ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಬರಿಪಾಡಾಕ್ಕೆ ಭೇಟಿ ನೀಡಿದರು.
ರಸಿಕ ರೇ ದೇವಾಲಯ ಮತ್ತು ಪುರಾತನ ಹರಿಪುರಗರ್ ಕೋಟೆಯ ಭೂಖನನ ರಚನೆಯ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಾರಂಭದ ಸಂಕೇತವಾಗಿ ಡಿಜಿಟಲ್ ಫಲಕವನ್ನು ಅವರು ಅನಾವರಣ ಮಾಡಿದರು.
ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಿದರು.
‘ಐ.ಒ.ಸಿ.ಲ್.’ ನ “ಪಾರಾದೀಪ್ –ಹಾಲ್ದಿಯ –ದುರ್ಗಪುರ್“ ಎಲ್.ಪಿ.ಜಿ. ಪೈಪ್ ಲೈನ್ ನ “ಬಲಸೊರ್ –ಹಾಲ್ದಿಯ –ದುರ್ಗಪುರ್” ವಿಭಾಗವನ್ನು ಅವರು ದೇಶಾರ್ಪಣೆ ಮಾಡಿದರು. ಬಾಲಸೊರ್ ನಲ್ಲಿ ಮಲ್ಟಿ ಮೊಡಲ್ ಲೊಜಿಸ್ಟಿಕ್ ಪಾರ್ಕ್ ಮತ್ತು ಆರು ಪಾಸ್ ಪೊರ್ಟ್ ಸೇವಾ ಕೇಂದ್ರಗಳನ್ನು ಅವರು ಉದ್ಘಾಟಿಸಿದರು. ಟಾಟಾನಗರ್ ನಿಂದ ಬದಾಂಪಹರ್ ಗೆ ಸಾಗುವ 2ನೇ ಪ್ಯಾಸೆಂಜರ್ ರೈಲ್ ಗೆ ಅವರು ಹಸಿರು ನಿಶಾನೆ ತೋರಿದರು.
ಇಂದು ಉದ್ಘಾಟನೆಯಾದ ಹಾಗೂ ಶಂಕುಸ್ಥಾಪನೆಯಾದ ಯೋಜನೆಗಳ ಒಟ್ಟು ಮೌಲ್ಯವು ರೂ 4000 ಕೋಟಿಗೂ ಅಧಿಕವಿದೆ ಎಂದು ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ಹೇಳಿದರು.
ಜನಸಾಮಾನ್ಯರ ಜೀವನದಲ್ಲಿ ಮೂಲಭೂತ ಬದಲಾವಣೆ ತರುವಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರವು ಹೆಚ್ಚಿನ ಗಮನಹರಿಸಿದೆ ಎಂದು ಅವರು ಹೇಳಿದರು.
“ಬಲಸೊರ್ –ಹಾಲ್ದಿಯ –ದುರ್ಗಪುರ್” ಎಲ್.ಪಿ.ಜಿ. ಪೈಪ್ ಲೈನ್ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಈ ಪ್ರದೇಶಗಳಿಗೆ ಸಾಗಾಟ ವೆಚ್ಚ ಮತ್ತು ಸಮಯಗಳನ್ನು ಉಳಿಸುವ ಮೂಲಕ ಸುಗಮ ಎಲ್.ಪಿ.ಜಿ. ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
21ನೇ ಶತಮಾನದಲ್ಲಿ ಸಂಪರ್ಕ ಅತ್ಯಂತ ಪ್ರಾಧಾನ್ಯತೆ ಪಡೆದಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಆಧುನಿಕ ಮೂಲಸೌಕರ್ಯ ಮತ್ತು ಸಂಪರ್ಕಗಳನ್ನು ಸೃಷ್ಠಿಸಲು ಅಭೂತಪೂರ್ವ ಹೂಡಿಕೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು. ಒಡಿಶಾದಲ್ಲೂ ಕೂಡಾ ಉತ್ತಮ ರಸ್ತೆ, ರೈಲು ಮತ್ತು ವಾಯುಯಾನ ಸಂಪರ್ಕ ಪೂರೈಕೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿ ರೈಲು ಸಂಪರ್ಕವು ಜನರ ಓಡಾಟಕ್ಕೆ ಅನುಕೂಲ ಮಾಡುತ್ತವೆ ಹಾಗೂ ಖನಿಜ ಸಂಪನ್ಮೂಲಗಳು ಕೈಗಾರಿಕೆಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ ಎಂದು ಅವರು ಹೇಳಿದರು.
ಹೆಚ್ಚುವರಿ ಮೂಲಸೌಕರ್ಯಗಳ ಅಧಿಕ ಪ್ರಯೋಜನ ದೇಶದ ಮಧ್ಯಮ ವರ್ಗದವರಿಗೆ ಮತ್ತು ಮಧ್ಯಮ ವ್ಯವಹಾರಿಕೋದ್ಯಮಿಗಳಿಗೆ ಲಭಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಆಧುನಿಕ ರಸ್ತೆಗಳು, ಶುಚಿತ್ವದ ರೈಲುಗಳು ಮತ್ತು ಕಡಿಮೆ ವೆಚ್ಚದ ವಾಯುಯಾನ (ವಿಮಾನ ಪ್ರಯಾಣ) ವ್ಯವಸ್ಥೆಗಳೆಲ್ಲಾ ಮಧ್ಯಮ ವರ್ಗದವರ ಸುಗಮ ಜೀವನಕ್ಕೆ ನೀಡುವ ಕೊಡುಗೆಗಳಾಗಿವೆ ಎಂದು ಅವರು ಹೇಳಿದರು.
ಜನರು ಪಾಸ್ ಪೊರ್ಟ್ ಪಡೆಯುವಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಕಡಿಮೆಗೊಳಿಸಲು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರವು ಪ್ರಯತ್ನಗಳನ್ನು ಮಾಡಿದೆ. ಈ ನಿಟ್ಟಿನ ಹೆಜ್ಜೆಯಾಗಿ, ಇಂದು ನಾಲ್ಕು ಪಾಸ್ ಪೊರ್ಟ್ ಕೇಂದ್ರಗಳನ್ನು ಉದ್ಘಾಟನೆ ಮಾಡಲಾಗಿದೆ. “ಸುಗಮ ಜೀವನ” ನಿಟ್ಟಿನಲ್ಲಿ ಇದು ಇನ್ನೊಂದು ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ದೇಶದ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರವು ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನಂಬಿಕೆ, ಅಧ್ಯಾತ್ಮಿಕತೆ ಮತ್ತು ಇತಿಹಾಸಗಳಿಗೆ ಸಂಬಂಧಪಟ್ಟ ಸ್ಥಳಗಳನ್ನು ಯೋಗ ಮತ್ತು ಆಯುರ್ವೇದದ ಜ್ಞಾನಗಳ ಜತೆ ಸೇರಿಸಿ ಪ್ರಚಾರ ಮಾಡಬೇಕು ಹಾಗೂ ಪ್ರೇತ್ಸಾಹಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು, ಇಂದು ಪ್ರಾರಂಭವಾದ ರಸಿಕ ರೇ ದೇವಾಲಯ ಮತ್ತು ಪುರಾತನ ಹರಿಪುರಗರ್ ಕೋಟೆಯ ಭೂಖನನ ರಚನೆಯ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳನ್ನು ಉಲ್ಲೇಖಿಸಿದರು. ಸರಕಾರದ ಇಂತಹ ಕೆಲಸಗಳು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.
विकास, सबका विकास, तेज़ विकास और संपूर्ण विकास- ये केंद्र सरकार के संस्कार हैं।
— narendramodi_in (@narendramodi_in) January 5, 2019
बीते साढ़े 4 वर्षों से सरकार ने ऐसे विकास का रास्ता चुना है, जिस पर नए भारत की भव्य और दिव्य इमारत का निर्माण हो सके: PM @narendramodi
आज हम 21वीं सदी के उस पड़ाव पर हैं, जब कनेक्टिविटी पर बहुत ज्यादा काम किए जाने की आवश्यकता है। इसलिए हमारी सरकार पूरे देश में कनेक्टिविटी बढ़ाने पर निरंतर जोर दे रही है। इसमें भी पूर्वी भारत, उत्तर पूर्वी भारत पर विशेष ध्यान दिया जा रहा है: PM @narendramodi
— narendramodi_in (@narendramodi_in) January 5, 2019
रेलवे के साथ-साथ हमारे नेशनल हाईवे भी कनेक्टिविटी का मज़बूत आधार रहे हैं। केंद्र सरकार का ये निरंतर प्रयास है कि गांव से लेकर शहर तक पक्की और अच्छी सड़कों का जाल बिछाया जाए: PM @narendramodi
— narendramodi_in (@narendramodi_in) January 5, 2019
जब आधुनिक सड़कें होती हैं, बेहतर साफ-सुथरी ट्रेनें होती हैं, हवाई जहाज का किराया कम होता है, तो मध्यम वर्ग के लोगों की Ease of Living भी बढ़ती है: PM @narendramodi
— narendramodi_in (@narendramodi_in) January 5, 2019
सामान्य मानवी का सिस्टम से संघर्ष कम हो, जिन सुविधाओं का वो हकदार है, वो उसे आसानी से मिलें, सरकारी सेवाओं के लिए उसे दफ्तरों के चक्कर ना लगाने पड़े, इस दिशा में हम आगे बढ़ रहे हैं और नई व्यवस्थाएं तैयार कर रहे हैं: PM @narendramodi
— narendramodi_in (@narendramodi_in) January 5, 2019