Quote"ವೆಂಕಯ್ಯ ಜೀ ಅವರು ಯಾವ ಕರ್ತವ್ಯವನ್ನು ಹೊಂದಿದ್ದರು, ಅವರು ಅದನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರು ಮತ್ತು ಸುಲಭವಾಗಿ ಆ ಪಾತ್ರವನ್ನು ಅಳವಡಿಸಿಕೊಂಡರು: ಪ್ರಧಾನಿ ಮೋದಿ "
Quote"ಶ್ರೀ ವೆಂಕಯ್ಯ ನಾಯ್ಡು ಅವರು ಎಲ್ಲಾ ವಿಭಾಗಗಳಲ್ಲೂ ಜನರೊಂದಿಗೆ ತಾಳ್ಮೆಯಿಂದ ವ್ಯವಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಶಿಸ್ತುಬದ್ದರಾಗಿದ್ದರೆ : ಪ್ರಧಾನಿ ಮೋದಿ "
Quoteವೆಂಕಯ್ಯ ಜಿ ಯಾವಾಗಲೂ ಜವಾಬ್ದಾರಿಯುತ ದಾರ್ಶನಿಕ ನಾಯಕತ್ವವನ್ನು ಒದಗಿಸುತ್ತಾರೆ . ನಿಯೋಜಿಸಲಾದ ಕೆಲಸಕ್ಕೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅವರು ಅತ್ಯುತ್ತಮ ತಜ್ಞರನ್ನು ಪಡೆಯುತ್ತಾರೆ: ಪ್ರಧಾನಿ
Quote"ವೆಂಕಯ್ಯ ಜಿ ಹೃದಯದಿಂದ ಒಬ್ಬ ರೈತ . ರೈತರು ಮತ್ತು ಕೃಷಿಯ ಕಲ್ಯಾಣ ಬಗ್ಗೆ ಅವರು ಭಾವೋದ್ರಿಕ್ತರಾಗಿದ್ದಾರೆ: ಪ್ರಧಾನಿ ಮೋದಿ "
Quote"ವೆಂಕಯ್ಯ ನಾಯ್ಡು ಜಿ ಯ ಪ್ರಯತ್ನದ ಕಾರಣದಿಂದ ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಕಾರಣವಾಯಿತು: ಪ್ರಧಾನಿ ಮೋದಿ "

ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಕಚೇರಿಯಲ್ಲಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ “ಕಚೇರಿಯಲ್ಲಿ ಒಂದು ವರ್ಷ – ಮುಂದೆ ಹೋಗುವ, ಮುನ್ನಡೆಯುವ” ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಪುಸ್ತಕದ ಮೊದಲ ಪ್ರತಿಯನ್ನು ಪ್ರಧಾನಮಂತ್ರಿ ಅವರು ಭಾರತದ ಉಪರಾಷ್ಟ್ರಪತಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಂತ್ರಿ ಅವರು, ಶ್ರೀ ವೆಂಕಯ್ಯ ನಾಯ್ಡು ಅವರ ಜೊತೆ ಬಹಳ ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು ಎಂದರು. ಶ್ರೀ ನಾಯ್ಡು ಅವರು ಉಳಿದೆಲ್ಲಕ್ಕಿಂತ ಜವಾಬ್ದಾರಿಗೆ ( ಕಾರ್ಯಭಾರ್ ) ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.

|

ಶ್ರೀ ವೆಂಕಯ್ಯ ನಾಯ್ಡು ಅವರು ತಮ್ಮ ಪಾಲಿಗೆ ಬಂದ ಎಲ್ಲ ಕೆಲಸಗಳನ್ನೂ ಅತ್ಯಂತ ಶ್ರದ್ಧೆಯಿಂದ ಮತ್ತು ಅತ್ಯಂತ ಸರಳವಾಗಿ ಮಾಡುತ್ತಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ 10 ವರ್ಷ ಕಾಲ ಹಾಗೂ 40 ವರ್ಷ ರಾಜ್ಯ ಮತ್ತು ದೇಶದ ಸೇವೆಯಲ್ಲಿ, ಹೀಗೆ ಒಟ್ಟಾಗಿ ಸುದೀರ್ಘ 50 ವರ್ಷಗಳ ಸಾರ್ವಜನಿಕ ಜೀವನ ಅವರು ಕಂಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಅವರು ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸ್ವತಃ ಬೆರೆಯುವ ಪ್ರಯತ್ನದಲ್ಲಿರುತ್ತಿದ್ದರು, ಅಲ್ಲದೆ ಅತ್ಯಂತ ಶಿಸ್ತಿನಲ್ಲಿ ಕೂಡಾ ಇರುತ್ತಿದ್ದರು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಅವರು ಯಾವಾಗೆಲ್ಲಾ ಜವಾಬ್ದಾರಿ ಪಡೆಯುತ್ತಿದ್ದರೋ ಆಗೆಲ್ಲಾ ಅತ್ಯುತ್ತಮ ಭವಿಷ್ಯದ ಸಂಕಲ್ಪದ ನಾಯಕತ್ವ ನೀಡುತ್ತಿದ್ದರು. ಅವರಿಗೆ ನಿಯುಕ್ತಿ ಮಾಡಲಾದ ಕೆಲಸಕ್ಕೆ ನ್ಯಾಯ ತುಂಬಲು ಅವರಿಗೆ ಅತ್ಯುತ್ತಮ ಪರಿಣಿತರೇ ಸಿಗುತ್ತಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.

|

ಪೂರ್ವ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಶ್ರೀ ವೆಂಕಯ್ಯ ನಾಯ್ಡು ಅವರನ್ನು ಸಂಪುಟಕ್ಕೆ ಸೇರಿಸಬೇಕು ಎಂದ ಬಯಸಿದಾಗ, ಶ್ರೀ ವೆಂಕಯ್ಯ ಜೀ ಅವರು ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೀಡುವಂತೆ ವಿನಂತಿಸಿಕೊಂಡಿದ್ದರು. ಶ್ರೀ ವೆಂಕಯ್ಯಜಿ ಅವರು ಹೃದಯದಲ್ಲಿ ಕೃಷಿಕರಾಗಿದ್ದಾರೆ, ಕೃಷಿ ಹಾಗೂ ಕೃಷಿಕರ ಕಲ್ಯಾಣದಲ್ಲಿ ಆಸಕ್ತಿಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು.

|

ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಪ್ರಾರಂಭವಾಗಲು ಶ್ರೀ ವೆಂಕಯ್ಯ ನಾಯ್ಡು ಅವರ ಪ್ರಯತ್ನಗಳೇ ಕಾರಣ. ರಾಜಕಾರಣದಲ್ಲಿ ಮಾತುಕತೆಯ ವಿಷಯ ಕೇವಲ ರೈಲು ನಿಲುಗಡೆಯ ಬಗ್ಗೆ ಮಾತ್ರ ಕೇಂದ್ರೀಕೃತವಾಗಿದ್ದಾಗ, ನಾಯ್ಡು ಜೀ ಅವರು ಜನನಾಯಕರು ರಸ್ತೆ ಮತ್ತು ಇತರ ರೀತಿಯ ಸಂಪರ್ಕಗಳ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿದರು ಎಂದು ಪ್ರಧಾನಮಂತ್ರಿ ಹೇಳಿದರು.

|

ಇಂಗ್ಲೀಷ್ ಆಗಲಿ ಅಥವಾ ತೆಲುಗು ಆಗಿರಲಿ, ಉಪರಾಷ್ಟ್ರಪತಿ ಅವರ ಮಾತುಗಾರಿಕೆಯನ್ನು ಮತ್ತು ಭಾಷೆಯಲ್ಲಿ ಶಬ್ದಗಳನ್ನು ಬಳಸುವ ವಿಧಾನವನ್ನು ಮೆಚ್ಚಲೇಬೇಕು ಎಂದು ಪ್ರಧಾನಮಂತ್ರಿ ಪ್ರಶಂಸಿಸಿದರು. ತಮ್ಮ ಕಚೇರಿಯಲ್ಲಿ ಒಂದು ವರ್ಷ ಪೂರ್ತಿಯಾದಾಗ, ಸಂಸತ್ತಿನ ಒಳಗೂ ಹೊರಗೂ ಸೇರಿ ಮಾಡಿದ್ದ ಸಮೃದ್ಧ ಕಾರ್ಯ-ಸಾಧನೆಗಳ ವರದಿ ಪತ್ರ ಕೂಡಾ ಅವರು ಬಿಡುಗಡೆ ಮಾಡಿದ್ದಾರೆ ಎಂಬುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

|

Click here to read full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Operation Sindoor: A fitting blow to Pakistan, the global epicentre of terror

Media Coverage

Operation Sindoor: A fitting blow to Pakistan, the global epicentre of terror
NM on the go

Nm on the go

Always be the first to hear from the PM. Get the App Now!
...
Haryana Chief Minister meets Prime Minister
May 21, 2025

The Chief Minister of Haryana, Shri Nayab Singh Saini met the Prime Minister, Shri Narendra Modi today.

The Prime Minister’s Office handle posted on X:

“Chief Minister of Haryana, Shri @NayabSainiBJP, met Prime Minister @narendramodi. @cmohry”