Let our motto be Yoga for peace, harmony and progress: PM Modi
Yoga transcends the barriers of age, colour, caste, community, thought, sect, rich or poor, state and border: PM Modi
Yoga is both ancient and modern. It is constant and evolving: PM Modi

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇಂದು ರಾಂಚಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.

ಯೋಗ ಅವಧಿ ಆರಂಭಕ್ಕೆ ಮುನ್ನ ಪ್ರಧಾನ ಮಂತ್ರಿಗಳು ಯೋಗಾಸಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ “ಶಾಂತಿ, ಸದ್ಭಾವನೆ ಮತ್ತು ಪ್ರಗತಿಗಾಗಿ ಯೋಗ ಎಂಬುದು ನಮ್ಮ ಧ್ಯೇಯವಾಗಲಿ,” ಎಂದು ಪ್ರೇರೇಪಿಸಿದರು.

ಎಲ್ಲರಿಗೂ ಯೋಗ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಯೋಗ ಸಂದೇಶವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಾಧ್ಯಮದವರಿಗೆ, ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡಿದವರಿಗೆ ಅಭಿನಂದಿಸಿದರು

ಆಧುನಿಕ ಯೋಗ ಸಂದೇಶವನ್ನು ಪ್ರಸ್ತುತ ಪಟ್ಟಣಗಳಿಂದ ಹಳ್ಳಿಗಳಿಗೆ ಮತ್ತು ಬಡವರ ಹಾಗೂ ಬುಡಕಟ್ಟು ಸಮುದಾಯಗಳ ಜನರ ಮನೆಗೆ ಕೊಂಡೊಯ್ಯಲು ಬಯಸುತ್ತೇನೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಬಡವರು ಹಾಗೂ ಬುಡಕಟ್ಟು ಸಮುದಾಯಗಳ ಜನರು ಹೆಚ್ಚು ರೋಗಗಳಿಂದ ಬಳಲುವುದರಿಂದ ಯೋಗ ಅವರ ಜೀವನದ ಒಂದು ಭಾಗವಾಗಬೇಕಿದೆ ಎಂದು ಅವರು ಒತ್ತಿ ಹೇಳಿದರು.

ಬದಲಾಗುತ್ತಿರುವ ಸಮಯದ ಜೊತೆಗೆ, ರೋಗಗಳನ್ನು ತಡೆಯುವುದಲ್ಲದೆ ನಮ್ಮ ಗಮನವನ್ನು ಆರೋಗ್ಯಯುತವಾಗಿರುವುದರತ್ತಲೂ ಹರಿಸುವ ಅವಶ್ಯಕತೆಯಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಯೋಗ ನಮಗೆ ಈ ಶಕ್ತಿ ನೀಡುತ್ತದೆ ಎಂದರು. ಇದೇ ಯೋಗ ಮತ್ತು ಪುರಾತನ ಭಾರತೀಯ ತತ್ವಶಾಸ್ತ್ರದ ಸ್ಪೂರ್ತಿಯಾಗಿದೆ ಎಂದು ನುಡಿದರು.

ಯೋಗ ಎಂಬುದು ಮೈದಾನದಲ್ಲೋ ಇಲ್ಲವೆ ಮ್ಯಾಟ್ ಮೇಲೆಯೋ ಕೆಲ ಹೊತ್ತು ನಾವು ಮಾಡುವ ವ್ಯಾಯಾಮಕ್ಕೆ ಮಾತ್ರ ಸೀಮಿತವಾಗಿಲ್ಲ, ಯೋಗ ಶಿಸ್ತು ಮತ್ತು ಏಕಾಗ್ರತೆಯನ್ನು ಸೂಚಿಸುತ್ತದೆ ಹಾಗೂ ನಮ್ಮ ಜೀವನದುದ್ದಕ್ಕೂ ಇದನ್ನು ಪಾಲಿಸುವ ಅವಶ್ಯಕತೆಯಿದೆ ಎಂದು ಪ್ರಧಾನಮಂತ್ರಿಗಳು ಅಭಿಪ್ರಾಯಪಟ್ಟರು.

ಯೋಗ, ವಯಸ್ಸು, ವರ್ಣ, ಜಾತಿ, ಮತ, ವಿಚಾರಧಾರೆಗಳು, ಪಂಗಡಗಳು, ಬಡವ, ಬಲ್ಲಿದ, ರಾಜ್ಯ ಮತ್ತು ಎಲ್ಲ ಗಡಿಗಳನ್ನು ಮೀರಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಯೋಗ ಎಲ್ಲರಿಗೂ ಸಂಬಂಧಿಸಿದ್ದು ಎಂದರು.

ಇಂದು ಪ್ರಾಂಗಣದಿಂದ, ಸಭಾಂಗಣದವರೆಗೂ, ಉದ್ಯಾನಗಳಿಂದ ಕ್ರೀಡಾ ಸಂಕೀರ್ಣಗಳಿಗೆ ಮತ್ತು ಗಲ್ಲಿಗಳಿಂದ ಆರೋಗ್ಯ ಕೇಂದ್ರಗಳವರೆಗೂ ಯೋಗ ಜನರ ಗಮನ ಸೆಳೆದಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.

ಯೋಗ ಪುರಾತನ ಮತ್ತು ನವೀನ ಎಂದು ಹೇಳಿದ ಶ್ರೀ. ನರೇಂದ್ರ ಮೋದಿ ಇದು ನಿರಂತರ ಮತ್ತು ಸದಾ ವಿಕಸಿಸುವಂಥದ್ದು ಎಂದು ನುಡಿದರು.

ಆರೋಗ್ಯಯುತ ದೇಹ, ಸ್ಥಿರವಾದ ಮನಸ್ಸು, ಏಕತೆಯ ಸೂತ್ರವೆಂಬುದು ಶತಮಾನಗಳಿಂದಲೂ ಯೋಗದ ಸಾರವಾಗಿದೆ ಎಂದು ಪ್ರಧಾನ ಮಂತ್ರಿಗಳು ನುಡಿದರು. ಯೋಗ, ಜ್ಞಾನ, ಕರ್ಮ ಮತ್ತು ಭಕ್ತಿಯ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ವಿಶ್ವವೇ ಯೋಗವನ್ನು ಅಳವಡಿಸಿಕೊಳ್ಳುತ್ತಿದೆ, ನಾವು ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಪ್ರಧಾನಮಂತ್ರಿಗಳು ಹೇಳಿದರು. ಯೋಗವು ಔಷಧಿ, ಫಿಜಿಯೋಥೆರಪಿ ಮತ್ತು ಕೃತಕ ಬುದ್ಧಿಮತ್ತೆಯಂತಹ ವಿಭಾಗಗಳೊಂದಿಗೆ ಸಂಪರ್ಕ ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."