ಇಂದು ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿಯವರು ಸೂರತ್ ಗೆ ಭೇಟಿ ನೀಡಿದರು. ಅವರು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವಿಸ್ತರಣೆಗೆ ಅಡಿಪಾಯ ಹಾಕಿದರು, ಇದು ಸೂರತ್ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಕ್ಕೆ ಉತ್ತಮ ಸಂಪರ್ಕ ಮತ್ತು ಸಮೃದ್ಧಿಯನ್ನು ಒದಗಿಸಲಿದೆ.

ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ “ ವ್ಯಾಪಾರವನ್ನು ಸರಳಗೊಳಿಸಲು ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಲೇಬೇಕಿದೆ ಮತ್ತು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವಿಸ್ತರಣೆ ಈ ನಿಟ್ಟಿನಲ್ಲಿ ಮಾಡಲಾದ ಒಂದು ಪ್ರಯತ್ನವಾಗಿದೆ. 25,500 ಚದರ ಮೀಟರ್ ವಿಸ್ತೀರ್ಣದಲ್ಲಿ 354 ಕೋಟಿ ರೂಪಾಯಿ ವೆಚ್ಚದಲ್ಲಿ ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವಿಸ್ತರಣೆ ಮಾಡಲಾಗುತ್ತಿದೆ. ಇದು ಸೌರ ವಿದ್ಯುತ್ ಮತ್ತು ಎಲ್ ಇ ಡಿ ಲೈಟಿಂಗ್ ಮೂಲಕ ಪರಿಸರ ಸ್ನೇಹಿ ಸುಸ್ಥಿರ ಕಟ್ಟಡವಾಗಲಿದೆ. ಈ ಹೊಸ ಟರ್ಮಿನಲ್ ಕೆಲಸ ಪೂರ್ಣಗೊಂಡ ನಂತರ ಇದರ ಪ್ರಸ್ತುತ ಇರುವ ವರ್ಷಕ್ಕೆ 4 ಲಕ್ಷ ಪ್ರಯಾಣಿಕರ ಸಾಮರ್ಥ್ಯ 26 ಲಕ್ಷಕ್ಕೆ ಏರಿಕೆಯಾಗಲಿದೆ ಎಂದರು. ಅಲ್ಲದೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸೂರತ್ ಹಾಗೂ ಶಾರ್ಜಾಗೆ ಸಂಪರ್ಕ ಕಲ್ಪಿಸಲಿದೆ. ಆರಂಭಿಕ ಹಂತದಲ್ಲಿ ವಾರಕ್ಕೆ 2 ವಿಮಾನಗಳ ಹಾರಾಟ ನಿಶ್ಚಿತಗೊಳಿಸಲಾಗಿದ್ದು ನಂತರ ಹೆಚ್ಚಳಗೊಂಡು ವಾರಕ್ಕೆ ನಾಲ್ಕು ವಿಮಾನಗಳು ಹಾರಾಟ ನಡೆಸಲಿವೆ.

ಉಡಾನ್ ಯೋಜನೆಯಡಿ ಹೆಚ್ಚೆಚ್ಚು ವಿಮಾನ ನಿಲ್ದಾಣಗಳು ಸೇರ್ಪಡೆಗೊಳ್ಳುತ್ತಿದ್ದು ಇದು ವಾಯುಯಾನಕ್ಕೆ ಉತ್ತೇಜನ ನೀಡಲಿದೆ ಮತ್ತು ಜನರು ಈ ಸೌಕರ್ಯದ ಲಾಭ ಪಡೆಯಲು ತಮ್ಮ ಸ್ಥಳಗಳಿಂದ ದೂರ ತೆರಳಬೇಕಿಲ್ಲ. ವಾಯುಯಾನ ಎಲ್ಲರಿಗೂ ಲಭ್ಯವಾಗಲಿ ಎಂಬುದೇ ನಮ್ಮ ಉದ್ದೇಶ. ಭಾರತದಲ್ಲಿ ವಾಯುಯಾನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಉಡಾನ್ ಮಹತ್ವದ ಪಾತ್ರ ವಹಿಸಿದೆ. ಭಾರತದ ವಾಯುಯಾನ ನಕ್ಷೆಯಲ್ಲಿ ಉಡಾನ್ 40 ವಿಮಾನ ನಿಲ್ದಾಣಗಳನ್ನು ಸೆರ್ಪಡೆಗೊಳಿಸಿದೆ. ದೇಶಾದ್ಯಂತ ಇಂತಹ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಿದೆ ಎಂದು ಕೂಡಾ ಅವರು ಹೇಳಿದರು.

ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ ಅವರು ಸಂಪೂರ್ಣ ಬಹುಮತದೊಂದಿಗೆ ಗೆದ್ದ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸ್ವತಂತ್ರ ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದರು. “ನೀವು ನಮಗೆ ಬಹುಮತ ನೀಡಿದ್ದರಿಂದಲೇ ನಾವು ಇಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ” ಎಂದು ಪ್ರಧಾನಿಯವರು ಒತ್ತಿ ಹೇಳಿದರು. ಹಿಂದಿನ ಸರ್ಕಾರದಂತಲ್ಲದೆ ಎನ್ ಡಿ ಎ ಸರ್ಕಾರ ಮಧ್ಯಮ ವರ್ಗದ ಜನರಿಗಾಗಿ ಕೆಲಸ ಮಾಡಿದೆ ಎಂದು ಕೂಡಾ ಹೇಳಿದರು.

ಯುಪಿಎ ಸರ್ಕಾರ ಮತ್ತು ಆಡಳಿತಾರೂಢ ಸರ್ಕಾರವನ್ನು ಹೋಲಿಸುತ್ತಾ ಮೋದಿಯವರು “ನಮ್ಮ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ನಾವು 1.30 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಆದರೆ ಯು ಪಿ ಎ ಸರ್ಕಾರದ ಆಡಳಿತಾವಧಿಯಲ್ಲಿ ಅವರು ಕೇವಲ 25 ಲಕ್ಷ ಮನೆಗಳನ್ನು ನಿರ್ಮಿಸಿದ್ದರು” ಎಂದು ಹೇಳಿದರು. 2014 ರಲ್ಲಿ ಇದ್ದ 80 ಪಾಸ್ ಪೋರ್ಟ್ ಕಛೇರಿಗಳಿಗೆ ಹೋಲಿಸಿದರೆ ಇಂದು ನಾವು 400 ಪಾಸ್ ಪೋರ್ಟ್ ಕಛೇರಿಗಳನ್ನು ಹೊಂದಿದ್ದೇವೆ.” ಎಂದು ತಿಳಿಸಿದರು.

ಸೂರತ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕೆಲವು ಫಲಾನುಭವಿಗಳಿಗೆ ಬೀಗದ ಕೈಯನ್ನು ವಿತರಿಸಿದರು. ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. “ಕಳೆದ ನಾಲ್ಕು ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರಿಗಾಗಿ ನಮ್ಮ ಸರ್ಕಾರ 13 ಲಕ್ಷ ಮನೆಗಳನ್ನು ಈಗಾಗಲೇ ನಿರ್ಮಿಸಿದ್ದು ಇನ್ನೂ 37 ಲಕ್ಷ ಮನೆಗಳು ಸಿದ್ಧವಾಗುತ್ತಿವೆ” ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೂರತ್ ಪಾತ್ರವನ್ನು ನೆನಪಿಸಿಕೊಳ್ಳುತ್ತಾ ಹೂಡಿಕೆ ಪ್ರಮಾಣದಲ್ಲಿ ಹೆಚ್ಚಳಗೊಂಡು ಈ ನಗರವು ಮುಂಬರುವ 10 ವರ್ಷಗಳೊಳಗೆ ಜಗತ್ತಿನ ಅತೀ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ನಗರಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದರು.

ನಂತರ ಸೂರತ್ ನಲ್ಲಿ ಅತ್ಯಾಧುನಿಕ ರಸಿಲಾಬೆನ್ ಸೇವಂತಿಲಾಲ್ ವೀನಸ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು. ಆಸ್ಪತ್ರೆಯಲ್ಲಿನ ಸೌಲಭ್ಯಗಳ ಅವಲೋಕನಗೈದರು. ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ “ ಆಯುಷ್ಮಾನ್ ಭಾರತ ಕೈಗೆಟುಕುವ ಬೆಲೆಯಲ್ಲಿ ಹೇಗೆ ಜನರಿಗೆ ಆರೋಗ್ಯ ತಪಾಸಣಾ ಸೇವೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದರ ಕುರಿತು ವಿವರಿಸಿದರು. ಈಗ ಹಲವು ಜನರಿಕ್ ಔಷಧಿಗಳು ಲಭ್ಯವಿದ್ದು ಆರೋಗ್ಯ ಸೇವಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಹಲವಾರು ಅಮೂಲ್ಯ ಜೀವಗಳನ್ನು ರಕ್ಷಿಸಲಿವೆ ಎಂದು ನುಡಿದರು.

ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ಉದ್ಘಾಟಿಸಿದ ನಂತರ ಇಂದು ಸಂಜೆ ಸೂರತ್ ನ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಧಾನ ಮಂತ್ರಿಯವರು ನ್ಯೂ ಇಂಡಿಯಾ ಯೂತ್ ಕಾನ್ಕ್ಲೇವ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸ್ಮಾರಕ ಮಹಾತ್ಮಾ ಗಾಂಧಿಯವರ ಮೂರ್ತಿಯ ಜೊತೆಗೆ ಅವರೊಂದಿಗೆ ಐತಿಹಾಸಿಕ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ 80 ಜನ ಸತ್ಯಾಗ್ರಹಿಗಳ ಮೂರ್ತಿಗಳನ್ನೂ ಒಳಗೊಂಡಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಮುದ್ರ ನೀರಿನಿಂದ ಉಪ್ಪು ತಯಾರಿಸಿದ 1930 ರ ಐತಿಹಾಸಿಕ ದಂಡಿ ಯಾತ್ರೆಯನ್ನು ಬಿಂಬಿಸುವ 24 ನಿರೂಪಣಾ ಭಿತ್ತಿಚಿತ್ರಗಳು ಇಲ್ಲಿವೆ. ಇವು ದಂಡಿ ಯಾತ್ರೆಯ ವಿವಿಧ ಘಟನೆಗಳು ಮತ್ತು ಕಥೆಗಳನ್ನು ಸಾರುತ್ತಿವೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟ್ಟವಾಗಿದೆ.

 

 

 

 

 

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi