ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ನವೆಂಬರ್ 2ರಂದು ಯುನೈಟೆಡ್ ಕಿಂಗ್ ಡಮ್ ನ ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆಯ ಸಂದರ್ಭದಲ್ಲಿ ಶ್ರೀ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಅವರು ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಿಲ್ ಗೇಟ್ಸ್ ಅವರು ಪ್ರಧಾನಮಂತ್ರಿ ಅವರಿಗೆ ಮಿಷನ್ ಇನೋವೇಷನ್ ಪ್ರಗತಿಯ ಕುರಿತು ವಿವರಿಸಿದರು. ಮಿಷನ್ ಇನೋವೇಷನ್ ಅಡಿಯಲ್ಲಿ ಭಾರತದಲ್ಲಿ ಚಟುವಟಿಕೆಗಳನ್ನು ವೃದ್ಧಿಸುವ ಮಾರ್ಗೋಪಾಯಗಳ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದರು.
ಅಲ್ಲದೆ ಹಸುರು ಹೈಡ್ರೋಜನ್, ವೈಮಾನಿಕ ಇಂಧನ, ಬ್ಯಾಟರಿ ಸಂಗ್ರಹ ಮತ್ತು ಲಸಿಕೆ ಸಂಶೋಧನೆ ಮತ್ತಿತರ ವಲಯಗಳಲ್ಲಿ ಭರವಸೆಯ ಅವಕಾಶಗಳ ಕುರಿತಂತೆ ಅವರು ಸಮಾಲೋಚನೆ ನಡೆಸಿದರು.
Had an excellent meeting with @BillGates at the @COP26 Summit. We discussed a wide range of subjects including ways to strengthen global efforts towards overcoming climate change. pic.twitter.com/aUlQjRU45W
— Narendra Modi (@narendramodi) November 2, 2021