ಅಹ್ಮದಾಬಾದಿನ ಜಸ್ ಪುರದಲ್ಲಿ ಇಂದು ವಿಶ್ವ ಉಮಿಯಾಧಾಮ ಸಂಕೀರ್ಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಉತ್ಸಾಹಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು , ನಮ್ಮ ಸಮಾಜವನ್ನು ಬಲಿಷ್ಟಗೊಳಿಸುವಲ್ಲಿ ಸಂತರು ಮತ್ತು ಸಾಧುಗಳ ಪಾತ್ರವನ್ನು ಯಾರೂ ಮರೆಯಲಾರರು ಎಂದರು. ಅವರು ನಮಗೆ ಮೌಲ್ಯಯುತವಾದ ಬೋಧನೆಗಳನ್ನು ನೀಡಿದ್ದಾರೆ, ಅವರು ನಮಗೆ ದುಷ್ಟ ಶಕ್ತಿಗಳ ವಿರುದ್ದ ಮತ್ತು ದಬ್ಬಾಳಿಕೆ ವಿರುದ್ದ ಹೋರಾಡುವ ಶಕ್ತಿಯನ್ನೂ ನೀಡಿದ್ದಾರೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
ನಮ್ಮ ಸಂತರು ಮತ್ತು ಸಾಧುಗಳು ನಮ್ಮ ಭೂತಕಾಲದ ಉತ್ತಮವಾದುದನ್ನು ಅಳವಡಿಸಿಕೊಳ್ಳಲು ಹೇಳಿದ್ದಾರೆ, ಅದೇ ವೇಳೆಗೆ ಭವಿಷ್ಯದೆಡೆಗೆ ನೋಡುತ್ತಾ , ಕಾಲದ ಜೊತೆಗೆ ಬದಲಾವಣೆ ಮಾಡಿಕೊಳ್ಳುವುದರ ಬಗ್ಗೆಯೂ ಬೋಧಿಸಿದ್ದಾರೆ ಎಂದರು.
ಜನರಿಗೆ ಅನುಕೂಲವಾಗುವ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು ಸಣ್ಣ ಪ್ರಮಾಣದಲ್ಲಿ ಏನಾದರೊಂದು ಮಾಡುವುದು ಕೇಂದ್ರ ಸರಕಾರಕ್ಕೆ ಸಮ್ಮತವಾದುದಲ್ಲ ಎಂದರು. ಕೇಂದ್ರ ಸರಕಾರದ ಕೆಲಸಗಳು ಸದಾ ಕಾಲ ದೊಡ್ಡ ಪ್ರಮಾಣದಲ್ಲಿರುತ್ತವೆ, ಮತ್ತು ಅವು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಯೋಜನಕಾರಿಯಾಗಿರುತ್ತವೆ ಎಂದರು.
ಸಮುದಾಯ ಮಟ್ಟದಲ್ಲಿ ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಒತ್ತು ನೀಡುವುದು ಬಹಳ ಪ್ರಮುಖವಾದುದು ಎಂದೂ ಪ್ರಧಾನಮಂತ್ರಿ ಹೇಳಿದರು.
ಮಾ ಉಮಿಯಾರನ್ನು ನಂಬುವ ಯಾರೂ ಕೂಡಾ ಭ್ರೂಣಹತ್ಯೆ ಯನ್ನು ಬೆಂಬಲಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ದೃಢವಾಗಿ ಹೇಳಿದರು.
ಲಿಂಗತ್ವ ಆಧರಿಸಿದ ಪಕ್ಷಪಾತರಹಿತವಾದ ಸಮಾಜವನ್ನು ನಿರ್ಮಾಣ ಮಾಡಲು ಸಹಾಯ ಮಾಡುವಂತೆ ಪ್ರಧಾನಮಂತ್ರಿ ಅವರು ಜನತೆಗೆ ಮನವಿ ಮಾಡಿಕೊಂದರು.
No one can ever forget the role of Saints and Seers in strengthening our society. They have given us valuable teachings. They even gave us the strength to fight evil and oppression: PM @narendramodi
— PMO India (@PMOIndia) March 4, 2019
Our Saints and Seers taught us to absorb the best of our past and, at the same time look ahead and keep changing with the times: PM @narendramodi
— PMO India (@PMOIndia) March 4, 2019
Doing something at a small scale isn’t acceptable to us.
— PMO India (@PMOIndia) March 4, 2019
Our work will always be at a large scale, benefitting all sections of society: PM @narendramodi
At the community level, it’s important to emphasise on top quality education for youngsters: PM @narendramodi
— PMO India (@PMOIndia) March 4, 2019
Those who believe in Maa Umiya can never support female foeticide.
— PMO India (@PMOIndia) March 4, 2019
I appeal to you all- let us create a society where there is no discrimination based on gender: PM @narendramodi