IICC would reflect India’s economic progress, rich cultural heritage, and our consciousness towards environment protection: PM Modi
Our Government has begun a series of unprecedented projects for the nation’s development: PM Modi
Our Government does not shy away from taking tough decisions in national interest: PM Modi
All round progress has happened in the last four years only because national interest has been kept supreme: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ದ್ವಾರಕಾದಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತು ಪ್ರದರ್ಶನ ಕೇಂದ್ರ (ಐಐಸಿಸಿ)ಗೆ ಶಂಕುಸ್ಥಾಪನೆ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಕೇಂದ್ರವು ಭಾರತದ ಆರ್ಥಿಕ ಪ್ರಗತಿ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆಯತ್ತ ನಮ್ಮ ಕಾಳಜಿಯನ್ನು ಬಿಂಬಿಸುತ್ತದೆ ಎಂದರು.  ಸುಗಮವಾಗಿ ವಾಣಿಜ್ಯ ನಿರ್ವಹಣೆ ಮತ್ತು ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವುದಕ್ಕೆ ಮಹತ್ವ ನೀಡುತ್ತಿರುವ ಸರ್ಕಾರದ ದೃಷ್ಟಿಕೋನದ ಭಾಗವಾಗಿದೆ ಎಂದರು.

 

ದೇಶದ ಅಭಿವೃದ್ಧಿಗಾಗಿ ಅಭೂತಪೂರ್ವ ಸರಣಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹೇಗೆ ಆರಂಭಿಸುತ್ತಿದೆ ಎಂಬುದನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಅವರು ಅತಿ ಉದ್ದನೆಯ ಸುರಂಗ, ಅತಿ ಉದ್ದದ ಅನಿಲ ಕೊಳವೆಮಾರ್ಗ, ಅತಿ ದೊಡ್ಡ ಮೊಬೈಲ್ ಉತ್ಪಾದನಾ ಘಟಕ ಮತ್ತು ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಮತ್ತಿತರರ ಯೋಜನೆಗಳನ್ನು ಉಲ್ಲೇಖಿಸಿದರು. ಇದು ನವ ಭಾರತದ ಕೌಶಲ, ಮಾನದಂಡ ಮತ್ತು ವೇಗದ ಸಂಕೇತವಾಗಿದೆ ಎಂದು ಅವರು ಹೇಳಿದರು.

ವಿಶ್ವಾದ್ಯಂತದ ಹಲವು ರಾಷ್ಟ್ರಗಳು ಸಮಾವೇಶಗಳನ್ನು ಹಮ್ಮಿಕೊಳ್ಳಲು ವ್ಯಾಪಕ ಸಾಮರ್ಥ್ಯದ ತಾಣಗಳನ್ನು ಅಭಿವೃದ್ಧಿಪಡಿಸಿವೆ ಎಂದರು. ಈ ಬಗ್ಗೆ ಕೆಲ ಕಾಲದಿಂದ ಚಿಂತನೆಯನ್ನೇ ಮಾಡಿರಲಿಲ್ಲ ಎಂದರು. ಈಗ ಇದು ಬದಲಾಗುತ್ತಿದೆ ಎಂದೂ ಹೇಳಿದರು.

 

ದೇಶವು ಬಲವಾದ ಸಾಂಸ್ಥಿಕ ಮತ್ತು ಸಂಘಟನಾತ್ಮಕ ಸಾಮರ್ಥ್ಯದ ಮೂಲಕ ಅಭಿವೃದ್ಧಿ ಸಾಧಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದು ಹಲವು ವರ್ಷಗಳ ಪ್ರಯತ್ನದ ಫಲ ಎಂದರು. ಇದಕ್ಕಾಗಿ, ಸೂಕ್ತ ಸಮಯದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ವಿಳಂಬವಿಲ್ಲದೆ ಅನುಷ್ಠಾನ ಮಾಡುವುದು ಅತಿ ಮುಖ್ಯ ಎಂದರು.

ಈ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಸಾರ್ವಜನಿಕ ಬ್ಯಾಂಕ್ ಗಳ ವಿಲೀನ ಕುರಿತು ಕೈಗೊಂಡ ನಿರ್ಧಾರದ ಪ್ರಸ್ತಾಪ ಮಾಡಿದರು. ಈ ಬಗ್ಗೆ ಎರಡೂವರೆ ದಶಕಗಳ ಹಿಂದೆಯೇ ಚಿಂತಿಸಲಾಗಿತ್ತು. ಆದರೆ, ಜಾರಿಯಾಗಿರಲಿಲ್ಲ ಎಂದರು. ತಮ್ಮ ಸರ್ಕಾರ ದೇಶದ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು. ರಾಷ್ಟ್ರದ ಹಿತವನ್ನೇ ಪರಮೋಚ್ಛವೆಂದು ಪರಿಗಣಿಸಿದ್ದರಿಂದಲೇ ಕಳೆದ ನಾಲ್ಕು ವರ್ಷಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದರು. ಜನರ ಹಿತದ ದೃಷ್ಟಿಯಿಂದ ದೃಢ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿಯಲಿದೆ ಎಂದರು. ಸವಾಲುಗಳ ನಡುವೆಯೂ ಆರ್ಥಿಕತೆ ದೃಢಹೆಜ್ಜೆ ಇಟ್ಟಿದೆ ಎಂದರು. ಸುಗಮ ವಾಣಿಜ್ಯ ನಡೆಸುವುದನ್ನು ಪ್ರಸ್ತಾಪಿಸಿದ ಅವರು, ಸರ್ಕಾರವು ಈಗ ಇದನ್ನು ಜಿಲ್ಲಾಮಟ್ಟಕ್ಕೆ ತೆಗೆದುಕೊಂಡು ಹೋಗಲು ಕಾರ್ಯೋನ್ಮುಖವಾಗಿದೆ ಎಂದರು.

Click here to read PM's speech