PM Modi, PM Key recognize need for greater economic engagement to effectively respond to growing uncertainties in global economy
Food processing, dairy, agriculture & related areas in their supply chain are areas of particular potential for Ind-NZ cooperation: PM
India and New Zealand agree to work closely towards an early conclusion of balanced & mutually beneficial CECA
Ind-NZ to strengthen security & intelligence cooperation against terror & radicalization including in cyber security
Thankful for New Zealand’s support to India joining a reformed UN Security Council as a permanent member: PM Modi
New Zealand backs India’s membership of the Nuclear Suppliers Group

ಘನತೆವೆತ್ತ ಪ್ರಧಾನಿ ಜಾನ್ ಕಿ ಅವರೇ,

ನಿಯೋಗದ ಸದಸ್ಯರೇ,

ಮಾಧ್ಯಮದ ಸದಸ್ಯರೇ

 

ಘನತೆವೆತ್ತ ಕಿ ಅವರನ್ನು ಭಾರತಕ್ಕೆ ಸ್ವಾಗತಿಸಲು ನಾನು ಹರ್ಷಿಸುತ್ತೇನೆ.

ಘನತೆವೆತ್ತರೆ, ನ್ಯೂಜಿಲ್ಯಾಂಡ್ ಸಂಸತ್ತು ಈಗ ನಿಗದಿತವಾಗಿ ದೀಪಾವಳಿ ಆಚರಿಸುತ್ತದೆ ಎಂದು ನಾನು ಕೇಳಿದ್ದೇನೆ ಮತ್ತು ನೀವೂ ಕೂಡ ಇಂಥ ಹಲವು ಹಬ್ಬಗಳಲ್ಲಿ ಪಾಲ್ಗೊಂಡಿದ್ದೀರಿ. ಹೀಗಾಗಿ ತಮ್ಮನ್ನು ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಬರಮಾಡಿಕೊಳ್ಳಲು ನಾನು ಹರ್ಷಿಸುತ್ತೇನೆ.

ಸ್ನೇಹಿತರೆ,

ಪ್ರಧಾನಮಂತ್ರಿ ಕಿ ಮತ್ತು ನಾನು ಬಹುಪಕ್ಷೀಯ ಶೃಂಗಸಭೆಗಳ ಸಂದರ್ಭದಲ್ಲಿ ಹಲವು ಬಾರಿ ಭೇಟಿ ಮಾಡಿದ್ದೇವೆ ಮತ್ತು ಇಂದು, ದ್ವಿಪಕ್ಷೀಯ ಭೇಟಿಯಲ್ಲಿ ಘನತೆವೆತ್ತ ಕಿ ಅವರನ್ನು ಭಾರತದಲ್ಲಿ ಸ್ವಾಗತಿಸುವುದು ನಮಗೆ ಗೌರವದ ವಿಷಯವಾಗಿದೆ.

ಇನ್ನು ಸ್ವಲ್ಪ ಹೊತ್ತಿನಲ್ಲಿಯೇ, ನಮ್ಮ ಕ್ರಿಕೆಟ್ ತಂಡಗಳು ರಾಂಚಿಯ ಮೈದಾನದಲ್ಲಿ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೆಣಸಲಿವೆ. ಹಲವು ಮಾರ್ಗಗಳಲ್ಲಿ ಕೆಲವು ಕ್ರಿಕೆಟ್ ಪರಿಭಾಷೆ ನಮ್ಮ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯಲ್ಲೂ ನಂಟು ಹೊಂದಿದೆ, ನಾವು ಬ್ಯಾಟಿಂಗ್ ಪಿಚ್ ನಲ್ಲಿ ಲಾಂಗ್ ಆಫ್ ನಿಂದ ಹೊಸ ರಕ್ಷಣೆಯತ್ತ ಸಾಗಿದ್ದೇವೆ. ರಕ್ಷಣಾತ್ಮಕ ಆಟ ಈಗ ಆಕ್ರಮಣಕಾರಿ ಬ್ಯಾಟಿಂಗ್ ಗೆ ದಾರಿ ಮಾಡಿಕೊಟ್ಟಿದೆ.

ಸ್ನೇಹಿತರೆ,

ಪ್ರಧಾನಮಂತ್ರಿ ಕಿ ಮತ್ತು ನಾನು, ನಮ್ಮ ದ್ವಿಪಕ್ಷೀಯ ಕಾರ್ಯಕ್ರಮಗಳು ಮತ್ತು ಬಹುಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಿಗಳಲ್ಲಿ ಫಲಪ್ರದವಾದ ಮತ್ತು ಸವಿವರವಾದ ಮಾತುಕತೆಯನ್ನು ನಡೆಸಿದ್ದೇವೆ.

ವಾಣಿಜ್ಯ ಮತ್ತು ಹೂಡಿಕೆ ಬಾಂಧವ್ಯ ನಮ್ಮ ಮಾತುಕತೆಯ ಪ್ರಮುಖ ಕ್ಷೇತ್ರವಾಗಿತ್ತು. ನಾವಿಬ್ಬರೂ ಜಾಗತಿಕ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಅಸ್ಥಿರತೆಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಆರ್ಥಿಕ ಕಾರ್ಯಕ್ರಮಗಳನ್ನು ಹೆಚ್ಚಿಸುವ ಅಗತ್ಯವನ್ನು ನಾವು ಗುರುತಿಸಿದೆವು ಮತ್ತು ನಮ್ಮ ಪಾಲುದಾರಿಕೆಯಲ್ಲಿ ವಾಣಿಜ್ಯ ಮತ್ತು ವಾಣಿಜ್ಯ ಬಾಂಧವ್ಯದ ವಿಸ್ತರಣೆಯನ್ನು ಮುಂದುವರಿಸುವುದು ನಮ್ಮ ಆದ್ಯತೆಯ ವಿಚಾರಗಳಲ್ಲಿ ಒಂದಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಪ್ರಧಾನಮಂತ್ರಿ ಕಿ ಅವರೊಂದಿಗೆ ಬಂದಿರುವ ದೊಡ್ಡ ವಾಣಿಜ್ಯ ನಿಯೋಗವು ಭಾರತದ ಯಶೋಗಾಥೆಯಲ್ಲಿನ ಹೂಡಿಕೆಯ ಅವಕಾಶಗಳ ಪ್ರಥಮ ನೋಟವನ್ನೇ ನೋಡುವುದಿಲ್ಲ. ಅವರ ಸಂವಾದವು ಸಹ ಎರಡು ರಾಷ್ಟ್ರಗಳ ನಡುವೆ ಹೊಸ ವಾಣಿಜ್ಯ ಪಾಲುದಾರಿಕೆಯನ್ನು ನಿರ್ಮಿಸಲಿದೆ. ನಾನು ಆಹಾರ ಸಂಸ್ಕರಣೆ, ಹೈನುಗಾರಿಕೆ ಮತ್ತು ಕೃಷಿಯ ಬಗ್ಗೆ ಪ್ರಸ್ತಾಪಿಸ ಬಯಸುತ್ತೇನೆ ಮತ್ತು ಸಂಬಂಧಿತ ಕ್ಷೇತ್ರಗಳ ಸರಬರಾಜಿನ ಸರಣಿಯ ಕ್ಷೇತ್ರಗಳು ನಮ್ಮ ದ್ವಿಪಕ್ಷೀಯ ಸಹಕಾರದ ಸಾಮರ್ಥ್ಯವಾಗಿವೆ. ಈ ವಲಯಗಳಲ್ಲಿ ಎರಡೂ ರಾಷ್ಟ್ರಗಳ ಸಮಾಜಕ್ಕೆ ಲಾಭವಾಗುವಂತೆ ನ್ಯೂಜಿಲ್ಯಾಂಡ್ ನ ಸಾಮರ್ಥ್ಯ ಮತ್ತು ಶಕ್ತಿಯು ಭಾರತದ ವಿಸ್ತಾರವಾದ ತಂತ್ರಜ್ಞಾನದೊಂದಿಗೆ ಸೇರುವ ಅಗತ್ಯವಿದೆ.

ನಮ್ಮ ಎರಡೂ ಆರ್ಥಿಕತೆಯ ಮತ್ತು ಸಮಾಜದ ನಡುವೆ ಕೌಶಲ್ಯಯುತ ವೃತ್ತಿಪರರ ಸಂಚಾರವೂ ಸೇರಿದಂತೆ ಹೆಚ್ಚಿನ ವಾಣಿಜ್ಯ ಸಂಪರ್ಕವನ್ನು ಉತ್ತೇಜಿಸಲು ಎರಡೂ ಸರ್ಕಾರಗಳು ಕ್ರಮ ಕೈಗೊಳ್ಳಲು ಸಮ್ಮತಿಸಿವೆ. ಈ ನಿಟ್ಟಿನಲ್ಲಿ ಸಮತೋಲಿತ ಮತ್ತು ಪರಸ್ಪರರಿಗೆ ಲಾಭವಾಗುವಂಥ ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು ಶೀಘ್ರ ಆಖೈರುಗೊಳಿಸಲು ಆಪ್ತವಾಗಿ ಕಾರ್ಯೋನ್ಮುಖವಾಲು ನಾವು ಒಪ್ಪಿದ್ದೇವೆ.

ಸ್ನೇಹಿತರೆ,

ಎರಡೂ ಕಡೆ ವ್ಯಾಪಕವಾದ ದ್ವಿಪಕ್ಷೀಯ ಕಾರ್ಯಕ್ರಮಗಲು, ನಮ್ಮ ಆಪ್ತ ಸಹಕಾರ ಕೂಡ ಜಾಗತಿಕ ಕಣದಲ್ಲಿ ವಿಸ್ತಾರವಾಗಿವೆ. ಪೂರ್ವ ಏಷ್ಯಾ ಶೃಂಗ ಪ್ರಕ್ರಿಯೆ ಸೇರಿದಂತೆ ಪ್ರಾದೇಶಿಕ ವಿಷಯಗಳಿಗೆ ಸಂಬಂಧಿಸಿದಂತೆ ನಾವು, ನಮ್ಮ ಸಹಕಾರವನ್ನು ಹೆಚ್ಚಿಸಲು ಸಮ್ಮತಿಸಿದ್ದೇವೆ. ಅಂತಾರಾಷ್ಟ್ರೀಯ ಆಡಳಿತದ ಸಂಸ್ಥೆಗಳ ಸುಧಾರಣೆ ನಮ್ಮಿಬ್ಬರ ವಿನಿಮಯಿತ ಆದ್ಯತೆಯಾಗಿದೆ. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ನ್ಯೂಜಿಲ್ಯಾಂಡ್ ಬೆಂಬಲಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ. ಫೆಸಿಫಿಕ್ ದ್ವೀಪ ರಾಷ್ಟ್ರದ ಅಭಿವೃದ್ಧಿಯ ಪ್ರಯತ್ನಗಳಿಗೆ ನಾವು ನಮ್ಮ ಕೊಡುಗೆಯನ್ನೂ ನೀಡುತ್ತಿದ್ದೇವೆ, ಪರಸ್ಪರರ ಪ್ರಯತ್ನಕ್ಕೆ ಪೂರಕವಾಗಿ ನಾವು ನ್ಯೂಜಿಲ್ಯಾಂಡ್ ನೊಂದಿಗೆ ಆಪ್ತವಾಗಿ ಸಮಾಲೋಚನೆ ಮುಂದುವರಿಸುತ್ತೇವೆ.

ಪರಮಾಣು ಸರಬರಾಜು ಗುಂಪಿನಲ್ಲಿ ಭಾರತದ ಸದಸ್ಯತ್ವದ ಪರಿಗಣನೆಗೆಪ್ರಧಾನಮಂತ್ರಿ ಕೀ ಅವರ ರಚನಾತ್ಮಕ ನಿಲುವಿಗೆ ನಾವು ಋಣಿಯಾಗಿದ್ದೇವೆ.
ಸ್ನೇಹಿತರೇ,

ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಅತಿ ದೊಡ್ಡ ಸವಾಲಾಗಿ ಉಳಿದಿದೆ. ಇಂದು ಭಯೋತ್ಪಾದಕರಿಗೆ ಹಣಕಾಸು, ಸಾಗಣೆ ಮತ್ತು ಮಾಹಿತಿಯ ಜಾಲ ಇಡೀ ಭೂಮಂಡಲವಾಗಿದೆ. ಭೌಗೋಳಿಕ ತಡೆಗಳು ಕೂಡ ಮೂಲಭೂತವಾದ ಮತ್ತು ಭಯೋತ್ಪಾದನೆಯ ಭೀತಿಯಿಂದ ರಕ್ಷಿಸಲು ಶಕ್ತವಾಗಿಲ್ಲ. ಮಾನವತೆಯಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರಗಳು ಭಯೋತ್ಪಾದನೆಯ ಹತ್ತಿಕ್ಕುವ ತಮ್ಮ ಕ್ರಮ ಮತ್ತು ನೀತಿಗಳನ್ನು ಸಮನ್ವಯಗೊಳಿಸುವ ಅಗತ್ಯವಿದೆ.

ಪ್ರಧಾನಮಂತ್ರಿ ಕಿ ಮತ್ತು ನಾನು, ಸೈಬರ್ ಭದ್ರತೆ ಸೇರಿದಂತೆ ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧದ ನಮ್ಮ ಭದ್ರತೆ ಮತ್ತು ಬೇಹುಗಾರಿಕೆಯ ಸಹಕಾರವನ್ನು ಬಲಪಡಿಸಲು ಸಮ್ಮತಿಸಿದ್ದೇವೆ.

 

ಘನತೆವೆತ್ತರೆ,

ನ್ಯೂಜಿಲ್ಯಾಂಡ್ ಜನತೆ ಎಲ್ಲ ಕಾಲದಲ್ಲಿ ಮತ್ತು ಪುನಾ ನಿಮ್ಮ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದನ್ನು ನಾನು ನೋಡಿದ್ದೇನೆ.
ಘನತೆವೆತ್ತರೆ ನಮ್ಮ ದ್ವಿಪಕ್ಷೀಯ ಪಾಲುದಾರಿಕೆ, ನಮ್ಮ ಗೆಳೆತನದ ಬಂಧ ಮತ್ತು ಎರಡೂ ರಾಷ್ಟ್ರಗಳ ನಡುವಿನ ಜನರೊಂದಿಗಿನ ಸಂಪರ್ಕವನ್ನು ಮುಂದೆ ತೆಗೆದುಕೊಂಡು ಹೋಗುವ ತಮ್ಮ ವೈಯಕ್ತಿಕ ಬದ್ಧತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ.

ನಾನು ಮತ್ತೊಮ್ಮೆ ತಮಗೂ ಮತ್ತು ತಮ್ಮ ನಿಯೋಗಕ್ಕೂ ಆತ್ಮೀಯ ಸ್ವಾಗತ ಬಯಸುತ್ತೇನೆ ಮತ್ತು ಫಲಪ್ರದ ಮತ್ತು ಯಶಸ್ವೀ ಭಾರತ ಭೇಟಿ ಆಗಿಲ ಎಂದು ಆಶಿಸುತ್ತೇನೆ.

ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Economic Survey: India leads in mobile data consumption/sub, offers world’s most affordable data rates

Media Coverage

Economic Survey: India leads in mobile data consumption/sub, offers world’s most affordable data rates
NM on the go

Nm on the go

Always be the first to hear from the PM. Get the App Now!
...
PM Modi lauds Indian Coast Guard on their Raising Day for Exemplary Service
February 01, 2025

On the occasion of Indian Coast Guard’s Raising Day, the Prime Minister, Shri Narendra Modi praised the force for its bravery, dedication, and relentless vigilance in protecting our vast coastline. Shri Modi said that from maritime security to disaster response, from anti-smuggling operations to environmental protection, the Indian Coast Guard is a formidable guardian of our seas, ensuring the safety of our waters and people.

The Prime Minister posted on X;

“Today, on their Raising Day, we laud the Indian Coast Guard for safeguarding our vast coastline with bravery, dedication and relentless vigilance. From maritime security to disaster response, from anti-smuggling operations to environmental protection, the Indian Coast Guard is a formidable guardian of our seas, ensuring the safety of our waters and people.

@IndiaCoastGuard”