ಜಪಾನ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಶಿಂಜೋ ಅಬೆ ಅವರೇ;
ಗೌರವಾನ್ವಿತ ಸಚಿವರೇ ಮತ್ತು ಜಪಾನ್ ನ ಹಿರಿಯ ಪ್ರತಿನಿಧಿಗಳೇ ;
ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರೇ;
ಗುಜರಾತ್ ನ ಉಪ ಮುಖ್ಯಮಂತ್ರಿ ಶ್ರೀ ನಿತಿನ್ ಪಟೇಲ್ ಅವರೇ ಎರಡೂ ರಾಷ್ಟ್ರಗಳ ವಾಣಿಜ್ಯ ಪ್ರಮುಖರೇ;
ಮಹನೀಯರೇ ಮತ್ತು ಮಹಿಳೆಯರೇ!
ಭಾರತ ಮತ್ತು ಜಪಾನ್ ವಾಣಿಜ್ಯ ಸಮುದಾಯದೊಂದಿಗೆ ಇರುವುದು ನಿಜಕ್ಕೂ ಹರ್ಷ ತಂದಿದೆ. ಅದರಲ್ಲೂ ನನ್ನ ಶ್ರೇಷ್ಠ ಗೆಳೆಯ;
ಭಾರತದ ಮಿತ್ರ; ಗುಜರಾತ್ ನ ಮಿತ್ರ ಮತ್ತು ನನ್ನ ವೈಯಕ್ತಿಕ ಗೆಳೆಯ ಶ್ರೀ ಶಿಂಜೋ ಅಬೆ ಸಮ್ಮುಖದಲ್ಲಿ ಇರುವುದು ಸಂತಸ ತಂದಿದೆ, ಈ ಶ್ರೇಷ್ಠ ಗೆಳೆಯ ಹಾಗೂ ಶ್ರೇಷ್ಠ ನಾಯಕನಿಗೆ ಚಪ್ಪಾಳೆಯ ಮೂಲಕ ಸ್ವಾಗತ ನೀಡಿ. ಜಪಾನ್ ನ ನಾಯಕತ್ವ, ಸರ್ಕಾರ, ಕೈಗಾರಿಕೆ ಮತ್ತು ಅಲ್ಲಿನ ಜನತೆಯೊಂದಿಗೆ ನನ್ನ ವೈಯಕ್ತಿಕ ಸಂಪರ್ಕ ಈಗ ಒಂದು ದಶಕ ಹಳೆಯದು. ನಾನು ಗುಜರಾತ್ ನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಪಾನ್ ಗೆ ಭೇಟಿ ನೀಡಿದ್ದಾಗ, ನಾನು ಹೇಳಿದ್ದೆ... ನಾನು ಗುಜರಾತ್ ನಲ್ಲಿ ಮಿನಿ ಜಪಾನ್ ಕಾಣ ಬಯಸುತ್ತೇನೆ ಎಂದು. ಇಂದು, ಆ ಕನಸು ನನಸಾಗಿದೆ. ನಾನು ಇಂದು ಜಪಾನ್ ನ ಹಲವು ಸ್ನೇಹಿತರು ಗುಜರಾತ್ ನಲ್ಲಿ ಸಂತೋಷದಿಂದ ಜೀವಿಸುತ್ತಾ ಮತ್ತು ವ್ಯಾಪಾರ ನಡೆಸುತ್ತಿರುವುದನ್ನು ನೋಡುತ್ತಿರುವುದು ಸಂತಸ ತಂದಿದೆ. ನನಗೆ ಇಲ್ಲಿ ಹಲವು ಚಿರಪರಿಚಿತ ಮುಖಗಳನ್ನು ನೋಡಲೂ ಸಂತೋಷವಾಗುತ್ತಿದೆ.ಸಮರ್ಪಿತ ಪಟ್ಟಣಗಳು, ಸಮೂಹಗಳು ಮತ್ತು ಸಂಸ್ಥೆಗಳು ಜಪಾನಿನ ಜೀವನ ಮತ್ತು ಕಾರ್ಯಾನುಭವವನ್ನು ಉತ್ತಮಗೊಳಿಸಲು ತಲೆಎತ್ತಿರುವುದನ್ನು ನೋಡಲು ನಾನು ಹರ್ಷಿಸುತ್ತೇನೆ. ಇಂದು ಸಹ ಒಂದು ಜಪಾನಿನ ಟೌನ್ ಷಿಪ್ ಪ್ರಕಟಿಸಲಾಗಿದೆ. ಗುಜರಾತ್ ನ ಕೈಗಾರಿಕೆ ಮತ್ತು ಸರ್ಕಾರ, ವೈಬರೆಂಟ್ ಗುಜರಾತ್ ಕಾರ್ಯಕ್ರಮದಲ್ಲಿ ಪ್ರಥಮ ಪಾಲುದಾರ ರಾಷ್ಟ್ರ ಎಂಬುದು ಖುಷಿಯ ವಿಷಯವಾಗಿದೆ. ಈ ಪಾಲುದಾರಿಕೆ ಮಾತ್ರ ಮುಂದುವರಿದಿಲ್ಲ, ಆದರೆ ನಮ್ಮ ಕಾರ್ಯಕ್ರಮಗಳೂ ಬೆಳೆಯುತ್ತಿವೆ. ಇದು ಜಪಾನ್ ಕೈಗಾರಿಕೆಗಳೊಂದಿಗೆ ಭಾರತದ ಆರ್ಥಿಕತೆಯ ಕಾರ್ಯಕ್ರಮವನ್ನು ಹೆಚ್ಚಿನ ಮಟ್ಟಕ್ಕೆ ಒಯ್ಯಲು ಕಾರಣವಾಗಿದೆ. ನಾನು, ಕಿಡಾನ್ರೇನ್, ಜೆಟ್ರೋ ಮತ್ತು ಇತರ ಸಂಘಟನೆಗಳಿಗೆ ಈ ಪ್ರಕ್ರಿಯೆಯಲ್ಲಿ ನೆರವಾಗುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಕೈಜೊಡಿಸುವಿಕೆಯ ಪ್ರಕ್ರಿಯೆಯಲ್ಲಿ ಜಪಾನ್ ಪ್ಲಸ್ ವ್ಯವಸ್ಥೆಯೂ ನೆರವಾಗಿದೆ.
ಸ್ನೇಹಿತರೆ!
ಜಪಾನ್ ಜನತೆ ಮತ್ತು ಸರ್ಕಾರ, ಯಾವಾಗಲೂ ನನ್ನ ಹಾಗೂ ನನ್ನ ದೇಶದ ಬಗ್ಗೆ ವಾತ್ಯಲ್ಯ ಇಟ್ಟುಕೊಂಡಿದೆ. 1.25 ಕೋಟಿ ಭಾರತೀಯ ಜನರು ಕೂಡ ಜಪಾನ್ ಜನತೆಯ ಬಗ್ಗೆ ಅದೇ ಮಮಕಾರ ಹೊಂದಿದ್ದಾರೆ. ನಾನು ಈ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ವಿಶೇಷವಾಗಿ ಪ್ರಧಾನಿ ಅಬೆ ಅವರಿಗೆ ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ನಾನು ಮತ್ತು ಅಬೆ ಅವರು ಪರಸ್ಪರ ಭೇಟಿಯಾಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಈ ಆಪ್ತತೆ ಮತ್ತು ಒಬ್ಬರನ್ನೊಬ್ಬರು ಅರಿತುಕೊಂಡಿರುವುದು ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಹಲವು ಕಂದಕಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಕಳೆದ ವರ್ಷ ಜಪಾನ್ ಒಂದು ಆರ್ಥಿಕ ವರ್ಷದಲ್ಲಿ ಅಧಿಕೃತ ಅಭಿವೃದ್ಧಿಯ ಸಹಾಯಧನವನ್ನು ಹಿಂದೆಂದಿಗಿಂತ ಹೆಚ್ಚು ನೀಡಿದೆ. ಅದೇ ರೀತಿ ಜಪಾನ್ ನ ಹಲವು ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಸ್ಥಿರವಾಗಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇಂದು ಚಾಲನೆ ನೀಡಲಾಗಿರುವ ಚಟುವಟಿಕೆಗಳಲ್ಲಿ ನಮ್ಮ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯದ ಆಳವನ್ನು ನೋಡಬಹುದಾಗಿದೆ.
· ಮೊದಲನೆಯದು ಮುಂಬೈ – ಅಹಮದಾಬಾದ್ ಅತಿವೇಗದ ರೈಲು ಯೋಜನೆ:
· ಇದಕ್ಕಾಗಿ ನಾವು ಜಪಾನ್ ಸರ್ಕಾರದ ಬೆಂಬಲಕ್ಕೆ ಆಭಾರಿಯಾಗಿದ್ದೇವೆ.
· 500 ಕಿ.ಮೀ. ಉದ್ದದ ಬುಲೆಟ್ ರೈಲು ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, 2022-23ರಹೊತ್ತಿಗೆ ಪೂರ್ಣಗೊಳ್ಳಲಿದೆ.
· ಅತಿ ವೇಗದ ರೈಲು ಯೋಜನೆಯ ಜೊತೆಗೆ, ಒಂದು ತರಬೇತಿ ಸಂಸ್ಥೆಯೂ ರೂಪುಗೊಳ್ಳಲಿದೆ.
· ಇದು ನವ ಭಾರತದ ನಿರ್ಮಾತೃಗಳಾದ – ಅತಿ ವೇಗದ ರೈಲು ನಿರ್ಮಾಣ, ನಿರ್ಹಹಣೆ ಮತ್ತು ಕಾರ್ಯಾಚರಣೆಗೆ ಅಗತ್ಯವಾದ ಉನ್ನತ ಕೌಶಲ ಮಾನವಶಕ್ತಿಯನ್ನು ರೂಪಿಸುತ್ತದೆ.
· ಎರಡನೆಯದು ಜಪಾನಿನ ಕೈಗಾರಿಕಾ ಟೌನ್ ಷಿಪ್: ದೇಶದಾದ್ಯಂತ ನಾಲ್ಕು ಕಡೆಗಳಲ್ಲಿ ಇದು ನಿರ್ಮಾಣವಾಗುತ್ತದೆ. ಗುಜರಾತ್ ಅಲ್ಲದೆ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇದು ತಲೆ ಎತ್ತಲಿದೆ.
· ಮೂರನೆಯದು ವಾಹನ ಕ್ಷೇತ್ರದ ನಮ್ಮ ಸಹಕಾರ:
ಮಾಂಡಲ್ ನಲ್ಲಿನ ಸುಜುಕಿ ಘಟಕ ವಿಶ್ವಾದ್ಯಂತ ಕಾರುಗಳನ್ನು ರಫ್ತು ಮಾಡುತ್ತಿದೆ, ಮತ್ತು ಮುಂದಿನ ಪೀಳಿಗೆಯ ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ತುಂಬಲು ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಉತ್ಪಾದಿಸಲು ಶಂಕುಸ್ಥಾಪನೆ ಮಾಡಲಾಗಿದೆ. ನಾಲ್ಕನೆಯದು ಜಪಾನ್ ಕಂಪನಿಗಳು ಅಭಿವೃದ್ಧಿಪಡಿಸಿರುವ ಜಪಾನ್ – ಭಾರತ ಉತ್ಪಾದನಾ ಸಂಸ್ಥೆಯ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ. ಗುಜರಾತ್ ಜೊತೆಗೆ ಈ ಸಂಸ್ಥೆಗಳು ಕರ್ನಾಟಕ, ರಾಜಾಸ್ಥಾನ ಮತ್ತು ತಮಿಳುನಾಡಿನಲ್ಲಿ ಇದನ್ನು ಅಭಿವೃದ್ದಿಪಡಿಸಲಾಗುತ್ತದೆ.
· ನಿಮಗೆ ತಿಳಿದಿದೆ. ಪುರಾತನ ಪವಿತ್ರ ನಗರ ವಾರಾಣಸಿ ನನ್ನ ಎರಡನೇ ಮನೆ.
ವಾರಾಣಸಿಯ ಸಮಾವೇಶ ಕೇಂದ್ರವು ಜಪಾನ್ ನ ಕ್ಯೋಟೋ ನಗರ ಮತ್ತು ವಾರಾಣಸಿ ನಡುವಿನ ಸಾಂಸ್ಕೃತಿಕ ಸಹಕಾರದ ಸಂಕೇತವಾಗಿದೆ. 2015ರಲ್ಲಿ ಪ್ರಧಾನಿ ಅಬೆ ಹಾಗೂ ನಾನು ವಾರಾಣಸಿಗೆ ಭೇಟಿ ನೀಡಿದ್ದಾಗ ಇದು ರೂಪುಗೊಂಡಿದ್ದು. ನಾನು ಅದಕ್ಕೆ ರುದ್ರಾಕ್ಷ ಎಂದು ನಾಮಕರಣ ಮಾಡಿದ್ದೇನೆ. – ಇದು ಪ್ರೀತಿಯ ಸಂಕೇತ ಮತ್ತು ಮಾನವತೆಗೆ ಭಗವಾನ್ ಶಿವ ನೀಡಿರುವ ಪ್ರಸಾದ. ಈ ರುದ್ರಾಕ್ಷವು ವಾರಾಣಸಿಯ ಬಗ್ಗೆ ಜಪಾನ್ ಗೆ ಇರುವ ಪ್ರೀತಿಯ ಮಾಲೆಯಾಗಿದೆ. ಇದು ಸಾರಾನಾಥ್ ನಲ್ಲಿರುವ ನಮ್ಮ ಹಂಚಿಕೆಯ ಬೌದ್ಧ ಪರಂಪರೆಗೆ ಗೌರವಾರ್ಪಣೆಯೂ ಆಗಿದೆ. ಈ ಯೋಜನೆಗೆ ಜಪಾನ್ ನ ಹಣಕಾಸು ನೆರವಿಗಾಗಿ ನಾನು ಪ್ರಧಾನಿ ಅಬೆ ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಜಪಾನ್ ಕಂಪನಿಗಳ ಹೂಡಿಕೆಯ ಇತರ ಪ್ರಕಟಣೆಗಳನ್ನೂ ನಾವು ನೋಡಿದ್ದೇವೆ. ರಾಜಕೀಯ ಮತ್ತು ವ್ಯೂಹಾತ್ಮಕ ನಿಟ್ಟಿನಲ್ಲೂ, ಪ್ರಧಾನಮಂತ್ರಿ ಅಬೆ ಅವರ ಈ ಭೇಟಿ, ತುಂಬಾ ಫಲಪ್ರದವಾಗಿದೆ. ನಾವು ವಿವಿಧ ಮಹತ್ವದ ವಿಷಯಗಳಲ್ಲಿ ಹಲವು ಒಪ್ಪಂದಗಳನ್ನು ಆಖೈರುಗೊಳಿಸಿದ್ದೇವೆ. ಇದೆಲ್ಲವೂ ನಾವು ಪರಸ್ಪರ ಹೊಂದಿರುವ ತಿಳಿವು ಮತ್ತು ಸಲಿಗೆಯ ಆಳವನ್ನು ತೋರುತ್ತದೆ.
ಸ್ನೇಹಿತರೆ!
ಕಳೆದ ಮೂರು ವರ್ಷಗಳಲ್ಲಿ, ಸುಲಭವಾಗಿ ವ್ಯಾಪಾರ ನಡೆಸುವ ನಿಟ್ಟನಲ್ಲಿ ಶ್ರಮಿಸಿದ್ದೇವೆ. ನಮ್ಮ ಸರಣಿ ಆಡಳಿತ ಸುಧಾರಣೆಗಳು ನಮ್ಮ ದೇಶದ ವಾಣಿಜ್ಯ ಭಾವನೆಯನ್ನು ಗಣನೀಯವಾಗಿ ಉತ್ತಮಪಡಿಸಿವೆ. ಈ ಸುಧಾರಣೆಗಳು ಮತ್ತು ಉಪಕ್ರಮಗಳು ಭಾರತವನ್ನು 21ನೇ ಶತಮಾನಕ್ಕೆ ಸಜ್ಜುಗೊಳಿಸುವ ಗುರಿ ಹೊಂದಿವೆ. ಅವು ದೇಶವನ್ನು ಪರಿವರ್ತಿಸುವ ಮತ್ತು ನವ ಭಾರತ ನಿರ್ಮಿಸುವ ಉದ್ದೇಶ ಹೊಂದಿವೆ. ನಮ್ಮ ಯುವಜನರ ಶಕ್ತಿಯಿಂದ ಸಶಕ್ತವಾಗಿ, ನಾವು ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ಮಾಡುತ್ತಿದ್ದೇವೆ. ಈ ಉದ್ದೇಶಕ್ಕಾಗಿ, ನಾವು ಮೇಕ್ ಇನ್ ಇಂಡಿಯಾ ಅಭಿಯಾನ ಆರಂಭಿಸಿದ್ದೇವೆ. ನಾವು ಭಾರತವನ್ನು ಜ್ಞಾನಾಧಾರಿತ, ಕೌಶಲ ಬೆಂಬಲಿತ ಮತ್ತು ತಂತ್ರಜ್ಞಾನ ಚಾಲಿತ ಸಮಾಜವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಡಿಜಿಟಲ್ ಇಂಡಿಯಾ ಮತ್ತು ಕೌಶಲ ಭಾರತದಂಥ ನಮ್ಮ ಚಾಲಕ ಶಕ್ತಿಗಳು ಈಗಾಗಲೇ ಈ ನಿಟ್ಟಿನಲ್ಲಿ ಶುಭಾರಂಭ ಮಾಡಿವೆ. ಇದೇ ಉದ್ದೇಶಕ್ಕಾಗಿ, ನಾವು ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನವನ್ನೂ ಆರಂಭಿಸಿದ್ದೇವೆ. ಭಾರತವು ಜಾಗತಿಕ ನವೋದ್ಯಮ ಪರಿಸರ ಸ್ನೇಹಿಯಲ್ಲಿ 3ನೇ ಶ್ರೇಯಾಂಕದಲ್ಲಿದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಇದು ಅದ್ಭುತ ಚೇತರಿಕೆ ಕಂಡಿದೆ. ನಾವಿನ್ಯತೆಯಲ್ಲಿ ಬಲವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನೂ ಸ್ಟಾರ್ಟ್ ಅಪ್ ಇಂಡಿಯಾ ಹೊಂದಿದೆ. ಉತ್ಪಾದನಾ ರಂಗದಲ್ಲಿ, ನನ್ನ ಸರ್ಕಾರ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಗಳು ಹೂಡಿಕೆದಾರರಿಗೆ ತಮ್ಮ ಜೀವಿತಾವಧಿಯ ಉತ್ತಮ ಅವಕಾಶ ನೀಡಿದೆ. ಇದರಲ್ಲಿ 100 ಸ್ಮಾರ್ಟ್ ನಗರಗಳ ಅಭಿಯಾನ, 50 ಲಕ್ಷ ನಿರ್ವಸತಿಗರಿಗೆ ಮನೆ, ರಸ್ತೆ ನಿರ್ಮಾಣ, ಸೇತುವೆಗಳ ನಿರ್ಮಾಣ, ಬಂದರು, ರೈಲು ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣವೂ ಸೇರಿದೆ.
ಸ್ನೇಹಿತರೆ,!
ನಮ್ಮ ಸಾಮರ್ಥ್ಯ ಮತ್ತು ಕೌಶಲಯುಕ್ತ ಕೈಗಳ ಗಾತ್ರ ಮತ್ತು ಎತ್ತರಕ್ಕೆ ಜಪಾನ್ ಅದ್ಭುತ ಪ್ರಯೋಜನ ಪಡೆಯಬಹುದಾಗಿದೆ. ವಾಸ್ತವವಾಗಿ, ಭಾರತದ ಎಲ್ಲಾ ಅಭಿವೃದ್ಧಿ ಕಾರ್ಯಸೂಚಿಗಳು ಜಪಾನಿನ ಕಂಪನಿಗಳಿಗೆ ಸೂಕ್ತವಾಗಿದೆ. ಬಂಡವಾಳ ಮತ್ತು ತಂತ್ರಜ್ಞಾನದ ಅವಕಾಶದಿಂದಾಗಿ, ನಾವು ನಮ್ಮ ಆರ್ಥಿಕತೆಯನ್ನು ಮುಕ್ತಗೊಳಿಲು ಶ್ರಮಿಸಿದ್ದೇವೆ. ಪ್ರತಿ ದಿನವೂ ನಾವು ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮತ್ತು ವಾಣಿಜ್ಯ ನಡೆಸುವುದನ್ನು ಸುಲಭಗೊಳಿಸುತ್ತಿದ್ದೇವೆ. ವಾಣಿಜ್ಯೋದ್ಯಮಗಳು ಮತ್ತು ಕಂಪನಿಗಳು ಎದುರಿಸುತ್ತಿದ್ದ ಹಲವು ನಿಯಂತ್ರಣ ಮತ್ತು ನೀತಿಗಳ ಸಮಸ್ಯೆ ಪರಿಹರಿಸಿದ್ದೇವೆ. ಈ ಪ್ರಯತ್ನದಿಂದ ನಾವು ಉತ್ತಮ ಫಲಿತಾಂಶವನ್ನೂ ಪಡೆದಿದ್ದೇವೆ. ನಾನು ಕೆಲವು ಇತ್ತೀಚಿನ ಜಾಗತಿಕ ಮನ್ನಣೆಯನ್ನು ಪಟ್ಟಿ ಮಾಡಲು ಬಯಸುತ್ತೇನೆ.: ಸುಲಭವಾಗಿ ವಾಣಿಜ್ಯ ನಡೆಸುವ ವಿಶ್ವಬ್ಯಾಂಕ್ ನ ಸೂಚ್ಯಂಕದಲ್ಲಿ ಭಾರತ ಮೇಲೇರಿದೆ; ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ನಾವು 32 ಸ್ಥಾನ ಮೇಲೇರಿದ್ದೇವೆ – ಇದು ಯಾವುದೇ ಇತರ ದೇಶಗಳಿಗಿಂತ ಹೆಚ್ಚಿನದಾಗಿದೆ;ವಿಶ್ವ ಬೌದ್ಧಿಕ ಆಸ್ತಿಗಳ ಸಂಘಟನೆ ಡಬ್ಲ್ಯುಐಪಿಓದ ಜಾಗತಿಕ ನಾವಿನ್ಯತೆ ಸೂಚ್ಯಂಕದಲ್ಲಿ ನಾವು ಕಳೆದ ಎರಡು ವರ್ಷಗಳಲ್ಲಿ 21 ಸ್ಥಾನ ಮೇಲೇರಿದ್ದೇವೆ, 2016ರ ವಿಶ್ವ ಬ್ಯಾಂಕ್ ನ ಸರಕು ಸಾಗಣೆ ಸಾಮರ್ಥ್ಯದ ಶ್ರೇಣೀಕರಣದಲ್ಲಿ ನಾವು 19 ಸ್ಥಾನ ಸಾಗಿದ್ದೇವೆ; ಮತ್ತು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿಯ ಸಮಾವೇಶ ಯುಎನ್ಸಿಟಿಎಡಿಯಲ ಮೊದಲ 10 ವಿದೇಶೀ ನೇರ ಬಂಡವಾಳ ಹೂಡಿಕೆ ತಾಣಗಳ ಪಟ್ಟಿಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವೆ. ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆ, ಜಿಎಸ್ಟಿಯನ್ನು ಇತ್ತೀಚೆಗೆ ಜಾರಿಗೆ ತರಲಾಗಿದೆ. ಇದರೊಂದಿಗೆ, ನಾವು ಆಧುನಿಕ ತೆರಿಗೆ ವ್ಯವಸ್ಥೆಗೆ ನಾವೂ ಸಾಗಿದ್ದೇವೆ. ಇದು ಪಾರದರ್ಶಕ, ಸ್ಥಿರ ಮತ್ತು ಊಹಾತ್ಮಕವಾದುದಾಗಿದೆ. ಇಂದು, ಭಾರತ ವಿಶ್ವದ ಅತಿ ಉದಾರೀಕೃತ ಎಫ್.ಡಿ.ಐ. ತಾಣವಾಗಿದೆ. ಶೇಕಡ 90ರಷ್ಟು ಎಫ್.ಡಿ.ಐ. ಅನುಮೋದನೆಯನ್ನು ಸ್ವಯಂಚಾಲಿತ ವ್ಯವಸ್ಥೆಯಡಿ ತರಲಾಗಿದೆ.ನಾವು ವಿದೇಶೀ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸಿದ್ದೇವೆ. ಈ ಉದಾರೀಕರಣವು ಭಾರತದ ಎಫ್.ಡಿ.ಐ. ಕಳೆದ ಆರ್ಥಿಕ ವರ್ಷದಲ್ಲಿ 60 ಶತಕೋಟಿ ಡಾಲರ್ ತಲುಪಲು ಕಾರಣವಾಗಿದೆ. ಜಪಾನ್ ನಿಂದ ಬರುವ ಎಫ್.ಡಿ.ಐ. ಹರಿವು ಕಳೆದ ಮೂರು ವರ್ಷಗಳಲ್ಲಿ ಬಹುತೇಕ ಮೂರುಪಟ್ಟು ಹೆಚ್ಚಾಗಿದೆ. ಹೊಸ ದಿವಾಳಿ ಮತ್ತು ದಿವಾಳಿತನ ಸಂಹಿತೆಯು ಹೊರ ಹೋಗುವ ಹೂಡಿಕೆದಾರರಿಗೆ ಸುಲಭವಾಗಿದೆ. ವಾಣಿಜ್ಯ ಪ್ರಕರಣಗಳ ತ್ವರಿತ ವಿಲೇವಾರಿಯ ಖಾತ್ರಿಗೆ ನಾವು ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಮಧ್ಯಸ್ಥಿಕೆ ಕಾಯಿದೆ ತಿದ್ದುಪಡಿಯೊಂದಿಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳು ಈಗ ತ್ವರಿತವಾಗಿವೆ. ನಾವು ನೂತನ ಬೌದ್ಧಿಕ ಆಸ್ತಿ ಹಕ್ಕು ನೀತಿಯನ್ನೂ ಪ್ರಕಟಿಸಿದ್ದೇವೆ. ಇವೆಲ್ಲವೂ ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳು ಮಾತ್ರ. ನಾವು ಇನ್ನೂ ಹೆಚ್ಚಿನದನ್ನು, ಉತ್ತಮವಾದ್ದನ್ನು ತ್ವರಿತವಾಗಿ ಮಾಡುತ್ತೇವೆ
ಸ್ನೇಹಿತರೇ!
ಭಾರತ ಮತ್ತು ಜಪಾನ್ ಎರಡೂ ಪುರಾತನ ನಾಗರಿಕೆ ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವ ಹೊಂದಿವೆ. ನಮಗೆ ಶ್ರೀಸಾಮಾನ್ಯನಿಗೆ ಪ್ರಗತಿ ಮತ್ತು ಅಭಿವೃದ್ಧಿಯ ಫಲವನ್ನು ಹೇಗೆ ಹಂಚಬೇಕು ಎಂಬುದು ತಿಳಿದಿದೆ. ತನ್ನ ಜನತೆಗೆ ಸರ್ಕಾರಿ ಸೇವೆಗಳು ಸುಲಭವಾಗಿ ದೊರಕುವಂತೆ ಮಾಡುವ ಕೈಗೆಟಕುವ ದರದ ಪರಿಹಾರ ಭಾರತಕ್ಕೆ ಅಗತ್ಯವಿದೆ. ಜಪಾನ್ ಗೆ ತಾನು ಇಲ್ಲಿ ತನ್ನ ತಂತ್ರಜ್ಞಾನ ಮತ್ತು ಶ್ರಮದಿಂದ ಸಾಧಿಸಿದ ಜ್ಞಾನವನ್ನು ಅಳವಡಿಸುವ ಅವಕಾಶವಿದೆ. ನಾನು 21ನೇ ಶತಮಾನ ಏಷ್ಯಾದ ಶತಮಾನ ಎಂದು ಹೇಳುತ್ತಲೇ ಇರುತ್ತೇನೆ. ಏಷ್ಯಾದ ಹೊರಹೊಮ್ಮುವಿಕೆಯಲ್ಲಿ ಭಾರತ ಮತ್ತು ಜಪಾನ್ ಮಹತ್ವದ ಪಾತ್ರ ವಹಿಸುತ್ತವೆ ಎಂದೂ ಹೇಳುತ್ತಿರುತ್ತೇನೆ.
ಆರ್ಥಿಕ ಮತ್ತು ವ್ಯೂಹಾತ್ಮಕ ವಿಚಾರಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ಬೆಳೆಯುತ್ತಿರುವ ಒಡನಾಟವು ಜಾಗತಿಕ ಆರ್ಥಿಕತೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಬಲವಾದ ಭಾರತ ಮತ್ತು ಬಲಿಷ್ಠ ಜಪಾನ್ ಏಷ್ಯಾದ ಮತ್ತು ವಿಶ್ವದ ಸ್ಥಿರತೆಯ ವಿಚಾರಗಳಾಗಿವೆ ಎಂಬುದು ನನ್ನ ವಿಶ್ವಾಸವಾಗಿದೆ. ಈ ಪರಸ್ಪರ ಮತ್ತು ಜಾಗತಿಕ ಪ್ರಯತ್ನದಲ್ಲಿ ಜಪಾನ್ ಸೂಕ್ತ ಪಾಲುದಾರನಾಗಿರುವುದಕ್ಕೆ ನಾನು ಪ್ರಧಾನಿ ಅಬೆ ಅವರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ಬಲ ಮತ್ತು ಗೆಳೆತನ ಹಾಗೂ ಪರಸ್ಪರ ನಂಬಿಕೆಯೊಂದಿಗೆ, ನಾನು ಜಪಾನ್ ನ ಹೆಚ್ಚು ಹೆಚ್ಚು ಕಂಪನಿ ಮತ್ತು ಜನತೆ ಭಾರತಕ್ಕೆ ಬಂದು ನೆಲೆಸಿ ಮತ್ತು ದುಡಿಯುವಂತೆ ಆಹ್ವಾನಿಸುತ್ತೇನೆ. ನಿಮ್ಮ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು. ಎಲ್ಲೆಲ್ಲಿ ಅಗತ್ಯವಿದೆಯೋ ಆ ಎಲ್ಲ ಬೆಂಬಲವನ್ನು ನೀಡುವ ಖಾತ್ರಿಯನ್ನು ನಾನು ನೀಡುತ್ತೇನೆ.
ಧನ್ಯವಾದಗಳು ! ತುಂಬಾ ತುಂಬಾ ಧನ್ಯವಾದಗಳು .
When I first visited Japan as CM of Gujarat, I had said that I want to see a mini Japan in Gujarat. Today that dream has come true: PM Modi
— PMO India (@PMOIndia) September 14, 2017
Gujarat’s Industry and Government still cherish the fact that Japan became the first partner country in Vibrant Gujarat event: PM Modi
— PMO India (@PMOIndia) September 14, 2017
4 locations have been finalized for development of Japanese Industrial Townships in Gujarat, Rajasthan, Andhra Pradesh & Tamil Nadu: PM
— PMO India (@PMOIndia) September 14, 2017
As another novel initiative, the foundation has been laid for production of Lithium batteries for electric mobility: PM @narendramodi
— PMO India (@PMOIndia) September 14, 2017
A series of administrative reforms have significantly improved the business sentiment in the country: PM Modi
— PMO India (@PMOIndia) September 14, 2017
Japan can benefit tremendously with the size and scale of our potential & skilled hands that India offers: PM @narendramodi
— PMO India (@PMOIndia) September 14, 2017
Japan can benefit tremendously with the size and scale of our potential & skilled hands that India offers: PM @narendramodi
— PMO India (@PMOIndia) September 14, 2017
The growing convergence between Japan and India on strategic and economic issues has capacity to stimulate the global economy: PM Modi
— PMO India (@PMOIndia) September 14, 2017
With the strength of our friendship & trust, I invite more and more Japanese people and companies to come, live and work in India: PM Modi
— PMO India (@PMOIndia) September 14, 2017