ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಬಾಲ್ಪುರದ ಐಐಎಂ ಶಾಶ್ವತ ಆವರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಸಚಿವರುಗಳಾದ ಶ್ರೀ ರಮೇಶ್ ಪೋಖ್ರಿಯಾನ್ ನಿಶಾಂಕ್, ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಪ್ರತಾಪ್ ಚಂದ್ರ ಸಾರಂಗಿ ಸೇರಿದಂತೆ ಒಡಿಶಾದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಂಬಾಲ್ಪುರದ ಐಐಎಂ ಶಾಶ್ವತ ಆವರಣ ಒಡಿಶಾದ ಸಂಸ್ಕೃತಿ ಮತ್ತು ಸಂಪನ್ಮೂಲವನ್ನಷ್ಟೇ ಪ್ರದರ್ಶಿಸುವುದಿಲ್ಲ, ಜೊತೆಗೆ ವ್ಯವಸ್ಥಾಪನೆಯ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆಯನ್ನೂ ತೋರುತ್ತದೆ ಎಂದರು. ಹಿಂದೆ ಭಾರತಕ್ಕೆ ಹೊರಗಿನ ಬಹುರಾಷ್ಟ್ರೀಯ ಸಂಸ್ಥೆಗಳು ಬಂದಾಗ ಹೇಗೆ ಪ್ರತಿರೋಧದ ಪ್ರವೃತ್ತಿ ವ್ಯಕ್ತವಾಗಿತ್ತೋ, ಅದೇ ರೀತಿಯ ಪ್ರವೃತ್ತಿಯನ್ನು ಇತ್ತೀಚೆಗೆ ಭಾರತೀಯ ಬಹು-ರಾಷ್ಟ್ರೀಯ ಸಂಸ್ಥೆಗಳೂ ಎದುರಿಸಿದವು ಎಂದು ಅವರು ಹೇಳಿದರು. ಶ್ರೇಣಿ 2 ಮತ್ತು ಶ್ರೇಣಿ 3ರ ನಗರಗಳು ನವೋದ್ಯಮಗಳನ್ನು ಕಾಣುತ್ತಿದ್ದು, ಇತ್ತೀಚಿನ ಸಂಕಷ್ಟದ ಕಾಲದಲ್ಲಿ ಭಾರತವು ಹೆಚ್ಚು ‘ಯುನಿಕಾರ್ನ್’ಗಳನ್ನು ಕಂಡಿತು, ಕೃಷಿ ಕ್ಷೇತ್ರದಲ್ಲಿ ಶೀಘ್ರ ಸುಧಾರಣೆಗಳೂ ನಡೆದವು. ಇಂತಹ ಸನ್ನಿವೇಶದಲ್ಲಿ ದೇಶದ ಆಕಾಂಕ್ಷೆಯೊಂದಿಗೆ ತಮ್ಮ ವೃತ್ತಿ ಜೀವನವನ್ನು ಹೊಂದಿಸಲು ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ನವ ದಶಕದಲ್ಲಿ ಬ್ರಾಂಡ್ ಇಂಡಿಯಾಕ್ಕೆ ಜಾಗತಿಕ ಮನ್ನಣೆ ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದೂ ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿಯವರು ಸ್ಥಳೀಯತೆಯನ್ನು ಜಾಗತಿಕ ಮಟ್ಟಕ್ಕೆ ಏರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಂಬಾಲ್ಪುರ ಪ್ರದೇಶದಲ್ಲಿರುವ ಅಪಾರ ಸ್ಥಳೀಯ ಸಾಮರ್ಥ್ಯದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸುವ ಕಲ್ಪನೆಗಳನ್ನು ರೂಪಿಸಲು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ಥಳೀಯ ಕರಕುಶಲ ವಸ್ತುಗಳು, ಜವಳಿ ಮತ್ತು ಬುಡಕಟ್ಟು ಕಲೆಯಂತಹ ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ಸ್ಥಳೀಯ ಉತ್ಪನ್ನಗಳ ಬಗ್ಗೆ ಶ್ರಮಿಸುವಂತೆ ಅವರು ತಿಳಿಸಿದರು. ಈ ಎಲ್ಲವೂ ಆತ್ಮನಿರ್ಭರ ಭಾರತ್ ಅಭಿಯಾನಕ್ಕೆ ಸಹಕಾರಿಯಾಗುವುದರಿಂದ ಈ ಪ್ರದೇಶದ ಸಮೃದ್ಧ ಖನಿಜಗಳು ಮತ್ತು ಇತರ ಸಂಪನ್ಮೂಲಗಳ ಉತ್ತಮ ನಿರ್ವಹಣೆಗೆ ಶ್ರಮಿಸುವಂತೆ ಅವರು ತಿಳಿಸಿದರು. ಐಐಎಂ ವಿದ್ಯಾರ್ಥಿಗಳು ಸ್ಥಳೀಯ ಜಾಗತಿಕ ತಯಾರಿಕೆಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಬೇಕಾಗಿರುವುದರಿಂದ ಅವರು ಆತ್ಮನಿರ್ಭರ ಭಾರತ ಅಭಿಯಾನ, ಸ್ಥಳೀಯ ಉತ್ಪನ್ನಗಳು ಮತ್ತು ಅಂತಾರಾಷ್ಟ್ರೀಯ ಸಹಯೋಗದ ನಡುವೆ ಸೇತುವೆಯಾಗಿ ಕೆಲಸ ಮಾಡಬಹುದು. "ನಿಮ್ಮ ನಿರ್ವಹಣಾ ಕೌಶಲ್ಯಗಳನ್ನು ನಾವಿನ್ಯತೆ, ಸಮಗ್ರತೆ ಮತ್ತು ಒಳಗೊಳ್ಳುವಿಕೆಯ ಮಂತ್ರದೊಂದಿಗೆ ನೀವು ತೋರಿಸಬೇಕಾಗಿದೆ" ಎಂದು ಶ್ರೀ ಮೋದಿ ಹೇಳಿದರು.
ಸಂಯೋಜಕ ಮುದ್ರಣ, ಬದಲಾಗುತ್ತಿರುವ ಉತ್ಪಾದನಾ ತಂತ್ರಗಳು, ಸಾರಿಗೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಂತಹ ಹೊಸ ತಂತ್ರಜ್ಞಾನಗಳ ನಿಟ್ಟಿನಲ್ಲಿ ಹೊಸ ನಿರ್ವಹಣಾ ಸವಾಲುಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಈ ತಂತ್ರಜ್ಞಾನಗಳು ಡಿಜಿಟಲ್ ಸಂಪರ್ಕದೊಂದಿಗೆ, ಮತ್ತು ಎಲ್ಲಿಂದಲಾದರೂ ಕಾರ್ಯನಿರ್ವಹಿಸುವ ಪರಿಕಲ್ಪನೆಯೊಂದಿಗೆ ಜಗತ್ತನ್ನು ಜಾಗತಿಕ ಗ್ರಾಮವಾಗಿ ಪರಿವರ್ತಿಸಿದೆ. ಭಾರತವು ಇತ್ತೀಚಿನ ತಿಂಗಳುಗಳಲ್ಲಿ ಶೀಘ್ರ ಸುಧಾರಣೆಗಳನ್ನು ಕೈಗೊಂಡಿರುವುದಷ್ಟೇ ಅಲ್ಲ ಬದಲಾವಣೆಗಳೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ ಆದರೆ ಅವುಗಳನ್ನು ಮೀರಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಬದಲಾಗುತ್ತಿರುವ ಕಾರ್ಯಶೈಲಿ ನಿರ್ವಹಣಾ ಕೌಶಲ್ಯದ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತಿವೆ ಮತ್ತು ಟಾಪ್ –ಡೌನ್ ಅಥವಾ ಟಾಪ್ – ಹೆವೆ ನಿರ್ವಹಣಾ ಕೌಶಲಗಳನ್ನು ಸಹಯೋಗಿ, ನಾವಿನ್ಯ ಮತ್ತು ಪರಿವರ್ತನಾತ್ಮಕ ನಿರ್ವಹಣೆಯೊಂದಿಗೆ ಬದಲಾಯಿಸಲಾಗುತ್ತಿದೆ. ಚಿತ್ರದಲ್ಲಿ ಬಾಟ್ ಗಳು ಮತ್ತು ಅನುಕ್ರಮಣಿಕೆಗಳೊಂದಿಗೆ, ತಾಂತ್ರಿಕ ನಿರ್ವಹಣೆಯು ಮಾನವ ನಿರ್ವಹಣೆಯಷ್ಟೇ ಮುಖ್ಯವಾಗಿದೆ ಎಂದರು.
ಭಾರತದಲ್ಲಿ ಕೋವಿಡ್ ಬಿಕ್ಕಟ್ಟನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಾವೀನ್ಯತೆ ಮತ್ತು ಸಹಯೋಗದೊಂದಿಗೆ ಹೇಗೆ ನಿಭಾಯಿಸಲಾಯಿತು ಎಂಬ ಬಗ್ಗೆ ಸಂಶೋಧನೆ ನಡೆಸಲು ಶ್ರೀ ಮೋದಿ ವಿದ್ಯಾರ್ಥಿಯನ್ನು ತಿಳಿಸಿದರು. ಇಷ್ಟು ಕಡಿಮೆ ಸಮಯದಲ್ಲಿ ದಕ್ಷತೆ ಮತ್ತು ಸಾಮರ್ಥ್ಯವನ್ನು ಹೇಗೆ ವಿಸ್ತರಿಸಲಾಯಿತು ಎಂಬುದನ್ನು ಅಧ್ಯಯನ ಮಾಡಲು ಅವರು ಕೋರಿದರು. ದೇಶವು ಸಮಸ್ಯೆಗಳ ಪರಿಹಾರಕ್ಕೆ ಅಲ್ಪಾವಧಿ ದೃಷ್ಟಿಕೋನ ರೂಪಿಸುತ್ತಿತ್ತು, ಆದರೆ ಈಗ ದೀರ್ಘಾವಧಿಯ ಪರಿಹಾರಗಳತ್ತ ಹೇಗೆ ಗಮನ ಹರಿಸಲಾಗಿದೆ ಎಂಬ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಸಾಮೂಹಿಕ ಪ್ರಮಾಣದ ನಾವೀನ್ಯತೆ, ಯೋಜನೆ ಮತ್ತು ಅನುಷ್ಠಾನದ ಅಂಶವನ್ನು ವಿವರಿಸಲು ಅವರು, ಜನ ಧನ್ ಖಾತೆಗಳು ಮತ್ತು ದೇಶದಲ್ಲಿ ಎಲ್.ಪಿ.ಜಿ ಸಂಪರ್ಕ ವ್ಯಾಪ್ತಿ 2014ರಲ್ಲಿದ್ದ ಶೇ. 55 ರಿಂದ ಇಂದು ಶೇಕಡಾ 98 ಕ್ಕೆ ಹೇಗೆ ಸುಧಾರಿಸಿತು ಎಂಬ ಉದಾಹರಣೆ ನೀಡಿದರು. "ನಿರ್ವಹಣೆ ಎಂದರೆ ಕೇವಲ ದೊಡ್ಡ ಕಂಪನಿಗಳನ್ನು ನಿರ್ವಹಿಸುವುದಷ್ಟೇ ಅಲ್ಲ, ನಿರ್ವಹಣೆ ಎಂದರೆ ಜೀವನವನ್ನು ನಿರ್ವಹಿಸುವುದೂ" ಆಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಉತ್ತಮ ವ್ಯವಸ್ಥಾಪಕರಾಗಲು ದೇಶದ ಮುಂದೆ ಇರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ, ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಅವರ ಪರಿಣತಿಯ ಮೇಲೆ ಕೇಂದ್ರೀಕರಿಸದೆ, ವಿಸ್ತೃತವಾದ ವ್ಯಾಪ್ತಿಯನ್ನು ಹೊಂದುವುದು ಅತ್ಯಗತ್ಯ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ಅವಧಿಯಲ್ಲಿ ಹೊರಹೊಮ್ಮಿದ ವೃತ್ತಿಪರ ಶಿಕ್ಷಣದಲ್ಲಿನ ಕಂದಕಗಳನ್ನು ತೆಗೆದುಹಾಕಲು ವಿಶಾಲ ಆಧಾರಿತ, ಬಹು-ಶಿಸ್ತಿನ ಮತ್ತು ಸಮಗ್ರ ವಿಧಾನಕ್ಕೆ ಮಹತ್ವ ನೀಡುತ್ತಿದೆ ಎಂದು ಹೇಳಿದರು.