Quoteಭಾರತೀಯತೆಯನ್ನು ಸಂರಕ್ಷಿಸಲು ಕೊಡುಗೆ ನೀಡಿದ ಮಹಾರಾಜ ಸುಹೆಲ್‌ದೇವ್ ಅವರನ್ನು ನಿರ್ಲಕ್ಷಿಸಲಾಗಿತ್ತು
Quoteಇತಿಹಾಸ ನಿರ್ಮಾಣಕಾರರಿಗೆ ಇತಿಹಾಸ ಬರಹಗಾರರಿಂದ ಆಗಿರುವ ಅನ್ಯಾಯವನ್ನು ಇದೀಗ ಸರಿಪಡಿಸಲಾಗುತ್ತಿದೆ
Quoteಬಸಂತ ಪಂಚಮಿ, ಸಾಂಕ್ರಾಮಿಕ ರೋಗದ ನಿರಾಶೆಯನ್ನು ದೂರ ಮಾಡಿ, ಭಾರತಕ್ಕೆ ಹೊಸ ಭರವಸೆ ತಂದಿದೆ
Quoteಕೃಷಿ ಕಾನೂನುಗಳ ಕುರಿತ ಸುಳ್ಳು ಮತ್ತು ಅಪಪ್ರಚಾರ ಅನಾವರಣ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಜ ಸುಹೆಲ್‌ದೇವ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಚಿತ್ತೌರಾ ಸರೋವರ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಮಹಾರಾಜ ಸುಹೆಲ್‌ದೇವ್ ಹೆಸರನ್ನು ನಾಮಕರಣ ಮಾಡಿರುವ ವೈದ್ಯಕೀಯ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಭಾರತದ ಇತಿಹಾಸವು ವಸಾಹತುಶಾಹಿ ಶಕ್ತಿಗಳು ಅಥವಾ ವಸಾಹತುಶಾಹಿ ಮನೋಭಾವ ಹೊಂದಿರುವವರು ಬರೆದ ಇತಿಹಾಸ ಮಾತ್ರವಲ್ಲ. ಭಾರತೀಯ ಇತಿಹಾಸವನ್ನು ಸಾಮಾನ್ಯ ಜನರು ತಮ್ಮ ಜಾನಪದ ರೂಪದಲ್ಲಿ ಪೋಷಿಸಿಕೊಂಡು ಬಂದಿರುವುದನ್ನು ಹಲವು ತಲೆಮಾರುಗಳು ಮುಂದುವರಿಸಿಕೊಂಡು ಬರುತ್ತಿವೆ. ಭಾರತದಲ್ಲಿ ಜನರು ಯಾವುದಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದರೋ ಮತ್ತು ಭಾರತೀಯತೆಯತೆಗೆ ಸಿಗಬೇಕಾದಷ್ಟು ಪ್ರಾಮುಖ್ಯತೆ ಸಿಕ್ಕಿಲ್ಲ ಎಂದು ಹೇಳಿದರು. ಇತಿಹಾಸ ನಿರ್ಮಾಣ ಮಾಡಿರುವವರ ವಿರುದ್ಧದ ಇಂತಹ ಅಕ್ರಮಗಳು ಮತ್ತು ಅನ್ಯಾಯಗಳು ಭಾರತೀಯ ಇತಿಹಾಸ ನಿರ್ಮಾಣಕಾರರಿಂದ ಆಗಿದೆ. ಇದೀಗ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಆ ತಪ್ಪುಗಳನ್ನು ಸರಿಪಡಿಸಲಾಗುವುದು ಮತ್ತು ಅವರ ಕೊಡುಗೆಯನ್ನು ಪ್ರಮುಖವಾಗಿ ಸ್ಮರಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.

 

|

ಪ್ರಧಾನಮಂತ್ರಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕೆಂಪುಕೋಟೆಯಿಂದ ಅಂಡಮಾನ್ ನಿಕೋಬಾರ್ ವರೆಗೆ ನೀಡಿದ ಕೊಡುಗೆಯನ್ನು ಉದಾಹರಣೆ ನೀಡುತ್ತಾ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಏಕತಾ ಮೂರ್ತಿಯಾಗಿ ಮತ್ತು ದಾದಾ ಸಾಹೇಬ್ ಅಂಬೇಡ್ಕರ್ ಅವರನ್ನು ಪಂಚತೀರ್ಥದ ಮೂಲಕ ನೆನಪಿಸಿ ಕೊಳ್ಳಲಾಗುತ್ತಿದೆ ಎಂದರು. ನಾನಾ ಕಾರಣಗಳಿಂದಾಗಿ ಸಾಕಷ್ಟು ಸಂಖ್ಯೆಯ ವ್ಯಕ್ತಿಗಳನ್ನು ಗುರುತಿಸಿಲ್ಲ. ಚೌರಿ ಚೌರಾದ ದಿಟ್ಟ ಯೋಧರನ್ನು ನಾವು ಮರೆತಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಅದೇ ರೀತಿ ಮಹಾರಾಜ ಸುಹೆಲ್‌ದೇವ್ ಅವರು ಭಾರತೀಯತೆಯ ರಕ್ಷಣೆಗೆ ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಾರಾಜ ಸುಹೆಲ್‌ದೇವ್ ಅವರನ್ನು ಪಠ್ಯ ಪುಸ್ತಕಗಳಲ್ಲಿ ನಿರ್ಲಕ್ಷಿಸಲಾಗಿದ್ದರೂ ಸಹ ಅವದ್, ತರೈ ಮತ್ತು ಪೂರ್ವಾಂಚಲ ಪ್ರದೇಶಗಳ ಜಾನಪದದ ಮೂಲಕ ಜನಗಳ ಹೃದಯದಲ್ಲಿ ಜೀವಂತವಾಗಿಡಲಾಗಿದೆ ಎಂದರು. ಮಹಾರಾಜ ಸುಹೆಲ್‌ದೇವ್ ಅವರ ಕೊಡುಗೆ ಅತ್ಯಂತ ಸೂಕ್ಷ್ಮವಾದುದು ಮತ್ತು ಅವರೊಬ್ಬ ಅಭಿವೃದ್ಧಿ ಪರ ರಾಜರಾಗಿದ್ದರು. ಮಹಾರಾಜ ಸುಹೆಲ್‌ದೇವ್ ಸ್ಮಾರಕ ನಿರ್ಮಾಣದಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಅವರ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ಆರೋಗ್ಯ ಸೌಕರ್ಯಗಳ ವಿಸ್ತರಣೆಯಿಂದಾಗಿ ಆಶೋತ್ತರ ಜಿಲ್ಲೆ ಮತ್ತು ಸುತ್ತಮುತ್ತಲ ಜನರ ಜೀವನ ಉತ್ತಮ ಹಾಗೂ ಸುಲಭವಾಗಲಿದೆ ಎಂದರು. ಪ್ರಧಾನಮಂತ್ರಿ ಅವರು ಎರಡು ವರ್ಷಗಳ ಹಿಂದೆ ಮಹಾರಾಜ ಸುಹೆಲ್‌ದೇವ್ ಅವರ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.

ಬಸಂತ ಪಂಚಮಿ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರಿಗೆ ಶುಭ ಕೋರಿದರು ಮತ್ತು ಈ ಬಸಂತ ಸಾಕ್ರಾಮಿಕದ ನಿರಾಶೆಯನ್ನು ಹೋಗಲಾಡಿಸಿ ಭಾರತಕ್ಕೆ ಹೊಸ ಭರವಸೆಯನ್ನು ತಂದುಕೊಟ್ಟಿದೆ ಎಂದರು. ಮಾತೆ ಸರಸ್ವತಿ ಭಾರತಕ್ಕೆ ಜ್ಞಾನ ಮತ್ತು ವಿಜ್ಞಾನದ ಆಶೀರ್ವಾದ ನೀಡಲಿ ಎಂದು ಆಶಿಸಿದ ಅವರು, ತಮ್ಮ ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ದೇಶವಾಸಿಗಳಿಗೂ ಹರಸಲಿ ಎಂದು ಹೇಳಿದರು.

|

ಇತಿಹಾಸಕ್ಕೆ ಸಂಬಂಧಿಸಿದ ಸ್ಮಾರಕಗಳ ಅತಿ ದೊಡ್ಡ ಗುರಿ ಎಂದರೆ ನಂಬಿಕೆ ಮತ್ತು ಆಧ್ಯಾತ್ಮ. ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತರಪ್ರದೇಶ ರಾಜ್ಯ ಪ್ರವಾಸೋದ್ಯಮ ಮತ್ತು ಯಾತ್ರೆಗಳ ದೃಷ್ಟಿಯಿಂದ ಶ್ರೀಮಂತವಾದುದು ಮತ್ತು ಅದು ವಿಫುಲ ಅವಕಾಶಗಳನ್ನು ಹೊಂದಿದೆ. ರಾಮಾಯಣ ಸರ್ಕಿಟ್, ಆಧ್ಯಾತ್ಮ ಸರ್ಕಿಟ್, ಬುದ್ಧ ಸರ್ಕಿಟ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳು, ಶ್ರೀಕೃಷ್ಣ ಮತ್ತು ಬುದ್ಧರಿಗೆ ಸಂಬಂಧಿಸಿದ ಸ್ಥಳಗಳು ಅಂದರೆ ಅಯೋಧ್ಯೆ, ಚಿತ್ರಕೂಟ, ಮಥುರಾ, ವೃಂದಾವನ, ಗೋವರ್ಧನ, ಖುಷಿನಗರ, ಶರವಸ್ತಿ ಇತ್ಯಾದಿ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡುತ್ತಿವೆ ಮತ್ತು ಉತ್ತರ ಪ್ರದೇಶ ಇತರೆ ರಾಜ್ಯಗಳಿಂದ ಗರಿಷ್ಠ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೂರನೇ ಸ್ಥಾನಕ್ಕೇರಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವುದೇ ಅಲ್ಲದೆ, ಆಧುನಿಕ ಸಂಪರ್ಕ ಸೌಕರ್ಯಗಳನ್ನೂ ಸಹ ವೃದ್ಧಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಅಯೋಧ್ಯೆ ವಿಮಾನ ನಿಲ್ದಾಣ ಮತ್ತು ಖುಷಿ ನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವಾಸಿಗರಿಗೆ ಅತ್ಯಂತ ಉಪಯುಕ್ತ ಎಂಬುದು ಸಾಬೀತಾಗಿದೆ. ಭವಿಷ್ಯದಲ್ಲಿ ಇವು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಪ್ರದೇಶದಲ್ಲಿ ಅದರಲ್ಲೂ ಬಹುತೇಕ ಪೂರ್ವಾಂಚಲದಲ್ಲಿ ಒಂದು ಡಜನ್ ಗೂ ಅಧಿಕ ಸಣ್ಣ ಮತ್ತು ದೊಡ್ಡ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಪೂರ್ವಾಂಚಲ ಎಕ್ಸ್ ಪ್ರೆಸ್ ವೇ, ಬುಂಡೇಲ್ ಖಂಡ್ ಎಕ್ಸ್ ಪ್ರೆಸ್ ವೇ, ಗಂಗಾ ಎಕ್ಸ್ ಪ್ರೆಸ್ ವೇ, ಗೋರಖ್ ಪುರ್ ಲಿಂಕ್ ಎಕ್ಸ್ ಪ್ರೆಸ್ ವೇ, ಬಲ್ಲಿಯಾ ಲಿಂಕ್ ಎಕ್ಸ್ ಪ್ರೆಸ್ ವೇ ಮತ್ತಿತರ ವಿಸ್ತೃತ ಮತ್ತು ಆಧುನಿಕ ರಸ್ತೆಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಮತ್ತು ಒಂದು ವಿಧದಲ್ಲಿ ಆಧುನಿಕ ಉತ್ತರ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಆರಂಭವಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ ಎರಡು ನಿರ್ದಿಷ್ಟ ಸರಕು ಸಾಗಾಣೆ ಕಾರಿಡಾರ್ ಗಳು ನಿರ್ಮಾಣವಾಗುತ್ತಿವೆ. ಉತ್ತರ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯ ಸೃಷ್ಟಿ ಕಾರ್ಯ ಚುರುಕು ಪಡೆದುಕೊಂಡಿದ್ದು, ಅಲ್ಲಿ ಕೈಗಾರಿಕೆಗಳಿಗಾಗಿ ಬಂಡವಾಳ ಹೂಡಿಕೆದಾರರು ಮುಂದಾಗುತ್ತಿದ್ದಾರೆ. ಇದರಿಂದಾಗಿ ಯುವಕರಿಗಾಗಿ ಮತ್ತು ಕೈಗಾರಿಕೆಗಳಿಗಾಗಿ ಉತ್ತಮ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

ಉತ್ತರ ಪ್ರದೇಶ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಉತ್ತಮ ಕಾರ್ಯ ಮಾಡಿದೆ ಎಂದು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಸರ್ಕಾರ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಶ್ಲಾಘಿಸಿದರು. ಉತ್ತರ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಮತ್ತು ಕೊರೊನಾ ವಿರುದ್ಧದ ಪ್ರಯತ್ನಗಳಿಗೆ ಸಹ ಸಾಕಷ್ಟು ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 14 ರಿಂದ 24ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಗೋರಖ್ ಪುರ್ ಮತ್ತು ಬರೇಲಿಯಲ್ಲಿ ಏಮ್ಸ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದಲ್ಲದೆ 22 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ. ವಾರಾಣಸಿಯಲ್ಲಿ ಆಧುನಿಕ ಕ್ಯಾನ್ಸರ್ ಆಸ್ಪತ್ರೆ ಸೌಕರ್ಯವನ್ನು ಪೂರ್ವಾಂಚಲ ಜನರ ಸೌಕರ್ಯಕ್ಕಾಗಿ ಒದಗಿಸಲಾಗಿದೆ. ಉತ್ತರ ಪ್ರದೇಶದ ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಶುದ್ಧ ಕುಡಿಯುವ ನೀರು ಮನೆ ತಲುಪಿದರೆ ಅದು ಹಲವು ಕಾಯಿಲೆಗಳನ್ನು ತಪ್ಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಉತ್ತರ ಪ್ರದೇಶದಲ್ಲಿ ವಿದ್ಯುತ್, ನೀರು, ರಸ್ತೆ ಮತ್ತು ಆರೋಗ್ಯ ಸೌಕರ್ಯಗಳು ಸುಧಾರಿಸಿರುವುದರಿಂದ ಗ್ರಾಮಗಳು, ಬಡವರು ಮತ್ತು ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ ಉತ್ತರ ಪ್ರದೇಶದ 2.5 ಕೋಟಿ ರೈತರ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗಿದೆ ಎಂದರು. ರೈತರು ಒಂದು ಕಾಲಕ್ಕೆ ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳ ಖರೀದಿಗೆ ಸಾಲ ಪಡೆಯುವ ಸ್ಥಿತಿ ಇತ್ತು. ರೈತರು ನೀರಾವರಿಗೆ ವಿದ್ಯುತ್ ಬಳಕೆ ಮಾಡಲು ರಾತ್ರಿ ಇಡೀ ಎದ್ದು ಕುಳಿತಿರಬೇಕಾದ ಪರಿಸ್ಥಿತಿ ಇತ್ತು. ಇದೀಗ ಸರ್ಕಾರ ವಿದ್ಯುತ್ ಪೂರೈಕೆಯನ್ನು ಸುಧಾರಿಸಿರುವುದರಿಂದ ಆ ಸಮಸ್ಯೆಗಳನ್ನೆಲ್ಲಾ ಸರ್ಕಾರ ದೂರ ಮಾಡಿದೆ ಎಂದು ಹೇಳಿದರು.

ರೈತರ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಸ್ಥಾಪನೆ ಅತ್ಯಂತ ಪ್ರಮುಖವಾಗಿದ್ದು, ಆ ಮೂಲಕ ರೈತರ ಭೂಮಿಯನ್ನು ಒಗ್ಗೂಡಿಸಲಾಗುತ್ತಿದೆ. ಆ ಮೂಲಕ ರೈತರಿಗೆ ಉಳುಮೆ ಮಾಡುವ ಜಾಗ ಕಡಿಮೆಯಾಗುತ್ತಿದೆ ಎನ್ನುವ ಸಮಸ್ಯೆಯನ್ನು ನಿವಾರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 1 – 2 ಎಕರೆ ಭೂಮಿ ಹೊಂದಿರುವ 500 ರೈತ ಕುಟುಂಬಗಳು ಒಗ್ಗೂಡಿದರೆ ಅವರು 500 – 1000 ಎಕರೆ ಹೊಂದಿರುವ ರೈತರಿಗಿಂತ ಹೆಚ್ಚು ಶಕ್ತಿಶಾಲಿಯಾಗುತ್ತಾರೆ. ಅಂತೆಯೇ ತರಕಾರಿ, ಹಣ್ಣು, ಹಾಲು, ಮೀನು ಉತ್ಪಾದನೆ ಮತ್ತಿತರ ಸಣ್ಣ ವ್ಯವಹಾರಗಳಲ್ಲಿ ತೊಡಗಿರುವ ಸಣ್ಣ ರೈತರಿಗೆ ಕಿಸಾನ್ ರೈಲು ಮೂಲಕ ದೊಡ್ಡ ಮಾರುಕಟ್ಟೆಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದರು. ಇತ್ತೀಚೆಗೆ ಜಾರಿಗೊಳಿಸಿರುವ ಹೊಸ ಕೃಷಿ ಸುಧಾರಣಾ ಕಾನೂನುಗಳು ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲಕಾರಿಯಾಗಿದ್ದು, ದೇಶಾದ್ಯಂತ ಈ ಕೃಷಿ ಕಾಯ್ದೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಹರಿದುಬರುತ್ತಿದೆ ಎಂದು ಹೇಳಿದರು.

ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಎಲ್ಲ ಬಗೆಯ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ವಿದೇಶಿ ಕಂಪನಿಗಳನ್ನು ಕರೆಯಲು ಕಾನೂನು ಜಾರಿಗೆ ತಂದವರು ಭಾರತೀಯ ಕಂಪನಿಗಳೊಂದಿಗೆ ರೈತರನ್ನು ಹೆದರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸುಳ್ಳುಗಳು ಮತ್ತು ಪ್ರಚಾರದ ನಿಲುವುಗಳನ್ನು ಬಹಿರಂಗಪಡಿಸಲಾಗಿದೆ.ಕೃಷಿ ಸುಧಾರಣಾ ಕಾನೂನುಗಳು ಜಾರಿಗೊಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭತ್ತದ ಖರೀದಿ ದುಪ್ಪಟ್ಟು ಹೆಚ್ಚಾಗಿದೆ. ಯೋಗಿ ಅವರ ಸರ್ಕಾರ ಈಗಾಗಲೇ ಕಬ್ಬು ಬೆಳೆಗಾರರಿಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಬಾಕಿಯನ್ನು ಪಾವತಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರಗಳಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ನೀಡುತ್ತಿದೆ. ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಪಾವತಿಯನ್ನು ಖಾತ್ರಿಪಡಿಸಲು ನಿರಂತರ ಕ್ರಮ ಕೈಗೊಳ್ಳಲಾಗಿದೆ, ಎಂದರು.

ರೈತರು ಮತ್ತು ಗ್ರಾಮೀಣ ಜನರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಸಾಧ್ಯವಾದ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಭರವಸೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಜನರ ಮನೆಗಳು ಅನ್ಯರಿಂದ ಅತಿಕ್ರಮಕ್ಕೆ ಒಳಗಾಗುವುದನ್ನು ತಪ್ಪಿಸಲು ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಅಡಿ ಉತ್ತರ ಪ್ರದೇಶದ 50 ಜಿಲ್ಲೆಗಳಲ್ಲಿ ಡ್ರೋನ್ ಗಳನ್ನು ಬಳಸಿ, ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಈವರೆಗೆ ಸುಮಾರು 12,000 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಮತ್ತು ಈವರೆಗೆ 2 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಆಸ್ತಿ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಆ ಕುಟುಂಬಗಳು ಇದೀಗ ಎಲ್ಲ ಬಗೆಯ ಭಯಗಳಿಂದ ಮುಕ್ತವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಆದ್ದರಿಂದ ಹೊಸ ಕೃಷಿ ಸುಧಾರಣೆಗಳ ಮೂಲಕ ಹೇಗೆ ರೈತರ ಭೂಮಿಯನ್ನು ಯಾರಾದರೂ ಕಸಿದುಕೊಳ್ಳುತ್ತಾರೆ ಎಂಬುದನ್ನು ನಂಬುವುದಾದರು ಹೇಗೆ ಎಂದು ಪ್ರಧಾನಮಂತ್ರಿ ಸಮರ್ಥಿಸಿಕೊಂಡರು. ನಮ್ಮ ಗುರಿ ಪ್ರತಿಯೊಬ್ಬ ಪ್ರಜೆಗಳನ್ನು ಸಬಲೀಕರಣಗೊಳಿಸುವುದು. ನಾವು ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ. ನಾವು ಆ ಕೆಲಸಕ್ಕೆ ಬದ್ಧವಾಗಿದ್ದೇವೆ. ಪ್ರಧಾನಮಂತ್ರಿ ಅವರು ಗೋಸ್ವಾಮಿ ತುಳಸಿದಾಸರ ರಾಮಚರಿತಮಾನಸದ ಒಂದು ಪದ್ಯವನ್ನು ಹೇಳುವ ಮೂಲಕ ಭಾಷಣವನ್ನು ಮುಕ್ತಾಯಗೊಳಿಸಿದರು. ಅದರ ಅರ್ಥ ಸೂಕ್ತ ಸರಿಯಾದ ಉದ್ದೇಶದೊಂದಿಗೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಮತ್ತು ಯಾರ ಹೃದಯದಲ್ಲಿ ಶ್ರೀರಾಮ ನಿರುತ್ತಾನೋ ಆ ಕೆಲಸ ಯಶಸ್ವಿಯಾಗುತ್ತದೆ ಎಂದು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷
  • Ashok bhai dhadhal September 05, 2024

    jai ma bharti
  • शिवकुमार गुप्ता February 18, 2022

    जय माँ भारती
  • शिवकुमार गुप्ता February 18, 2022

    जय भारत
  • शिवकुमार गुप्ता February 18, 2022

    जय हिंद
  • शिवकुमार गुप्ता February 18, 2022

    जय श्री सीताराम
  • शिवकुमार गुप्ता February 18, 2022

    जय श्री राम
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Beyond Freebies: Modi’s economic reforms is empowering the middle class and MSMEs

Media Coverage

Beyond Freebies: Modi’s economic reforms is empowering the middle class and MSMEs
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಮಾರ್ಚ್ 2025
March 24, 2025

Viksit Bharat: PM Modi’s Vision in Action