"ದೇಶವಿಂದು ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗುತ್ತಿದೆ ಹೇಳಿದ್ದಾರೆ ಪ್ರಧಾನಿ ಮೋದಿ "
ಶುದ್ಧ ಇಂಧನದ ಬಗೆಹರಿಕೆ(ಪರಿಹಾರ)ಗಳನ್ನು ಸಾಧಿಸುವಲ್ಲಿ ಸಿ.ಜಿ.ಡಿ ಜಾಲವು ಪ್ರಧಾನಪಾತ್ರ ವಹಿಸುತ್ತದೆ : ಪ್ರಧಾನಿ ಮೋದಿ
ಶುದ್ಧ ಇಂಧನ ಮತ್ತು ಅನಿಲ ಆಧರಿತ ಆರ್ಥಿಕತೆಯ ಗುರಿ ತಲುಪಲು ಸರಕಾರವು ಶ್ರಮಿಸುತ್ತಿದೆ : ಪ್ರಧಾನಿ ಮೋದಿ

9ನೇ ಸುತ್ತಿನ ಸಿ.ಜಿ.ಡಿ ಹರಾಜಿನಡಿ ಪ್ರದಾನಿಸಿದ ನಗರ ಅನಿಲ ವಿತರಣಾ (ಸಿ.ಜಿ.ಡಿ) ಕಾರ್ಯಾರಂಭಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ಮಾಡಿದರು. ಅವರು ಈ ಸಂದರ್ಭದಲ್ಲಿ 10ನೇ ಸುತ್ತಿನ ಸಿ.ಜಿ.ಡಿ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿದರು.

ಸಭಿಕರನ್ನುದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಿ.ಜಿ.ಡಿ. ಹರಾಜಿನ 9ನೇ ಸುತ್ತಿನಡಿ 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲ ಸ್ಥಾಪನೆಯ ಕೆಲಸಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಸಿ.ಜಿ.ಡಿ ಹರಾಜು 10ನೇ ಸುತ್ತಿನ ನಂತರ, ನಗರ ಅನಿಲ ವಿತರಣಾ ಜಾಲವು ದೇಶದಾಧ್ಯಂತ 400 ಜಿಲ್ಲೆಗಳನ್ನು ಹಾಗೂ 70%ರಷ್ಟು ಜನಸಂಖ್ಯೆಯನ್ನು ತಲುಪಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ದೇಶವಿಂದು ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗುತ್ತಿದೆ. ಕೇಂದ್ರ ಸರಕಾರವಿಂದು ಅನಿಲ ಆಧಾರಿತ ಆರ್ಥಿಕತೆಯ ಎಲ್ಲಾ ಆಯಾಮಗಳತ್ತ ಗಮನಹರಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದ ಅನಿಲ ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಸದೃಢಗೊಳಿಸುವತ್ತ ಕೇಂದ್ರ ಸರಕಾರವಿಂದು ಇಟ್ಟಿರುವ ವಿವಿಧ ಹೆಜ್ಜೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವರಿಸುತ್ತಾ, ಈ ಸಂದರ್ಭದಲ್ಲಿ ವಿಶೇಷವಾಗಿ ಎಲ್.ಎನ್.ಜಿ. ಘಟಕ(ಟೆಮಿನಲ್ಸ್)ಗಳ ಸಂಖ್ಯೆಗಳನ್ನು ವಿಸ್ತರಿಸಿದೆ, ರಾಷ್ಟ್ರವ್ಯಾಪಿ ಅನಿಲ ಪೂರೈಕಾ ಜಾಲ(ಗ್ರಿಡ್) ಮತ್ತು ನಗರ ಅನಿಲ ವಿತರಣಾ ಜಾಲಗಳನ್ನು ಕಲ್ಪಿಸಿದೆ ಎಂದು ಉಲ್ಲೇಖಿಸಿದರು.

ಶುದ್ಧ ಇಂಧನದತ್ತ ಸಾಗುತ್ತಿರುವ ಅನಿಲ ಆಧಾರಿತ ಆರ್ಥಿಕತೆಯ ಪ್ರಧಾನ್ಯತೆಯನ್ನು ವಿವರಿಸುತ್ತಾ ಪ್ರಧಾನಮಂತ್ರಿ ಅವರು, ಶುದ್ಧ ಇಂಧನದ ಬಗೆಹರಿಕೆ(ಪರಿಹಾರ)ಗಳನ್ನು ಸಾಧಿಸುವಲ್ಲಿ ಸಿ.ಜಿ.ಡಿ ಜಾಲವು ಪ್ರಧಾನಪಾತ್ರ ವಹಿಸುತ್ತದೆ ಎಂದು ಹೇಳಿದರು. ಶುದ್ಧ ಇಂಧನದತ್ತ ಕೇಂದ್ರ ಸರಕಾರದ ಪ್ರಯತ್ನಗಳು ಬಲುವಿಸ್ತಾರದ ತಳಹದಿ ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಎಥೆನೋಲ್ ಮಿಶ್ರಣ, ಕಂಪ್ರೆಸ್ಸ್ಡ್ ಜೈವಿಕ ಅನಿಲ ಘಟಕಗಳು, ವಿಸ್ತರಿತ ಎಲ್.ಪಿ.ಜಿ. ವ್ಯಾಪ್ತಿ ಮತ್ತು ವಾಹನಗಳಿಗೆ ಬಿ.ಎಸ್-6 ಇಂಧನಗಳ ಪರಿಚಯಿಸುವಿಕೆ ಮುಂತಾದ ಕೇಂದ್ರ ಸರಕಾರದ ವಿವಿಧ ಶುದ್ಧ ಇಂಧನ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ 12 ಕೋಟಿಗೂ ಅಧಿಕ ಎಲ್.ಪಿ.ಜಿ ಸಂಪರ್ಕಗಳನ್ನು ಪೂರೈಸಲಾಗಿದೆ. ನಗರಗಳ ಅನಿಲ ಸಂಪರ್ಕಜಾಲಗಳು ನೂತನ ವಾತಾವರಣ ಪೂರಕ ವ್ಯವಸ್ಥೆಗಳನ್ನು ಸೃಷ್ಠಿಸುತ್ತವೆ. ಅನಿಲ ಆಧರಿತ ಕೈಗಾರಿಕೆಗಳು ಯುವಜನತೆಗೆ ಉದ್ಯೋಗ ಸೃಷ್ಟಿಸುತ್ತವೆ ಮತ್ತು ನಾಗರಿಕರಿಗೆ ಅನುಕೂಲಕರ ಜೀವನ ಸುಲಭಸಾಧ್ಯವಾಗಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.

ಶುದ್ಧ ಇಂಧನ ಮತ್ತು ಅನಿಲ ಆಧರಿತ ಆರ್ಥಿಕತೆಯ ಗುರಿ ತಲುಪಲು ಸರಕಾರವು ಶ್ರಮಿಸುತ್ತಿದೆ. ಕೇವಲ ನಮಗಾಗಿ ಮಾತ್ರವಲ್ಲ, ಎಲ್ಲಾ ಮಾನವಕುಲ(ಪ್ರತಿಯೊಬ್ಬ ಜನತೆ)ಕ್ಕಾಗಿ ಅಲ್ಲದೆ ಮುಂದಿನ ಜನಾಂಗಕ್ಕಾಗಿ ಶುದ್ಧ ಇಂಧನ ಮತ್ತು ಅನಿಲ ಆಧರಿತ ಆರ್ಥಿಕತೆಯ ಗುರಿ ಪೂರ್ಣಗೊಳಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.



 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi govt created 17.19 crore jobs in 10 years compared to UPA's 2.9 crore

Media Coverage

PM Modi govt created 17.19 crore jobs in 10 years compared to UPA's 2.9 crore
NM on the go

Nm on the go

Always be the first to hear from the PM. Get the App Now!
...
Prime Minister greets on the occasion of Urs of Khwaja Moinuddin Chishti
January 02, 2025

The Prime Minister, Shri Narendra Modi today greeted on the occasion of Urs of Khwaja Moinuddin Chishti.

Responding to a post by Shri Kiren Rijiju on X, Shri Modi wrote:

“Greetings on the Urs of Khwaja Moinuddin Chishti. May this occasion bring happiness and peace into everyone’s lives.