In an effort to connect all the capitals of North East states, Itanagar has also been connected with the Railways: PM
Not just airports, the lives of people in Arunachal Pradesh will improve vastly with new and improved rail and road facilities: PM Modi
Arunachal Pradesh is India's pride. It is India's gateway, Centre will not only ensure its safety and security, but also fast-track development in the region: PM

ಇಟಾನಗರದಲ್ಲಿ ಹೊಸ ಹಸಿರುವಲಯ ವಿಮಾನ ನಿಲ್ದಾಣ ಮತ್ತು ಸೆಲಾ ಸುರಂಗಕ್ಕೆ ಶಂಕುಸ್ಥಾಪನೆ, ಡಿಡಿ ಅರುಣಪ್ರಭಾ ವಾಹಿನಿ ಉದ್ಘಾಟಿಸಿದ ಪ್ರಧಾನಿ, ಅರುಣಾಚಲದಲ್ಲಿ 4000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಅನಾವರಣ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ತ್ರಿಪುರಾ ಪ್ರವಾಸದ ಭಾಗವಾಗಿ ಇಂದು ಇಟಾನಗರಕ್ಕೆ ಭೇಟಿ ನೀಡಿದರು. ಇಟಾನಗರದಲ್ಲಿ ಹಸಿರು ವಲಯ ವಿಮಾನ ನಿಲ್ದಾಣ ಮತ್ತು ಸೆಲಾ ಸುರಂಗಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಡಿಡಿ ಅರುಣ ಪ್ರಭಾ ವಾಹಿನಿಗೆ ಚಾಲನೆ ನೀಡಿದರು. ಇದೇ ವೇಳೆ ಇಟಾನಗರದ ಐ.ಜಿ. ಪಾರ್ಕ್ ನಲ್ಲಿ ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಅಲ್ಲಿ ಲೋಯಿನ್ ಲೂಮ್ ಕಾರ್ಯಚರಣೆಯನ್ನು ಪರಿಶೀಲಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅರುಣಾಚಲ ಪ್ರದೇಶವು ಸೂರ್ಯನುದಯಿಸುವ ನಾಡು. ಇದು ದೇಶದ ವಿಶ್ವಾಸ ಎಂದರು. “ಇಂದು 4000 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಅನಾವರಣ ಮಾಡುವ ಅವಕಾಶ ತಮಗೆ ದೊರೆತಿದೆ” ಎಂದು ಪ್ರಧಾನಿ ಹೇಳಿದರು. ಇನ್ನೂ 13 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳು ರಾಜ್ಯದಲ್ಲಿ ಪ್ರಗತಿಯಲ್ಲಿವೆ ಎಂದೂ ಅವರು ತಿಳಿಸಿದರು. ಅರುಣಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ 55 ತಿಂಗಳುಗಳ ಸರ್ಕಾರವನ್ನು 55 ವರ್ಷಗಳ ಕಾಲ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳೊಂದಿಗೆ ತುಲನೆ ಮಾಡುವಂತೆ ಜನತೆಗೆ ತಿಳಿಸಿದರು.

 

ಅಭಿವೃದ್ಧಿ ಯಾವ ವೇಗದಲ್ಲಿ ಆಗ ಬೇಕೋ ಆ ವೇಗದಲ್ಲಿ ಆಗಿಲ್ಲ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರ್ಕಾರಗಳು ಅರುಣಾಚಲ ಪ್ರದೇಶವನ್ನು ನಿರ್ಲಕ್ಷಿಸಿದ್ದವು ಮತ್ತು ನಾವು ಅದನ್ನು ಬದಲಿಸಲು ಇಲ್ಲಿದ್ದೇವೆ ಎಂದರು. ಈಶಾನ್ಯ ಭಾರತ ಅಭಿವೃದ್ಧಿ ಹೊಂದಿದಾಗ ನವ ಭಾರತದ ನಿರ್ಮಾಣವಾಗುತ್ತದೆ ಎಂದು ಒತ್ತಿ ಹೇಳಿದರು. ವಲಯಗಳು ಮತ್ತು ಜನರನ್ನು ಒಗ್ಗೂಡಿಸಲು ಅಭಿವೃದ್ಧಿ ಬೇಕು ಎಂದು ಹೇಳಿದರು. ಕಳೆದ 55 ತಿಂಗಳುಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆಯೇ ಇರಲಿಲ್ಲ ಎಂದರು. ನಮ್ಮ ಸರ್ಕಾರ 44 ಸಾವಿರ ಕೋಟಿ ರೂಪಾಯಿ ಹಣವನ್ನು ಅರುಣಾಚಲ ಪ್ರದೇಶಕ್ಕೆ ಹಂಚಿಕೆ ಮಾಡಿದೆ, ಇದು ಹಿಂದಿನ ಸರ್ಕಾರಗಳು ನೀಡುತ್ತಿದ್ದ ಮೊತ್ತಕ್ಕಿಂತ ದುಪ್ಪಟ್ಟಾಗಿದೆ ಎಂದರು.”

ಹೊಲ್ಲೋಂಗಿಯಲ್ಲಿ ಹಸಿರುವಲಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿ, ಮೇಲ್ದರ್ಜೆಗೇರಿಸಲಾದ ತೇಜು ವಿಮಾನ ನಿಲ್ದಾಣ ಉದ್ಘಾಟಿಸಿದರು. ಹೊಲ್ಲೊಂಗಿ ಟರ್ಮಿನಲ್ ಅನ್ನು 4100 ಚದರ ಮೀಟರ್ ಪ್ರದೇಶದಲ್ಲಿ 955 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮತ್ತು ಪ್ರತಿ ಗಂಟೆಗೆ 200 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಈ ಸಂದರ್ಭದಲ್ಲಿ ಅವರು ಇಂದಿನಿಂದ ರಾಜ್ಯದ ಸಂಪರ್ಕ ಸುಧಾರಣೆಯಾಗಲಿದೆ ಎಂದರು. ಪ್ರಸ್ತುತ ಇಟಾನಗರಕ್ಕೆ ವಾಯ ಮಾರ್ಗದಲ್ಲಿ ಬರಬೇಕೆಂದರೆ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಇಲ್ಲವೇ ಹೆಲಿಕಾಪ್ಟರ್ ನಲ್ಲಿ ಬರಬೇಕು ಎಂದರು.

 

ತೇಜು ವಿಮಾನ ನಿಲ್ದಾಣವನ್ನು 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಆದರೆ, ಯಾವುದೇ ಸರ್ಕಾರ ಈ ರಾಜ್ಯದ ಜನರನ್ನು ಇತರ ರಾಜ್ಯಗಳೊಂದಿಗೆ ಸಂಪರ್ಕಿಸುವ ಕೆಲಸ ಮಾಡಲಿಲ್ಲ. ನಾವು ಈ ಪುಟ್ಟ ವಿಮಾನ ನಿಲ್ದಾಣವನ್ನು 125 ಕೋಟಿ ರೂಪಾಯಿ ವೆಚ್ಚ ಮಾಡಿ ವಿಮಾನ ನಿಲ್ದಾಣ ವಿಸ್ತರಣೆ ಮಾಡಿದ್ದೇವೆ. ತೇಜು ವಿಮಾನ ನಿಲ್ದಾಣ ಈಗ ಅರುಣಾಚಲ ಪ್ರದೇಶದ ಜನರ ಸೇವೆಗೆ ಸಿದ್ಧವಾಗಿದೆ ಎಂದು ಹೇಳಿದರು. ಉಡಾನ್ ಯೋಜನೆ ಅಗ್ಗದ ವಿಮಾನ ದರದ ಮೂಲಕ ಜನರಿಗೆ ಪ್ರಯೋಜನಕಾರಿಯಾಗಿದೆ. ವಿಮಾನ ನಿಲ್ದಾಣ ಮಾತ್ರವೇ ಅಲ್ಲ, ಅರುಣಾಚಲ ಪ್ರದೇಶದ ಜನರ ಜೀವನ ಕೂಡ ಸುಧಾರಿತ ಮತ್ತು ನೂತನ ರೈಲು ಮತ್ತು ರಸ್ತೆ ಸೌಲಭ್ಯದೊಂದಿಗೆ ಉತ್ತಮವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

 

ಅರುಣಾಚಲ ಪ್ರದೇಶದಲ್ಲಿ ಸೆಲಾ ಸುರಂಗಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಇದು ವರ್ಷವಿಡೀ ತವಾಂಗ್ ಕಣಿವೆಗೆ ಸರ್ವಋತು ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಒಂದು ಗಂಟೆ ತಗ್ಗಿಸಲಿದೆ. ಇದನ್ನು 700 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು. ರೈಲು ಮತ್ತು ರಸ್ತೆ ಎರಡಕ್ಕೂ ಬಳಕೆಯಾಗುವ ಬೋಗಿಬೇಲ್ ಸೇತುವೆ ಅರುಣಾಚಲ ಪ್ರದೇಶವನ್ನು ಪ್ರಧಾನ ನೆಲಕ್ಕೆ ಇನ್ನೂ ಹತ್ತಿರಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯದ ಸಂಪರ್ಕವನ್ನು ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದ್ದು, 1000 ಕೋಟಿ ರೂಪಾಯಿ ಮೊತ್ತದ ಯೋಜನೆ ರೂಪಿಸುತ್ತಿದೆ ಎಂದರು. ಕಳೆದ 2 ವರ್ಷಗಳಲ್ಲಿ 1000 ಗ್ರಾಮಗಳನ್ನು ರಸ್ತೆಯ ಮೂಲಕ ಸಂಪರ್ಕಿಸಲಾಗಿದೆ. ಅರುಣಾಚಲ ಪ್ರದೇಶ ಹೆದ್ದಾರಿಯಲ್ಲಿನ ಕಾಮಗಾರಿ ಕೂಡ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ಈಶಾನ್ಯ ರಾಜ್ಯಗಳ ಎಲ್ಲ ರಾಜಧಾನಿಗಳನ್ನು ಸಂಪರ್ಕಿಸುವ ಪ್ರಯತ್ನವಾಗಿ ಇಟಾ ನಗರವನ್ನು ರೈಲಿನೊಂದಿಗೆ ಸಂಪರ್ಕಿಸಲಾಗಿದೆ ಎಂದರು. ಅರುಣಾಚಲ ಎಕ್ಸ್ ಪ್ರೆಸ್ ವಾರಕ್ಕೆ ಎರಡು ಬಾರಿ ನಹರ್ಲಗುನ್ ನಿಂದ ಸಂಚರಿಸಲಿದೆ ಎಂದರು. ಹೊಸ ರೈಲು ಮಾರ್ಗಕ್ಕಾಗಿ ರಾಜ್ಯದ 6 ಸ್ಥಳಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 3 ಕಡೆ ಪೂರ್ಣವಾಗಿದೆ ಎಂದರು. ತವಾಂಗ್ ಅನ್ನು ಕೂಡ ರೈಲು ಮಾರ್ಗದ ಮೂಲಕ ಸಂಪರ್ಕಿಸುವ ಯೋಜನೆ ಇದೆ ಎಂದರು.

ಅರುಣಾಚಲ ಪ್ರದೇಶದಲ್ಲಿ ಪ್ರತಿಶತ ನೂರರಷ್ಟು ಕುಟುಂಬಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರಧಾನಮಂತ್ರಿಯವರು 110 ಮೆ.ವ್ಯಾ. ಪರೆ ಜಲ ವಿದ್ಯುತ್ ಸ್ಥಾವರವನ್ನು ದೇಶಕ್ಕೆ ಸಮರ್ಪಿಸಿದರು. ನಾವು ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿದ್ದೇವೆ. ಇಂದು 1110 ಮೆ.ವ್ಯಾ.ನ 12 ಜನ ವಿದ್ಯುತ್ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಇದು ಅರುಣಾಚಲ ಪ್ರದೇಶಕ್ಕಷ್ಟೇ ಅಲ್ಲ ನೆರೆಯ ರಾಜ್ಯಗಳಿಗೂ ಉಪಯುಕ್ತ ಎಂದರು.

 

ನಾನು ನಿನ್ನೆ ಜನರಿಗೆ ಈಶಾನ್ಯ ರಾಜ್ಯಗಳಿಗೆ ನೀವು ಭೇಟಿ ನೀಡಿರುವ ಛಾಯಾಚಿತ್ರಗಳನ್ನು ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದೆ. ಕೆಲವೇ ಸೆಕೆಂಡುಗಳಲ್ಲಿ ವಿದೇಶೀಯರೂ ಸೇರಿದಂತೆ 1000ಕ್ಕೂ ಹೆಚ್ಚು ಜನರು ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ ಎಂದರು. ಇಂದು ಉದ್ಘಾಟಿಸಲಾದ ಯೋಜನೆಗಳು ಇಲ್ಲಿನ ಜನರ ಬದುಕು ಸುಗಮಗೊಳಿಸುವುದಷ್ಟೇ ಅಲ್ಲ, ಪ್ರವಾಸೋದ್ಯಮದ ಸುಧಾರಣೆ ಮಾಡಲಿದೆ, ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

 

50 ಆರೋಗ್ಯ ಮತ್ತು ಕ್ಷೇಮ ಕೇಂದ್ರ ಗಳನ್ನು ಅರುಣಾಚಲ ಪ್ರದೇಶದಲ್ಲಿ ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಆಯಷ್ಮಾನ್ ಯೋಜನೆ ಮೂಲಕ ಈ ಕ್ಷೇಮ ಮತ್ತು ಆರೋಗ್ಯ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಹೇಳಿದರು. ಈ ಕೇಂದ್ರಗಳ ಮೂಲಕ ಆರೋಗ್ಯ ಸೇವೆ ಉತ್ತಮವಾಗಲಿದೆ ಎಂದರು. ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ (ಪಿಎಂಜೆಎವೈ) ಮೂಲಕ 150 ದಿನಗಳಲ್ಲೇ 11 ಲಕ್ಷ ಬಡ ಜನರು ಪ್ರಯೋಜನ ಪಡೆದಿದ್ದಾರೆ ಎಂದರು.

ಬಜೆಟ್ ನಲ್ಲಿ ಪ್ರಕಟಿಸಲಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ 5 ಎಕರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುವುದು ಎಂದರು. ಸಾವಯವ ಕೃಷಿ ಉತ್ತೇಜನಕ್ಕೆ ಅರುಣಾಚಲ ಪ್ರದೇಶ ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ತಮ್ಮ ಸರ್ಕಾರ ಎಲ್ಲ ಸಾಧ್ಯ ಬೆಂಬಲ ನೀಡಲಿದೆ ಎಂದರು.

 

ಇಟಾನಗರದ ಐಜಿ ಪಾರ್ಕ್ ನಲ್ಲಿ ಅರುಣಾಚಲ ಪ್ರದೇಶಕ್ಕೆ ಸಮರ್ಪಿತವಾದ ಡಿಡಿ ಅರುಣ ಪ್ರಭ ವಾಹಿನಿಯನ್ನು ಅವರು ದೇಶಕ್ಕೆ ಸಮರ್ಪಣೆ ಮಾಡಿದರು. ದಿನದ 24 ಗಂಟೆಯ ಈ ಚಾನೆಲ್ ಅನ್ನು ದೂರದರ್ಶನ ನಿರ್ವಹಿಸಲಿದೆ. ಈ ಚಾನೆಲ್ ಮೂಲಕ ತೀರಾ ದೂರದ ಪ್ರದೇಶದ ಸುದ್ದಿಯೂ ಜನರಿಗೆ ತಲುಪಲಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ (ಎಫ್.ಟಿ.ಐಐ)ನ ಶಾಶ್ವತ ಕ್ಯಾಂಪಸ್ ಗೆ ಜೋತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. “ಅರುಣಾಚಲ ಪ್ರದೇಶ ಭಾರತದ ಹೆಮ್ಮೆ. ಇದು ಭಾರತದ ಹೆಬ್ಬಾಗಿಲು, ಮತ್ತು ನಾವು ಇದರ ಸುರಕ್ಷತೆ ಮತ್ತು ಭದ್ರತೆಯ ಭರವಸೆಯನ್ನಷ್ಟೇ ನೀಡುವುದಿಲ್ಲ, ಇದರ ಜೊತೆಗೆ ತ್ವರಿತವಾಗಿ ಅಭಿವೃದ್ಧಿಯನ್ನೂ ಮಾಡುತ್ತೇವೆ ಎಂದು ತಮ್ಮ ಭಾಷಣ ಮುಕ್ತಾಯ ಮಾಡಿದರು.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.