22 lakh houses to be constructed in UP, 21.5 already approved, 14 lakh families already got their housing unit
Guru Saheb’s life and message inspires us to take on the challenges while following the path of service and truth: PM Modi
Uttar Pradesh is among the states that are moving the fastest on building houses for the poor: PM Modi
Aatmnirbhar Bharat is directly linked to the self-confidence of the country’s citizens and a house of one’s own enhances this self-confidence manifold: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ವಸತಿ ಯೋಜನೆ - ಗ್ರಾಮೀಣ ಅಡಿಯಲ್ಲಿ ಉತ್ತರ ಪ್ರದೇಶದ 6 ಲಕ್ಷ ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ಬಿಡುಗಡೆ ಮಾಡಿದರು. ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು, ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿಯವರು ಫಲಾನುಭವಿಗಳಿಗೆ ಶುಭ ಕೋರಿ, ಪ್ರಕಾಶ್ ಪೂರಬ್ ಸಂದರ್ಭದಲ್ಲಿ ಶುಭಾಶಯ ಸಲ್ಲಿಸಿದ್ದರು. ಶ್ರೀ ಮೋದಿ ಅವರು ಗುರು ಗೋವಿಂದ್ ಸಿಂಗ್ ಜೀ ಅವರಿಗೆ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ನಮನ ಸಲ್ಲಿಸಿದರು. ಈ ಪವಿತ್ರ ಸಂದರ್ಭದಲ್ಲಿ ಅವರು ದೇಶಕ್ಕೆ ಶುಭ ಕೋರಿದರು. ಗುರು ಸಾಹೀಬ್ ತಮಗೆ ಬಹಳ ಕೃಪೆ ತೋರಿದ್ದು, ಸೇವೆ ಮಾಡಲು ತಮಗೆ ಅಪಾರ ಅವಕಾಶ ನೀಡಿರುವುದಾಗಿ ತಿಳಿಸಿದರು. ಗುರು ಸಾಹೀಬ್ ಅವರ ಜೀವನ ಮತ್ತು ಸಂದೇಶ ಸತ್ಯ ಮತ್ತು ಸೇವೆಯ ಮಾರ್ಗದಲ್ಲಿ ನಡೆದು ಸವಾಲುಗಳನ್ನು ಎದುರಿಸಲು ಸ್ಪೂರ್ತಿ ನೀಡುತ್ತದೆ ಎಂದರು. ಈ ಮಟ್ಟದ ಶಕ್ತಿ ಮತ್ತು ಧೈರ್ಯವು ಸೇವೆ ಮತ್ತು ಸತ್ಯದ ಮನೋಭಾವದಿಂದ ಹೊರಹೊಮ್ಮುತ್ತದೆ ಮತ್ತು ದೇಶವು ಈ ಹಾದಿಯಲ್ಲಿ ಸಾಗಬೇಕು ಎಂದು ಗುರು ಗೋವಿಂದ್ ಸಿಂಗ್ ಜಿ ತೋರಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಬಡವರ, ಶೋಷಿತರ ಮತ್ತು ದುರ್ಬಲರ ಬದುಕನ್ನು ಪರಿವರ್ತಿಸಲು ಅಭೂತಪೂರ್ವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಐದು ವರ್ಷಗಳ ಹಿಂದೆ ಆಗ್ರಾದಿಂದ ಪ್ರಧಾನಮಂತ್ರಿ ವಸತಿ ಯೋಜನೆ ಆರಂಭಿಸಿದ್ದನ್ನು ಅವರು ಸ್ಮರಿಸಿದರು. ಈ ಯೋಜನೆ ಭಾರತದ ಗ್ರಾಮಗಳ ಸ್ವರೂಪವನ್ನೇ ಬದಲಾಯಿಸುತ್ತಿದೆ ಎಂದರು. ಈ ಯೋಜನೆ ಲಕ್ಷಾಂತರ ಜನರ ನಂಬಿಕೆಯೊಂದಿಗೆ ಸಂಪರ್ಕಿತವಾಗಿದ್ದು, ಬಡವರಲ್ಲೇ ಕಡುಬಡವರಿಗೆ ತಾವೂ ಮನೆಯೊಡೆಯರಾಗಬಹುದು ಎಂಬ ವಿಶ್ವಾಸ ಮೂಡಿಸುತ್ತಿದೆ ಎಂದರು.

ಬಡವರಿಗೆ ತ್ವರಿತವಾಗಿ ಮನಗಳನ್ನೂ ನಿರ್ಮಿಸುತ್ತಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶವೂ ಒಂದಾಗಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಇಂದು ರಾಜ್ಯದ 6 ಲಕ್ಷ ಕುಟುಂಬಗಳು ಒಟ್ಟು 2600 ಕೋಟಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದಾರೆ ಎಂದು ತಿಳಿಸಿದರು. ಈ 6 ಲಕ್ಷ ಕುಟುಂಬಗಳ ಪೈಕಿ 5 ಲಕ್ಷ ಕುಟುಂಬಗಳು ಪ್ರಥಮ ಕಂತು ಪಡೆಯುತ್ತಿವೆ ಅಂದರೆ, 5 ಲಕ್ಷ ಕುಟುಂಬಗಳ ಕಾಯುವಿಕೆ ಅಂತ್ಯವಾಗಿದೆ. ಅದೇ ರೀತಿ 80 ಸಾವಿರ ಕುಟುಂಬಗಳು ಎರಡನೇ ಕಂತು ಪಡೆದಿವೆ ಅಂದರೆ, ಮುಂದಿನ ಚಳಿಗಾಲದ ಹೊತ್ತಿಗೆ ಅವರು ತಮ್ಮ ಸ್ವಂತ ಮನೆ ಪಡೆಯುತ್ತಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಆತ್ಮನಿರ್ಭರ ಭಾರತವನ್ನು ನೇರವಾಗಿ ದೇಶದ ನಾಗರಿಕರ ಆತ್ಮವಿಶ್ವಾಸದೊಂದಿಗೆ ನೇರವಾಗಿ ಸಂಪರ್ಕಿಸಲಾಗಿದೆ ಮತ್ತು ಒಬ್ಬರ ಸ್ವಂತ ಮನೆ ಅವರ ಆತ್ನವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸುತ್ತದೆ ಎಂದರು. ಸ್ವಯಂ ಮಾಲಿಕತ್ವದ ಮನೆ ಜೀವನಕ್ಕೆ ಭರವಸೆ ಮೂಡಿಸುತ್ತದೆ ಮತ್ತು ಬಡತನದಿಂದ ಹೊರಬರುವ ವಿಶ್ವಾಸ ಮೂಡಿಸುತ್ತದೆ ಎಂದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಮಗೆ ಸರ್ಕಾರ ಮನೆ ಕಟ್ಟಿಕೊಡುಲು ಯಾವುದೇ ರೀತಿ ನೆರವಾಗುತ್ತದೆ ಎಂಬ ಯಾವ ವಿಶ್ವಾಸವೂ ಬಡವರಿಗೆ ಇರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಿಂದಿನ ಯೋಜನೆಗಳಲ್ಲಿ ನಿರ್ಮಿಸಲಾಗುತ್ತಿದ್ದ ಮನೆಗಳು ಗುಣಮಟ್ಟದಿಂದ ಕೂಡಿರುತ್ತಿರಲಿಲ್ಲ. ಬಡವರು ಕೆಟ್ಟ ನೀತಿಗಳಿಂದ ನರಳಾಡುತ್ತಿದ್ದರು ಎಂದರು. ಈ ದುರ್ದೈವವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ಬಡ ಕುಟುಂಬಗಳಿಗೆ 75ನೇ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ವಸತಿ ಕಲ್ಪಿಸಲು ಪ್ರಧಾನಮಂತ್ರಿ ವಸತಿ ಯೋಜನೆ ಆರಂಭಿಸಲಾಯಿತು ಎಂದರು. 2 ಕೋಟಿ ಮನೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾಗಿದ್ದು, ಕೇಂದ್ರ ಸರ್ಕಾರದ 1.5 ಲಕ್ಷ ಕೋಟಿ ಕೊಡುಗೆಯೊಂದಿಗೆ ಪ್ರಧಾನಮಂತ್ರಿ ವಸತಿ ಯೋಜನೆಯ ಪಾಲು 1.25 ಕೋಟಿ ಆಗಿದೆ ಎಂದರು. ಹಿಂದಿನ ರಾಜ್ಯ ಸರ್ಕಾರಗಳ ಸ್ಪಂದನೆಯ ಕೊರತೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಉತ್ತರ ಪ್ರದೇಶದಲ್ಲಿ 22 ಲಕ್ಷ ಗ್ರಾಮೀಣ ವಸತಿ ನಿರ್ಮಿಸಲಾಗಿದ್ದು, ಈ ಪೈಕಿ 21.4 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 14.5 ಲಕ್ಷ ಕುಟುಂಬಗಳು ಪ್ರಸಕ್ತ ಸರ್ಕಾರದ ಅಡಿಯಲ್ಲೇ ಮನೆಗಳನ್ನು ಪಡೆದುಕೊಂಡಿವೆ ಎಂದರು.

ಮೊದಲಿಗೆ ಹಿಂದಿನ ಕೆಟ್ಟ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಮನೆ ಹೊಂದುವ ಭರವಸೆಯನ್ನು ಕಳೆದುಕೊಂಡಿರುವ ಬಡ ಕುಟುಂಬಗಳಿಗೆ ಆದ್ಯತೆ ನೀಡಬೇಕು, ಎರಡನೆಯದು, ಹಂಚಿಕೆಯಲ್ಲಿ ಪಾರದರ್ಶಕತೆ, ಮೂರನೆಯದು, ಮಾಲೀಕತ್ವವನ್ನು ಮಹಿಳೆಯರಿಗೆ ನೀಡಬೇಕು, ನಾಲ್ಕನೆಯದಾಗಿ, ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ಮಾಡಬೇಕು ಮತ್ತು ಅಂತಿಮವಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮನೆ ಹೊಂದಿರಬೇಕು ಎಂದು ಎಂದು ಪ್ರಧಾನಮಂತ್ರಿ ಹೇಳಿದರು. ಮನೆ ಹೊಂದುವ ಭರವಸೆಯೇ ಇಲ್ಲದಿದ್ದ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ, ಸ್ಥಳೀಯ ಕಾರ್ಮಿಕರಿಗೆ, ಸಣ್ಣ ರೈತರಿಗೆ ಮತ್ತು ಭೂರಹಿತ ಕಾರ್ಮಿಕರಿಗೆ ವಸತಿ ಯೋಜನೆ ಪ್ರಯೋಜನಕಾರಿಯಾಗಿದೆ ಎಂದರು. ಯೋಜನೆಯಲ್ಲಿ ಮಹಿಳಾ ಸಶಕ್ತೀಕರಣದ ಅಂಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಮನೆಗಳು ಬಹುತೇಕ ಕುಟುಂಬದ ಮಹಿಳೆಯರ ಹೆಸರಿನಲ್ಲೇ ಇರುತ್ತವೆ ಎಂದರು. ಭೂರಹಿತ ಕುಟುಂಬಗಳು ನೆಲದ ದಸ್ತಾವೇಜು ಪಡೆಯಲಿದ್ದು, ಭ್ರಷ್ಟಾಚಾರ ತಡೆಯಲು ಎಲ್ಲ ಹಣವನ್ನೂ ಫಲಾನುಭವಿಗಳ ಖಾತೆಗೇ ನೇರವಾಗಿ ವರ್ಗಾಯಿಲಾಗುತ್ತದೆ ಎಂದರು.

ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳ ಮೂಲಸೌಕರ್ಯಗಳ ನಡುವಿನ ಅಂತರವನ್ನು ತಗ್ಗಿಸುವ ಪ್ರಯತ್ನವಾಗಿದ್ದು, ಗ್ರಾಮೀಣ ಜನರ ಜೀವನವನ್ನು ನಗರ ಜನರಂತೆಯೇ ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆದ್ದರಿಂದ ಮೂಲ ಸೌಲಭ್ಯಗಳಾದ ಶೌಚಾಲಯ, ಬೆಳಕು, ನೀರು ಮತ್ತು ಅನಿಲ ಸಂಪರ್ಕವನ್ನು ಪ್ರಧಾನಮಂತ್ರಿ ವಸತಿ ಯೋಜನೆಗೆ ಸೇರಿಸಲಾಗುತ್ತದೆ. ಮೂಲ ಸೌಕರ್ಯಗಳಿಗಾಗಿ ಬಡವರು ಓಡಾಡಬಾರದು ಎಂಬುದು ಇದರ ಉದ್ದೇಶ ಎಂದರು.

ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆ ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯುಪಿ ಇದನ್ನು ಅನುಷ್ಠಾನ ಮಾಡಿದ ಮುಂಚೂಣಿಯ ರಾಜ್ಯವಾಗಿದೆ ಎಂದೂ ತಿಳಿಸಿದರು. ಈ ಯೋಜನೆ ಅಡಿಯಲ್ಲಿ ಗ್ರಾಮಸ್ಥರು ಭೂಮಿ ಮತ್ತು ಮನೆಯ ಮಾಲೀಕತ್ವದ ಪತ್ರಗಳನ್ನು ಪಡೆದುಕೊಳ್ಳಲಿದ್ದಾರೆ. ಡ್ರೋನ್ ಗಳನ್ನು ಉತ್ತರ ಪ್ರದೇಶದ ಸಾವಿರಾರು ಗ್ರಾಮಗಳ ಸಮೀಕ್ಷೆ, ನಕ್ಷೆ ತಯಾರಿಕೆಗೆ ಬಳಸಲಾಗುತ್ತಿದೆ, ಇದರಿಂದ ಜನರ ಆಸ್ತಿ ಸರ್ಕಾರದಲ್ಲಿ ನೋಂದಣಿಯಾಗುತ್ತಿದ್ದು, ಭೂ ವಿವಾದಗಳು ಕೊನೆಯಾಗುತ್ತಿವೆ ಎಂದರು. ಈ ಯೋಜನೆಯ ದೊಡ್ಡ ಲಾಭವೆಂದರೆ ಗ್ರಾಮಸ್ಥರು ಈ ಮನೆಗಳನ್ನು ಅಡಮಾನ ಇಡುವುದರ ಮೂಲಕ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ಗ್ರಾಮೀಣ ಆಸ್ತಿಯ ಬೆಲೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ರಾಜ್ಯದ 8.5 ಸಾವಿರ ಹಳ್ಳಿಗಳಲ್ಲಿ ಈ ಕೆಲಸ ಮುಗಿದಿದ್ದು, ಸ್ಥಳೀಯವಾಗಿ ‘ಘರೋನಿ’ ಎಂದು ಕರೆಯಲಾಗುವ ಸಮೀಕ್ಷೆಯ ನಂತರ ಜನರು ಡಿಜಿಟಲ್ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಈಗಾಗಲೇ 51 ಸಾವಿರಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು

ಅನೇಕ ಯೋಜನೆಗಳು ಹಳ್ಳಿಗಳನ್ನು ತಲುಪುತ್ತಿರುವಾಗ, ಸೌಲಭ್ಯಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯೂ ವೇಗವನ್ನು ಪಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ರಸ್ತೆಗಳು ಗ್ರಾಮದ ಜನರ ಜೀವನವನ್ನು ಸುಗಮಗೊಳಿಸುತ್ತಿವೆ ಎಂದು ಅವರು ಹೇಳಿದರು. ಆಪ್ಟಿಕಲ್ ಫೈಬರ್ ಮೂಲಕ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ವೇಗವಾಗಿ ಇಂಟರ್ನೆಟ್ ಸೌಲಭ್ಯ ಒದಗಿಸುವ ಕೆಲಸ ನಡೆಯುತ್ತಿದೆ ಎಂದರು. ಈ ಯೋಜನೆಯು ಗ್ರಾಮಸ್ಥರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕರೋನಾ ಅವಧಿಯಲ್ಲಿ ಊರಿಗೆ ಮರಳಿದ ವಲಸೆ ಕಾರ್ಮಿಕರನ್ನು ಬೆಂಬಲಿಸಲು ಗರಿಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಮೂಲಕ 10 ಕೋಟಿ ಉದ್ಯೋಗಗಳನ್ನು ಸೃಜಿಸುವ ಮೂಲಕ ಉತ್ತರ ಪ್ರದೇಶ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಇದು ಗ್ರಾಮಸ್ಥರ ಜೀವನ ಸುಗಮಗೊಳಿಸಿದೆ ಎಂದರು. ಉತ್ತರ ಪ್ರದೇಶಕ್ಕೆ ಹೊಸ ಗುರುತನ್ನು ನೀಡಿರುವ ಆಯುಷ್ಮಾನ್ ಭಾರತ ಯೋಜನೆ, ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ, ಉಜಾಲಾ ಯೋಜನೆಯಂತಹ ಜೀವನ ಸುಗಮಗೊಳಿಸಲು ಸುಧಾರಿಸುವ ಹಲವಾರು ಉಪಕ್ರಮಗಳನ್ನು ಪಟ್ಟಿ ಮಾಡಿದರು. ಎಕ್ಸ್‌ ಪ್ರೆಸ್‌ ಮಾರ್ಗದಂತಹ ಮೂಲಸೌಕರ್ಯ ಯೋಜನೆಗಳು ಮತ್ತು ಉತ್ತರ ಪ್ರದೇಶದಲ್ಲಿ ಏಮ್ಸ್ ನಂತಹ ಯೋಜನೆ ಅನುಷ್ಠಾನದ ಪಟ್ಟಿ ಮಾಡಿದರು ಮತ್ತು ಇದು ಯುಪಿಯಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇಂದು ಯುಪಿಯಲ್ಲಿ ಹೂಡಿಕೆ ಮಾಡಲು ಅನೇಕ ದೊಡ್ಡ ಕಂಪನಿಗಳು ಬರಲು ಇದು ಕಾರಣವಾಗಿದೆ ಎಂದು ಅವರು ಹೇಳಿದರು. ಸ್ಥಳೀಯ ಕುಶಲಕರ್ಮಿಗಳಿಗೆ ಅನುಕೂಲವಾಗುತ್ತಿರುವ 'ಒಂದು ಜಿಲ್ಲೆ ಒಂದು ಉತ್ಪನ್ನ' ಮೂಲಕ ಸಣ್ಣ ಕಂಪನಿಗಳಿಗೆ ಹೊಸಮಾರ್ಗಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi