ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕೌಹಾರ್, ಅಮೇಥಿಗೆ ಭೇಟಿ ನೀಡಿದರು. ಅವರು ದಾಳಿ ಮಾಡುವ ಉದ್ದನೆಯ ಬಂದೂಕು ಕಲಶ್ನಿಕೋವ್ ಉತ್ಪದನೆಯ ಇಂಡೋ – ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ಉದ್ಯಮವನ್ನು ಲೋಕಾರ್ಪಣೆ ಮಾಡಿದರು.

ಅಮೇಥಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಅವರು ಅಡಿಗಲ್ಲು ಸಮಾರಂಭ ನೆರೆವೇರಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಓದಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಸಂದೇಶದಲ್ಲಿ ಅವರು ಹೇಳಿದ್ದಾರೆ “ ಈ ಹೊಸ ಉದ್ಯಮ ವಿಶ್ವ ಪ್ರಸಿದ್ಧ ದಾಳಿ ಮಾಡುವ ಉದ್ದನೆಯ ಬಂದೂಕು ಕಲಶ್ನಿಕೋವ್ ನ ಹೊಚ್ಚ ಹೊಸ 200 ನೇ ಸರಣಿಯ ಉತ್ಪದನೆಯನ್ನು ಮಾಡಲಿದೆ ಮತ್ತು ಕ್ರಮೇಣ ಸಂಪೂರ್ಣ ಉತ್ಪಾದನೆ ಸ್ಥಳೀಯವಾಗಿ ಆಗಲಿದೆ ಎಂದು. ಹೀಗೆ ಸಣ್ಣ ಶಸ್ತ್ರಾಸ್ತ್ರಗಳ ವಿಭಾಗದಲ್ಲಿ ಸುಧಾರಿತ ರಷ್ಯನ್ ತಂತ್ರಜ್ಞಾನಗಳನ್ನು ಆಧರಿಸಿ ಭಾರತೀಯ ರಕ್ಷಣಾ – ಔದ್ಯಮಿಕ ವಲಯ ರಾಷ್ಟ್ರೀಯ ರಕ್ಷಣಾ ಎಜನ್ಸಿಗಳ ಅವಶ್ಯಕತೆಯನ್ನು ಪೂರೈಸುವ ಅವಕಾಶ ಪಡೆಯಲಿದೆ.

|

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು ಈ ವಿಷಯ ಕುರಿತು ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದರು. ಈ ಸೌಲಭ್ಯದಿಂದ ಅಮೇಥಿಯಲ್ಲಿ ಲಕ್ಷಗಟ್ಟಲೆ ಬಂದೂಕು ತಯಾರಿಸಬಹುದಾಗಿದೆ ಮತ್ತು ನಮ್ಮ ರಕ್ಷಣಾ ಪಡೆಯಯನ್ನು ಶಕ್ತಿಶಾಲಿಯಾಗಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಈ ಬೆಳವಣಿಗೆಯಲ್ಲಿ ಈಗಾಗಲೇ ಬಹಳ ವಿಳಂಬವಾಗಿದೆ ಎಂದು ಅವರು ಹೇಳಿದರು. ನಮ್ಮ ಯೋಧರಿಗಾಗಿ ಹೊಸ ಮಾದರಿಯ ಬಂದೂಕುಗಳ ತಯಾರಿಯಲ್ಲಾದ ಈ ವಿಳಂಬ ಸೈನಿಕರಿಗೆ ಮಾಡಿದ ಅನ್ಯಾಯವೆಂದು ಅವರು ಹೇಳಿದರು. 2009 ರಲ್ಲಿ ಗುಂಡು ನಿರೋಧಕ ಜಾಕೆಟ್ ಗಳ ಅವಶ್ಯಕತೆಯನ್ನು ಹೇಳಿಕೊಂಡಾಗಲೂ 2014 ರವರೆಗೆ ಅವನ್ನು ಒದಗಿಸದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಈ ಅವಶ್ಯಕತೆಯನ್ನು ಈಗ ಕೇಂದ್ರ ಸರ್ಕಾರ ಪೂರೈಸಲಿದೆ ಎಂದೂ ಸಹ ಅವರು ಹೇಳಿದರು. ಹಿಂದೆ ಮಹತ್ವದ ಶಸ್ತ್ರಾಸ್ತ್ರಗಳನ್ನು ಶೇಖರಣೆಯಲ್ಲಿಯೂ ಇಂಥ ವಿಳಂಬವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು ಕೇಂದ್ರ ಸರ್ಕಾರದ ಪ್ರಯತ್ನದ ಫಲವಾಗಿ ಕೆಲ ತಿಂಗಳುಗಳಲ್ಲೇ ಅವು ನಮ್ಮ ವಾಯುಪಡೆ ಸೇರಲಿವೆ ಎಂದು ತಿಳಿಸಿದರು.

|
|
|

ಅಮೇಥಿಯಲ್ಲಿ ಕಾರ್ಯಾಚರಣೆಗೆ ತರುವಲ್ಲಿ ಇಕ್ಕಟ್ಟು ಎದುರಿಸುತ್ತಿರುವ ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಆ ಯೋಜನೆಗಳು ಕಾರ್ಯಾಚರಣೆ ಬರುವಂತೆ ಮತ್ತು ಜನರಿಗೆ ಉದ್ಯೋಗಗಳನ್ನು ಒದಗಿಸುವಂತೆ ಇಕ್ಕಟ್ಟುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಮೇಥಿಯಲ್ಲಿ ಪಿ ಎಂ ಆವಾಸ್ ಯೋಜನೆ, ಉಜ್ವಲಾ ಯೋಜನೆ, ಸೌಭಾಗ್ಯ ಯೋಜನೆ ಮತ್ತು ಶೌಚಾಲಯಗಳ ನಿರ್ಮಾಣ ಈಗ ಜನರ ಜೀವನವನ್ನು ಸುಲಭಗೊಳಿಸುತ್ತಿದೆ ಎಂದು ತಿಳಿಸಿದರು.

|

ಕೇಂದ್ರ ಸರ್ಕಾರ ಬಡವರನ್ನು ಶಕ್ತಿ ತುಂಬುವ ಮೂಲಕ ಅವರು ಬಡತನದಿಂದ ಹೊರಬರುವಂತೆ ಸಹಾಯ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು. ಅದೇ ರೀತಿ ಕೃಷಿಕರನ್ನು ಸಶಕ್ತರನ್ನಾಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಪ್ರಸ್ತಾಪಿಸಿದರು. ಮುಂದಿನ 10 ವರ್ಷಗಳಲ್ಲಿ ಈ ಯೋಜನೆಯಡಿ 7.5 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ತಲುಪಿಸಲಾಗುವುದು ಎಂದು ಅವರು ಹೇಳಿದರು.


|

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian startups raise $1.65 bn in February, median valuation at $83.2 mn

Media Coverage

Indian startups raise $1.65 bn in February, median valuation at $83.2 mn
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಮಾರ್ಚ್ 2025
March 04, 2025

Appreciation for PM Modi’s Leadership: Driving Self-Reliance and Resilience