India will emerge stronger only when we empower our daughters: PM Modi
In almost 70 years of independence, sanitation coverage which was merely 40%, has touched 98% in the last five years: PM
Our government is extensively working to enhance quality of life for the poor and middle class: Prime Minister

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದರು. ಅವರು ಮಹಿಳಾ ಸರಪಂಚರ ಸಮಾವೇಶ ಸ್ವಚ್ಛ ಶಕ್ತಿ 2019ಯಲ್ಲಿ ಪಾಲ್ಗೊಂಡು, ದೇಶಾದ್ಯಂತದ ಮಹಿಳಾ ಸರಪಂಚರಿಗೆ ಸ್ವಚ್ಛ ಶಕ್ತಿ 2019 ಪ್ರಶಸ್ತಿ ಪ್ರದಾನ ಮಾಡಿದರು. ಪಿ.ಎಂ. ಕುರುಕ್ಷೇತ್ರದಲ್ಲಿ ಸ್ವಚ್ಛ ಸುಂದರ್ ಶೌಚಾಲಯ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದರು. ಹರಿಯಾಣದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ಹರಿಯಾಣ ಮುಖ್ಯಮಂತ್ರಿ ಲಾಲ್ ಮನೋಹರ್ ಖಟ್ಟರ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ದೇಶದಾದ್ಯಂತದಿಂದ ಸ್ವಚ್ಛಾಗ್ರಹಿಗಳು ಒಟ್ಟಾಗಿ ಬಂದಿರುವುದು ನವ ಭಾರತಕ್ಕಾಗಿ ಸ್ವಚ್ಛ ಭಾರತದ ಸಂಕಲ್ಪಕ್ಕೆ ಬಲ ತುಂಬಿದೆ ಎಂದು ಹೇಳಿದರು.

ಒಂದು ಶ್ರೇಣಿ, ಒಂದು ಪಿಂಚಣಿಯಿಂದ ಹಿಡಿದು ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿವರೆಗೆ ಹಲವು ಕಾರ್ಯಕ್ರಮಗಳ ಆರಂಭದಲ್ಲಿ ಹರಿಯಾಣ ಅಗ್ರೇಸರನಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯ ಪ್ರಥಮ ಫಲಾನುಭವಿಯೂ ಹರಿಯಾಣದ ಮಗಳಾಗಿದ್ದಳು ಎಂಬ ಭಾವನಾತ್ಮಕ ವಿಚಾರ ತಿಳಿಸಿದರು.

ಸಬಲ ಮಹಿಳೆಯರು ಮಾತ್ರವೇ ಸಬಲೀಕೃತ ಸಮಾಜ ಮತ್ತು ಬಲಿಷ್ಠ ದೇಶ ನಿರ್ಮಿಸಬಲ್ಲರು ಎಂದು ಪ್ರಧಾನಿ ಪ್ರತಿಪಾದಿಸಿದರು. ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ, ಉಜ್ವಲ ಯೋಜನೆ, ರಾಷ್ಟ್ರೀಯ ಪೌಷ್ಟಿಕ ಅಭಿಯಾನ, ಪ್ರಧಾನಮಂತ್ರಿ ಸುರಕ್ಷಿತ ಪ್ರಸೂತಿ ಅಭಿಯಾನ, ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ವಿಸ್ತರಿಸಿರುವುದು ಮತ್ತು ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಮನೆಗಳ ಮಾಲೀಕತ್ವವನ್ನು ಮೊದಲಿಗೆ ಮಹಿಳೆಯರಿಗೆ ನೀಡುತ್ತಿರುವುದು ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ತಿಳಿಸಿದರು. “ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸಿದ ಪ್ರಥಮ ಸರ್ಕಾರ ತಮ್ಮದು ಎಂದು ಹೇಳಿದರು.”

ಸುಮಾರು ಶೇ.75ರಷ್ಟು ಮುದ್ರಾ ಸಾಲವನ್ನು ಮಹಿಳಾ ಉದ್ದಿಮೆದಾರರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಸುಮಾರು 6 ಕೋಟಿ ಮಹಿಳೆಯರು ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ ಮತ್ತು ಅಂಥ ಸ್ವಸಹಾಯ ಗುಂಪುಗಳಿಗೆ 75000 ಕೋಟಿ ರೂಪಾಯಿ ಸಾಲವನ್ನು ಒದಗಿಸಲಾಗಿದೆ ಎಂದರು. ಈ ಮೊತ್ತವು 2014ಕ್ಕಿಂತ ಮೊದಲಿನ ನಾಲ್ಕು ವರ್ಷಗಳಲ್ಲಿ ಹಂಚಿದ್ದಕ್ಕಿಂತ 2.5 ಪಟ್ಟು ಹೆಚ್ಚು ಎಂದು ತಿಳಿಸಿದರು.

ಶೌಚಾಲಯ ರಹಿತ ನೈರ್ಮಲ್ಯದ ಕೊರತೆಯಿಂದ ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳು ನಡೆಸುತ್ತಿದ್ದ ನಿರಂತರ ಬವಣೆ ನನ್ನ ಮನಕಲಕಿತು. ನಾನು ಕೆಂಪುಕೋಟೆಯ ಮೇಲಿನಿಂದ ಸ್ವಚ್ಛ ಭಾರತ ಸಂಕಲ್ಪ ಮಾಡಿದೆ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕವೂ ನೈರ್ಮಲ್ಯದ ವ್ಯಾಪ್ತಿ ಸುಮಾರು ಶೇ.40 ಆಗಿತ್ತು. ಇಂದು ಅದು ಶೇ.98 ತಲುಪಿದೆ ಎಂದರು. 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಿರ್ಮಿಸಲಾಗಿದೆ. 600 ಜಿಲ್ಲೆಗಳ 5 ಲಕ್ಷ ಗ್ರಾಮಗಳು ಬಯಲು ಶೌಚಮುಕ್ತವಾಗಿವೆ. ಇದು ಅವರಿಗೆ ಗೌರವದ ಬಾಳ್ವೆ ನೀಡಿದೆ ಎಂದರು.

ಕುರುಕ್ಷೇತ್ರದಿಂದಲೇ ಪ್ರಧಾನಮಂತ್ರಿಯವರು ಝಜ್ಜಿರ್ ಜಿಲ್ಲೆಯ ಭಾದ್ಶಾದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (ಎನ್.ಸಿ.ಐ) ಉದ್ಘಾಟಿಸಿದರು.

ಸರ್ಕಾರ ಆರೋಗ್ಯ ಸೇವಾ ಸೌಲಭ್ಯಗಳನ್ನು ಎಲ್ಲರಿಗೂ ಅದರಲ್ಲೂ ದುಬಾರಿ ಎಂದು ವೆಚ್ಚ ಭರಿಸಲಾರದವರಿಗೆ ಸೌಲಭ್ಯ ದೊರಕುವುದನ್ನು ಖಾತ್ರಿಪಡಿಸಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು. ಸರ್ಕಾರದ ಪ್ರಯತ್ನಗಳ ಬಗ್ಗೆ ವಿವರ ನೀಡಿದ ಅವರು, ಆರೋಗ್ಯ ಆರೈಕೆ ಸೌಲಭ್ಯ ಮತ್ತು ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 21 ಏಮ್ಸ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. 14 ಏಮ್ಸ್ ಅನ್ನು 2014ರ ನಂತರ ಆರಂಭಿಸಲಾಗಿದೆ. ಈಗ 1.5 ಲಕ್ಷ ಕ್ಷೇಮ ಕೇಂದ್ರಗಳ ಸ್ಥಾಪನೆ ಮತ್ತು ಆಯುಷ್ಮಾನ್ ಭಾರತ್ ನೊಂದಿಗೆ ನಾವು ಎಲ್ಲರಿಗೂ ಆರೋಗ್ಯ ಆರೈಕೆ ಖಾತ್ರಿಪಡಿಸಲು ಏಕಕಾಲದಲ್ಲಿ ಶ್ರಮಿಸುತ್ತಿದ್ದೇವೆ ಎಂದರು.

ಪ್ರಧಾನಮಂತ್ರಿಯವರು ಶ್ರೀ ಕೃಷ್ಣ ಆಯುಷ್ ವಿಶ್ವವಿದ್ಯಾಲಯಕ್ಕೆ ಕುರುಕ್ಷೇತ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಸ್ವರೂಪದಲ್ಲಿ ಇದು ವಿಶ್ವದಲ್ಲಿಯೇ ಪ್ರಥಮವಾಗಿದ್ದು, ಶಿಕ್ಷಣ ಮತ್ತು ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ವೈದ್ಯ ಪದ್ಧತಿಗಳಲ್ಲಿ ಚಿಕಿತ್ಸೆ ನೀಡುತ್ತದೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಲ್, ರಾಷ್ಟ್ರೀಯ ಆಯುರ್ವೇದ ಸಂಸ್ಥೆ, ಪಂಚಕುಲ ಮತ್ತು ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಫರೀದಾಬಾದ್ ಗಳಿಗೆ ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಪಾಣಿಪಟ್ ಯುದ್ಧದ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿಯವರು, ಪಾಣಿಪತ್ ಕದನ ಏಕ ಭಾರತ ಶ್ರೇಷ್ಠ ಭಾರತಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದರು.

ಹರಿಯಾಣದ ಜನರ ಜೀವನವನ್ನು ಈ ಎಲ್ಲ ಯೋಜನೆಗಳೂ ಸುಗಮಗೊಳಿಸಲಿವೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಆರೋಗ್ಯಪೂರ್ಣ ಮತ್ತು ಸುಗಮ ಮಾಡುತ್ತದೆ ಎಂದರು.

ಸ್ವಚ್ಛ ಭಾರತ ಅಭಿಯಾನ ಹೇಗೆ ನೆಲೆ ನಿಂತಿತು ಮತ್ತು ಅದನ್ನು ಹೇಗೆ ನೈಜೀರಿಯಾದಲ್ಲಿ ರೂಪಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸುತ್ತಿರುವ ನೈಜೀರಿಯಾದ ನಿಯೋಗವನ್ನು ಪಿ.ಎಂ. ಶ್ಲಾಘಿಸಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Private equity investments in Indian real estate sector increase by 10%

Media Coverage

Private equity investments in Indian real estate sector increase by 10%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India