ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ (ಎ.ಐ.ಐ.ಎಂ.ಎಸ್.) ನಲ್ಲಿ ರಾಷ್ಟ್ರೀಯ ವೃದ್ದಾಪ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು. ಈ ಕೇಂದ್ರವು ವೃದ್ದರಿಗೆ ಬಹು ಶಿಸ್ತೀಯ ಆಧುನಿಕ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ. ಇದರಲ್ಲಿ 200 ಜನರಲ್ ವಾರ್ಡ್ ಹಾಸಿಗೆಗಳಿರುತ್ತವೆ.

ಇದೇ ಸಂಧರ್ಭದಲ್ಲಿ ಪ್ರಧಾನ ಮಂತ್ರಿಯವರು ಸಫ್ದರ್ ಜಂಗ್ ಆಸ್ಪತ್ರೆಯ 555 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕಟ್ಟಡ ವಿಭಾಗವನ್ನು ಉದ್ಘಾಟಿಸಿದರು. ಅವರು ಸಫ್ದರ್ ಜಂಗ್ ಆಸ್ಪತ್ರೆಯ 500 ಹಾಸಿಗೆಗಳ ನೂತನ ತುರ್ತು ಚಿಕಿತ್ಸಾ ವಿಭಾಗವನ್ನು ಲೋಕಾರ್ಪಣೆಗೈದರು. ಎ.ಐ.ಐ.ಎಂ.ಎಸ್. ನಲ್ಲಿ 300 ಹಾಸಿಗೆಗಳ ವಿಶ್ರಾಮ ಸದನವನ್ನು ಮತ್ತು ಎ.ಐ.ಐ.ಎಂ.ಎಸ್, ಅನ್ಸಾರಿ ನಗರ್ ಹಾಗು ಟ್ರೂಮಾ ಕೇಂದ್ರವನ್ನು ಸಂಪರ್ಕಿಸುವ ವಾಹನಸಂಚಾರಯುಕ್ತ ಸುರಂಗವನ್ನು ಉದ್ಘಾಟಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಲಾಗಿದೆ. ಸರಣಿ ನೀತಿ ಮಧ್ಯಪ್ರವೇಶಗಳ ಮೂಲಕ ಕೇಂದ್ರ ಸರಕಾರವು ಬಡವರು ಮತ್ತು ಮಧ್ಯಮವರ್ಗದವರಿಗೆ ಉತ್ತಮ ಆರೋಗ್ಯ ರಕ್ಷಣಾ ಸೇವೆ ಲಭ್ಯವಾಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಈಗಿರುವ ಆರೋಗ್ಯ ರಕ್ಷಣಾ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಶ್ರೇಣಿ 2 ಮತ್ತು 3 ದರ್ಜೆಯ ನಗರಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಆರೋಗ್ಯ ನೀತಿಯ ಬಗ್ಗೆ ಪ್ರಸ್ತಾವಿಸಿದ ಪ್ರಧಾನ ಮಂತ್ರಿಗಳು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆ ಒದಗಿಸುವುದು ಮತ್ತು ರೋಗಗಳನ್ನು ತಡೆಗಟ್ಟುವುದು ಸರಕಾರದ ಕಾರ್ಯಕ್ರಮಗಳ ಆದ್ಯತೆಯಾಗಿದೆ ಎಂದರು. ಗ್ರಾಮೀಣಾಭಿವೃದ್ದಿ ಮಂತ್ರಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯ ಮತ್ತು ಆಯುಷ್ ಮಂತ್ರಾಲಯ, ಇವೆಲ್ಲವುಗಳನ್ನೂ ಈ ಬಹುಶಿಸ್ತೀಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದವರು ನುಡಿದರು.

2025 ರೊಳಗೆ ಭಾರತದಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು ಜಾಗತಿಕ ಗುರಿಯಾದ 2030 ಕ್ಕಿಂತ ಮೊದಲೇ ಈ ಸಾಧನೆ ಮಾಡಲಾಗುವುದು ಎಂದರು. ದೇಶದ ವೈದ್ಯಕೀಯ ವಲಯ ಈ ಸಾಧನೆ ಮಾಡುವ ಬಗ್ಗೆ ತಮಗೆ ವಿಶ್ವಾಸ ಇದೆ ಎಂದವರು ಹೇಳಿದರು.

 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How MSMEs in Tier 2 & Tier 3 Cities Are Fuelling India’s Growth

Media Coverage

How MSMEs in Tier 2 & Tier 3 Cities Are Fuelling India’s Growth
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2025
March 10, 2025

Appreciation for PM Modi’s Efforts in Strengthening Global Ties