆ ತಾವು ಯಾರೊಬ್ಬರಿಗೂ ಸಲಹೆ ಮಾಡುವುದಿಲ್ಲ, ಆದರೆ ಪರೀಕ್ಷೆಯ ಸನ್ನಿವೇಶವನ್ನು ಅರ್ಥೈಸಿಕೊಳ್ಳುವುದು ಮಹತ್ವ ಎಂದರು. ಒಂದು ಪರೀಕ್ಷೆ ಜೀವನದ ಪರೀಕ್ಷೆಯೇ ಅಥವಾ ಅದು ನಿರ್ದಿಷ್ಟ ದರ್ಜೆಯ ಅಂದರೆ 10ನೇ ತರಗತಿ ಅಥವಾ 12ನೇ ತರಗತಿಯ ಪರೀಕ್ಷೆಯೇ ಎಂದು ಸಭಿಕರನ್ನು ಪ್ರಶ್ನಿಸಿದರು. ಈ ಸಂದರ್ಭವನ್ನು ಒಮ್ಮೆ ಅರ್ಥ ಮಾಡಿಕೊಂಡರೆ, ಒತ್ತಡ ತಾನೇ ಕಡಿಮೆಯಾಗುತ್ತದೆ ಎಂದರು.

ಪ್ರಧಾನಮಂತ್ರಿಯವರು, ಪಾಲಕರು, ತಾವು ಪೂರ್ಣಗೊಳಿಸಲು ಆಗದ ಕನಸುಗಳನ್ನು ತಮ್ಮ ಮಕ್ಕಳು ಪೂರೈಸಬೇಕು ಎಂದು ನಿರೀಕ್ಷಿಸಬಾರದು ಎಂದು ಒತ್ತಿ ಹೇಳಿದರು. ಪ್ರತಿಯೊಂದು ಮಗುವಿಗೂ ತನ್ನದೇ ಆದ ಸಾಮರ್ಥ್ಯ ಮತ್ತು ಶಕ್ತಿ ಇರುತ್ತದೆ, ಪ್ರತಿಯೊಂದು ಮಗುವಿನಲ್ಲಿರುವ ಈ ಧನಾತ್ಮಕತೆಯನ್ನು ಅರ್ಥ ಮಾಡಿಕೊಳ್ಳುವುದು ಮಹತ್ವದ್ದು ಎಂದು ಹೇಳಿದರು. 

 ನಿರೀಕ್ಷೆಗಳು ಅತ್ಯಗತ್ಯ ಎಂದ ಪ್ರಧಾನಮಂತ್ರಿಯವರು, ನಾವು ಹತಾಶೆ ಮತ್ತು ಅತೃಪ್ತಿಯ ವಾತಾವರಣದಲ್ಲಿ ಜೀವಿಸಬಾರದು ಎಂದರು.

ಪಾಲಕರ ಮತ್ತು ಪಾಲಕತ್ವದ ಒತ್ತಡ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಪ್ರಧಾನಮಂತ್ರಿಯವರು, ಮಕ್ಕಳ ಸಾಮರ್ಥ್ಯ ಪ್ರದರ್ಶನ ಪಾಲಕರ ಕರೆಪತ್ರ ಆಗಬಾರದು ಎಂದರು. ಅದುವೇ ಗುರಿಯಾದರೆ, ನಿರೀಕ್ಷೆಗಳು ಅವಾಸ್ತಿಕವಾಗುತ್ತವೆ ಎಂದರು. ಪ್ರಧಾನಮಂತ್ರಿಯಾಗಿ ಮೋದಿ ಅವರು ನಿರೀಕ್ಷೆಗಳನ್ನು ಹೆಚ್ಚಿಸಿದರು ಎಂದು ಕೆಲವರು ಅಭಿಪ್ರಾಯಪಡುತ್ತಾರೆ ಎಂದು ಅವರು ಹೇಳಿದರು. 1.25 ಶತಕೋಟಿ ಭಾರತೀಯರೂ 1.25 ಶತಕೋಟಿ ಆಶೋತ್ತರ ಹೊಂದಿರಬೇಕು ಎಂದು ಹೇಳಿದರು. ಈ ಎಲ್ಲ ಆಶಯಗಳನ್ನೂ ವ್ಯಕ್ತಪಡಿಸಬೇಕು ಮತ್ತು ನಾವು ಈ ಆಶೋತ್ತರಗಳಿಗೆ ಸ್ಪಂದಿಸಲು ಸಂಘಟನಾತ್ಮಕವಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದೂ ಹೇಳಿದರು.

ಒಬ್ಬರು ಪಾಲಕರು, ತಮ್ಮ ಮಗ ಒಂದು ಕಾಲದಲ್ಲಿ ಓದಿನಲ್ಲಿ ಮುಂದಿದ್ದ, ಈಗ ಅವನು ಆನ್ ಲೈನ್ ಆಟದಲ್ಲಿ ತಲ್ಲೀನನಾಗಿದ್ದಾನೆ ಎಂದು ಆತಂಕ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದು ತಪ್ಪೆಂದು ತಾವು ಭಾವಿಸುವುದಿಲ್ಲ, ಆದರೆ, ಇದು ವಿದ್ಯಾರ್ಥಿಗಳಿಗೆ ತಕ್ಕುದಲ್ಲ ಎಂದರು. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ತಿಳಿಯುವುದು ಉತ್ತಮ ಎಂದು ತಾವು ನಂಬುವುದಾಗಿ ಹೇಳಿದ ಪ್ರಧಾನಮಂತ್ರಿಯವರು, ಆದಾಗ್ಯೂ, ಈ ತಂತ್ರಜ್ಞಾನ ಮನೋ ವಿಕಾಸಕ್ಕೆ ಕಾರಣವಾಗಬೇಕು ಎಂದರು. ಇದು ನಾವಿನ್ಯತೆಯ ಮಾರ್ಗವಾಗಬೇಕು. ಆಟವಾಡುವತಾಣ (ಪ್ಲೇ ಸ್ಟೇಷನ್) ಉತ್ತಮವೇ ಆದರೆ,  ಆಟವಾಡುವ ಮೈದಾನವನ್ನು ಯಾರೂ ಮರೆಯಬಾರದು ಎಂದರು.

 

ಸಮಯದ ನಿರ್ವಹಣೆ ಮತ್ತು ಆಯಾಸದಿಂದ ಹೊರಬರುವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಪ್ರಧಾನಮಂತ್ರಿಯವರು, 1.25 ಶತಕೋಟಿ ಭಾರತೀಯರೆಲ್ಲರೂ ತಮ್ಮ ಕುಟುಂಬವೇ ಎಂದರು. ಯಾರಾದರೂ ತಮ್ಮ ಮನೆಯ ಬಗ್ಗೆ ಚಿಂತಿಸಿ, ಕೆಲಸ ಮಾಡಿದರೆ ಅವರು ಆಯಾಸಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಪ್ರತಿ ದಿನವೂ ತಾವು ಹೊಸ ಚೈತನ್ಯದೊಂದಿಗೆ ಕಾರ್ಯ ಆರಂಭಿಸುವುದಾಗಿ ತಿಳಿಸಿದರು.  

 

ವಿದ್ಯಾರ್ಥಿಗಳು ಅಧ್ಯಯನವನ್ನು ಹೇಗೆ ಹೆಚ್ಚು ವಿನೋದಗೊಳಿಸುವುದು ಮತ್ತು ಪರೀಕ್ಷೆಗಳು ಹೇಗೆ ಒಬ್ಬನ ವ್ಯಕ್ತಿತ್ವವನ್ನು ಸುಧಾರಿಸುತ್ತವೆ ಎಂದು ಪ್ರಧಾನಮಂತ್ರಿಯವರನ್ನು ಕೇಳಿದರು. ಇದಕ್ಕೆ ಪ್ರಧಾನಮಂತ್ರಿಯವರು, ಪರೀಕ್ಷೆಗಳನ್ನು ನಿಜ ಸ್ಫೂರ್ತಿಯೊಂದಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಪರೀಕ್ಷೆಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತವೆ ಮತ್ತು ಯಾರೊಬ್ಬರೂ ಅದಕ್ಕೆ ಅಸಹ್ಯ ಪಡಬಾರದು ಎಂದರು.

 

ವಿದ್ಯಾರ್ಥಿಗಳು ಪ್ರಧಾನಮಂತ್ರಿಯವರಿಗೆ ವಿಷಯ ಮತ್ತು ವೃತ್ತಿಯ ಆಯ್ಕೆಯ ಕುರಿತಂತೆ ಸಲಹೆ ನೀಡುವಂತೆ ಕೋರಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನ ಶಕ್ತಿ ಇರುತ್ತದೆ, ಹೀಗಾಗಿ ಪ್ರತಿ ವಿದ್ಯಾರ್ಥಿಯೂ ಗಣಿತ ಮತ್ತು ವಿಜ್ಞಾನದಲ್ಲಿ ಉತ್ತಮನಾಗಿರಬೇಕು ಎಂದು ನಿರೀಕ್ಷಿಸಲು ಹೇಗೆ ಸಾಧ್ಯ ಎಂದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು, ಚಿಂತನೆ ಮತ್ತು ನಿರ್ಣಯದಲ್ಲಿ ಸ್ಪಷ್ಟತೆ ಅತ್ಯಗತ್ಯ ಎಂದು ಹೇಳಿದರು. ಹೌದು ಗಣಿತ ಮತ್ತು ವಿಜ್ಞಾನ ಅತ್ಯಗತ್ಯ ಆದರೆ, ಮೌಲ್ಯ ಪರಿಶೋಧನೆಗೆ ಇತರ ವಿಷಯಗಳೂ ಇವೆ ಎಂದೂ ತಿಳಿಸಿದರು. ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

ಕಳೆದ ವರ್ಷದ ಇದೇ ವಿಷಯ ಕುರಿತ ಟೌನ್ ಹಾಲ್ ಸಂವಾದವನ್ನು ಸ್ಮರಿಸಿದ ವಿದ್ಯಾರ್ಥಿನಿಯೊಬ್ಬರು, ಅಂದಿನಿಂದ ತಮ್ಮ ಪಾಲಕರು ಪರೀಕ್ಷೆ ಮತ್ತು ವೃತ್ತಿಯ ವಿಚಾರ ಬಂದಾಗ ಇನ್ನೂ ಹೆಚ್ಚು ನಿರಾತಂಕವಾಗಿದ್ದಾರೆ ಎಂದರು. ಪಾಲಕರ ಧನಾತ್ಮಕ ಪ್ರವೃತ್ತಿ ಮಕ್ಕಳ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

 

ಮಕ್ಕಳು  ಪ್ರಧಾನಮಂತ್ರಿಯವರೊಂದಿಗೆ ಮಕ್ಕಳನ್ನು ಉತ್ತೇಜಿಸುವ ಅಗತ್ಯ ಕುರಿತಂತೆ ಮಾತನಾಡಿದರು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು, ಸ್ಪರ್ಧೆ ಯಾವಾಗಲೂ ಬೇರೆಯವರೊಂದಿಗೆ ಇರಬಾರದು ಬದಲಾಗಿ ನಮ್ಮ ದಾಖಲೆಯ ಮೇಲೆ ಇರಬೇಕೆಂದರು. ಯಾರು ತಮ್ಮ ಹಿಂದಿನ ದಾಖಲೆಯ ಮೇಲೆ ಸ್ಪರ್ಧೆ ಮಾಡುತ್ತಾರೋ ಆಗ ನಿರಾಶಾವಾದ ಮತ್ತು ನೇತ್ಯಾತ್ಮಕತೆ ಸುಲಭವಾಗಿ ಸೋಲುತ್ತದೆ ಎಂದರು.

 

ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು ಮತ್ತು ಪರೀಕ್ಷೆಗಳು ಕಲಿತದ್ದನ್ನು ಬರೆಯುವುದಕ್ಕೆ ಸೀಮಿತವಾಗಬಾರದು ಜೊತೆಗೆ ವಿದ್ಯಾರ್ಥಿಗಳು ಏನು ಕಲಿತಿದ್ದಾರೆ ಎಂಬುದರ ಪ್ರದರ್ಶನವಾಗಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು, ನಮ್ಮ ಕಲಿಕೆ ಕೇವಲ ಪರೀಕ್ಷೆಗಷ್ಟೇ ಇರಬಾರದು. ನಮ್ಮ ಶಿಕ್ಷಣ ನಮ್ಮ ಬದುಕಿನ ವಿವಿಧ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಬೇಕು ಎಂದೂ ತಿಳಿಸಿದರು.

ಖಿನ್ನತೆಯಂಥ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಮ್ಮಂಥ ರಾಷ್ಟ್ರದಲ್ಲಿ ಈ ವಿಷಯ ಆತಂಕಕಾರಿ ಎಂದರು. ಭಾರತೀಯ ಸಂಸ್ಕೃತಿ ಇದನ್ನು ನಿಭಾಯಿಸುವ ವ್ಯವಸ್ಥೆಯಾಗಿದೆ ಎಂದರು. ನಾವು ಖಿನ್ನತೆ ಮತ್ತು ಮಾನಸಿಕ ಆರೋಗ್ಯದ ಕುರಿತಂತೆ ಹೆಚ್ಚು ಮುಕ್ತವಾಗಿ ಮಾತನಾಡುವುದೇ ಉತ್ತಮ ಎಂದು ಹೇಳಿದರು.  

 

ಯಾವುದೇ ವ್ಯಕ್ತಿ ಹಠಾತ್ ಖಿನ್ನತೆಗೆ ಒಳಗಾಗುವುದಿಲ್ಲ ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಿದ್ದಾನೆ ಎಂಬ ಲಕ್ಷಣಗಳು ಕಾಣುತ್ತದೆ ಎಂದರು. ಈ ಲಕ್ಷಣಗಳು ಕಂಡಾಗ ಅದನ್ನು ಉಪೇಕ್ಷಿಸುವುದು ಉತ್ತಮ ಕಲ್ಪನೆಯಲ್ಲ ಎಂದರು. ಇದಕ್ಕೆ ಪ್ರತಿಯಾಗಿ ನಾವು ಈ ಕುರಿತು ಮಾತನಾಡಬೇಕು ಎಂದು ಪ್ರಧಾನಮಂತ್ರಿಗಳು ಹೇಳಿದರು. ಆಪ್ತ ಸಮಾಲೋಚನೆ ಇದಕ್ಕೆ ಸಹಾಯವಾಗಬಹುದು ಎಂದು ಅವರು ಹೇಳಿದರು, ಏಕೆಂದರೆ ಇದು ಒಬ್ಬರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಸಹಾಯ ಮಾಡುತ್ತದೆ ಎಂದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage